fbpx
ಸಮಾಚಾರ

ಕನ್ನಡ ಚಿತ್ರನಟಿಯೊಂದಿಗೆ ಸ್ವಾಮೀಜಿ ರಾಸಲೀಲೆ..! ಬಯಲಾಯ್ತು ರಾಜ್ಯದ ಮತ್ತೊಂದು ಪ್ರತಿಷ್ಠಿತ ಮಠದ ಕಾಮ ಪುರಾಣ..

ಕನ್ನಡ ಚಿತ್ರನಟಿಯೊಂದಿಗೆ ಸ್ವಾಮೀಜಿ ರಾಸಲೀಲೆ..! ಬಯಲಾಯ್ತು ರಾಜ್ಯದ ಮತ್ತೊಂದು ಪ್ರತಿಷ್ಠಿತ ಮಠದ ಕಾಮ ಪುರಾಣ..

 

 

ಇತ್ತೀಚಿಗೆ ಸ್ವಾಮೀಜಿಗಳೆಂದು ಹೇಳಿಕೊಂಡು ಅನೈತಿಕ ಚಟುವಟಿಕೆಯನ್ನು ನಡೆಸುವ ಸ್ವಾಮಿಗಳ ಸಂಖ್ಯೆ ಹೆಚ್ಚಾಗಟ್ಟಿದೆ. ಈಗ ಅಂತಹವರ ಪಟ್ಟಿಗೆ ಮತ್ತೊಬ್ಬ ಕಳ್ಳ ಸ್ವಾಮಿ ಸೇರಿಕೊಂಡಿದ್ದಾರೆ.. ಕನ್ನಡದ ಚಿತ್ರನಟಿಯೊಬ್ಬಳ ಜತೆ ರಾಸಲೀಲೆ ನಡೆಸಿರುವ ವಿಡಿಯೋ ಹೊರಬಿದ್ದಿದ್ದು ಈ ಬಗ್ಗೆ ಕನ್ನಡದ ಖಾಸಗಿ ಸುದ್ದಿವಾಹಿನಿಯೊಂದು ವರದಿ ಮಾಡಿದೆ… ಮುಂದೆ ಓದಿ.

 

 

ಸುಮಾರು 500 ವರ್ಷಗಳ ಇತಿಹಾಸವಿರುವ ಉತ್ತರ ತಾಲೂಕು ಯಲಹಂಕ ಬಳಿಯ ಹುಣಸಮಾರನಹಳ್ಳಿ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರ್ವತರಾಜ ಶಿವಾಚಾರ್ಯ ಸ್ವಾಮಿಯವರ ಮಗ ದಯಾನಂದ ಅಲಿಯಾಸ್ ಪಟ್ಟದ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮಿ ಕನ್ನಡ ಚಿತ್ರರಂಗದ ಒಬ್ಬ ನಟಿಯೊಂದಿಗೆ ರಾಸಲೀಲೆ ನಡೆಸಿದ್ದಾನೆ..

 

 

ಲಕ್ಷ ಲಕ್ಷ ಕೋಟಿ ಬೆಲೆ ಬಾಳುವ ಮಠದ ಆಸ್ತಿಯನ್ನ ನುಂಗಿ ನೀರು ಕುಡಿದಿರುವ ಈ ಕಳ್ಳ ಸ್ವಾಮಿ ಭಕ್ತಿಯಿಂದ ಮಠಕ್ಕೆ ಬರುವ ಮಹಿಳೆಯರನ್ನೇ ಮಂಚಕ್ಕೆ ಕರೆಯುತ್ತಾನೆ…ಪರ್ವತರಾಜ ಶಿವಾಚಾರ್ಯ ಸ್ವಾಮಿ ತನ್ನ ಮಗ ದಯಾನಂದ್ ಗೆ 2011ರಲ್ಲೆ ಮಠಕ್ಕೆ ಪೀಠಾಧ್ಯಕ್ಷರಾಗಿ ಮಾಡಲು ಮುಂದಾಗಿದ್ದರು.ಆದರೆ ಆಗ ದಯಾನಂದ್‍ಗೆ ಮಠದ ಪೀಠಾಧ್ಯಕ್ಷನಾಗಲು ಯಾವುದೇ ಅರ್ಹತೆಯಿಲ್ಲ ಎಂದು ಜನ ವಿರೋಧ ವ್ಯಕ್ತಪಡಿಸಿದ್ದರು..

 

 

. ಭಕ್ತಿಯಿಂದ ಮಠಕ್ಕೆ ಆಗಮವಿಸಿದ ಮಹಿಳೆಯೊಂದಿಗೆ ಮಂಚ ಏರಿರುವ ದಯಾನಂದನನ್ನ ಮೊದಲು ಮಠದಿಂದ ಓಡಿಸಿ ಎಂದು ಹುಣಸಮಾರನಹಳ್ಳಿ ಸಂಸ್ಥಾನ ಮಠದ ಸದಸ್ಯರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ..ಈ ಕಾಮಿ ಸ್ವಾಮಿಯ ಘನಂದಾರಿ ಕೆಲಸದಿಂದ ಮಠಗಳ ಮೇಲೆ ಇರುವ ನಂಬಿಕೆ, ಭಕ್ತಿ, ಶ್ರದ್ಧೆಯನ್ನಿಟ್ಟುಕೊಂಡಿರುವ ಭಕ್ತಾದಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top