fbpx
ರಾಜಕೀಯ

ರಾಷ್ಟ್ರಪತಿ ಕೋವಿಂದ್’ರನ್ನೇ ಪ್ರಶ್ನಿಸಿದ ಸಂಸದ ಪ್ರತಾಪ್ ಸಿಂಹ..!

ರಾಷ್ಟ್ರಪತಿ ಕೋವಿಂದ್’ರನ್ನೇ ಪ್ರಶ್ನಿಸಿದ ಸಂಸದ ಪ್ರತಾಪ್ ಸಿಂಹ..!

 

 

ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪ್ರಶ್ನೆ ಮಾಡಿದ್ದಾರೆ..ರಾಜ್ಯ ವಿಧಾನಸಭೆ ವಜ್ರಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಮಾತನಾಡುವಾಗ ಟಿಪ್ಪುವನ್ನು ಹೊಗಳಿದ ವಿಚಾರದ ಕುರಿತು ದೇಶದ ರಾಷ್ಟ್ರಪತಿಗಳಿಗೆ ಪ್ರಶ್ನೆ ಎತ್ತಿರುವ ಪ್ರತಾಪ್ ಸಿಂಹ ತಮ್ಮ ಟ್ವಿಟರ್ ಖಾತೆಯಲ್ಲಿ ಎರಡು ಟ್ವೀಟ್ ಮಾಡಿದ್ದಾರೆ..

 

 

“ಟಿಪ್ಪು ಸುಲ್ತಾನ್ ಮೈಸೂರು ರಾಕೆಟ್ ಬಳಸಿದ ಮೊದಲಿಗ ಎಂದು ನೀವು ಹೇಳಿದ್ದೀರಿ. ಅಂತಹ ತಂತ್ರಜ್ಞಾನ ಅವನ ಬಳಿ ಇದ್ದಿದ್ದೇ ಆದರೆ ಮೂರು ಮತ್ತು ನಾಲ್ಕನೆ ಆಂಗ್ಲೊ–ಮೈಸೂರು ಯುದ್ಧದಲ್ಲಿ ಆತ ಏಕೆ ಸೋತ. ಬ್ರಿಟಿಷರ ವಿರುದ್ಧ ಅಂತಹ ಅಸ್ತ್ರವನ್ನು ಏಕೆ ಆತ ಬಳಸಲಿಲ್ಲ’ ಎಂದು ಟ್ವೀಟ್ ಮಾಡಿರುವ ಪ್ರತಾಪಸಿಂಹ ಅದನ್ನು ರಾಷ್ಟ್ರಪತಿಯವರನ್ನು ಪ್ರಶ್ನಿಸಿದ್ದಾರೆ..

 

 

ಇಷ್ಟಕ್ಕೆ ಸುಮ್ಮನಿರದ ಪ್ರತಾಪ್ ಸಿಂಹ ಟಿಪ್ಪು ಯುದ್ಧ ಭೂಮಿಯಲ್ಲಿ ಹೋರಾಟ ಮಾಡುತ್ತಾ ಮರಣ ಹೊಂದಿಲ್ಲ. ಕೋಟೆಯಲ್ಲಿ ಮರಣ ಹೊಂದಿದ್ದಾನೆ. ಕೋಟೆಯಲ್ಲಿ ಮರಣ ಹೊಂದಿದರೆ ಅದು ಹೇಗೆ ವೀರ ಮರಣವಾಗುತ್ತದೆ ಎಂದು ದೇಶದ ಪ್ರಥಮ ಪ್ರಜೆಯಾದ ರಾಷ್ಟ್ರಪತಿಯವರನ್ನೇ ಪ್ರಶ್ನಿಸಿದ್ದಾರೆ..ಇನ್ನು ಈ ಟ್ವೀಟ್ ಗಳಿಗೆ ಅವರ ಫಾಲೋಯರ್ಸ್ ಗಾಲೆ ಭಾರಿ ವಿರೋಧವನ್ನು ವ್ಯಕ್ತ ಪಡಿಸಿದ್ದಾರೆ..

 

 

ದೇಶದ ಪ್ರಧಾನಮಂತ್ರಿ ಮೋದಿಯವರನ್ನು ಪ್ರಶ್ನಿಸಿದ್ದಾರೆ ಎಂದು ಪ್ರಾಕಾಶ್ ರೈಯವರನ್ನು ಟೀಕೆ ಮಾಡಿದ್ದ ಪ್ರತಾಪ್ ಸಿಂಹ ಈಗ ಸ್ವತಃ ತಾನೇ ದೇಶದ ರಾಷ್ಟ್ರಪತಿಗಳ ವಿರುದ್ಧ ಪ್ರಶ್ನಿಸಿದ್ದಾರೆ.. ಆಗ ಪ್ರಕಾಶ್ ರೈಯನ್ನು ನಿಂದಿಸಿ ಟೀಕೆ ಮಾಡಿದ್ದ ಜನರು ಈಗ ಯಾಕೆ ಸುಮ್ಮನಿದ್ದಾರೆ..ಪ್ರಕಾಶ್ ರೈ ಮಾಡಿದ್ದು ತಪ್ಪು ಎಂತಾದರೆ ಪ್ರತಾಪ್ ಸಿಂಹ ಮಾಡಿದ್ದೂ ತಪ್ಪಲ್ಲವೇ..ಅಥವಾ ಪ್ರತಾಪ್ ಸಿಂಹ ರಾಷ್ಟ್ರಪತಿಯವರಿಗಿಂತ ದೊಡ್ಡ ಹುದ್ದೆಯಲ್ಲೇನಾದರೂ ಇದ್ದಾರೆಯೇ.. ಯಾರೇ ಆದರೂ ದೇಶದ ಪ್ರಥಮ ಪ್ರಥಮ ಪ್ರಜೆಯಾದ ರಾಷ್ಟ್ರಪತಿರವರಿಗೆ ಗೌರವ ಕೊಡುವುದು ಕಲಿಯಬೇಕು..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top