fbpx
ಸಮಾಚಾರ

ಇನ್‌ಸ್ಟಾಗ್ರಾಮ್‌ನಲ್ಲೂ ಮೋದಿಯದ್ದೇ ಹವಾ: ಇನ್‌ಸ್ಟಾಗ್ರಾಮ್‌ನಲ್ಲಿ ಮೋದಿಯೇ ವಿಶ್ವದ ನಂ.1 ನಾಯಕ.

ಇನ್‌ಸ್ಟಾಗ್ರಾಮ್‌ನಲ್ಲೂ ಮೋದಿಯದ್ದೇ ಹವಾ: ಇನ್‌ಸ್ಟಾಗ್ರಾಮ್‌ನಲ್ಲಿ ಮೋದಿಯೇ ವಿಶ್ವದ ನಂ.1 ನಾಯಕ.

 

 

ಸೋಷಿಯಲ್ ಮೀಡಿಯಾಗಳಲ್ಲಿ ಬಹಳ ಸಕ್ರಿಯವಾಗಿರುವ ಪ್ರಧಾನಿ ನರೇಂದ್ರ ಮೋದಿ, ಮತ್ತೊಂದು ಹೊಸ ಕೀರ್ತಿಗೆ ಪಾತ್ರರಾಗಿದ್ದಾರೆ..ಇನ್ಸ್ಟಾಗ್ರಾಮ್ ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದುವ ಮೂಲಕ ಹೆಚ್ಚು ಮಂದಿ ಹಿಂಬಾಲಕರನ್ನು ಹೊಂದಿರುವ ವಿಶ್ವದ ನಂ.1 ನಾಯಕ ಎನ್ನಿಸಿಕೊಂಡಿದ್ದಾರೆ… ಮುಂದೆ ಓದಿ

 

 

ನವೆಂಬರ್ 12, 2014ರಲ್ಲಿ ಇನ್‌ಸ್ಟಾಗ್ರಾಮ್‌‌ನಲ್ಲಿ ಖಾತೆ ತೆರದಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಫಾಲೋಯರ್ಸ್ ಗಳ ಸಂಖ್ಯೆ 1 ಕೋಟಿ ಮೀರಿದೆ…ಮೋದಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ತಮ್ಮ ವಿದೇಶಿ ಪ್ರವಾಸ, ಸಭೆ, ರಾಜಕೀಯ ಮುಖಂಡರ ಭೇಟಿಗಳನ್ನೊಳಗೊಂಡಂತೆ 150ಕ್ಕೂ ಹೆಚ್ಚು ಫೋಟೋ ಹಾಗೂ ವಿಡಿಯೋ ತುಣುಕುಗಳನ್ನು ಪೋಸ್ಟ್ ಮಾಡಿದ್ದಾರೆ…

 

 

ಮೋದಿ ಇನ್‌ಸ್ಟಾಗ್ರಾಮ್‌ ಯಾರನ್ನೂ ಫಾಲೋ ಮಾಡುತ್ತಿಲ್ಲ.. ನರೇಂದ್ರ ಮೋದಿಯನ್ನು ಹೊರತುಪಡಿಸಿದರೆ ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಫಾಲೋವರ್ಸ್‌ ಹೊಂದಿರುವ ಜನ ನಾಯಕರ ಪೈಕಿ ಎರಡನೇ ಸ್ಥಾನದಲ್ಲಿರುವುದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್.. ಟ್ರಂಪ್‌ ಅವರ ಇನ್‌ಸ್ಟಾಗ್ರಾಮ್‌ ಖಾತೆಯನ್ನು 78 ಲಕ್ಷಕ್ಕೂ ಹೆಚ್ಚು ಮಂದಿ ಫಾಲೋ ಮಾಡುತ್ತಿದ್ದಾರೆ..

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top