fbpx
ಮನೋರಂಜನೆ

ಸಾಮಾನ್ಯವ್ಯಕ್ತಿಗಳ ಮೇಲೆ ಬಿಗ್’ಬಾಸ್ ಸೆಲೆಬ್ರೆಟಿಗಳಿಂದ ರೌಡಿಸಂ: ಸೆಲೆಬ್ರೆಟಿಗಳಿಗೆ ಬುದ್ದಿಕಲಿಸುವಂತೆ ಸುದೀಪ್’ರವರಿಗೆ ವೀಕ್ಷಕರ ಒತ್ತಾಯ.

ಸಾಮಾನ್ಯವ್ಯಕ್ತಿಗಳ ಮೇಲೆ ಬಿಗ್’ಬಾಸ್ ಸೆಲೆಬ್ರೆಟಿಗಳಿಂದ ರೌಡಿಸಂ: ಸೆಲೆಬ್ರೆಟಿಗಳಿಗೆ ಬುದ್ದಿಕಲಿಸುವಂತೆ ಸುದೀಪ್’ರವರಿಗೆ ವೀಕ್ಷಕರ ಒತ್ತಾಯ.

 

 

ಕನ್ನಡದ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಷೋ ಬಿಗ್’ಬಾಸ್ 5ನೇ ಸೀಸನ್’ನಲ್ಲಿ ವಿಶೇಷ ಎಂಬಂತೆ ಈ ಭಾರಿ ಸೆಲೆಬ್ರೆಟಿಗಳ ಜೊತೆ ಸಾಮಾನ್ಯವ್ಯಕ್ತಿಗಳನ್ನು ಕಳುಹಿಸಲಾಗಿತ್ತು..17 ಮಂದಿ ಸ್ಪರ್ಧಿಗಳ ಪೈಕಿ 11 ಮಂದಿ ಸೆಲೆಬ್ರೆಟಿಗಳು ಹಾಗೂ 6 ಜನಸಾಮಾನ್ಯರು ಸ್ಪರ್ಧಿಗಳಾಗಿ ಮನೆಯೊಳಕ್ಕೆ ಎಂಟ್ರಿ ಪಡೆದಿದ್ದರು.. ಆದರೆ ಕಾರ್ಯಕ್ರಮ ಶುರುವಾಗಿ ಎರಡು ವಾರಗಳು ಕಳೆದರೂ ಬಿಗ್ ಬಾಸ್ ಮನೆಯ ಸೆಲೆಬ್ರೆಟಿಗಳು ಎಂದೆನಿಸಿಕೊಂಡವರು ಸಾಮಾನ್ಯ ಸ್ಪರ್ಧಿಗಳನ್ನು ತುಚ್ಛವಾಗಿ ಕಾಣುತ್ತಿರುವುದು ಈಗ ಕಾರ್ಯಕ್ರಮದ ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ..

 

 

ಮನೆಯಲ್ಲಿರುವ ಸೆಲೆಬ್ರೆಟಿಗಳಾದ ದಯಾಳ್, ತೇಜಸ್ವಿನಿ, ಸಿಹಿ ಕಹಿ ಚಂದ್ರು, ಜಗನ್, ಅನುಪಮಾ, ಜೆಕೆ ,ಆಶಿತಾ,ಕೃಷಿ, ಶ್ರುತಿ(ಚಂದನ್ ಶೆಟ್ಟಿ ಮತ್ತು ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ರನ್ನು ಹೊರತುಪಡಿಸಿ ) ರವರು ಸಾಮಾನ್ಯವ್ಯಕ್ತಿಗಳನ್ನು ಅತಿ ತುಚ್ಛವಾಗಿ ಕಾಣುತ್ತಾರೆ..ಸಾಮಾನ್ಯ ವ್ಯಕ್ತಿಗಳ ಜೊತೆ ಮಾತಾನಾಡುವಾಗ ಬೇರೆ ಧಾಟಿಯಲ್ಲೇ ಮಾತನಾಡುತ್ತಾರೆ..ಸಾಮಾನ್ಯ ಸ್ಪರ್ಧಿಗಳ ಜೊತೆ ಬೆರೆಯುವುದಿಲ್ಲ…ಸೆಲೆಬ್ರೆಟಿಗಳು ಕೋಪಿಸಿಕೊಂಡರೆ ಎಲ್ಲರೂ ಸಮಾಧಾನ ಮಾಡುತ್ತಾರೆ ಅದೇ ಸಮಾನ್ಯ ವ್ಯಕ್ತಿ ಸ್ವಲ್ಪ ಜೋರಾಗಿ ಮಾತನಾಡಿದರೆ ಇಡೀ ಬಿಗ್ ಬಾಸ್ ಮನೆಯ ಸೆಲೆಬ್ರೆಟಿಗಳು ತಿರುಗಿ ಬೀಳುತ್ತಾರೆ.. ದಯಾಳ್ ತಾನು ಬಿಗ್ ಬಾಸ್ ಮನೆಯ ಯಜಮಾನ ಎಂಬಂತೆ ವರ್ತಿಸುತ್ತಿದ್ದಾರೆ.,ಅನುಪಮಾ ಗೌಡ, ತೇಜಸ್ವಿನಿ ಬಿಗ್ ಬಾಸ್ ಮನೆಯನ್ನು ತಮ್ಮ ಸ್ವಂತ ಮನೆಯೆಂದೇ ತಿಳಿದು ಸಾಮಾನ್ಯ ವ್ಯಕ್ತಿಗಳೊಡನೆ ಕೆಲಸದವರಂತೆ ವರ್ತಿಸುತ್ತಾರೆ.. ಇನ್ನು ಜಗನ್ ಮತ್ತು ಜೆಕೆ ಕಾಮನ್ ಮ್ಯಾನ್ ಗಳಿಗೆ ತಮ್ಮ ಜೋರು ಧ್ವನಿಯಲ್ಲಿ ಧಮ್ಕಿ ಹಾಕಿದ್ದಾರೆ.,

 

 

ಈ ಎಲ್ಲಾ ಅಂಶಗಳನ್ನು ತಲೆಯಲ್ಲಿಟ್ಟುಕೊಂಡಿರುವ ವೀಕ್ಷಕರು ಕಾರ್ಯಕ್ರಮದ ನಿರೂಪಕರಾಗಿರುವ ಕಿಚ್ಚ ಸುದೀಪ್ ಅವರಿಗೆ ಸೆಲೆಬ್ರೆಟಿಗಳಿಗೆ ಬುದ್ದಿ ಕಲಿಸುವಂತೆ ಒತ್ತಾಯ ಮಾಡುತ್ತಿದ್ದಾರೆ.. ಈ ರೀತಿ ಸುದೀಪ್ ಅವರಿಗೆ ಒತ್ತಾಯ ಹೇರಿರುವ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ.”ಸುದೀಪ್ ಸರ್….ಪ್ಲಿಜ್ ನಿವು ಸೆಲೆಬ್ರೆಟಿಗಳಿಗೆ ಸರಿಯಾಗಿ ವಾರ್ನ್ ಮಾಡಬೇಕು ಯಾಕಂದ್ರೆ ನೀವ ಈ ವಾರ ಸರಿಯಾಗಿ ವಾರ್ನ ಮಾಡಲ್ಲಿಲ್ಲಾ ಇನ್ನು ಜಾಸ್ತಿ ಮಾಡತಾರೆ ಅವರು,, ನೀವು ಸಾಮಾನ್ಯ ವ್ಯಕ್ತಿಗಳಿಗೆ ನ್ಯಾಯ ಕೊಡುಸುತ್ತೀರಾ ಎಂದು ನಂಬಿದ್ದೇವೆ,, ನಮ್ಮ ನಂಬಿಕೆಯನ್ನು ಸುಳ್ಳು ಮಾಡಬೇಡಿ” ಎಂದು ಒಬ್ಬ ವ್ಯಕ್ತಿ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

 

 

” ಸುದೀಪ್ ಸರ್ ನಾನು ನಿಮ್ಮ ದೊಡ್ಡ ಅಭಿಮಾನಿ, ಬಿಗ್ ಬಾಸ್ ಕಾರ್ಯಕ್ರಮದಲ್ಲಿರುವ ಜಂಭದ ಸೆಲೆಬ್ರೆಟಿಗಳ(Except chandan shetty) ಅಟ್ಟಹಾಸವನ್ನು ನೋಡಲಾಗುತ್ತಿಲ್ಲ. ಪ್ರೇಕ್ಷಕರೆಲ್ಲಾರು ನಿಮ್ಮ ಶನಿವಾರದ ಪಂಚಾಯತಿ ಕಾರ್ಯಕ್ರಮಕ್ಕೆ ಕಾಯುತ್ತಿದ್ದೇವೆ ನೀವು ದಯವಿಟ್ಟು ಜಂಭದ ಸೆಲೆಬ್ರೆಟಿಗಳಿಗೆ(Except chandan shetty)ಸರಿಯಾಗಿ ಬುದ್ದಿ ಕಲಿಸಬೇಕು. ನೀವೂ ಕೂಡ ಸೆಲೆಬ್ರೆಟಿಯಾಗಿರುವುದರಿಂದ ಕಾರ್ಯಕ್ರಮವನ್ನು ನೀವು ಯಾವ ದೃಷ್ಟಿಕೋನದಲ್ಲಿ ನೋಡಿರುತ್ತೀರೋ ಗೊತ್ತಿಲ್ಲಾ ಆದರೆ ಬಹುತೇಕ ಮಂದಿಗೆ ಸೆಲೆಬ್ರೆಟಿಗಳು ಮಾಡುತ್ತಿರುವುದು ತಪ್ಪು ಎನಿಸಿದೆ. ಸೆಲೆಬ್ರೆಟಿಗಳು ಸಾಮಾನ್ಯ ವ್ಯಕ್ತಿಗಳನ್ನು ನೋಯಿಸಿದ್ದಕ್ಕೆ ಕ್ಷಮೆ ಕೇಳಬೇಕು ಮತ್ತು ಸೆಲೆಬ್ರೆಟಿಗಳಿಗೆ ಅವರ ತಪ್ಪಿನ ಅರಿವನ್ನು ಮಾಡಿಸಬೇಕು ಎನ್ನುವುದು ನನ್ನಂತಹ ಲಕ್ಷಾಂತರ ಪ್ರೇಕ್ಷಕರ ಆಶಯ.ಇನ್ನು ಮುಂದೆ ಸೆಲೆಬ್ರೆಟಿಗಳು ಕಾಮನ್ ಮ್ಯಾನ್ಗಳನ್ನು ಟಾರ್ಗೆಟ್ ಮಾಡಬಾರದು ನಮ್ಮ ಪ್ರೀತಿಯ ನೀವು ಕಾರ್ಯಕ್ರಮದ ಪ್ರೇಕ್ಷಕರಿಗೆ ನ್ಯಾಯ ಒದಗಿಸುತ್ತೀರಾ ಎಂಬ ಬಝಾರವಸೆಯಲ್ಲಿ ಇದ್ದೇವೆ.ದನ್ಯವಾಧ ” ಎಂದು ಮತ್ತೊಬ್ಬ ಫೇಸ್ ಬುಕ್ ಬಳಕೆದಾರರು ಪೋಸ್ಟ್ ಮಾಡಿದ್ದಾರೆ.

 

 

ಜನಸಾಮಾನ್ಯರು ಅವರ ಧಾರಾವಾಹಿಗಳನ್ನು ನೋಡಿದರೆ ತಾನೇ ಅವ್ರು ಸೆಲೆಬ್ರೆಟಿಗಳಾಗೋದು,,ಜನರ ದುಡ್ಡು ಬೇಕು ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳೋದಕ್ಕೆ ಆಗಲ್ಲ ಅಂದರೆ ಏನು ಅರ್ಥ…ಅಷ್ಟಕ್ಕೂ ಅವರು ನಾಮಿನೇಟ್ ಆದಾಗ ಅವರಿಗೆ ವೋಟ್ ಮಾಡೋದು ಯಾರು ಎಂಬುದನ್ನು ತಿಳಿದುಕೊಂಡು ಆಟವಾಡಿದ್ರೆ ಒಳಿತು..ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ಕಾಮೆಂಟ್ ಮಾಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top