fbpx
ದೇವರು

ಒರಿಸ್ಸಾದ ಶ್ರೀ ಗoಟೇಶ್ವರಿ ದೇವಿಯ ದೇವಸ್ಥಾನಕ್ಕೆ ಹೋದ್ರೆ ಸಂತಾನ ಸಮಸ್ಯೆ ,ಸಾಲದ ಬಾಧೆ ,ಕಷ್ಟ ಕಾರ್ಯಪಣ್ಯಗಳು ಬೇಗ ಕಳೆಯುತ್ತವೆ ಅಂತೇ !

ಒರಿಸ್ಸಾ ರಾಜ್ಯದಲ್ಲಿರುವ ಶ್ರೀ ಗoಟೇಶ್ವರಿ ದೇವಿಯ ದೇವಸ್ಥಾನ .

 

ನಮ್ಮ ಭಾರತ ದೇಶವನ್ನು ಪುರಾಣದಲ್ಲಿ ಹಿಂದೂಸ್ಥಾನ ಎಂದು ಕರೆಯಲಾಗುತ್ತಿತ್ತು. ಹಿಂದೂಸ್ಥಾನ ಎಂದರೆ ಹಿಂದೂ ಜನತೆ ವಾಸಿಸುವ ಸ್ಥಳಕ್ಕೆ ಮತ್ತು ಆ ಜಾಗಕ್ಕೆ ಹಿಂದೂಸ್ಥಾನ ಎಂದು ಹೆಸರು ಬಂತು.

 

 

ಹಾಗೇ ಪುರಾಣದ ಪ್ರಕಾರ ಚಂದ್ರನ ವಂಶದಿಂದ ಭರತನೆoಬ ರಾಜನು  ಈ ದೇಶವನ್ನು ಆಳುತ್ತಿದ್ದ ಕಾರಣ ಈ ನಮ್ಮ ಹಿಂದೂಸ್ಥಾನ ದೇಶಕ್ಕೆ ಭಾರತ ಎನ್ನುವ ಹೆಸರು ಬಂತು .ಇಂತಹ ಹಿಂದೂಸ್ಥಾನ ಅಂದರೆ ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ನಮ್ಮ ಭಾರತ ದೇಶದಲ್ಲಿ ಅನೇಕ ದೇವಸ್ಥಾನಗಳು ಇವೆ. ಅವು ಅತ್ಯಂತ ಪುರಾಣ ಕಾಲದಲ್ಲಿಯೇ ಪ್ರತಿಷ್ಠಾಪನೆಗೊಂಡಿವೆ.

ಶಾಸ್ತ್ರಗಳು ಹೇಳುವ ಪ್ರಕಾರ ಹಿಂದೂ ದೇವಾನುದೇವತೆಗಳು ಸುಮಾರು ಮೂವತ್ತು ಮೂರು ಕೋಟಿ ಇದ್ದಾರೆಂದು ಹೇಳುತ್ತಾರೆ. ಅಂತೆಯೇ ಆ ಮೂವತ್ತು ಮೂರು ಕೋಟಿ ದೇವತೆಗಳು ಸಹ ಶಕ್ತಿ ಮತ್ತು ಶಿವನ ಅವತಾರಗಳೇ ಆಗಿವೆ.

ಇಂತಹ ಪವಿತ್ರವಾದ ದೇಶದಲ್ಲಿ ಪುರಾತನ ಕಾಲದಲ್ಲಿಯೇ ಸ್ಥಾಪಿತವಾಗಿರುವ   ಗಂಟೇಶ್ವರಿ  ದೇವಸ್ಥಾನವೂ ಸಹ ಒಂದು. ಇದು ನಮ್ಮ ಭಾರತ ದೇಶದ ಒರಿಸ್ಸಾ ರಾಜ್ಯದ,ಸಂಬಾಲ್ಪುರ ಎಂಬ ನಗರದಲ್ಲಿದೆ.

ಮಾತೇ ಗಂಟೇಶ್ವರಿ ದೇವಸ್ಥಾನವು ಸಂಬಾಲ್ಪುರ ನಗರದಿಂದ ಮೂವತ್ತು ಕಿಲೋಮೀಟರ್ ದೂರದಲ್ಲಿದೆ. ಈ ದೇವಾಲಯವು ಅದು ಚಿಪ್ಲಿಮ ಎಂಬ ಸ್ಥಳದಲ್ಲಿ ನೆಲೆಸಿದೆ.ಇಲ್ಲಿಗೆ ತೆರಳುವ ರಸ್ತೆ ಅಂದರೆ ರಾಷ್ಟ್ರೀಯ ಹೆದ್ದಾರಿ ಆರು, ಇಲ್ಲಿ ಒಂದು ಸೇತುವೆಯೂ ನಿರ್ಮಾಣ ಹಂತದಲ್ಲಿದ್ದು ಮಂಡಗೋಳ ಇದು ಮುಖ್ಯವಾದ ಜಾಗವಾಗಿದ್ದು.

 

 

ಈ ಸೇತುವೆಯು ಸಂಬಾಲ್ಪುರ ಮತ್ತು ಚಿಪ್ಲಿಮ ನಗರದ ಮಧ್ಯದಲ್ಲಿದೆ . ಇದು ಪೂರ್ಣಗೊಳ್ಳುವುದಕ್ಕೆ 2018ನೇ ಇಸವಿಯವರೆಗೂ ಸಮಯ ಹಿಡಿಯುವುದು. ಈ ಸೇತುವೆಯು ಮಾತೇ ಗಂಟೇಶ್ವರಿ ದೇವಿಯ ದೇವಾಲಯಕ್ಕೆ ಮತ್ತು ಸಂಬಾಲ್ಪುರಗೆ ಸುಮಾರು  ಅರ್ಧದಷ್ಟು ದೂರವನ್ನು ಕಡಿಮೆ ಮಾಡುವುದು.

ಗoಟೇಶ್ವರಿ ದೇವಿ  ಎನ್ನುವ ಹೆಸರು ಏಕೆ ಬಂತು ?

ಹೆಸರೇ ಸೂಚಿಸುವಂತೆ ಇಲ್ಲಿ   ಗoಟೇಶ್ವರಿ  ಎನ್ನುವ ಹೆಸರು ಈ ದೇವಾಲಯದ ಎಲ್ಲಾ ಕಡೆಯಲ್ಲೂ ಸಹ ಗಂಟೆಗಳೇ ಕಾಣಿಸುತ್ತವೆ ಇಲ್ಲಿನ ಜನಗಳು ಗಂಟೆಗಳನ್ನು ದೇವಿಗೆ ತೆಗೆದು ಕೊಂಡು ಬಂದು  ಅರ್ಪಿಸುತ್ತಾರೆ. ಅವರ ಅವರ ಆಸೆಯೂ ಅಥವಾ ಮನಸ್ಸಿನ ಕೋರಿಕೆಯೂ ಈಡೇರಿದ ನಂತರ ಗಂಟೆಯನ್ನು ತಂದು ಅರ್ಪಿಸಿ ಕಟ್ಟಿ ಹಿಂತಿರುಗುತ್ತಾರೆ .

ಈ ದೇವಸ್ಥಾನಕ್ಕೆ ಒರಿಸ್ಸಾ ರಾಜ್ಯದಲ್ಲಿರುವ ಜನರೆಲ್ಲರೂ ಸಹ ಬಂದು ಭೇಟಿ ನೀಡಿ ದರ್ಶನ ಪಡೆಯುತ್ತಾರೆ. ಇದನ್ನು ಬೆಳಕಿನ ಮನೆ ಎಂದು  ಸಹ ಕರೆಯಲಾಗುತ್ತದೆ. ಯಾಕೆಂದರೆ ಇಲ್ಲಿ ಬೆಳಕೇ ಇಲ್ಲ. ಇದು ಮುಂಚಿನ ನಾವಿಕರಿಗೆ  ಗಂಟೆಗಳು ಭಾರಿ ಮಾರುತಗಳ ವಿರುದ್ಧ ಎಚ್ಚರಿಕೆಯನ್ನು ನೀಡುತ್ತಿದ್ದವು. ಆದ್ದರಿಂದ ಇದಕ್ಕೆ ಬೆಳಕಿನ ಮನೆ ಎಂದು ಹೆಸರಿಟ್ಟಿದ್ದಾರೆ.

 

 

ಈ ದೇವಸ್ಥಾನದ ಬಳಿ ಮಹಾ ನದಿಯೊಂದು ಇದೆ. ಈ ದೇವಸ್ಥಾನವು ಮಹಾ ನದಿಯ ದಡದಲ್ಲಿಯೇ ಸ್ಥಾಪಿತವಾಗಿದೆ.

ಈ ಸ್ಥಳದ ವಿಶೇಷ ಮಹತ್ವವೇನೆಂದರೆ ಗಂಟೆಗಳೇ ಇಲ್ಲಿ ವಿಶೇಷ. ಇಲ್ಲಿನ ಈ ದೇವಾಲಯದ ಸುತ್ತಮುತ್ತ ನೀವು ಎಲ್ಲಿ ನೋಡಿದರೂ ಸಣ್ಣ ಸಣ್ಣ ಗಂಟೆಗಳು ಬಹಳ ಸಂಖ್ಯೆಯಲ್ಲಿ ಸುತ್ತಮುತ್ತಲೂ ಕಟ್ಟಿರುವುದನ್ನು ನಾವು ಕಾಣಬಹುದಾಗಿದೆ.

ಮಾತೇ ಶ್ರೀ ಗಂಟೇಶ್ವರಿ ದೇವಿಯ ದೇವಾಲಯವು ದಕ್ಷಿಣ ಪಶ್ಚಿಮ ದಿಕ್ಕಿನಿಂದ ಅಂದರೆ ಸಂಬಾಲ್ಪುರ ಜಿಲ್ಲೆಯಿಂದ ಮಹಾನದಿಯ ದಡದಲ್ಲಿದೆ. ಅಲ್ಲಿಂದ ಇಲ್ಲಿಗೆ ಸುಮಾರು ಮೂವತ್ತಮೂರು ಕಿಲೋಮೀಟರ್ ದೂರವಿದ್ದು .

ಈ ಮಹಾ ನದಿಯ ದಡದಲ್ಲಿಯೇ ಚಿಪ್ಲಿಮಾ  ವಿದ್ಯುತ್ ತಯಾರಿಕಾ ಘಟಕವನ್ನು ( chiplima hydro electrical power plant CHEP)  ಸಹ ಸ್ಥಾಪಿಸಲಾಗಿದೆ. ಇದು ಕೂಡ ದೇವಸ್ಥಾನದ ಬಳಿಯಲ್ಲಿಯೇ ಸ್ಥಾಪಿತವಾಗಿದೆ.

 

 

ಜೀವನದಲ್ಲಿ ಎಂತಹ ಕಷ್ಟಗಳು ,  ಸಂತಾನ ಸಮಸ್ಯೆ , ಸಾಲದ ಬಾಧೆ , ರೋಗರುಜಿನಗಳಿಂದ ದೇವರು ನಮ್ಮನ್ನು ರಕ್ಷಿಸುತ್ತಾಳೆ ಎಂಬ ನಂಬಿಕೆ ಇದೆ ಆದ್ದರಿಂದ ಕಷ್ಟಪಟ್ಟುಕೊಂಡು ಭಕ್ತಾದಿಗಳು ಬರುತ್ತಾರೆ

ನೀವು ಸಹ ಎಂದಾದರೂ ಒರಿಸ್ಸಾ ರಾಜ್ಯಕ್ಕೆ ಪ್ರವಾಸಕ್ಕೆಂದು ಹೋದರೆ  ಈ ಶ್ರೀ ಗoಟೇಶ್ವರಿ    ದೇವಿಯ ದೇವಸ್ಥಾನವನ್ನು ನೋಡುವುದನ್ನು ಮರೆಯಬೇಡಿ ನೋಡದೆ ಹಿಂತಿರುಗಿ ಬರಬೇಡಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top