fbpx
ಭವಿಷ್ಯ

ಅಕ್ಟೋಬರ್ 26ನೇ ತಾರೀಖು ಶನಿಗ್ರಹವು ಎರಡನೇ ಬಾರಿ ವೃಶ್ಚಿಕ ರಾಶಿಯಿಂದ ಧನಸ್ಸುರಾಶಿಗೆ ಪ್ರವೇಶ ಮಾಡಲಿದ್ದಾನೆ ಇದ್ರಿಂದ ಈ 6 ರಾಶಿಗಳಿಗೆ ಬರಿ ಲಾಭಗಳೇ !

ಅಕ್ಟೋಬರ್ ಇಪ್ಪತ್ತಾರನೇ ತಾರೀಖು 2017 ಶನಿಗ್ರಹವು ಎರಡನೇ ಬಾರಿ ವೃಶ್ಚಿಕ ರಾಶಿಯಿಂದ ಧನಸ್ಸು ರಾಶಿಗೆ ಪ್ರವೇಶ ಮಾಡಲಿದ್ದಾನೆ.ಆದ್ದರಿಂದ ಈ ಆರು ರಾಶಿಯವರಿಗೆ ಅನೇಕ ರೀತಿಯಲ್ಲಿ  ಒಳ್ಳೆಯದಾಗುವುದು.

ಈ ಶನಿ ಗ್ರಹವು ಸುಮಾರು ಎರಡು ವರ್ಷಗಳ ಕಾಲ ಅಂದರೆ ಇಪ್ಪತ್ತಾರು ಜನವರಿ 2020 ನೇ ಇಸವಿಯವರೆಗೂ ಇಲ್ಲೇ ಇರುತ್ತಾನೆ. ಇದರಿಂದ ಮನುಷ್ಯರಿಗೆ ಅವರ ಕರ್ಮಗಳ ಅನುಸಾರವಾಗಿ ಶನೈಶ್ಚರ ದೇವನು ಫಲಗಳನ್ನು ಕೊಡುತ್ತಾನೆ .ಕಷ್ಟಪಟ್ಟು ಪರಿಶ್ರಮದಿಂದ ದುಡಿಯುವವರಿಗೆ ಲಾಭವಾಗುತ್ತದೆ.

 

 

ಶನಿಯು ಈ ರೀತಿ ಎರಡನೇ ಬಾರಿ ಧನಸ್ಸು ರಾಶಿಗೆ ಪ್ರವೇಶ ಮಾಡುತ್ತಿರುವುದರಿಂದ ಈ 6 ರಾಶಿಗಳಿಗೆ ಅನೇಕ ರೀತಿಯಲ್ಲಿ ಲಾಭವಾಗುವುದು . ಈ ಆರು ರಾಶಿಗಳು ಯಾವುವು ಎಂದರೆ ಅವು ಮೇಷ ರಾಶಿ, ಸಿಂಹ ರಾಶಿ, ಕನ್ಯಾ ರಾಶಿ, ತುಲಾ ರಾಶಿ, ವೃಶ್ಚಿಕ ರಾಶಿ ಮತ್ತು ಕುಂಭ ರಾಶಿ .ಈ ಆರು ರಾಶಿಗಳಿಗೆ ಯಾವ ಯಾವ ರೀತಿಯಲ್ಲಿ ಲಾಭವಾಗುವುದು ಎಂದು ತಿಳಿದುಕೊಳ್ಳೋಣ ಬನ್ನಿ …

 

ಮೇಷ ರಾಶಿ.

 

ಈಗ ಬರುವ ಸಮಯವು ಮೇಷ ರಾಶಿಯವರಿಗೆ ಏನೇ ಆದರೂ ಅವರಿಗೆ ಒಳಿತೇ ಆಗುವುದು ಮತ್ತು ಲಾಭವಾಗುವುದು. ಅವರ ಅನುಭವ ಅವರಿಗೆ ಅತಿ ಹೆಚ್ಚಿನ ಉಪಯೋಗಕ್ಕೆ ಈ ಸಮಯದಲ್ಲಿ ಬರುವುದು. ಯಾವುದೇ ನಿರ್ಣಯಗಳನ್ನು ತೆಗೆದುಕೊಂಡರೂ ಅಥವಾ ತೆಗೆದುಕೊಳ್ಳುವ ಮುನ್ನ ಚೆನ್ನಾಗಿ ಯೋಚಿಸಿ ನಂತರ ನಿರ್ಧಾರವನ್ನು ಕೈಗೊಳ್ಳಿ. ಯಾಕೆಂದರೆ ನಿಮಗೆ ಧನ ಲಾಭವಾಗುವ ಸಂಭವ ಹೆಚ್ಚಾಗಿದೆ. ಯಾವುದಾದರೂ ಕೆಲಸಗಳು ಸಂಪೂರ್ಣವಾಗದೆ ನಿಂತು ಹೋಗಿದ್ದಲ್ಲಿ ಅವು ಸಂಪೂರ್ಣವಾಗಿ ನೆರವೇರುತ್ತವೆ.

ಪರಿವಾರದಲ್ಲಿ ತಂದೆ ,ತಾಯಿ ಮತ್ತು ಅಣ್ಣ, ತಮ್ಮ, ಅಕ್ಕ, ತಂಗಿಯರ ಸಹಕಾರ ಕೂಡ ನಿಮಗೆ ದೊರೆಯುವುದು. ನಿಮ್ಮ ಮನಸ್ಸಿನಲ್ಲಿರುವ ಎಲ್ಲ ಆಸೆಗಳು ಸಹ ಈಡೇರುತ್ತವೆ. ಇದರ ಜೊತೆಗೆ ನಿಮ್ಮ ಮಾತಿನಲ್ಲಿ ಹಿಡಿತವನ್ನು  ಇಟ್ಟುಕೊಳ್ಳುವುದು ಅತ್ಯವಶ್ಯಕವಾಗಿದೆ . ಕೋಪದಲ್ಲಿ ಅಥವಾ ತಪ್ಪಾಗಿ ಬೇರೆಯವರನ್ನು ಅರ್ಥ ಮಾಡಿಕೊಂಡು ಅವರಿಗೆ ನಿಂದಿಸಬೇಡಿ ಕೆಟ್ಟ ಮಾತುಗಳನ್ನು ಬಳಸಿ ಬೈಯಬೇಡಿ ಇಲ್ಲವಾದರೆ ಮುಂದೆ ನಿಮಗೆ ಬಹಳ ಕಷ್ಟವಾಗುವುದು .

 

ಸಿಂಹ ರಾಶಿ.

 

 

ಸಿಂಹ ರಾಶಿಯವರಿಗೂ ಕೂಡ ಈ ಸಮಯ ಬಹಳ ಚೆನ್ನಾಗಿದೆ. ಆದರೆ ನಿಮ್ಮ ಕೋಪವನ್ನು ಕಡಿಮೆ ಮಾಡಿಕೊಳ್ಳಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಸ್ವಲ್ಪ ಶಾಂತ ರೀತಿಯಿಂದ ವರ್ತಿಸುವುದು ಒಳ್ಳೆಯದು . ಯಾರೇ ಏನೇ ಹೇಳಿದರೂ ಸಹ ಅವರ ಮಾತನ್ನು ಅವಶ್ಯಕವಾಗಿ ಗಮನವಿಟ್ಟು ಕೇಳಿ ಬೇರೆಯವರ ಮಾತಿಗೆ  ಬೆಲೆ ಕೊಡಿ. ನೀವು ನಿಮ್ಮ ನಿರ್ಣಯ ತೆಗೆದುಕೊಳ್ಳುವ ರೀತಿಯಲ್ಲೇ ಮುಂದುವರಿದರೆ ಬೇರೆಯವರ ಮಾತನ್ನು ಕೇಳದೆ ನಿಮಗೆ ಮುಂದೆ ನಷ್ಟವಾಗುವುದು ಖಂಡಿತ. ಸಣ್ಣಪುಟ್ಟ ಮಾತುಗಳಿಗೆ ಕೋಪ ಮಾಡಿಕೊಳ್ಳಬೇಡಿ. ಬೇರೆಯವರ ನಕಾರಾತ್ಮಕ ಮತ್ತು ದುಷ್ಟ ಶಕ್ತಿಗಳಿಂದ ನಿಮಗೆ ತೊಂದರೆ ಆಗಬಹುದು.

ಇದರಿಂದ ನೀವು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ. ನಿಮಗೆ ಈಗ ಬರುವ ಸಮಯ ಸಂಪೂರ್ಣವಾಗಿ ಲಾಭದಾಯಕವಾಗಿದ್ದು. ಸ್ನೇಹಿತರ ಜೊತೆಗೆ ಒಳ್ಳೆಯ ಸಮಯವನ್ನು ಕೂಡ ಕಳೆಯುತ್ತೀರಿ .ಹಣಕ್ಕೆ ಸಂಬಂಧಪಟ್ಟ ಅಡೆತಡೆಗಳು ಕೆಲಸಗಳು ಎಲ್ಲಾ ಸಂಪೂರ್ಣವಾಗಿ ನೆರವೇರುತ್ತವೆ. ಮನರಂಜನೆಯ ಕಾರ್ಯಕ್ರಮಗಳಲ್ಲಿಯೂ  ಸಹ ನಿಮ್ಮ  ಮನಸ್ಸು ಭಾಗಿಯಾಗುವುದು. ಸುಸ್ತು, ಆಲಸ್ಯ ಎಲ್ಲವೂ ಶಮನವಾಗಿ ಸಂಪೂರ್ಣವಾಗಿ ಗುಣಮುಖರಾಗುವಿರಿ.

ಎಲ್ಲಾ ಸಮಯದಲ್ಲೂ ಉತ್ಸಾಹದಿಂದ ಇರುತ್ತೀರಿ. ನಿಮ್ಮ ಆತ್ಮವಿಶ್ವಾಸವೂ ಉದಯವಾಗುತ್ತಿರುವ ಸೂರ್ಯನ ರೀತಿಯಲ್ಲಿ  ಹೆಚ್ಚುತ್ತಾ ಹೋಗುವುದು. ಹಳೆಯ ಸ್ನೇಹಿತರನ್ನು  ಭೇಟಿಯಾಗುತ್ತಿರ. ತಕ್ಷಣವೇ ಅಕಸ್ಮಾತ್ತಾಗಿ ಒಳ್ಳೆಯ ಕೆಲಸ ನಿಮಗೆ ಸಿಗುವುದು. ಹೆಚ್ಚಿನದಾಗಿ ಇದರಿಂದ ಲಾಭವಾಗಲಿದ್ದು ಇದರಿಂದ ಕೆಲವರು ನಿಮ್ಮತ್ತ ಆಕರ್ಷಕರಾಗಿ ನಿಮ್ಮ ಕಡೆ ಬರುವವರು. ಅವರ ಜೊತೆಗೆ ಹೊಸ ಸಂಬಂಧ ಬಾಂಧವ್ಯ ಕೂಡ ಬೆಳೆಯುವುದು.

 

ಕನ್ಯಾ ರಾಶಿ.

 

ಕನ್ಯಾ ರಾಶಿಯವರಿಗೆ ಬಹಳ ದಿನಗಳಿಂದ ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಕಾಯುತ್ತಿದ್ದೀರಿ. ಆದರೆ ಇಷ್ಟು ದಿನ ಅದು ಸಾಧ್ಯವಾಗಿರಲಿಲ್ಲ. ಆದರೆ ಈಗ ಅಂತಹ ನಿರ್ಧಾರವನ್ನು ತೆಗೆದುಕೊಳ್ಳುವ ಸಮಯ ಬಂದಿದೆ . ನಿಮಗೋಸ್ಕರವೇ ನಿಮಗೊಂದು ದೊಡ್ಡ ಅವಕಾಶ ಕಾಯುತ್ತಾ ಕುಳಿತಿದೆ. ನೀವು ಸ್ವಲ್ಪ ಆತ್ಮವಿಶ್ವಾಸದಿಂದ ಮುಂದುವರಿದರೆ ನಿಮಗೆ ಹೆಚ್ಚಿನ ಲಾಭವಾಗುವುದು .ಒಂದು ಬಾರಿ ನೀವು ಆತ್ಮವಿಶ್ವಾಸದಿಂದ ಕೆಲಸ ಮಾಡಿ ಮುನ್ನುಗ್ಗಿ ನೋಡಿ ನಂತರ ಇದರ ಸಂಭವ ಏನೆಂದು ತಿಳಿಯಿರಿ.

ನಿಂತುಹೋಗಿದ್ದ ಎಲ್ಲ ಕೆಲಸಗಳು ಪೂರ್ಣವಾಗುತ್ತವೆ. ಇದಕ್ಕಿಂತ ಒಳ್ಳೆಯ ಸಮಯ ನಿಮಗೆ ಮತ್ತೆ ಎಂದು  ಸಹ ಸಿಗುವುದಿಲ್ಲ ಆದ್ದರಿಂದ ಮನಸ್ಸನ್ನು ಗಟ್ಟಿ ಮಾಡಿ ಮುನ್ನುಗ್ಗಿ .ಮನಸ್ಸಿನ ಬೇಜಾರು ಸಹ ಶಮನವಾಗುವುದು. ದುಃಖವೂ ಶಮನವಾಗುವುದು .ಆದರೆ ನಿಮ್ಮಲ್ಲಿ ನೀವು ಆತ್ಮವಿಶ್ವಾಸ ಇಟ್ಟುಕೊಳ್ಳಬೇಕು ಅಷ್ಟೇ. ಹಿಂದಿನ ಸಮಯದಲ್ಲಿ ಪಟ್ಟಿದ ಕಷ್ಟಕ್ಕೂ ಈಗ ಲಾಭ ಸಿಗುವುದು. ನೀವು ಸದಾ ಕಾಲ ಸಂವೇದನಾಶೀಲರಾಗಿರಿ.

 

ತುಲಾ ರಾಶಿ.

 

ತುಲಾ ರಾಶಿಯವರು ಪರಿವಾರದಲ್ಲಿ ಮತ್ತು ಹಣದ ವಿಷಯಗಳಲ್ಲಿ ಹೆಚ್ಚಾಗಿ ಸಮಯವನ್ನು ಕಳೆಯುತ್ತಾರೆ.ಇನ್ನು ಮುಂದೆ ನೀವು ಸದಾಕಾಲ ಖುಷಿಯಾಗಿರುವಿರಿ. ನಿಮ್ಮ ಎಲ್ಲ ಕೆಲಸ ಕಾರ್ಯಗಳು ಸಂಪೂರ್ಣವಾಗಿ ಪೂರ್ಣಗೊಳ್ಳುತ್ತವೆ .ನೀವು ಯಾವ ಕೆಲಸಕ್ಕೆ ಕೈ ಹಾಕಿದರೂ ನಿಮಗೆ ಯಶಸ್ಸು ದೊರೆಯುವುದು. ಹಳೆಯ ಸಮಸ್ಯೆಗಳು ಸಹ ಬಗೆಹರಿಯುತ್ತವೆ. ಪ್ರಬಲ ಯೋಗವಿದ್ದು ನೀವು ಕೆಲಸವನ್ನು ಬದಲಾಯಿಸಿ ಕೊಳ್ಳಬೇಕೆಂದರೆ ಅಥವಾ ಹೊಸ ಕೆಲಸವನ್ನು ಹುಡುಕುವ ಯೋಚನೆಯಲ್ಲಿದ್ದರೆ ಅದಕ್ಕೆಲ್ಲ ಒಳ್ಳೆಯ ಸಮಯ ಇದಾಗಿದೆ.

ನಿಮಗೆ ಒಳ್ಳೆಯ ಜ್ಞಾನವೂ ಸಹ ಸಿಗುವುದು. ದಿನಪೂರ್ತಿ ಈ ಬರುವ ಮುಂದಿನ ದಿನಗಳಲ್ಲಿ ಕೆಲಸದಲ್ಲೇ ಮಗ್ನರಾಗಿರುತ್ತಾರೆ .ಅದರ ಉಪಯೋಗವಾಗುವುದು ಕೆಲವು ವಿಷಯಗಳಲ್ಲಿ ಹೆಚ್ಚಿನ ಗಮನವನ್ನು ನೀಡಬೇಕು ಮತ್ತು ನಿಮ್ಮ ಕುಟುಂಬದ ಕಡೆಗೆ ಗಮನ ಕೊಡುವುದನ್ನು ಮರೆಯಬೇಡಿ. ಕೆಲವು ಮಹತ್ವಪೂರ್ಣ ಮತ್ತು ವಿಶೇಷವಾದ ಕೆಲಸಗಳಿಗೆ ಹೆಚ್ಚಿನ ಗಮನಹರಿಸಿ .

 

ವೃಶ್ಚಿಕ ರಾಶಿ .

ನೀವು ಈ ಹಿಂದೆ ಕೆಲವು ದಿನಗಳಿಂದ ತುಂಬಾ ಕಷ್ಟದ ಸಮಯವನ್ನು ಕಳೆದಿದ್ದೀರಿ. ಅಂತಹ ನಿಮ್ಮ ಕಷ್ಟವಲ್ಲವೇ ಬಗೆಹರಿಯುವ ಸಮಯವೂ ಈಗ ಬಂದಿದೆ . ನಾಲ್ಕೂ ಕಡೆಗಳಿಂದಲೂ ಸಹ ನಿಮ್ಮ ಅದೃಷ್ಟದ ಬಾಗಿಲು ತೆರೆಯುವುದು. ಹಾಗೆ ಎಲ್ಲ ರೀತಿಯಲ್ಲೂ ನಿಮ್ಮ ಯೋಜನೆಗಳನ್ನು ರೂಪಿಸಿಕೊಂಡು ತಯಾರಾಗಿರಿ ಕಷ್ಟವನ್ನು ಅವಶ್ಯಕವಾಗಿ ನೀವು ಪಡಯಲೇಬೇಕು. ಆದರೆ ಯಶಸ್ಸು ನೀವು ಪಟ್ಟ ಪರಿಶ್ರಮ ಮತ್ತು ಕಷ್ಟಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ಫಲ ದೊರೆಯುವುದು. ಯಾವುದೇ ಕೆಲಸವನ್ನು ಯೋಚನೆ ಮಾಡಿದ ನಂತರವೇ ನಿರ್ಧಾರ ಕೈಗೊಳ್ಳಿ.

ಯೋಜನೆ ಮಾಡದೆ ಮುಂದೆ ಹೋಗಬೇಡಿ. ನೀವು ಸ್ವಲ್ಪ ಕಷ್ಟಪಟ್ಟು ಯೋಚಿಸಿ ನಿರ್ಣಯಗಳನ್ನು ಒಳ್ಳೆಯ ರೀತಿಯಲ್ಲಿ ಕೈಗೊಂಡರೆ ಅವಶ್ಯಕವಾಗಿ ಉತ್ತಮ ಲಾಭವಾಗುವುದು . ಹಾಗೆ ಕೆಟ್ಟ ನಿರ್ಧಾರಗಳನ್ನು ಕೈಗೊಂಡರೆ ನಷ್ಟವೂ ಸಹ ಸಂಭವಿಸಬಹುದು. ನಿಮ್ಮ ಜೀವನದ ಸಂಗಾತಿಯಿಂದ ಅವಶ್ಯವಾಗಿ ಸಲಹೆಯನ್ನು ಪಡೆದುಕೊಳ್ಳಿ. ತಕ್ಷಣ ಯಾತ್ರೆಯನ್ನು ಮಾಡುವ ಯೋಗವೂ ಸಹ ಇದೆ . ಹೊಸ ವ್ಯವಹಾರವನ್ನು ಸಹ ಶುರು ಮಾಡಬಹುದು. ಅದರಿಂದಲೂ ಸಹ ಲಾಭವಾಗುವುದು .

 

ಕುಂಭ ರಾಶಿ.

 

 

ಕುಂಭ ರಾಶಿಯವರಿಗೆ ಈಗ ಬರುವ ಮುಂದಿನ ದಿನಗಳು ಬಹಳ ಚೆನ್ನಾಗಿದೆ. ನಿಮಗೆ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದರ ಜೊತೆಗೆ ಧನ ಪ್ರಾಪ್ತಿಯು ಸಹ ಲಭಿಸುವುದು. ಆದರೆ ಕೆಲವು ಅನುಮಾನಗಳಿದ್ದರೆ ಅವುಗಳನ್ನು ಸಹ ಬಗೆಹರಿಸಿಕೊಳ್ಳುವುದಕ್ಕೆ ಇದು ಉತ್ತಮ ಸಮಯವಾಗಿದೆ. ನೀವು ಯಾವುದೇ ಕೆಲಸದಲ್ಲಾದರೂ ಸ್ವಲ್ಪ ಕಷ್ಟಪಟ್ಟರೆ ಸಾಕು ನಿಮಗೆ ಅದೃಷ್ಟವೂ ಬಲ ಕೂಡಿ ಬಂದು ಲಾಭವಾಗುವುದು. ನಿಮ್ಮ ಆದಾಯ ಕೂಡ ಹೆಚ್ಚು ಅಧಿಕವಾಗಿ ಹೆಚ್ಚಾಗುವುದು. ನೀವು ವ್ಯಾಪಾರ ಮಾಡುವವರಾಗಿದ್ದರೆ ನಿಮಗೆ ಮುಖ್ಯವಾಗಿ ಲಾಭವಾಗುವುದು ಖಂಡಿತ . ನಿಮ್ಮ ಪ್ರತಿಭೆ ಮತ್ತು ಯೋಗ್ಯತೆ ಎರಡಕ್ಕೂ ಸಹ ತಕ್ಕ ಪ್ರತಿಫಲ ಸಿಗುವುದು. ನೀವು ಹೊಸ ಮನೆ, ವಾಹನ ,ಖರೀದಿ ಮಾಡಬೇಕೆಂದಿದ್ದರೆ ಅದಕ್ಕೆಲ್ಲ ಈಗ ಒಳ್ಳೆಯ ಕಾಲ ಕೂಡಿ ಬಂದಿದೆ . ನಿಮಗೆ ಸಂಪೂರ್ಣವಾಗಿ ನಿಮ್ಮ ಅದೃಷ್ಟ ಈ ಎರಡು ವರ್ಷ ಜೊತೆಗಿರುವುದು.

ಆದ್ದರಿಂದ ಈ ಆರು ರಾಶಿಯವರು ಈ ಎರಡು ವರ್ಷಗಳ ಕಾಲ ನಿಮ್ಮ ಅದೃಷ್ಟವನ್ನು ಸದುಪಯೋಗಪಡಿಸಿಕೊಂಡು ಮುನ್ನುಗ್ಗಿ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top