ತನ್ನ ಭಾವಿ ಪತ್ನಿ ‘ರಶ್ಮಿಕಾ’ ಚಿತ್ರರಂಗಕ್ಕೆ ಗುಡ್ ಬೈ ಹೇಳುವ ಸುದ್ದಿಗೆ ರಕ್ಷಿತ್ ಶೆಟ್ಟಿ ಹೇಳಿದ್ದೇನು?
ಸಿಂಪಲ್ ಹುಡುಗ ರಕ್ಷಿತ್ ಶೆಟ್ಟಿಯವರು ತನ್ನ ಭಾವಿ ಪತ್ನಿ ರಶ್ಮಿಕಾ ಬಗ್ಗೆ ಇಲ್ಲ ಸಲ್ಲದ ಸುಳ್ಳು ಸುದ್ದಿಗಳನ್ನು ಮಾಡುವರ ವಿರುದ್ಧ ಸಿಟ್ಟಾಗಿ ರಶ್ಮಿಕಾ ಬಗ್ಗೆ ‘ಇಂತಹ ಸುಳ್ಳು ಸುದ್ದಿ ಸೃಷ್ಟಿಸುವುದನ್ನು ನಿಲ್ಲಿಸಿ’ ಎಂದು ರಕ್ಷಿತ್ ಹೇಳಿದ್ದಾರೆ .. ಇಷ್ಟಕ್ಕೂ ನಟಿ ರಶ್ಮಿಕಾ ಮಂದಣ್ಣ ಬಗ್ಗೆ ಹಬ್ಬಿದ್ದ ಸುಳ್ಳು ಸುದ್ದಿ ಏನು ಅಂತೀರಾ? ಮುಂದೆ ಓದಿ..
ಕೆಲವು ದಿನಗಳಿಂದ ನಟಿ ರಶ್ಮಿಕಾ ಚಿತ್ರರಂಗವನ್ನು ತೊರೆಯುತ್ತಾರೆ, ಚಮಕ್ ಚಿತ್ರವೇ ಅವರ ಕಡೆಯ ಕನ್ನಡ ಚಿತ್ರ ಆ ನಂತ್ರ ಅವರು ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಸುಳ್ಳು ಸುದ್ದಿ ಹಬಿಕೊಂಡಿತ್ತು…ಆದರೆ ಈ ಸುಳ್ಳು ಸುದ್ದಿಗೆ ನಟ ರಕ್ಷಿತ್ ಶೆಟ್ಟಿ ತೆರೆ ಎಳೆದಿದ್ದು ತನ್ನ ಭಾವಿ ಪತ್ನಿ ರಶ್ಮಿಕಾ ಬಗ್ಗೆ ಬಂದಿರುವ ಸುದ್ದಿ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ…
“ರಶ್ಮಿಕಾ ಚಿತ್ರಗಳಲ್ಲಿ ತಮ್ಮ ಅಭಿನಯವನ್ನು ಮುಂದುವರೆಸುತ್ತಾರೆ. ಬೇರೆ ಭಾಷೆಯ ಚಿತ್ರಗಳಿಗಿಂತ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸುವುದು ರಶ್ಮಿಕಾ ಅವರ ಮೊದಲ ಆದ್ಯತೆ. ಈ ರೀತಿಯ ಸುಳ್ಳು ಸುದ್ದಿಯನ್ನು ಹಬ್ಬಿಸಬೇಡಿ” ಎಂದು ರಕ್ಷಿತ್ ಟ್ವೀಟ್ ಮಾಡಿದ್ದಾರೆ.. ರಕ್ಷಿತ್ ಶೆಟ್ಟಿ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ರಶ್ಮಿಕಾ ‘ಹೌದು’ ಎಂದು ರಕ್ಷಿತ್ ಹೇಳಿಕೆಗೆ ತನ್ನ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
This isn’t true. @iamRashmika will continue to work and her first preference has always been Kannada. @kprabhadaily stop creating news ☺️ https://t.co/LcNpf8SLK5
— Rakshit Shetty (@rakshitshetty) October 26, 2017
— Rashmika Mandanna (@iamRashmika) October 26, 2017
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
