fbpx
ಸಮಾಚಾರ

ಪ್ರತಿ ಬಾರಿ ಸಾಮಾನ್ಯ ಸ್ಪರ್ಧಿಗಳ ಮೇಲೆ ಸೆಲೆಬ್ರಿಟಿಗಳ ದಬ್ಬಾಳಿಕೆ ಏಕೆ..? ಬಿಗ್’ಬಾಸ್ ವೀಕ್ಷಕರ ಅಸಮಾಧಾನ…

ಪ್ರತಿ ಬಾರಿ ಸಾಮಾನ್ಯ ಸ್ಪರ್ಧಿಗಳ ಮೇಲೆ ಸೆಲೆಬ್ರಿಟಿಗಳ ದಬ್ಬಾಳಿಕೆ ಏಕೆ..? ಬಿಗ್’ಬಾಸ್ ವೀಕ್ಷಕರ ಅಸಮಾಧಾನ…

 

 

ಕನ್ನಡದ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಷೋ ಬಿಗ್’ಬಾಸ್ 5ನೇ ಸೀಸನ್ ನಲ್ಲಿ ಈ ಭಾರಿ ವಿಶೇಷ ಎಂಬಂತೆ ಸೆಲೆಬ್ರೆಟಿಗಳ ಜೊತೆ ಸಾಮಾನ್ಯವ್ಯಕ್ತಿಗಳನ್ನು ಕಳುಹಿಸಲಾಗಿತ್ತು..17 ಮಂದಿ ಸ್ಪರ್ಧಿಗಳ ಪೈಕಿ 11 ಮಂದಿ ಸೆಲೆಬ್ರೆಟಿಗಳು ಹಾಗೂ 6 ಜನಸಾಮಾನ್ಯರು ಸ್ಪರ್ಧಿಗಳಾಗಿ ಮನೆಯೊಳಕ್ಕೆ ಎಂಟ್ರಿ ಪಡೆದಿದ್ದರು.. ಆದರೆ ಈಗ ಬಿಗ್ ಬಾಸ್ ಮನೆಯಲ್ಲಿರುವ ಸೆಲೆಬ್ರೆಟಿಗಳು ಎಂದೆನಿಸಿಕೊಂಡವರು ಸಾಮಾನ್ಯ ಸ್ಪರ್ಧಿಗಳನ್ನು ತುಚ್ಛವಾಗಿ ಕಾಣುತ್ತಿರುವುದು ಈಗ ಕಾರ್ಯಕ್ರಮದ ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ..

 

 

ಮನೆಯಲ್ಲಿರುವ ಸೆಲೆಬ್ರೆಟಿಗಳಾದ ದಯಾಳ್, ತೇಜಸ್ವಿನಿ, ಸಿಹಿ ಕಹಿ ಚಂದ್ರು, ಜಗನ್, ಅನುಪಮಾ, ಜೆಕೆ ,ಆಶಿತಾ,ಕೃಷಿ ರವರು ಸಾಮಾನ್ಯವ್ಯಕ್ತಿಗಳನ್ನು ಅತಿ ತುಚ್ಛವಾಗಿ ಕಾಣುತ್ತಾರೆ.. ಅವರೊಟ್ಟಿಗೆ ಮಾತಾನಾಡುವಾಗ ಬೇರೆ ಧಾಟಿಯಲ್ಲೇ ಮಾತನಾಡುತ್ತಾರೆ..ಸಾಮಾನ್ಯ ಸ್ಪರ್ಧಿಗಳ ಜೊತೆ ಬೆರೆಯುವುದಿಲ್ಲ.. ದಯಾಳ್ ತಾನು ಬಿಗ್ ಬಾಸ್ ಮನೆಯ ಯಜಮಾನ ಎಂಬಂತೆ ವರ್ತಿಸುತ್ತಿದ್ದಾರೆ.,ಅನುಪಮಾ ಗೌಡ, ತೇಜಸ್ವಿನಿ ಬಿಗ್ ಬಾಸ್ ಮನೆಯನ್ನು ತಮ್ಮ ಸ್ವಂತ ಮನೆಯೆಂದೇ ತಿಳಿದುಕೊಂಡಂತೆ ವರ್ತಿಸುತ್ತಾರೆ..

 

 

ಇನ್ನು ಕಿರುತೆರೆಯಲ್ಲಿ ಒಂದು ಧಾರಾವಾಹಿ ಮಾಡಿರುವ ಜಗನ್ ಸಾಮಾನ್ಯ ವ್ಯಕ್ತಿಗಳ ಮೇಲೆ ಜೋರು ಧ್ವನಿಯಲ್ಲಿ ರೇಗಿದ್ದಾರೆ..ಜೆಕೆ,ಸಿಹಿ ಕಹಿ ಚಂದ್ರು ತೇಜಸ್ವಿನಿ ಸೇರಿದಂತೆ ಅನೇಕರು ಈಗಾಗಲೇ ಸಾಮಾನ್ಯ ವ್ಯಕ್ತಿಗಳ ಜೊತೆ ಜಗಳವಾಡಿದ್ದಾರೆ.,

 

 

ಇಂತಹ ಸೆಲೆಬ್ರೆಟಿಗಳ ನಡುವೆ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಮತ್ತು ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಮಾತ್ರ ಸೆಲೆಬ್ರೆಟಿ ಮತ್ತು ಸಾಮಾನ್ಯ ವ್ಯಕ್ತಿಗಳ ನಡುವೆ ಯಾವುದೇ ಬೇಧ ಭಾವವಿಲ್ಲದೆ ಸಾಮಾನ್ಯ ರೀತಿಯಲ್ಲಿ ವರ್ತಿಸುತ್ತಾರೆ,, ಹೆಚ್ಚಾಗಿ ಹೇಳಬೇಕೆಂದರೆ ಚಂದನ್ ಮತ್ತು ಗುರೂಜಿ ಹೆಚ್ಚಾಗಿ ಸಾಮಾನ್ಯ ವ್ಯಕ್ತಿಗಳ ಜೊತೆಯಲ್ಲೇ ಕಾಲ ಕಳೆಯುತ್ತಾರೆ..

 

 

ಬಿಗ್ ಬಾಸ್ ಮನೆಯ ಸೆಲೆಬ್ರೆಟಿಗಳ ಲಾಜಿಕ್ ಪ್ರಕಾರ ಕಾಮನ್ ಮ್ಯಾನ್ ಗಳ ಬಳಿ ಏಕವಚನದಲ್ಲಿ ಮಾತನಾಡಬಹುದು,,ಏನಾದರೂ ವಾದಗಳಾದಾಗ ಸಾಮಾನ್ಯ ವ್ಯಕ್ತಿ ಮಾತನಾಡಿದರೆ ನೀವ್ ಸುಮ್ನೆ ಇರ್ರಿ ಎಂದು ರೇಗುವ ಸೆಲೆಬ್ರೆಟಿಗಳು ಅದೇ ತಪ್ಪನ್ನು ಯಾರಾದರೂ ಸೆಲೆಬ್ರೆಟಿಗಳು ಮಾಡಿದರೆ ಕೂಲಾಗಿ ಕೇಳುತ್ತಾರೆ.. ಕಾಮನ್ ಮ್ಯಾನ್ ಮಾತಾಡಿದರೆ ಕೆಲವರಿಗೆ ತಲೆ ಬಿಸಿ ಆಗುತ್ತೆ, ಕಾಮನ್ ಮ್ಯಾನ್ ಎಲ್ಲರೊಂದಿಗೆ ಬೆರೆಯಲು ದಿವಾಕರ್ ಪ್ರಯತ್ನ ಪಟ್ಟರೂ ಸೆಲೆಬ್ರೆಟಿಗಳಿಗೆ ಇರಿಸು ಮುರುಸು ಉಂಟಾಗುತ್ತದೆ..ಜನಸಾಮಾನ್ಯರನ್ನು ಕಂಡರೆ ಸೆಲೆಬ್ರಿಟಿಗಳಿಗೆ ಅಸಡ್ಡೆ, ನಿರ್ಲಕ್ಷ್ಯ ಎಂಬ ಭಾವ ಸಾಮಾನ್ಯ ಸ್ಪರ್ಧಿಗಳ ಮನಸಿನಲ್ಲೂ ಮೂಡಿದೆ.ಇದರ ಬಗ್ಗೆ ಸ್ವತಃ ಸಾಮಾನ್ಯ ಸ್ಪರ್ಧಿಗಳೇ ನಮ್ಮನ್ನ ಬೇರೆ ತರ ಕಾಣ್ತಾರೆ ಎಂದು ಕ್ಯಾಮರಾ ಮುಂದೆ ಹೇಳಿಕೊಳ್ಳುತ್ತಿದ್ದಾರೆ.

 

 

ಜನಸಾಮಾನ್ಯರು ಅವರ ಧಾರಾವಾಹಿಗಳನ್ನು ನೋಡಿದರೆ ತಾನೇ ಅವ್ರು ಸೆಲೆಬ್ರೆಟಿಗಳಾಗೋದು,,ಜನರ ದುಡ್ಡು ಬೇಕು ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳೋದಕ್ಕೆ ಆಗಲ್ಲ ಅಂದರೆ ಏನು ಅರ್ಥ…ಅಷ್ಟಕ್ಕೂ ಅವರು ನಾಮಿನೇಟ್ ಆದಾಗ ಅವರಿಗೆ ವೋಟ್ ಮಾಡೋದು ಯಾರು ಎಂಬುದನ್ನು ತಿಳಿದುಕೊಂಡು ಆಟವಾಡಿದ್ರೆ ಒಳಿತು..ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ಕಾಮೆಂಟ್ ಮಾಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top