fbpx
ಸಮಾಚಾರ

ಸತ್ತ ಮಗನ ಸ್ಮರಣೆಗಾಗಿ ಪ್ರತಿದಿನ ಉಚಿತ ಊಟ ನೀಡುತ್ತಿರುವ ಅಪರೂಪದ ದಂಪತಿ.ಒಮ್ಮೆ ಓದಿ

ಸತ್ತ ಮಗನ ಸ್ಮರಣೆಗಾಗಿ ಪ್ರತಿದಿನ ಉಚಿತ ಊಟ ನೀಡುತ್ತಿರುವ ಅಪರೂಪದ ದಂಪತಿ.ಒಮ್ಮೆ ಓದಿ

 

 

ಹೆತ್ತ ತಂದೆ ತಾಯಿಗಳಿಗೆ ತಮ್ಮ ಮಕ್ಕಳೇ ಪ್ರಪಂಚ. ಹೀಗಿರುವಾಗ ತಮ್ಮ ಮಕ್ಕಳೇ ತಮ್ಮ ಕಣ್ಮುಂದೆ ಮರೆಯಾದರೆ, ಊಹಿಸಿಕೊಳ್ಳಲೂ ಅಸಾಧ್ಯ..ರೈಲು ಅಪಘಾತದಲ್ಲಿ ಸಾವನ್ನಪ್ಪಿರುವ ತಮ್ಮ ಮುದ್ದು ಮಗನ ನೆನಪಿನಲ್ಲಿ ದಂಪತಿಯೋರ್ವರು ಅನಾಥರಿಗೆ,ಹಸಿದುಬಂದವರಿಗೆ,ಬಡವರು, ವೃದ್ಧರಿಗೆ ಪ್ರತಿದಿನ ಉಚಿತವಾಗಿ ಆಹಾರ ವಿತರಿಸುವ ಮೂಲಕ ಸಾಮಾಜ ಸೇವೆಯಲ್ಲಿ ತೊಡಗಿದ್ದಾರೆ.

 

 

 

ತಮ್ಮ ಮುದ್ದು ಮಗನನ್ನು ಕಳೆದುಕೊಂಡ ನಂತರ ಅವನನ್ನು ಸ್ಮರಿಸುತ್ತಾ ಆತನ ಹೆಸರಿನಲ್ಲಿ ಅನಾಥರಿಗೆ,ಹಸಿದುಬಂದವರಿಗೆ,ಬಡವರು, ವೃದ್ಧರಿಗೆ ಟಿಫಿನ್ ಸೆಂಟರ್ ನಡೆಸುತ್ತಿರೋ ಈ ಮುಂಬೈ ದಂಪತಿ ಪ್ರತಿನಿತ್ಯ ಬಡವರಿಗೆ ಹಾಗೂ ವೃದ್ಧರಿಗೆ ಪ್ರತಿದಿನ ಉಚಿತವಾಗಿ ಆಹಾರವನ್ನು ನೀಡುತ್ತಿದ್ದಾರೆ. ಪ್ರದೀಪ್ ತನ್ನಾ ಮತ್ತು ಅವರ ಪತ್ನಿ ತಮ್ಮ ಮಗನ ಹೆಸರಿನಲ್ಲಿ ಒಂದು ಟ್ರಸ್ಟ್ ಅನ್ನು ಸ್ಪಾಪಿಸಿದ್ದು ಆ ಟ್ರಸ್ಟ್ ಮೂಲಕ ತಮ್ಮ ಮಗನ ಸ್ಮರಣೆ ಮಾಡುತ್ತಿದ್ದಾರೆ.

 

 

 

ಇವರ ಪುತ್ರ ನಿಮೇಶ್ ತನ್ನಾ 2011 ರಲ್ಲಿ ಮುಂಬೈನಲ್ಲಿ ಮೀಟಿಂಗ್‍ವೊಂದಕ್ಕೆ ತೆರಳುತ್ತಿದ್ದಾಗ ಒಂದು ಸ್ಥಳೀಯ ರೈಲು ಅಪಘಾತದಲ್ಲಿ ಸ್ಥಳದಲ್ಲೇ ಮರಣಹೊಂದಿದ್ದರು..ತಮ್ಮ ಮಗನ ಸಾವಿನಿಂದ ತೀರ್ವ ಆಘಾತಗೊಂಡ ಪ್ರದೀಪ್ ತನ್ನಾ ದಂಪತಿ ತಮ್ಮ ಮಗನ ಹೆಸರು ಸದಾ ಕಾಲ ಚಿರಸ್ಮರಣಿಯಾಗಿರಬೇಕು ಎಂದು ಬಡವರಿಗೆ ಊಟ ಒದಗಿಸುವ ಉದ್ದೇಶದಿಂದ ದಂಪತಿ ಶ್ರೀ ನಿಮೇಶ್ ತನ್ನಾ ಚಾರಿಟೇಬಲ್ ಟ್ರಸ್ಟ್ ಆರಂಭಿಸಿ ಉಚಿತ ದಾಸೋಹ ಮಾಡುತ್ತಿದ್ದಾರೆ.

 

 

 

ಪ್ರಾರಂಭದಲ್ಲಿ ತಮ್ಮ ಮನೆಯಲ್ಲೇ ಆಹಾರ ತಯಾರಿಸಿ ನಿತ್ಯ 30 ಮಂದಿಗೆ ಊಟ ನೀಡುತ್ತಿದ್ದ ದಂಪತಿ ಈಗ ಒಂದು ಟಿಫಿನ್ ಸೆಂಟರ್ ಆರಂಭಿಸಿ 100 ಅನಾಥ ಕುಟುಂಬಗಳಿಗೆ ಹಾಗೂ ವೃದ್ಧರಿಗೆ ಉಚಿತ ಆಹಾರ ವಿತರಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಬಡ ಮಕ್ಕಳಿಗೆ ಉಚಿತವಾಗಿ ಬಟ್ಟೆ, ಪುಸ್ತಕಗಳು ಹಾಗೂ ವೃದ್ಧರಿಗೆ ಔಷಧ ನೀಡುತ್ತಿದ್ದಾರೆ..ಸುಮಾರು 7 ಸಿಬ್ಬಂದಿ ಇಲ್ಲಿ ಕೆಲಸಕ್ಕೆ ಇಟ್ಟುಕೊಂಡಿದ್ದಾರೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top