fbpx
ಮನೋರಂಜನೆ

ಬಿಗ್ ಬಾಸ್ ಮನೆಯಿಂದ ಎರಡನೇ ವಾರ ಎಲಿಮಿನೇಟ್ ಆಗಿದ್ದು ಇವರೇ..! ಕಾಮನ್’ಮ್ಯಾನ್ ಸೇಫ್..!

ಬಿಗ್ ಬಾಸ್ ಮನೆಯಿಂದ ಎರಡನೇ ವಾರ ಎಲಿಮಿನೇಟ್ ಆಗಿದ್ದು ಇವರೇ..! ಕಾಮನ್’ಮ್ಯಾನ್ ಸೇಫ್..!

 

 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾರಥ್ಯದ ಮತ್ತು ಕನ್ನಡ ಅತಿದೊಡ್ಡ ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಕನ್ನಡದ 5ನೇ ಸೀಸನ್ ನಲ್ಲಿ 11 ಮಂದಿ ಸೆಲೆಬ್ರೆಟಿಗಳು ಹಾಗೂ 6 ಜನಸಾಮಾನ್ಯರು ಸ್ಪರ್ಧಿಗಳು ಸೇರಿ ಒಟ್ಟು 17 ಮಂದಿ ಸ್ಪರ್ಧಿಗಳು ಮನೆಯೊಳಕ್ಕೆ ಎಂಟ್ರಿ ಪಡೆದಿದ್ದರು..ಕಳೆದುವಾರ ಸುಮಾ ಎಲಿಮಿನೇಷನ್ ಆಗಿದ್ದರು ಈಗ ಅಧಿಕೃತವಾಗಿ ಮನೆಯ ಎರಡನೇ ವಾರದ ಎಲಿಮಿನೇಷನ್ ಕೂಡ ಆಗಿದೆ..!

 

 

ಈ ವಾರ ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದ ಬರೋಬ್ಬರಿ 8 ಜನ ಸ್ಪರ್ದಿಗಳ ಪೈಕಿ ಒಬ್ಬರು ಎಲಿಮಿನೇಟ್ ಆಗಿದ್ದಾರೆ ಆಗಿದ್ದಾರೆ.. ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದ ಸ್ಪರ್ಧಿಗಳಾದ ಮೇಘ,ಸಮೀರ್ ಆಚಾರ್ಯ, ಜಗನ್ನಾಥ್, ದಿವಾಕರ್, ಆಶಿತಾ, ಕೃಷಿ, ರಿಯಾಜ್ ಮತ್ತು ದಯಾಳ್ ಅವರ ಪೈಕಿ ಯಾರು ಮನೆಯಿಂದ ಹೊರ ಹೋಗುತ್ತಾರೆ ಎಂಬ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ..

 

 

ಬಿಗ್’ಬಾಸ್ ನಿಂದ ಈ ವಾರ ಆಶಿತಾ ಚಂದ್ರಪ್ಪ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.. ನಾಮಿನೇಷನ್ ಪ್ರಕ್ರಿಯೆಯಲ್ಲಿ 3 ವೋಟ್ ಗಳೊಂದಿಗೆ ನಾಮಿನೇಟ್ ಆಗಿದ್ದ ಆಶಿತಾ ಚಂದ್ರಪ್ಪ ಅವರು ದೊಡ್ಡವರು ಚಿಕ್ಕವರು ಎನ್ನದೆ ಬಾಯಿ ಮಾಡುತ್ತಿದುದು ವೀಕ್ಷಕರ ಕೋಪಕ್ಕೆ ಕಾರಣವಾಗಿತ್ತು.. ಈ ಮೂಲಕ ಆಶಿತಾ ಎರಡೇ ವಾರದಲ್ಲೇ ತಮ್ಮ ಬಿಗ್ ಬಾಸ್ ಪಯಣವನ್ನು ಮುಗಿಸಿದ್ದಾರೆ..

 

 

ಒಂದು ಕಡೆ ಆಶಿತಾ ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಿದ್ದರೆ ಅತ್ತ ಕಾಮನ್ ಮ್ಯಾನ್’ಗಳು ಸೇವ್ ಆಗಿರುವುದು ಸಂತಸದ ವಿಷಯವಾಗಿದೆ. ಈ ವಾರ ಪೂರ್ತಿಯ ಬಿಗ್ ಬಾಸ್ ಮನೆಯ ರೌಡಿ ಸೆಲೆಬ್ರೆಟಿಗಳ(ಚಂದನ್ ಮತ್ತು ಜಯಶ್ರೀನಿವಾಸ್ ಹೊರತು ಪಡಿಸಿ) ದೌರ್ಜನ್ಯಕ್ಕೆ ಒಳಗಾಗಿದ್ದ ಸಾಮಾನ್ಯ ವ್ಯಕ್ತಿಗಳಿಗೆ ವೀಕ್ಷಕರು ಬೆಂಬಲ ನೀಡಿ ನಿಜವಾದ ಸಾಮಾನ್ಯ ವೀಕ್ಷಕರ ವ್ಯಾಲ್ಯೂ ಎಂಥದ್ದು ಎಂದು ನಿರೂಪಿಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
Santosh. M. K says:

Next wicket 100% dayal

To Top