fbpx
ಸಮಾಚಾರ

ವಾಸಿಸುವವನೇ ಮನೆ ಮಾಲೀಕ: ಮಹತ್ವದ ಕಾಯ್ದೆಗೆ ರಾಷ್ಟ್ರಪತಿ ಸಹಿ..!

ವಾಸಿಸುವವನೇ ಮನೆ ಮಾಲೀಕ: ಮಹತ್ವದ ಕಾಯ್ದೆಗೆ ರಾಷ್ಟ್ರಪತಿ ಸಹಿ..!

 

 

ಖಾಸಗಿ ಜಮೀನಿನಲ್ಲಿ ಮನೆಗಳನ್ನು ನಿರ್ವಿುಸಿಕೊಂಡಿರುವ ಲಕ್ಷಾಂತರ ಕೂಲಿ ಕಾರ್ವಿುಕರಿಗೆ ವಾಸಿಸುವ ಹಕ್ಕು ನೀಡುವ ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಸಹಿ ಹಾಕಿದ್ದಾರೆ.. ರಾಜ್ಯದ 58 ಸಾವಿರಕ್ಕೂ ಹೆಚ್ಚು ಜನರ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ವಾಸಿಸುವವನೇ ಮನೆಯೊಡೆಯ ಎಂಬ ಹಕ್ಕು ನೀಡುವ ಕ್ರಾಂತಿಕಾರಿ ಕರ್ನಾಟಕ ಭೂಸುಧಾರಣೆ ಕಾಯ್ದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ.

 

 

ಲಂಬಾಣಿ ತಾಂಡಾಗಳು, ಹಟ್ಟಿಗಳು, ಹಟ್ಟಿಗಳು ಕೇರಿಗಳು ಸೇರಿದಂತೆ ರಾಜ್ಯಾದ್ಯಂತ ಇರುವ ಸಾವಿರಾರು ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ಗ್ರಾಮಗಳ ಮಾನ್ಯತೆ ಸಿಗುವಂತೆ ಕಾನೂನಿಗೆ ವಿಧಾನಮಂಡಲ ತಿದ್ದುಪಡಿ ತಂದಿತ್ತು. ಈ ತಿದ್ದುಪಡಿಯನ್ನು ಸದನದಲ್ಲಿ ಸರ್ವಾನುಮತದಿಂದ ಅಂಗೀಕರಿಸಿ ಅದನ್ನು ರಾಷ್ಟ್ರಪತಿಗಳ ಅಂಗೀಕಾರಕ್ಕಾಗಿ ಕಳಿಸಿಕೊಡಲಾಗಿತ್ತು. ಈಗ ಈ ವಿದೇಯಕಕ್ಕೆ ರಾಷ್ಟ್ರಪತಿಗಳ ಅಂಕಿತ ಬಿದ್ದಿದೆ.

 

 

ಈ ವಿಧೇಯಕದಿಂದ ರಾಜ್ಯದಲ್ಲಿ ಸುಮಾರು 5 ಲಕ್ಷ ಜನರಿಗೆ ಅನುಕೂಲವಾಗಲಿದೆ. ಸುಮಾರು 5000 ಕ್ಕೂ ಹೆಚ್ಚಿನ ಹಟ್ಟಿ,ತಾಂಡ, ಕಾಲನಿ, ಕ್ಯಾಂಪ್, ಕೇರಿ ಮೊದಲಾದವುಗಳಲ್ಲಿ ವಾಸಿಸುತ್ತಿರುವವರಲ್ಲಿ ಬಹುಪಾಲು ಕೂಲಿ ಕಾರ್ವಿುಕರಾಗಿದ್ದಾರೆ.. ಹಾಗಾಗಿ ಕಂದಾಯ ಇಲಾಖೆ ಮೂಲಕ ಕಾಯ್ದೆ ಅನುಷ್ಠಾನವಾಗಲಿದ್ದು, ಈ ಮನೆಗಳಿಗೆ ಸೂಕ್ತ ದಾಖಲೆ ಲಭ್ಯವಾಗಲಿದೆ. ಹಟ್ಟಿ,ತಾಂಡ, ಕಾಲನಿ, ಕ್ಯಾಂಪ್, ಕೇರಿ ಮೊದಲಾದವುಗಳಿಗೆ ಕಂದಾಯ ಗ್ರಾಮಗಳ ಮಾನ್ಯತೆ ಪಡೆಯಲಿವೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top