fbpx
ಮನೋರಂಜನೆ

​ಕಾಲು ಕಳೆದುಕೊಂಡಿದ್ದರೂ ಸ್ಟಾರ್ ನಟರೆಲ್ಲ ಕೈಬಿಟ್ರು: ಖಳನಟ ಸತ್ಯಜಿತ್ ಕಣ್ಣೀರು.

​ಕಾಲು ಕಳೆದುಕೊಂಡಿದ್ದರೂ ಸ್ಟಾರ್ ನಟರೆಲ್ಲ ಕೈಬಿಟ್ರು: ಖಳನಟ ಸತ್ಯಜಿತ್ ಕಣ್ಣೀರು.

 

 

ಐನೂರಕ್ಕೂ ಅಧಿಕ ಚಲನಚಿತ್ರದಲ್ಲಿ ನಟನೆ ಮಾಡಿರುವ ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಸತ್ಯಜಿತ್ ಅವರಿಗೆ ಗಾಂಗ್ರಿನ್’ನಿಂದಾಗಿ ಕಾಲು .ಕತ್ತರಿಸಲಾಗಿದ್ದು, ದುಡಿಮೆ ಇಲ್ಲದೆ ಬದುಕೇ ಹದಗೆಟ್ಟಿದೆ. … ಆದರೆ ಅವರ ನೆರವಿಗೆ ಮಾತ್ರ ಕಲಾವಿದರ ಸಂಘ ಬಂದಿಲ್ಲ..ಬಾಗಲಕೋಟೆ ಆಸ್ಪತ್ರೆಯಲ್ಲಿ ಕೃತಕ ಕಾಲು ಜೋಡಣೆ ಮಾಡಿಸಿಕೊಳ್ಳಲ್ಲು ಬಂದಿದ್ದು, ಈ ವೇಳೆ ಮಾತನಾಡಿದ ಅವರು ತನಗೆ ಆರ್ಥಿಕ ಸಹಾಯದ ಅಗತ್ಯವಿದ್ದು, ಸಹಾಯವನ್ನು ಮಾಡುವಂತೆ ಕೇಳಿಕೊಂಡಿದ್ದಾರೆ..

 

 

ಸುದ್ದಿಗಾರರೊಂದಿಗೆ ಮಾತನಾಡಿದ ಸತ್ಯಜಿತ್, “ಕಾಲು ಕಳೆದುಕೊಂಡು ಅನಾರೋಗ್ಯದಿಂದ ಆರ್ಥಿಕ ಸಂಕಷ್ಟದಲ್ಲಿದ್ದರೂ ಕಲಾವಿದರ ಸಂಘದ ದೊಡ್ಡಣ್ಣ ಹಾಗೂ ಅಂಬರೀಷ್ ಅವರಿಗೆ ಮನವಿ ಮಾಡಿಕೊಂಡರೂ ನನಗೆ ನೆರವು ನೀಡಿಲ್ಲ,, ನಟ ಅಂಬರೀಶ್ ಈವರೆಗೂ ಫೋನ್ ಮಾಡಿ ಹೇಗಿದ್ದೀಯಾ ಎಂದು ವಿಚಾರಿಸಿಲ್ಲ. ನಟ ದರ್ಶನ್ ಲೈಟ್ ಬಾಯ್ ಆಗಿ ಕೆಲಸ ಮಾಡುತ್ತಿದ್ದಾಗ ನಾನೇ ತೂಗುದೀಪ ಶ್ರೀನಿವಾಸ್ ಮಗ ಎಂದು ಪರಿಚಯಿಸಿದ್ದೆ. ಈಗ ಉತ್ತಮ ನಟರಾಗಿ ಬೆಳೆದಿದ್ದಾರೆ ಆದರೆ ನನ್ನ ನೆರವಿಗೆ ಇವರ್ಯಾರು ಬಂದಿಲ್ಲ..ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ..

 

 

ನಾನು ಇಲ್ಲಿಯತನಕ 654 ಚಿತ್ರಗಳಲ್ಲಿ ಅಭಿನಯಿಸಿದ್ದೇನೆ ವಿಶ್ರಾಂತಿ ಇಲ್ಲದೇ ಕೆಲಸ ಮಾಡಿದರಿಂದ ಮಧುಮೇಹ ಬಂದಿದೆ. ಗ್ಯಾಂಗ್ರೀನ್‌ ನಿಂದ ಕಾಲು ಕಳೆದುಕೊಂಡಿದ್ದೇನೆ, ಶಸ್ತ್ರಚಿಕಿತ್ಸೆಗೆ ₹7.5 ಲಕ್ಷ ಖರ್ಚಾಗಿದೆ..ಈವರೆಗೆ ಸಿಎಂ ಸಿದ್ದರಾಮಯ್ಯ, ನಟರಾದ ಶಿವರಾಜ್‌ಕುಮಾರ,ಉಪೇಂದ್ರ ಸೇರಿ ಕೆಲವು ವ್ಯಕ್ತಿಗಳು ಮಾತ್ರ ನನ್ನ ಶಸ್ತ್ರಚಿಕಿತ್ಸೆಗೆ ಆರ್ಥಿಕ ನೆರವು ನೀಡಿದ್ದಾರೆ ಎಂದರು..

 

 

“ಇನ್ನು ಈ ಕೃತಕ ಕಾಲು ಜೋಡಣೆಗೆ ಬೆಂಗಳೂರಿನಲ್ಲಿ 4.60ಲಕ್ಷ ರೂಗಳ ವೆಚ್ಚವಾಗುತ್ತದೆ ಎಂದು ಹೇಳಿದ್ದರು ಅದೇ ಮಾದರಿಯ ಕೃತಕ ಕಾಲು ಜೋಡಣೆಗೆ ಬಾಗಲಕೋಟೆಯಲ್ಲಿ 2.20ಲಕ್ಷ ರೂ. ವೆಚ್ಚವಾಗುತ್ತದೆ ಎಂಬ ಮಾಹಿತಿ ತಿಳಿದು ಇಲ್ಲಿಗೆ ಬಂದು ಡಾ.ಶೇಖರ ಎಂಬುವರಿಂದ ಕೃತಕ ಕಾಲು ಜೋಡಣೆ ಮಾಡಿಸಿ, ಚಿಕೆತ್ಸೆಗಾಗಿ ಬಂದಿದ್ದೇನೆ ಇಂತಹ ಹೊತ್ತಿನಲ್ಲಿ ನನಗೆ ಕಲಾವಿದರ ಸಂಘದಿಂದ ಧನ ಸಹಾಯದ ಅಗತ್ಯವಿದೆ” ಎಂದು ಕೇಳಿಕೊಂಡರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
Irappa says:

Avar contect or account number sikkre navu namma kailad sahay madativi

To Top