ಮುಂದಿನ ವರ್ಷ ದಿಗಂತ್-ಐಂದ್ರಿತಾ ರೇ ಮದುವೆನಾ? ಐಂದ್ರಿತಾ ಹೇಳಿದ್ದೇನು?
ನಟ ದಿಗಂತ್ ಮತ್ತು ಐಂದ್ರಿತಾ ರೇ ಮದುವೆ ಪದೇ ಪದೇ ಕೇಳಿಬರುತ್ತಲೇ ಇರುತ್ತೆ. ಅದಕ್ಕೆ ಪೂರಕ ಎಂಬಂತೆ ಕೆಲ ಕಾರ್ಯಕ್ರಮದಲ್ಲಿ ದಿಗಂತ್ ಮತ್ತು ಐಂದ್ರಿತಾ ಇಬ್ಬರು ಜೊತೆಗೆ ಭಾಗವಹಿಸಿದ್ದರು ಅಲ್ಲದೆ ತಮ್ಮ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಪ್ರೇಮಿಗಳ ರೀತಿಯಲ್ಲಿ ಫೋಟೋಗಳನ್ನು ಹಾಕಿದ್ದಾರೆ..ಅಕುಲ್ ಬಾಲಾಜಿ ನಡೆಸಿಕೊಡುವ ಸೂಪರ್ ಟಾಕ್ ಟೈಂ’ ಕಾರ್ಯಕ್ರಮಕ್ಕೆ ಬಂದಿದ್ದ ಸಮಯದಲ್ಲಿ ಐಂದ್ರಿತಾ ರೇ ”ದಿಗಂತ್ ನನ್ನ ಬಾಯ್ ಫ್ರೆಂಡ್” ಎಂದು ಹೇಳಿದ್ದರು.
ಮುಂದಿನ ವರ್ಷ ಈ ಜೋಡಿಗಳು ಮದುವೆಯಾಗುತ್ತಿದ್ದಾರೆ ಎಂದು ಕನ್ನಡ ಖಾಸಗಿ ಪತ್ರಿಕೆಯೊಂದು ವರದಿಮಾಡಿತ್ತು ಆ ವರದಿಯ ಬಗ್ಗೆ ಐಂದ್ರಿತಾ ರೇಯವರು ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ.. ತಾವು ದಿಂಗಂತ್ ರನ್ನು ಮದುವೆ ಆಗುವ ಬಗ್ಗೆ ಐಂದ್ರಿತಾ ರೇ ನೇರವಾಗಿ ಹೇಳದೆ ಇದ್ದರು ಆ ಪೆಗ್ಗೆ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಐಂದ್ರಿತಾ ರೇ ಅವರ ಅಭಿಮಾನಿ ಬಳಗದ ಟ್ವಿಟರ್ ಖಾತೆಯಲ್ಲಿ ” ಐಂದ್ರಿತಾ ಮತ್ತು ದಿಗಂತ್ ಮದುವೆ ಕುರಿತು ಮತ್ತೊಂದು ಸುಳ್ಳು ಸುದ್ದಿ ಬಂದಿದೆ ” ಎಂದು ಆ ಪತ್ರಿಕೆಯ ವರದಿಯ ಫೋಟೋ ಸಮೇತ ಸ್ಟೇಟಸ್ ಹಾಕಿ ಪೋಸ್ಟ್ ಮಾಡಿತ್ತು. ಮುಂದೆ
ತಮ್ಮ ಅಭಿಮಾನಿಗಳು ಮಾಡಿದ ಟ್ವೀಟ್’ಅನ್ನ ಸ್ವತಃ ಐಂದ್ರಿತಾ ರೇ ಆವರೇ ರೀ-ಟ್ವೀಟ್ ಮಾಡುವ ಮೂಲಕ ಸದ್ಯಕ್ಕೆ ಅವರು ದಿಗಂತ್ ಅವರೊಡನೆ ಮದುವೆಯಾಗುತ್ತಿಲ್ಲ ಎಂಬ ಸೂಚನೆಯನ್ನು ಪರೋಕ್ಷವಾಗಿ ಕೊಟ್ಟಿದ್ದಾರೆ..ಆದರೆ ದಿಗಂತ್ ಮಾತ್ರ ತಮ್ಮ ಟ್ವಿಟ್ಟರ್ ನಲ್ಲಿ ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ..
One more Fake paper Article @diganthmanchale and @AindritaR marriage info pic.twitter.com/9rPNhijkUn
— Aindrita Ray fanz (@AindritaFC) October 28, 2017
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
