fbpx
ಭವಿಷ್ಯ

ವಾರ ಭವಿಷ್ಯ ಅಕ್ಟೋಬರ್ 23 ರಿಂದ 29 ರವರೆಗೆ .

ವಾರ ಭವಿಷ್ಯ ಅಕ್ಟೋಬರ್ 23 ರಿಂದ 29 ರವರೆಗೆ .

 

ಮೇಷ (Mesha)

ಹೆಚ್ಚಿನ ಪ್ರತಿಕೂಲತೆಗಳು ವೃತ್ತಿರಂಗದಲ್ಲಿ ಆಗಾಗ ಕೆಡವಿದ ಅನುಭವವಾದರೂ ಸಹನೆಯ ಪರೀಕ್ಷೆಯ  ಕಾಲವಿದು. ವಿವೇಚನೆಯಿಂದ ವರ್ತಿಸಿದಲ್ಲಿ ಗುರುವಿನ ಅನುಗ್ರಹದಿಂದ ಪಾರಾಗುವಿರಿ. ಆದಾಯವೂ ಹಂತಹಂತವಾಗಿ     ಲಾಭದಾಯಕವಾಗಿದ್ದು ಧನ ಸಂಗ್ರಹಕ್ಕೆ ಸಾಧಕವಾಗಲಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಪ್ರಗತಿ ಇದೆ. ನಿರುದ್ಯೋಗಿಗಳಿಗೆ ಸ್ವಾಭಿಮಾನದ ಪ್ರಶ್ನೆ ಎದುರಾಗುತ್ತದೆ.  ಮಹಿಳೆಯರಿಗೆ ಚಿನ್ನಾಭರಣ ಖರೀದಿಗೆ ಅವಕಾಶವಿದೆ. ಲಕ್ಷ್ಮೀ ಕಟಾಕ್ಷ  ಸಂಪೂರ್ಣವಾಗಿ ನಿಮ್ಮ ಮೇಲಿದೆ.

 

 

ವೃಷಭ (Vrushabh)

ವೃತ್ತಿರಂಗದಲ್ಲಿ ಜವಾಬ್ದಾರಿ ಹೆಚ್ಚಾಗಲಿದ್ದು ಹಿತಶತ್ರುಗಳು ನಿಮ್ಮನ್ನು ಗಮನಿಸಲಿದ್ದಾರೆ. ಶತ್ರುಗಳೊಡನೆ ಭಾರಿ ಗಾಳಿ ಗುದ್ದಾಟವಾದೀತು. ತಾಳ್ಮೆ ಸಮಾಧಾನದಿಂದ ಮುಂದುವರಿಯಿರಿ. ಸಕಾಲಕ್ಕೆ ಮಿತ್ರರ ಸಹಕಾರದಿಂದ ನಿಮಗೀಗ ಮುಂದುವರಿಯಬೇಕೆಂದು ನೆನಪಿರಲಿ. ವ್ಯಾಪಾರಿಗಳು ಸಮಾಧಾನದಿಂದ ಮುಂದುವರಿಯಬೇಕು .ಹಣವೇ ಮುಖ್ಯವಾದರೂ ಅದೇ ಸರ್ವಸ್ವವಲ್ಲ ಎಂಬುದು  ನಿಮಗೆ ಅನುಭವಕ್ಕೆ  ಬರಲಿದೆ. ದೇಹಾರೋಗ್ಯ ಆಗಾಗ ಕಿರಿಕಿರಿ ಎನಿಸಲಿದೆ.

 

ಮಿಥುನ (Mithuna)

ಆರ್ಥಿಕ ಸ್ಥಿತಿಯೂ ಆಗಾಗ ಏರುಪೇರಾದರೂ ಒಟ್ಟಿನಲ್ಲಿ ಸುಖಮಯ ವಾತಾವರಣವಿರುತ್ತದೆ. ನಿರುದ್ಯೋಗಿಗಳು ,ಅವಿವಾಹಿತರು, ವಿದ್ಯಾರ್ಥಿಗಳು ,ಅದೃಷ್ಟ ಬಲ ಖುಲಾಯಿಸಲಿದೆ. ಸಾಮಾಜಿಕವಾಗಿ ಕೀರ್ತಿ ಹೆಚ್ಚಿ ಅನೇಕ ಆದರಗಳಿಗೆ ಪಾತ್ರರಾಗುವಿರಿ. ಜೊತೆಗೆ ದೇವರ ದರ್ಶನ ತೀರ್ಥಯಾತ್ರೆಯ ಪುಣ್ಯವು ಸಹ ಲಭಿಸುವುದು.  ಸ್ನೇಹಿತ ವರ್ಗದವರ ಬಗ್ಗೆ ಕಾಳಜಿ ಇರಲಿ. ಧರ್ಮಪತ್ನಿಯ  ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ.

ಕರ್ಕ (Karka)

ಸಮಯ ಇದ್ದುದರಲ್ಲಿ ಉತ್ತಮ ಎಂಬುದೊಂದೇ ಸಮಾಧಾನ. ವೃತ್ತಿರಂಗದಲ್ಲಿ ಅದೃಷ್ಟವಿದ್ದು ಸುಧಾರಿಸಿಕೊಂಡು ಹೋಗುವುದರಿಂದ ಸರಾಗವಾಗಿ  ಸಮಯ ಕಳೆಯುವುದು.ಸಾಮಾಜಿಕವಾಗಿ  ಪ್ರತಿಷ್ಠೆಯನ್ನು ತೋರಿಸಲು ಹೋಗಿ ಹಣ ಕಳೆದುಕೊಂಡು ಹೋಗುವ ಪ್ರಸಂಗ  ತಂದೀತು.ಅಗಾಗ ವಿಶೇಷವಾದ ಆದಾಯವಿದ್ದರು ಖರ್ಚು ವೆಚ್ಚಗಳಿಂದ ಎಷ್ಟು  ಬಂದರೂ ಸಾಲದೆನ್ನುವ ಸ್ಥಿತಿ ಅನುಭವಕ್ಕೆ ಬರುತ್ತದೆ.

 

ಸಿಂಹ (Simha)

ಆದಾಯದಲ್ಲಿ ವಿಳಂಬ ಆರೋಗ್ಯ ಸ್ಥಿತಿ ಏರುಪೇರಾಗಲಿದೆ. ಧರ್ಮಪತ್ನಿಯ ಅತೃಪ್ತಿ ಕುಟುಂಬ ಕ್ಲೇಶಕ್ಕೆ ಕಾರಣವಾಗಬಹುದು. ನಿರುದ್ಯೋಗಿಗಳಿಗೆ ತಾತ್ಕಾಲಿಕವಾಗಿ  ನೆಮ್ಮದಿ ತರಲಿದೆ. ಕೆಲಸದಲ್ಲಿ  ಸಾಮಾಧಾನವಾಗಿ ಮುನ್ನಡೆ ಇದೆ. ದೇವತಾ ಕಾರ್ಯಗಳಿ೦ದಾಗಿ  ಪುಣ್ಯ ಲಭಿಸುವುದು .ವಾರದ ಕೊನೆಗೆ ಸಮಯವು ಶುಭ  ಆಶುಭ ಸಮಯವೆನಿಸುವುದರಿಂದ ಸಿಕ್ಕಿದ್ದರಲ್ಲಿ ತೃಪ್ತಿ ಪಟ್ಟುಕೊಳ್ಳುವುದು ಉತ್ತಮ.

 

ಕನ್ಯಾರಾಶಿ (Kanya)

ವೃತ್ತಿರಂಗದಲ್ಲಿ ಹಿರಿಯ  ಅಧಿಕಾರಿ ವರ್ಗದವರೊಡನೆ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು . ವಿಶೇಷ ರೂಪದಲ್ಲಿ ಧನಾಗಮನವಿದೆ. ಮನೆಯಲ್ಲಿ  ಸಂಭ್ರಮವಿದೆ. ನೂತನ ವಾಹನ ಖರೀದಿ ಭೂ ಖರೀದಿಗೆ ಮನಸ್ಸು ಮುಂದಾಗಬಹುದು. ಆರೋಗ್ಯದ ಬಗ್ಗೆ ಉದಾಸೀನತೆ ಮಾಡದಿರಿ . ನಿಮಗೆ ಸಣ್ಣಪುಟ್ಟ ಸಮಸ್ಯೆಗಳು  ತೋರಿಬಂದರೂ  ತುಂಬ ಹೆಚ್ಚು  ಎನಿಸಲಿದೆ. ಸಾಂಸಾರಿಕವಾಗಿ ಹೆಚ್ಚಿನ   ನೆಮ್ಮದಿ , ಸುಖ , ಸಂತೋಷಗಳಿರುತ್ತವೆ.

 

ತುಲಾ (Tula)

 

ವೃತ್ತಿರಂಗದಲ್ಲಿ ಬಾರಿ ಮಾತುಗಳನ್ನು ಕೇಳಬೇಕಾದೀತು. ವೈದ್ಯಕೀಯ ಖರ್ಚಿನ ಕಾಲವಿದು ಕಾಳಜಿ ವಹಿಸಬೇಕು.  ವಸ್ತುಗಳ ವ್ಯಾಪಾರ ಉತ್ತಮ ಲಾಭದೊಂದಿಗೆ ರಾಜಕೀಯ ವರ್ಗದವರಿಗೆ ಕಾದು ನೋಡುವ ಪ್ರವೃತ್ತಿ ಉತ್ತಮ .ಶತ್ರುಬಾಧೆ ಆಗಾಗ ಅನುಭವಕ್ಕೆ ಬಂದರೂ ಹೆಚ್ಚಿನ ಪರಿಣಾಮ ಬಿರಲಿದೆ. ಶನಿಯ ಬಲದಿಂದ ಜಾಗೃತಿ ಕೂಡಿ ಬರಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿ ಹೊಸ ಕಟ್ಟಡ ಅಥವಾ ಮನೆ ಖರೀದಿ ನಿವೇಶನ  ಲಾಭವು ಆಗುವುದು.

 

ವೃಶ್ಚಿಕ (Vrushchika)

 

ಆರ್ಥಿಕವಾಗಿ ಧನದ ಆಗಮನ ಹೆಚ್ಚು  ಇರುವುದರಿಂದ   ಏರುಪೇರಾಗುವ ಕಾಲವಿದು . ಹಿರಿಯರ  ಸೂಕ್ತ ಸಲಹೆಗಳಿಂದ  ಜಂಜಾಟದಿಂದ ಪಾರಾಗುವಿರಿ. ವೃತ್ತಿಯಲ್ಲಿ ಸ್ಥಾನ ಬದಲಾವಣೆ ,ಕಿರಿಕಿರಿ,ವರ್ಗಾವಣೆ   ಇತ್ಯಾದಿಗಳಿಂದ ಬೇಜಾರಾಗಬಹುದು.  ಹಿರಿಯರ ಆರೋಗ್ಯ ಭಾಗ್ಯಕ್ಕೆ ಆಸ್ಪತ್ರೆ ಆಲೆದಾಟ ಇರುತ್ತದೆ .ಆಗಾಗ ನಾನಾ ರೀತಿಯ ಖರ್ಚು ವೆಚ್ಚಗಳಿಂದ ತಲೆಬಿಸಿಯಾಗಬಹುದು. ವಾರಾಂತ್ಯದಲ್ಲಿ ನೂತನ ಬಂಧುಗಳ ಬೆಸುಗೆ ಸಾಂಸಾರಿಕವಾಗಿ ಹೆಚ್ಚು ಫಲ ತರಬಹುದು.

 

ಧನು ರಾಶಿ (Dhanu)

 

ಸಂತಸದ ವಾತಾವರಣವಿದ್ದು ನಿಮ್ಮ ಆದಾಯದ ಮಾರ್ಗಸೂಚಿ ನಿಮ್ಮ ಮುಂದಿದೆ ಆರಿಸಿಕೊಳ್ಳಿ ಲಾಭಾಂಶ ಪಡೆಯಿರಿ. ಸರಕಾರಿ  ಕೆಲಸದಲ್ಲಿ ಕೆಟ್ಟ  ಆಪತ್ತು ಇದೆ. ಆದರೆ ಅಂತಿಮ ಜಯ ದೈವಾನುಗ್ರಹದಿಂದ ನಿಮ್ಮದಾಗುತ್ತದೆ. ಮನದನ್ನೆಯನ್ನು ಒಲಿಸಿಕೊಳ್ಳಿರಿ. ಮನಕ್ಕೆ ಮುದ ನೀಡಲಿದೆ. ದೈವಾನುಗ್ರಹದ ಜತೆಗೆ ಕಾಲಕಾಲಕ್ಕೆ ಪ್ರಯತ್ನದ ಅನುಕೂಲವಿದ್ದು ಸಂಸಾರ ಸುಖಮಯವೆನಿಸಲಿದೆ. ಸ್ವರ್ಗವೆನಿಸಿದೆ ಅನಿರೀಕ್ಷಿತ ಖರ್ಚುವೆಚ್ಚಗಳು ಆಗಾಗ ಕಂಗೆಡಿಸಿಲಿವೆ.

 

ಮಕರ (Makara)

ಧನಾರ್ಜನೆಯಲ್ಲಿ ಚೇತರಿಕೆ ಇದ್ದರು ಹಣಕಾಸು ಸಾಮಾನ್ಯವಾಗಿರುತ್ತದೆ. ಪರಿವಾರದವರೊಡನೆ  ಅನಾವಶ್ಯಕವಾಗಿ ವಾದ ವಿವಾದಗಳಿಗೆ ಕಾರಣವಾಗಲಿದೆ. ಕೆಲವೊಂದು ಭಾಗಗಳಲ್ಲಿ ಮತ್ತು ಹೊಟ್ಟೆಯಲ್ಲಿ ಕೆಲವು ಸಮಸ್ಯೆಗಳನ್ನು ಕಾಣಿಸಿಕೊಳ್ಳ ಬಹುದು. ಕಾಳಜಿ ಇರಲಿ. ದೇವರನ್ನು ನಿರಂತರವಾಗಿ ಪ್ರಾರ್ಥಿಸಿ. ಉದ್ಯೋಗ ರಂಗದಲ್ಲಿ ಮುನ್ನಡೆಯ ಅನುಭವ ತುಂದೀತು.ಬ್ಯಾಂಕ್, ಮಾರ್ಕೆಟಿಂಗ್, ಶೇರು, ವ್ಯವಹಾರಗಳಲ್ಲಿ ಹೆಚ್ಚಿನ ಹೂಡಿಕೆ ಲಾಭಕರವಲ್ಲ.

 

ಕುಂಭರಾಶಿ (Kumbha)

 

ನಿಮ್ಮ ಎಣಿಕೆಯಂತೆ ಎಲ್ಲಾ ಕೆಲಸ ಕಾರ್ಯಗಳು ಯಶಸ್ಸನ್ನು ತಂದುಕೊಡುತ್ತವೆ. ಮನಸ್ಸು  ಸಂತಸದ ಸಾಗರವೆನಿಸಲಿದೆ. ದೈವಾನುಗ್ರಹದೊಂದಿಗೆ ಪ್ರಯತ್ನ ಬಲ ಆತ್ಮವಿಶ್ವಾಸ ಮುನ್ನಡೆಗೆ ಸಾಧಕವಾಗಲಿದೆ. ಕೆಲಸದಲ್ಲಿ  ವಿಶೇಷ ಮುಂಬಡ್ತಿಯ ಅವಕಾಶಗಳಿರುತ್ತದೆ. ಉತ್ಸಾಹದಿಂದ ಕೆಲಸ ಮಾಡಿರಿ. ಕಾರ್ಯನಿರ್ವಹಣೆ ಮೆಚ್ಚುಗೆಗೆ ಪಾತ್ರವಾಗಿದ್ದು. ಆರ್ಥಿಕವಾಗಿ ಒಲಿದು ಶ್ರೀಲಕ್ಷ್ಮೀ ಬಾಗಿಲಿಗೆ ಬರುವಳು. ಬಂಧು ಬಳಗದವರು ಅಸೂಯೆ ಪಡುತ್ತಾರೆ. ಹಾಗೆ ಮಡದಿಯ ಬಹುದಿನಗಳ ಕನಸು  ನನಸಾಗುತ್ತದೆ.

 

ಮೀನರಾಶಿ (Meena)

ಕುಟುಂಬ ಸ್ಥಾನದಲ್ಲಿರುವ ಹಿರಿಯರು ಆರೋಗ್ಯದ ಬಗ್ಗೆ ಚಿಂತಿಸುವಂತಾದೀತು. ಹಣಕಾಸಿಗೆ ಸಂಬಂಧಪಟ್ಟ ವಿಚಾರದಲ್ಲಿ ಹೆಚ್ಚಿನ ಕಾಳಜಿಯ ಅಗತ್ಯವಿದೆ. ಆದರೂ ಸಹ ಆದಾಯಕ್ಕೆ ಕೊರತೆ ಇರದು. ನ್ಯಾಯಾಲಯದ ಕೆಲಸ ಕಾರ್ಯಗಳಲ್ಲಿ ನೀವು ಭಾಗಿಗಳಾಗ ಬೇಕಾಗಬಹುದು. ಹೊಟ್ಟೆಗೆ ಸಂಬಂಧಪಟ್ಟ ಅನಾರೋಗ್ಯ ಆಗಾಗ ಬಾಧಿಸಬಹುದು. ಉದ್ಯೋಗದ ರಂಗದಲ್ಲಿ ದೇವರಿಗೆ ಹೋಲಿಸಿದರೆ ನಿಮ್ಮ ಅಭಿವೃದ್ಧಿಯೇ ನಿಮಗೆ ಸಮಾಧಾನಕರವೆನಿಸಬಹುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top