fbpx
ಆರೋಗ್ಯ

ಸ್ತ್ರೀ ಪುರುಷ ಸಂಪರ್ಕದಿಂದ ಬರುವ ಖಾಯಿಲೆ ಗೊನೊರಿಯಾ ರೋಗದ ವಿರುದ್ಧ ಹೋರಾಡಲು ಪರಿಹಾರಗಳು

ಸ್ತ್ರೀ ಪುರುಷ ಸಂಪರ್ಕದಿಂದ ಬರುವ ಖಾಯಿಲೆ ಗೊನೊರಿಯಾ ರೋಗದ ವಿರುದ್ಧ

ಹೋರಾಡಲು ಪರಿಹಾರಗಳು..

 

 

ಗೊನೊರಿಯಾವು ಅಸುರಕ್ಷಿತ ಗಂಡು ಹಾಗು ಹೆಣ್ಣಿನ ಸಂಪರ್ಕ ಕ್ರಿಯೆಯಿಂದ ಹರಡುವ ರೋಗ ಇದು ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ ಸಾಮಾನ್ಯವಾಗಿ ಮೂತ್ರ ವಿಸರ್ಜನೆ ಮಾಡುವ ಜಾಗ ಕಣ್ಣು, ಗಂಟಲು, ಗುದದ್ವಾರ ಮತ್ತು ಹೆಣ್ಣಿನ ಜನನಾಂಗ ಪ್ರದೇಶಗಳಲ್ಲಿ, ಪುರುಷ ಜನನಾಂಗ ಪ್ರದೇಶಗಳಲ್ಲಿ ಮತ್ತು ತೇವವಾದ ಪ್ರದೇಶಗಳಲ್ಲಿ ಸೋಂಕು ತರುತ್ತದೆ.

ಪುರುಷರು ಮತ್ತು ಮಹಿಳೆಯರು ಗೊನೊರಿಯಾ ಸೋಂಕಿಗೆ ತುತ್ತಾಗುತ್ತಾರೆ , ಈ ಸೋಂಕು ವ್ಯಕ್ತಿಯಿಂದ ವ್ಯಕ್ತಿಯಿಂದ ಅಸುರಕ್ಷಿತ ಮೌಖಿಕ ಹಾಗು ಅಸುರಕ್ಷಿತ ಗಂಡು ಹಾಗು ಹೆಣ್ಣಿನ ಸಂಪರ್ಕ ಕ್ರಿಯೆಯಿಂದ ಹರಡುತ್ತದೆ.

ಗೊನೊರಿಯಾ ತಡೆಯಲು ಪರಿಹಾರಗಳು ಹೀಗಿವೆ :

 

 

ಅಸುರಕ್ಷಿತ ಗಂಡು ಹಾಗು ಹೆಣ್ಣಿನ ಸಂಪರ್ಕ ಕ್ರಿಯೆಯಿಂದ ಹರಡುತ್ತದೆ ಆದರಿಂದ ವಾಸಿಯಾಗುವವರೆಗೂ ನಿಮ್ಮ ಸಂಗಾತಿಯಿಂದ ದೂರವಿರಿ.

 

ಪ್ರತಿಜೀವಕಗಳು

 

ಗೊನೊರಿಯಾ ಚಿಕಿತ್ಸೆಗಾಗಿ, ನಿಮ್ಮ ವೈದ್ಯರು ನಿರ್ದೇಶಿಸಿದಂತೆ ನಿಗದಿತ ಪ್ರತಿಜೀವಕಗಳನ್ನು ನೀವು ತೆಗೆದುಕೊಳ್ಳಬೇಕು.

 

ಬೆಳ್ಳುಳ್ಳಿ

 

 

ಬೆಳ್ಳುಳ್ಳಿ ಒಂದು ಬ್ಯಾಕ್ಟೀರಿಯಾ ವಿರೋಧಿ ಮೂಲಿಕೆಯಾಗಿದೆ, ಹೀಗಾಗಿ ಇದು ಗೊನೊರಿಯಾ ಸೋಂಕಿಗೆ ಚಿಕಿತ್ಸೆ ನೀಡುತ್ತದೆ. ಬೆಳ್ಳುಳ್ಳಿಯಲ್ಲಿ ಅಲಿಕ್ಸಿನ್ ಎಂಬ ಅಂಶವು
ರೋಗ ಉಂಟುಮಾಡುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ.

 

ಆಪಲ್ ಸೈಡರ್ ವಿನೆಗರ್

 

 

ಆಪಲ್ ಸೈಡರ್ ವಿನೆಗರ್ ಬೆರಸಿ 15 ನಿಮಿಷಗಳ ಕಾಲ ಮೈಯನ್ನು ನೆನೆಸಿ ಸ್ನಾನ ಮಾಡಿ
1 ರಿಂದ 2 ಟೇಬಲ್ಸ್ಪೂನ್ ಆಪಲ್ ಸೈಡರ್ ವಿನೆಗರ್ ಅನ್ನು ಒಂದು ಲೋಟ ನೀರಿಗೆ ಮಿಶ್ರಣ ಮಾಡಿ ಕುಡಿಯಿರಿ ಬೇಕಾದರೆ ಸ್ವಲ್ಪ ಜೇನು ತುಪ್ಪ ಸೇರಿಸಿ ದಿನಕ್ಕೆ ಎರಡು ಬಾರಿ ಕುಡಿಯಿರಿ.

ಆಲಿವ್ ಎಣ್ಣೆ

 

 

ಆಲಿವ್ ಎಲೆಯ ಸಾರವು ಒಲೆರೊಪಿನ್ ಎಂಬ ಪ್ರಬಲ ವಸ್ತುವನ್ನು ಹೊಂದಿರುತ್ತದೆ, ಇದು ಬಲವಾದ ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿರುತ್ತದೆ.
ನೀವು ಆಲಿವ್ ಎಲೆಯ ಸಾರ ಪೂರಕಗಳನ್ನು ವೈದ್ಯರು ನಿರ್ದೇಶಿಸಿದಂತೆ ತೆಗೆದುಕೊಳ್ಳಬಹುದು.

ಜಿಂಕ್ ಯುಕ್ತ ಆಹಾರ ಸೇವನೆ ಮಾಡಿ

 

 

ಈ ಖನಿಜವು ನಿಮ್ಮ ದೇಹದ ಬಿಳಿ ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಮತ್ತು ಹಾನಿಕಾರಕ ಬ್ಯಾಕ್ಟೀರಿಯಾ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ವಿಟಮಿನ್ ಸಿ

 

 

ರೋಗನಿರೋಧಕ ವ್ಯವಸ್ಥೆ ಸುಧಾರಿಸಲು ಅತ್ಯುತ್ತಮವಾದ ವಿಧಾನವೆಂದರೆ ವಿಟಮಿನ್ ಸಿ ಯ ಆಹಾರ ಪದಾರ್ಥಗಳನ್ನು ಸೇವಿಸುವುದು. ಯಾವುದೇ ಸೋಂಕನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ಕ್ಷಾರಯುಕ್ತ ಆಹಾರ ಸೇವನೆ ಮಾಡಿ

 

 

ಗೊನೊರಿಯಾ ವಿರುದ್ಧ ಹೋರಾಡಲು ನಿಮ್ಮ ದೇಹವನ್ನು ಹೆಚ್ಚು ಕ್ಷಾರೀಯವಾಗಿ ಮಾಡಲು ಪ್ರಯತ್ನ ಮಾಡಿ ಕ್ಷಾರೀಯ ವಾತಾವರಣದಲ್ಲಿ ಬ್ಯಾಕ್ಟೀರಿಯಾ ಬದುಕುವುದಿಲ್ಲ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top