ಕನ್ನಡ

ಕನ್ನಡ ಮತ್ತು ಕರ್ನಾಟಕದ ಹಿರಿಮೆ ವರ್ಣಿಸುವ ಒಂದು ಸುಂದರ ವಿನೂತನ ಬಸ್ ನಿಲ್ದಾಣ..!

ಕನ್ನಡ ಮತ್ತು ಕರ್ನಾಟಕದ ಹಿರಿಮೆ ವರ್ಣಿಸುವ ಒಂದು ಸುಂದರ ವಿನೂತನ ಬಸ್ ನಿಲ್ದಾಣ..!

 

 

ಪರಭಾಷಿಕರ ಹಾವಳಿಯಿಂದ ಕಂಗೆಟ್ಟು ಹೋಗಿರುವ ನಮ್ಮ ಬೆಂಗಳೂರಿನಲ್ಲಿ ಕನ್ನಡಿಗರೆಲ್ಲರೂ ಹೆಮ್ಮೆಯಿಂದ ಹೇಳಿಕೊಳ್ಳುವ ರೀತಿಯಲ್ಲಿ ಬಸ್ ಸ್ಟಾಪ್ ಒಂದು ತಲೆಯೆತ್ತಿದೆ. ಅಷ್ಟಕ್ಕೂ ಈ ಬಸ್ ನಿಲ್ದಾಣದ ವಿಶೇಷತೆಗಳೇನು ಅಂತೀರಾ ಮುಂದೆ ಓದಿ…

 

 

ಬೆಂಗಳೂರಿನ ಸಹಕಾರ್ ನಗರ್ ನಲ್ಲಿರುವ ಈ ಬಸ್ ನಿಲ್ದಾಣದಲ್ಲಿ ಕನ್ನಡ ಮತ್ತು ಕರ್ನಾಟಕದ ಹಿರಿಮೆ ಗರಿಮೆಗಳನ್ನು ವರ್ಣಿಸುವ ಜಾಗವಾಗಿ ಮಾಡಲ್ಪಟ್ಟಿದೆ..ಈ ಬಸ್ ನಿಲ್ದಾಣ ವನ್ನು ಹೊಯ್ಸಳ ಶೈಲಿಯಲ್ಲಿ ನಿರ್ಮಿಸಲಾಗಿದೆ. ಸಹಕಾರ್ ನಗರ್ ನಲ್ಲಿ ಕನ್ನಡಿಗರಿಗಿಂತ ಬೇರೆ ರಾಜ್ಯಗಳಿಂದ ಬಂದವರೇ ಜಾಸ್ತಿ ಇರೋದ್ರಿಂದ ಅವರಿಗೆ ಕನ್ನಡದ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು ಎಂದು ಈ ಬಸ್ ಸ್ಟಾಪ್ ಅನ್ನು ನಿರ್ಮಿಸಲಾಗಿದೆ.. ಎಂ.ಎನ್ ಸುರೇಶ ಎಂಬುವವರು ಈ ಬಸ್ ಸ್ಟಾಪ್ ಅನ್ನು ಕಟ್ಟಿಸಿದ್ದಾರೆ..

 

 

ವಿವಿಧ ಕ್ಷೇತ್ರಗಳಲ್ಲಿ ಕನ್ನಡ ಕೆಲಸಗಳನ್ನು ಮಾಡಿದ ವ್ಯಕ್ತಿಗಳ ಸಂಪೂರ್ಣ ಚಿತ್ರಣವನ್ನು ಇಲ್ಲಿ ವಿವರಿಸಲಾಗಿದೆ. ಅಲ್ಲದೆ ಬೆಳಿಗ್ಗೆ 6 ಘಂಟೆಯಿಂದ ರಾತ್ರಿ 9 ಘಂಟೆಯ ತನಕ ಕನ್ನಡ ಚಿತ್ರಗಳ ಹಾಡುಗಳನ್ನು ಈ ಬಸ್ ನಿಲ್ದಾಣದಲ್ಲಿ ಹಾಕಲಾಗುತ್ತದೆ.ಕನ್ನಡ ದಿನ ಪತ್ರಿಕೆಗಳು,ಕುಡಿಯುವ ನೀರಿನ ವ್ಯವಸ್ಥೆ, ದೊಡ್ಡ ಗಡಿಯಾರ ಮತ್ತು ಕರ್ನಾಟಕವನ್ನು ಪ್ರತಿನಿಧಿಸುವ ಭಾವುಟ ಹಲವಾರು ಸೌಲಭ್ಯಗಳನ್ನೂ ಕೂಡ ಈ ಬಸ್ ನಿಲ್ದಾಣ ಹೊಂದಿದೆ…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top