fbpx
ದೇವರು

ಅಕ್ಟೋಬರ್ 23 ಮತ್ತು 24 ರಂದು ರಾತ್ರಿ  ಶಿವಲಿಂಗದ ಬಳಿ ಒಂದು ದೀಪವನ್ನು ಬೆಳಗಿಸಿ. ಇದು ಮೊದಲ  ಕಾರ್ತಿಕ ಸೋಮವಾರ ಮತ್ತು ಮಂಗಳ ವಾರವಾದ್ದರಿಂದ ನಿಮಗೆ ಅದೃಷ್ಟವನ್ನು ಹೊತ್ತು ತರುವುದು .

ಅಕ್ಟೋಬರ್ 23 ಮತ್ತು 24 ರಂದು ರಾತ್ರಿ  ಶಿವಲಿಂಗದ ಬಳಿ ಒಂದು ದೀಪವನ್ನು

ಬೆಳಗಿಸಿ. ಇದು ಮೊದಲ  ಕಾರ್ತಿಕ ಸೋಮವಾರ ಮತ್ತು ಮಂಗಳ

ವಾರವಾದ್ದರಿಂದ ನಿಮಗೆ ಅದೃಷ್ಟವನ್ನು ಹೊತ್ತು ತರುವುದು .

 

ಇಪ್ಪತ್ತ್ಮೂರು ಮತ್ತು ಇಪ್ಪತ್ತ್ನಾಲ್ಕನೇ ತಾರೀಖಿನಂದು  ಅಕ್ಟೋಬರ್ ತಿಂಗಳಿನಲ್ಲಿ ಕಾರ್ತಿಕ ಮಾಸದ ಮೊದಲ ಸೋಮವಾರ ಮತ್ತು ಮಂಗಳವಾರವಾದ್ದರಿಂದ ಈ ದಿನ ಸಂಜೆ ನಿಮ್ಮ  ಮನೆಯಲ್ಲಿ ಶಿವಲಿಂಗವಿದ್ದರೆ  ಅದರ ಮುಂದೆ ಒಂದು ದೀಪವನ್ನು ಬೆಳಗಿಸಬೇಕು.

ನಿಮ್ಮ ಮನಸ್ಸಿನಲ್ಲಿರುವ ಆಸೆಯನ್ನು ಈಡೇರಿಸಿಕೊಳ್ಳಲು ಮತ್ತು ನಿಮ್ಮ ಅದೃಷ್ಟವು ಉತ್ತಮವಾಗುವುದಕ್ಕೆ ಈ ಉಪಾಯವನ್ನು  ಪಾಲಿಸಿ.ಇದನ್ನು ಶಿವ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಈ ಸರಳ ಉಪಾಯವನ್ನು ಪಾಲಿಸಲು ನೀವು ಜಾಸ್ತಿ ಅತಿಯಾಗಿ  ಖರ್ಚೇನೂ ಮಾಡಬೇಕಾಗಿಲ್ಲ ಬದಲಾಗಿ ಸುಲಭವಾಗಿ ಸಂಜೆಯ ಸಮಯದಲ್ಲಿ ಭಕ್ತಿ ಶ್ರದ್ಧೆಯಿಂದ ಶಿವಲಿಂಗದ ಮುಂದೆ ಅಥವಾ ಶಿವನ ದೇವಸ್ಥಾನದ ಬಳಿ ಒಂದು ದೀಪವನ್ನು ಬೆಳಗಿಸಿದರೆ ಸಾಕು .

 

 

ಶಿವಪುರಾಣದ ಅನುಸಾರ ಮೊದಲು ನೀವು ಸ್ನಾನ ಮಾಡಿ  ಶುಚಿರ್ಭೂತರಾಗಿ ನಿಮ್ಮ ಎಲ್ಲ  ನಿತ್ಯಕರ್ಮಗಳನ್ನು ಮುಗಿಸಿಕೊಂಡು ನಂತರ ನಿಮ್ಮ ಮನೆಯ ಬಳಿ ಯಾವುದಾದರೂ ಶಿವನ ದೇವಸ್ಥಾನವಿದ್ದರೆ ಅಥವಾ ನಿಮ್ಮ ಮನೆಯಲ್ಲೇ ಶಿವಲಿಂಗದ ಬಳಿ ಹೋಗಿ ಒಂದು ಮಣ್ಣಿನ ದೀಪವನ್ನು ತೆಗೆದುಕೊಂಡು ಶುದ್ಧ ಹಸುವಿನ ತುಪ್ಪ ಅಥವಾ ಎಣ್ಣೆಯ ದೀಪವನ್ನು ಸಹ ಹಚ್ಚಬಹುದು. ಎಷ್ಟೇ ದೊಡ್ಡ ಸಮಸ್ಯೆ ಇದ್ದರೂ ಸಹ ಅದು ನಿವಾರಣೆಯಾಗಿ ಮಹಾಲಕ್ಷ್ಮೀ  ದೇವಿಯಾ ಕೃಪಾಕಟಾಕ್ಷ ನಿಮ್ಮ ಮೇಲೆ ಬರುವುದು. ಈ ಉಪಾಯವನ್ನು ಗುಪ್ತವಾಗಿ ಮಾಡಬೇಕು ಯಾರಿಗೂ ಸಹ ಹೇಳಿಕೊಳ್ಳಬಾರದು .

ಜೀವನದ ಕೆಲವು ಸಮಸ್ಯೆಗಳಿಂದ ಹೊರಬರಲು ಈ ಸರಳ ಉಪಾಯಗಳನ್ನು ಪ್ರತಿನಿತ್ಯ ಪಾಲಿಸಿ ನೋಡಿ…..

ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರೆ ಹೀಗೆ ಮಾಡಿ 

 

 

ನೀವು ಆರ್ಥಿಕ ಸಮಸ್ಯೆ ಹಣಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ. ಬೇಯಿಸಿದ ಹಳದಿ ಬಣ್ಣದ ಅನ್ನವನ್ನು  ಅದು ಸಿಹಿ ಅನ್ನವಾಗಿರಬೇಕು .ಆ ಸಿಹಿ ಹಳದಿ ಅನ್ನವನ್ನು ಪ್ರಸಾದವಾಗಿ ಶುಕ್ಲ ಪಕ್ಷದ ಮೊದಲ ಗುರುವಾರ ಶಿವಲಿಂಗಕ್ಕೆ ನೈವೇದ್ಯವಾಗಿ ಅರ್ಪಿಸಬೇಕು .ಶುಕ್ಲ ಪಕ್ಷದ ಮೊದಲ ಗುರುವಾರ ಪ್ರಾರಂಭ ಮಾಡಿ ಹೀಗೆ ಒಂಬತ್ತು ಗುರುವಾರ ಮಾಡಬೇಕು ಹಾಗೆ ಆ ಅನ್ನವನ್ನು ಬಡವರಿಗೆ ದಾನ ಮಾಡಬೇಕು. ಹೀಗೆ ಮಾಡಿದರೆ ನಿಮ್ಮ ಆರ್ಥಿಕ ಸಮಸ್ಯೆಯು ಬಗೆಹರಿಯುವುದು.

 ಶಿವಲಿಂಗಕ್ಕೆ ನೀರಿನ ಅಭಿಷೇಕ

 

 

ಶಿವಲಿಂಗಕ್ಕೆ ನೀರಿನ ಅಭಿಷೇಕ ಮಾಡುವಾಗ ನಿಮ್ಮ ಕೈಯಿಂದ ಶಿವಲಿಂಗವನ್ನು ತೊಳೆಯಬೇಕು. ನಂತರ ಯಾರ ಅದೃಷ್ಟವೂ ಚೆನ್ನಾಗಿರುವುದಿಲ್ಲವೋ . ಯಾರಿಗೆ ಅನೇಕ ಸಮಸ್ಯೆಗಳು ಇರುತ್ತವೋ ದೋಷಗಳು ಮತ್ತು  ದೋಷಪೂರಿತವಾಗಿ ಬಳಲುತ್ತಿರುವರೋ ಅಂಥವರು ಹೀಗೆ ಮಾಡಿದರೆ ಅವರ ಅದೃಷ್ಟವೇ ಬದಲಾಗುವುದು. ಜೊತೆಗೆ ಕೈಯಲ್ಲಿರುವ ನಕಾರಾತ್ಮಕ ರೇಖೆಗಳು ತೊಲಗಿ ಎಲ್ಲಾ ಒಳ್ಳೆಯ ಉತ್ತಮ ರೇಖೆಗಳಾಗಿ  ಪರಿವರ್ತನೆಯಾಗುತ್ತವೆ.

 ವಿವಾಹ ಮತ್ತು ವೈವಾಹಿಕ ಸಮಸ್ಯೆಗೆ

 

 

ನೀವು ಶಿವಲಿಂಗಕ್ಕೆ ಮಾಡುವ ಜಲಾಭಿಷೇಕದಲ್ಲಿ ಅಂದರೆ ನೀರಿನಲ್ಲಿ ಕೇಸರಿಯನ್ನು ಮಿಶ್ರಣ ಮಾಡಿ ಜಲಾಭಿಷೇಕ ಮಾಡಿ ಹೀಗೆ ಮಾಡಿದರೆ ವಿವಾಹಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಸರಾಗವಾಗಿ ಈಡೇರುತ್ತವೆ ಮತ್ತು  ಜೀವನದಲ್ಲಿ ವೈವಾಹಿಕ ಸಮಸ್ಯೆಗಳು ಇದ್ದರೆ ಅವು ಸಹ ನಿವಾರಣೆಯಾಗುತ್ತದೆ.

 ನಿಮ್ಮ ಆಯಸ್ಸು ಹೆಚ್ಚಿಗೆ ಮಾಡಲು

 

 

ನಿಮಗೆ ಅಧಿಕ ವರ್ಷಗಳ ಕಾಲ ಜೀವಿಸಬೇಕೆಂದು ಆಸೆ ಇದ್ದರೆ ಅಥವಾ ನೀವು ಯಾವುದಾದರೂ ಅತ್ಯಂತ ಘೋರ ಕಾಯಿಲೆಯಿಂದ ಬಳಲುತ್ತಿರುವವರಾದರೆ ದರ್ಬೆ ಹುಲ್ಲನ್ನು ಶಿವಲಿಂಗಕ್ಕೆ ಅರ್ಪಿಸಿದರೆ. ನಿಮ್ಮ ಖಾಯಿಲೆ ಗುಣಮುಖವಾಗುವುದು ಮತ್ತು ನೀವು ಅಂತಹ ಸಮಸ್ಯೆಯಿಂದ ಹೊರಬರುವಿರಿ.

 ಮಂಗಳ ದೋಷಕ್ಕೆ 

 

 

ನಿಮ್ಮ ಮನೆಯಲ್ಲಿ ಅನ್ನವನ್ನು ಬೇಯಿಸಿ  ಅದರಿಂದ ಶಿವಲಿಂಗವನ್ನು ಅಲಂಕಾರ ಮಾಡಿ ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿರುವ ಮಂಗಳ ದೋಷ ಮತ್ತು ವಾಸ್ತು ದೋಷಗಳು ನಿವಾರಣೆಯಾಗುತ್ತವೆ. ನಂತರ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಿ ನಿಮ್ಮ ಮನೆಯಲ್ಲಿರುವ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತವೆ .

ಭಯಾನಕ ಖಾಯಿಲೆಯಿಂದ ಬಳಲುತ್ತಿರುವವರು

 

 

ನಿಮ್ಮ ಮನೆಯಲ್ಲಿ ಯಾರಿಗಾದರೂ ಖಾಯಿಲೆ ವಾಸಿಯಾಗುತ್ತಿಲ್ಲವೆಂದರೆ ಅತ್ಯಂತ ಭಯಂಕರವಾಗಿ ವಾಸಿಯಾಗದಂತೆ ಬಳಲುತ್ತಿದ್ದಾರೆ ಎಂದರೆ ಅಂಥವರು ಎಳ್ಳು , ಹಾಲು, ನೀರು. ಈ ಮೂರನ್ನು ಮಿಶ್ರಣ ಮಾಡಿ ಶಿವಲಿಂಗಕ್ಕೆ ಪ್ರತಿದಿನ ಅರ್ಪಿಸಿ ಹೀಗೆ ಪ್ರತಿದಿನ ಮಾಡುವುದರಿಂದ ತದೇಕವಾಗಿ ನಿಮ್ಮ ಕಾಯಿಲೆ  ಸಂಪೂರ್ಣವಾಗಿ ಗುಣಮುಖವಾಗುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top