ತಿಂಡಿ ತೀರ್ಥ

ನಾನ್‌ ವೆಜ್ ಪ್ರಿಯರಿಗೆ ಚಿಕನ್ ಪೆಪ್ಪರ್ ಡ್ರೈ ಮಾಡುವ ವಿಧಾನ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ನಾನ್‌ ವೆಜ್ ಪ್ರಿಯರಿಗೆ ಚಿಕನ್ ಪೆಪ್ಪರ್ ಡ್ರೈ ಮಾಡುವ ವಿಧಾನ

ಚಿಕನ್ ಪೆಪ್ಪರ್ ಡ್ರೈ ಮಾಡಲು ಬೇಕಾಗುವ ಪದಾರ್ಥಗಳು:

*ಚಿಕನ್ 1 ಕೆಜಿ

*ಬೆಳ್ಳುಳ್ಳಿ ಪೇಸ್ಟ್ 1 ಚಮಚ

*ಶುಂಠಿ ಪೇಸ್ಟ್ 1 ಚಮಚ

*ಗರಂ ಮಸಾಲ ಅರ್ಧ ಚಮಚ

*ಟೊಮಾಟೊ 2

*ಚಿಕ್ಕ ಈರುಳ್ಳಿ 2

*ಅರ್ಧ ಇಂಚಿನಷ್ಟು ದೊಡ್ಡದಿರುವ ಶುಂಠಿ (ಜಜ್ಜಿದ್ದು)

*2-3 ಎಸಳು ಬೆಳ್ಳುಳ್ಳಿ

*ಅರಿಶಿಣ ಪುಡಿ

*ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿದ್ದು

*ಪೆಪ್ಪರ್ ಪುಡಿ 3-4 ಚಮಚ

*ಹಸಿಮೆಣಸಿನಕಾಯಿ 1-2

*ಕರಿಬೇವಿನ ಎಲೆ

*ಎಣ್ಣೆ

*ರುಚಿಗೆ ತಕ್ಕ ಉಪ್ಪು

Image result for chicken pepper dry

ಚಿಕನ್ ಪೆಪ್ಪರ್ ಡ್ರೈ  ಮಾಡುವ ವಿಧಾನ:

  1. ಮಾಂಸವನ್ನು ತೊಳೆದು ಅದಕ್ಕೆ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಅರ್ಧ ಗರಂ ಮಸಾಲ, ಪೆಪ್ಪರ್ ಪುಡಿ, ಅರಿಶಿಣ ಪುಡಿ ಉಪ್ಪು ಹಾಕಿ ಮಿಶ್ರ ಮಾಡಿ 1 ಗಂಟೆ ಕಾಲ ಇಡಬೇಕು.
  2. ನಂತರ ಬಾಣಲೆಗೆ ಅರ್ಧದಷ್ಟು ಎಣ್ಣೆ ಹಾಕಿ ಕಾಯಿಸಬೇಕು, ಕಾದ ಎಣ್ಣೆಗೆ ಮಸಾಲೆ ಜೊತೆ ಮಿಶ್ರಣ ಮಾಡಿಟ್ಟ ಚಿಕನ್ ಹಾಕಿ ಸ್ವಲ್ಪ ಕಂದು ಬಣ್ಣ ಬರುವಾಗ ತೆಗೆಯಬೇಕು.
  3. ನಂತರ ಪಾತ್ರಗೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಜಜ್ಜಿದ ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ಈರುಳ್ಳಿ, ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಬಾಡಿಸಿ ನಂತರ ಟೊಮೆಟೊ ಹಾಕಿ ಟೊಮೆಟೊ ಮೆತ್ತಗಾದ ಮೇಲೆ ಹುರಿದ ಮಾಂಸವನ್ನು ಹಾಕಿ ಅರ್ಧ ಲೋಟ ನೀರು ಹಾಕಿ ಸ್ವಲ್ಪ ಹೊತ್ತು ಬೇಯಿಸಿದರೆ ಡ್ರೈ ಪೆಪ್ಪರ್ ಚಿಕನ್ ರೆಡಿ. ಇದನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಡ್ರೈ ಚಿಕನ್ ಪೆಪ್ಪರ್ ರೆಡಿ.

 

ಇದನ್ನು ಪೂರಿ, ಚಪಾತಿ, ಪರೋಟ ಜೊತೆ ತಿನ್ನಲು ರುಚಿಕರವಾಗಿರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top