fbpx
ಸಮಾಚಾರ

ಅನಿವಾಸಿ ಭಾರತೀಯರು ಕನ್ನಡದ ಹೆಸರಲ್ಲಿ ಮಾಡುತ್ತಿರುವ ದಂದೆಯ ಮೋಸಕ್ಕೆ ಬಲಿಯಾದರ ನಟ ದರ್ಶನ್‌ , ಬಲಿಯಾದ ನಟರ ಲೀಸ್ಟ್ ಇಲ್ಲಿದೆ ನೋಡಿ! ಅನಿವಾಸಿ ಭಾರತೀಯರು ಕನ್ನಡದ ಹೆಸರಲ್ಲಿ ಮಾಡುತ್ತಿರುವ ದಂದೆಯ ಮೋಸಕ್ಕೆ ಬಲಿಯಾದರ ನಟ ದರ್ಶನ್‌ , ಬಲಿಯಾದ ನಟರ ಲೀಸ್ಟ್ ಇಲ್ಲಿದೆ ನೋಡಿ!

ಕನ್ನಡದ ಹೆಸರಲ್ಲಿ ಅನಿವಾಸಿ  ಭಾರತೀಯರು ಮಾಡುತ್ತಿರುವ ದಂದೆ

ಏನು ಗೊತ್ತ? ಈ ಮೋಸಕ್ಕೆ ಬಲಿಯಾದರ ನಟ ದರ್ಶನ್‌ , ಬಲಿಯಾದ

ನಟರ ಲೀಸ್ಟ್ ಇಲ್ಲಿದೆ ನೋಡಿ!

 

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ದರ್ಶನ್ ಬ್ರಿಟಿಷ್ ಸರ್ಕಾರ ನೀಡುವ ಪ್ರತಿಷ್ಠಿತ ಗ್ಲೋಬಲ್  ಡೈವರ್ಸಿಟಿ ಅವಾರ್ಡ್ ಪಡೆದುಕೊಂಡಿದ್ದಾರೆ ಎಂದು ನಮ್ಮ ಕನ್ನಡಜನತೆಗೆ ಸಂಭ್ರಮದ ಮನೆ ಮಾಡಿತ್ತು ಆದರೆ ಈ ಅವಾರ್ಡ್ ದೋಖಾ ಅವಾರ್ಡ್ ಎಂದು ಕನ್ನಡಿಗರ ಮನದಲ್ಲಿ ಮೂಡಿರುವ ಪ್ರಶ್ನೆಯಾಗಿದೆ ಯಾಕೆಂದರೆ ಇಲ್ಲಿದೆ ನೋಡಿ ವಿವರ…

 

ದರ್ಶನ್ ಬ್ರಿಟಿಷ್ ಸರ್ಕಾರ ನೀಡುವ ಪ್ರತಿಷ್ಠಿತ ಗ್ಲೋಬಲ್  ಡೈವರ್ಸಿಟಿ ಅವಾರ್ಡ್ ಪಡೆದುಕೊಂಡಿಲ್ಲ. ಬದಲಿಗೆ ಯುಕೆಕೆಬಿಸಿ ಎಂಬ ಖಾಸಗಿ ಕಂಪನಿ ನೀಡಿದ ‘ಗ್ಲೋಬಲ್ ಇಂಟಿಗ್ರೀಟಿ ಅವಾರ್ಡ್’ ಎಂದು ಅಲ್ಲಿನ ಕನ್ನಡ ಸಂಘಗಳು ಸ್ಪಷ್ಟಪಡಿಸಿವೆ.

 

 

ಲಂಡನ್ ಕನ್ನಡಿಗರ ಸಂಘದ ಹೆಸರಲ್ಲಿ ಮಹಾನ್ ಚತುರರಿಬ್ಬರು ಈ ಅವಾರ್ಡ್ ಅನ್ನು ಕೋಡೊದಾಗಿ ಹೇಳಿ ದರ್ಶನ್ ರವರಿಗೆ ಯಾಮರಿಸಿದ್ದಾರೆ …

 

 

ಮಂಜುನಾಥ್ ವಿಶ್ವಕರ್ಮ ಮತ್ತು ಸುಜಿತ್ ನಾಯರ್ ಇವರಿಬ್ಬರೂ ಈ ಮೊಸಕ್ಕೆ ಲಂಡನ್ ಪಾರ್ಲಿಮೆಂಟ್ ಮೆಂಬರ್ ವೀರೇಂದ್ರಕುಮಾರ್ ಶರ್ಮಾರ ಹೆಸರನ್ನು ಅತ್ಯಂತ ನಾಜುಕಿನಿಂದಲೇ ಬಳಸಿಕೊಂಡಿದ್ದರು. ಈ ಎಂಪಿ ವೀರೇಂದ್ರ ಕುಮಾರ್ ಅವರ ಲೆಟರ್ ಹೆಡ್ ಮೂಲಕವೇ ದರ್ಶನ್ ಅವರನ್ನು ಆಹ್ವಾನಿದ್ದಾರೆ. ಈ ಲೆಟರ್ ಹೆಡ್ ಬಳಸಿ ಯಾವುದೇ ಅನುಮಾನ ಬರದಂತೆ ನೋಡಿಕೊಂಡಿದ್ದಾರೆ.

 

ಈ ಮೂಲಕ ಬ್ರಿಟೀಶ್ ಸಂಸತ್ತು ಖುದ್ದಾಗಿ ದರ್ಶನ್ ಅವರನ್ನು ಸನ್ಮಾನಿಸುತ್ತಿದೆ. ಈ ಹಿಂದೆ ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ, ಶಾರೂಕ್ ಖಾನ್, ಸಲ್ಮಾನ್ ಖಾನ್ ಮತ್ತಿತರರು ಪಡೆದಿದ್ದ ಗೌರವವನ್ನು ಇದೀಗ ದರ್ಶನ್ ಪಡೆದಿದ್ದಾರೆಂಬಂತೆ ಬಿಂಬಿಸಿದ್ದರು.

 

 

 

 

ದರ್ಶನ್ ಅವರನ್ನು ಗೌರವಿಸಿದ್ದು ಬ್ರಿಟೀಶ್ ಪಾರ್ಲಿಮೆಂಟ್ ಅಲ್ಲ. ಅವರಿಗೆ ಕೊಟ್ಟಿರೋದು ಗ್ಲೋಬಲ್ ಡೈವರ್ಸಿಟಿ ಅವಾರ್ಡ್ ಅಲ್ಲ, ಅವರಿಗೆ ಕೊಟ್ಟಿರೋದು ಗ್ಲೋಬಲ್ ಇಂಟಿಗ್ರಿಟಿ ಅವಾರ್ಡ್. ಅದಕ್ಕೂ ಬ್ರಿಟೀಶ್ ಪಾರ್ಲಿಮೆಂಟಿಗೂ ಯಾವುದೇ ಸಮಬಂಧವಿಲ್ಲ. ಇಂಥಾದ್ದೊಂದು ಅವಾರ್ಡು ಕೊಡುತ್ತಿರೋದರ ಬಗ್ಗೆ ಬ್ರಿಟೀಶ್ ಪಾರ್ಲಿಮೆಂಟಿಗೆ ಯಾವ ಮಾಹಿತಿಯೂ ಇಲ್ಲ. ಒಂದು ಖಾಸಗೀ ಸಮಾರಂಭವನ್ನು ನಾಜೂಕಿನಿಂದ ಆಯೋಜಿಸಿ ಅದರಲ್ಲಿ ದರ್ಶನ್‌ಗೆ ಒಂದ್ಯಾವುದೋ ಅವಾರ್ಡು ಕೊಟ್ಟು ಮಂಜುನಾಥ್ ವಿಶ್ವಕರ್ಮ, ದರ್ಶನ್ ಇಮೇಜನ್ನು ತನ್ನ ರೆಸ್ಟೋರೆಂಟ್ ಪ್ರಚಾರಕ್ಕೆ ಬಳಸಿಕೊಂಡಿದ್ದಾನೆ!

ಬ್ರಿಟೀಶ್ ಪಾರ್ಲಿಮೆಂಟ್ ಹೊಟೇಲಿನಂತಿದೆ. ಸುಸಜ್ಜಿತವಾದ ಹಾಲ್‌ಗಳು ಹಾಗೂ ಲಕ್ಷುರಿ ಕಾರುರನ್ನು ಗಂಟೆಗಳ ಲೆಕ್ಕದಲ್ಲಿ ಬಾಡಿಗೆ ತೆಗೆದುಕೊಂಡು ಈ ವಂಚಕರು  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಕರೆಸಿಕೊಂಡ ಇವರು ಪಾರ್ಲಿಮೆಂಟಿನ ಬಾಡಿಗೆ ಹಾಲ್‌ನಲ್ಲಿ ಕಾಟಾಚಾರಕ್ಕೊಂದು ಸಮಾರಂಭ ಮಾಡಿ ಅವಾರ್ಡು ಕೊಡೋ ಶಾಸ್ತ್ರ ಮುಗಿಸಿದ್ದಾರೆ.

ದರ್ಶನ್ ನಿಂದ ಬಿಟ್ಟಿ ಪ್ರಚಾರ

ಹೀಗೆ ದರ್ಶನ್ ಅವರನ್ನು ಕರೆಸಿಕೊಂಡ ಮಂಜುನಾಥ್ ವಿಶ್ವಕರ್ಮನ ಅಸಲೀ ಉದ್ದೇಶವೇ ಬೇರೆಯದ್ದಿದೆ. ಆತ ಲಂಡನ್ನಿನಲ್ಲೊಂದು ರೆಸ್ಟೋರೆಂಟ್ ಓಪನ್ ಮಾಡಿದ್ದಾನೆ ಅದರ ಹೆಸರೇ ‘ಕರ್ಮ ರೆಸ್ಟಾರೆಂಟ್! ತನ್ನ ಸ್ವಾರ್ಥಕ್ಕಾಗಿ ದರ್ಶನ್ ಅವರನ್ನು ಸುತ್ತಾಡಿಸಿ ಅದಕ್ಕೆ ಬಿಟ್ಟಿ ಪ್ರಚಾರ ಕೊಡಿಸುತ್ತಿದ್ದಾನೆ. ಸಾಮಾನ್ಯವಾಗಿ ಕರ್ನಾಟಕದಲ್ಲೇ ಮಳಿಗೆ ಉದ್ಘಾಟನೆಯಂಥಾದ್ದರ ಉದ್ಘಾಟನೆಗೆ ತೆರಳಲು ದರ್ಶನ್ ಹತ್ತರಿಂದ ಹದಿನೈದು ಲಕ್ಷದ ವರೆಗೆ ಪಡೆಯುತ್ತಾರೆನ್ನುವ ಸುದ್ದಿಯಿದೆ. ಆದರೆ ಈ ಅವಾರ್ಡಿನ ನೆಪದಲ್ಲಿ ತನ್ನ ರೆಸ್ಟೋರೆಂಟ್ ಪ್ರಚಾರ ಮಾಡಿಕೊಳ್ಳುತ್ತಿರೋ ಮಂಜುನಾಥನ ಕಡೆಯಿಂದ ಸೀಮೆಗಿಲ್ಲದ ಅವಾರ್ಡಿನ ಹೊರತಾಗಿ ದರ್ಶನ್ ಅವರಿಗೆ ಬಿಡಿಗಾಸನ್ನೂ ಕೊಟ್ಟಿಲ್ಲವಂತೆ!

 

ಈ ಮೊಸಕ್ಕೆ ಬಲಿಯಾದವರ ನಟರ ಲೀಸ್ಟ್ ಇಲ್ಲಿದೆ ನೋಡಿ!

ಇದೆತರ ಕೆಲವು ನಟರಿಗೆ ಮತ್ತು ರಾಜಕಾರಣಿಗಳಿಗೆ  ಅವಾರ್ಡ್, ಸನ್ಮಾನ, ಡಾಕ್ಟರೇಟ್, ಕೊಡುವುದಾಗಿ ಈ ದಂದೆ  ಕೋರರು ದಂಧೆ ಅವಾರ್ಡ್ ಮಾಡಿದ್ದಾರೆ….

*ಈ ಕೋಟಾದಲ್ಲಿ ಶಿವಣ್ಣ ಸೇರಿದಂತೆ ಒಂದಷ್ಟು ನಟರನ್ನು ಲಂಡನ್‌ಗೆ ಕರೆಸಿಕೊಂಡಿದ್ದರು. ಆ ನಂತರ ಇದೇ ಟೀಮು ಕೆಲ ರಾಜಕಾರಣಿಗಳನ್ನು ಕರೆಸಿ ಡಾಕ್ಟರೇಟ್ ಕೊಡೋ ದಂಧೆಯನ್ನೂ ಶುರುವಿಟ್ಟುಕೊಂಡಿತ್ತು.

*ಕಿಚ್ಚ ಸುದೀಪ್ ಅವರನ್ನು ಲಾರ್ಡ್ಸ್ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡಿಸೋದಾಗಿ ಹೇಳಿ ಕರೆಸಿಕೊಂಡು ಮನೆಮನೆಗೂ ಊಟಕ್ಕೆ ಆಮಂತ್ರಿಸಿದ್ದರು. ವರ್ಚಸ್ಸು ಹೆಚ್ಚಿಸಿಕೊಳ್ಳಲು ಮನೆಗೆ ಕರೆಯುತ್ತಿದ್ದವರ ಆಟಗಳನ್ನು ಕಂಡು ಸುದೀಪ್ ಟಾಟಾ ಹೇಳಿದ್ದರು. ಸುದೀಪ್ ನಮ್ಮನೆಗೆ ಬರಲಿಲ್ಲ ನಿಮ್ಮನೆಗೆ ಬರಲಿಲ್ಲ ಅಂತಾ ಕೆಲವು ಅನಿವಾಸಿ ಕನ್ನಡಿಗರು ಕಿತ್ತಾಡಿಕೊಂಡಿದ್ದರು.

*ಲವ್ ಗುರು ಸಿನಿಮಾ ನಿರ್ದೇಶಕನಿಗೂ ಇದೇ ಹಾಲ್ ನಲ್ಲಿ ಸನ್ಮಾನ ಮಾಡಲಾಗಿತ್ತು.

ಕರ್ನಾಟಕದ ಕೆಲ ರಾಜಕಾರಣಿಗಳು ಇಂಥಾ ಡಾಕ್ಟರೇಟಿನ ಫಲಾನುಭವ ಪಡೆದು ಮೆರೆದದ್ದೂ ಆಗಿದೆ.

 

 

 ಗ್ಲೋಬಲ್ ಡೈವರ್ಸಿಟಿ ಅವಾರ್ಡ್’ಗೆ ದೊಡ್ಡ ಹೆಸರಿದೆ, ಅದಕ್ಕೊಂದು ಮೌಲ್ಯವಿದೆ. ಈ ವರೆಗೆ ಚಿತ್ರನಟರಾದ ಅಮಿತಾಭ್’ಬಚ್ಚನ್, ಶಾರುಖ್’ಖಾನ್, ಸಲ್ಮಾನ್ ಖಾನ್ ಮಾತ್ರ ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ಪಾರ್ಲಿಮೆಂಟ್ ಹಾಲ್’ನಲ್ಲಿ ಅಲ್ಲಿನ ಸಂಸದರೊಬ್ಬರಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆಂದಕೂಡಲೇ ಗ್ಲೋಬಲ್ ಇಂಟಿಗ್ರೆಟಿ ಅವಾರ್ಡ್, ಗ್ಲೋಬಲ್ ಡೈವರ್ಸಿಟಿ ಅವಾರ್ಡ್ ಆಗುವುದಿಲ್ಲ. ನಿಜಕ್ಕೂ ದರ್ಶನ್ ಆ ಪ್ರಶಸ್ತಿ ಪಡೆದುಕೊಂಡರೆ ಹೆಮ್ಮೆ ಪಡುತ್ತೇವೆ ಎಂದು ಮ್ಯಾಂಚೆಸ್ಟರ್ ಕನ್ನಡಿಗರೊಬ್ಬರ ಮಾಧ್ಯಮಕ್ಕೆ ತಿಳಿಸಿದ್ದಾರೆ.

ವಿವಿಧ ಸಮುದಾಯದವರು ಟ್ವಿಟರ್ ಮತ್ತು ಫೇಸ್ ಬುಕ್ ಮೂಲಕ ಕನ್ನಡಿಗರ ಕಾಲೆಳೆಯುತ್ತಿದ್ದಾರೆ. ನಮಗೆಲ್ಲ ನಾಚಿಗೆಯಾಗುತ್ತಿದೆ. ದರ್ಶನ್ ತಮಗೆ ಬಂದಿರುವ ಪ್ರಶಸ್ತಿ ಯಾವುದೆಂದು ಸ್ಪಷ್ಟಪಡಿಸಬೇಕೆಂದು ಯುಕೆ ಕನ್ನಡ ಸಂಘದ ಪದಾಧಿಕಾರಿಯೊಬ್ಬರು ಒತ್ತಾಯಿಸಿದ್ದಾರೆ.

ಅಂಕಣ ಕೃಪೆ : ಅರುಣ್ ಕುಮಾರ್ .ಜಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top