fbpx
ಮನೋರಂಜನೆ

ಕಿಚ್ಚ ಸುದೀಪ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ

ಸುದೀಪ್ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾದ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ ,

ನಟಿಯ ವಿರುದ್ಧ ಕಿಡಿಕಾರಿದ ಕಿಚ್ಚನ ಅಭಿಮಾನಿಗಳು..

ಸದಾ ಒಂದಲ್ಲ ಒಂದು ವಿವಾದದಿಂದ ಮನೆ ಮಾತಾಗಿರುವ ಕಿರಿಕ್ ಪಾರ್ಟಿಯ ಕಿರಿಕ್ ಹುಡುಗಿ ಮುಂದಿನ ತಿಂಗಳು ಸಂಯುಕ್ತಾ ಅಭಿನಯದ ಕಾಲೇಜು ಕುಮಾರ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದ ಪ್ರಮೋಷನ್ ಮಾಡುವ ಉದ್ದೇಶದಿಂದ ಬಿಗ್ ಬಾಸ್ ಮನೆಗೆ ಹೋಗಿದ್ದರು.
,ತದನಂತರ ಬಿಗ್ ಬಾಸ್ ವೇದಿಕೆ ಮೇಲೆ ಕಾಲೇಜು ಕುಮಾರ ಚಿತ್ರತಂಡವನ್ನು ಆಹ್ವಾನಿಸಿದ ಸುದೀಪ್,ಚಿತ್ರದ ಬಗ್ಗೆ ಮಾತಾಡಿ ಚಿತ್ರ ಯಶಸ್ವಿ ಪ್ರದರ್ಶನ ಕಾಣಲಿ ಎಂದು ಹಾರೈಸಿದ್ದರು.

 

 

‘ಬಿಗ್ ಬಾಸ್ ಕನ್ನಡ-5’ ಕಾರ್ಯಕ್ರಮದಲ್ಲಿ ‘ಸೂಪರ್ ಸಂಡೆ ವಿತ್ ಕಿಚ್ಚ ಸುದೀಪ್’ ಬದಲು ‘ಕಿಚ್ಚನ್ ಟೈಮ್’ ಪ್ರಸಾರ ಮಾಡಲಾಗಿತ್ತು ನಟ ಸುದೀಪ್ ಅದ್ಬುತವಾಗಿ ಅಡುಗೆ ಮಾಡುತ್ತಾರೆ ಎಂಬುದು ಎಲ್ಲರಿಗು ಗೊತ್ತೇ ಇದೆ .

 

 

ಈ ಭಾನುವಾರದ `ಕಿಚನ್ ಟೈಂ’ ನಲ್ಲಿ ಸುದೀಪ್ ಅಡುಗೆ ಮಾಡಿದ್ದಾರೆ ಅಷ್ಟೇ ಅಲ್ಲದೆ ನಟಿ ಸಂಯುಕ್ತ ಹೆಗ್ಡೆ ಯವರಿಗೆ ಅಡುಗೆ ಮಾಡುವುದು ಹೇಳಿಕೊಟ್ಟಿದ್ದಾರೆ , ಇಬ್ಬರು ಚಿಕನ್ ಫ್ರೈ ಮಾಡಿ ನೋಡುಗರ ಹೊಟ್ಟೆ ಉರಿಸಿದ್ದಾರೆ.

 

 

`ಕಿಚನ್ ಟೈಂ’ ನಲ್ಲಿ ಸಂಯುಕ್ತ ತೆಗೆದ ಸೆಲ್ಫಿ ವಿಡಿಯೋ ‘ಕಲರ್ಸ್ ಸೂಪರ್’ ಚಾನೆಲ್ ನ ಫೇಸ್ ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾಗಿತ್ತು , ಆ ವಿಡಿಯೋ ನೋಡಿದ ಕಿಚ್ಚನ ಅಭಿಮಾನಿಗಳು ಸಂಯುಕ್ತ ಹೆಗ್ಡೆಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ದೊಡ್ಡವರ ಮುಂದೆ ಏಕ ವಚನದ ಬಳಕೆ ಅಂದರೆ ಸಾರ್ ಎಂದು ಕರೆಯದೆ , ಹೆಸರಿಟ್ಟು ಕರೆದದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

 

 

 

ಅನೇಕ ವಿವಾದಗಳಿಂದ ಫೇಮಸ್ :

 

 

ಒಂದು ತಮಿಳು ಚಿತ್ರದ ಅವಕಾಶ ಸಿಕ್ಕಿತೆಂದು ಕನ್ನಡ ಕನ್ನಡ ಚಿತ್ರವನ್ನು ಬಿಟ್ಟು ದೊಡ್ಡ ಮಟ್ಟಿಗೆ ಕನ್ನಡ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದರು .

 

 

ಹಾಕೋ ಬಟ್ಟೆ ಸರಿಯಾಗಿಲ್ಲ , ಮೈ ಮುಚ್ಚೋ ಬಟ್ಟೆ ಹಾಕಿ :

 

 

ಸಂಯುಕ್ತ ಹೆಗ್ಡೆ ಫೇಸ್ಬುಕ್ ಹಾಗು ಟ್ವಿಟ್ಟರ್ ಖಾತೆಯಲ್ಲಿ ಹಾಕಿದ್ದ ಕೆಲವು ಫೋಟೋ ಗಳಲ್ಲಿ ಮೈ ತುಂಬಾ ಬಟ್ಟೆ ಹಾಕದೆ ಬೇಡದ ಎಕ್ಸ್ ಪೋಸ್ ಮಾಡಿದ್ದಾರೆ ಎಂದು
ನೆಟ್ಟಿಗರು ಹಿಗ್ಗಾಮುಗ್ಗಾ ಬೈದಿದ್ದರು .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top