fbpx
ದೇವರು

ಈ ಆಂಜನೇಯ ಸ್ವಾಮಿಗೆ ೧ ರೂಪಾಯಿ 25 ಪೈಸೆ ಇಟ್ರೆ ಸಾಕಂತೆ ಕಂಕಣ ಭಾಗ್ಯ, ಸಂತಾನ ಫಲ , ಅನಾರೋಗ್ಯ ಸಮಸ್ಯೆ ವಾಸಿಯಾಗುತ್ತಂತೆ !

ಹೊಳೆ ಆಂಜನೇಯ ದೇವಸ್ಥಾನ :

 

ಮಂಡ್ಯ ಜಿಲ್ಲೆಯ ಮದ್ದೂರಿನ ಶಿಂಷಾ ನದಿ ದಂಡೆಯ ಮೇಲೆ ಇರುವ ದೇವಾಲಯವೇ ಈ ಹೊಳೆ ಆಂಜನೇಯ ದೇವಸ್ಥಾನ , ದೇವಸ್ಥಾನ ಹೊಳೆಯ ಪಕ್ಕದಲ್ಲಿರುವ ಕಾರಣದಿಂದ ಈ ದೇವಸ್ಥಾನಕ್ಕೆ ಹೊಳೆ ಆಂಜನೇಯ ದೇವಸ್ಥಾನ ಎಂಬ ಹೆಸರು ಬಂದಿದೆ. ಈ ದೇವಸ್ಥಾನಕ್ಕೆ ಅದರದೇ ಆದ ಕಥೆ ಇದೆ.ಪುರಾಣಗಳ ಪ್ರಕಾರ ಶ್ರೀ ವ್ಯಾಸರಾಜರು ಇಲ್ಲಿ ಆಂಜನೇಯ ಮೂರ್ತಿಯ ಪ್ರತಿಷ್ಠಾಪನೆ ಮಾಡಿದ್ದಾರೆ ಎಂದು ಹೇಳಲಾಗುತ್ತದೆ.

 

ಶ್ರೀ ವ್ಯಾಸರಾಜರು 732 ಆಂಜನೇಯ ಮೂರ್ತಿಗಳನ್ನು ಭಾರತದಾದ್ಯಂತ ಪ್ರತಿಷ್ಠಾಪಿಸಿದರು ಅದರಲ್ಲಿ ಪ್ರತಿಷ್ಠಾಪಿಸಿದ ಒಂದು ಆಂಜನೇಯ ಮೂರ್ತಿಯೇ ಈ ಹೊಳೆ ಆಂಜನೇಯ.ಈ ದೇವಸ್ಥಾನಕ್ಕೆ ಒಂದೂಕಾಲ ಆಣೆ ಆಂಜನೇಯ ಎಂದು ಕೂಡ  ಕರೆಯುತ್ತಾರೆ ,ಅದಕ್ಕೆ ಮೂಲ ಕಾರಣ ಇಲ್ಲಿಗೆ ಬರುವಂತಹ ಭಕ್ತರು ಒಂದೂಕಾಲ ಆಣೆ ಇಟ್ಟು ಆಂಜನೇಯನಲ್ಲಿ ಹರಕೆ ಕಟ್ಟಿಕೊಂಡು ಅವರ ಕೋರಿಕೆ ನೆರವೇರಿಸಬೇಕೆಂದು ಬೇಡಿಕೊಳ್ಳುತ್ತಿದ್ದರು .

ಒಂದೂಕಾಲ ಆಣೆ

ಈ ದೇವರಿಗೆ ಇರುವಂತ ಶಕ್ತಿ ಭಕ್ತರ ಯಾವ  ಕೋರಿಕೆ ಯಾದರೂ ನೆರವೇರುತ್ತದೆ , ಮದುವೆ ಆಗದವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ, ಅನಾರೋಗ್ಯ ಪೀಡಿತರು ಗುಣಮುಖರಾಗುತ್ತಾರೆ, ಮಕ್ಕಳಿಲ್ಲದವರಿಗೆ ಸಂತಾನ ಫಲ ದೊರಕುತ್ತದೆ, ಕೋರ್ಟ್ ವ್ಯಾಜ್ಯ ಬಗೆಹರಿಯುತ್ತದೆ .

 

ಈಗ ನಾಲ್ಕಾಣೆ(25 ಪೈಸೆ )ಚಲಾವಣೆಯಲ್ಲಿಲ್ಲವಾದರೂ ,ಈ ದೇವಸ್ಥಾನದ  ಅರ್ಚಕರೇ 25 ಪೈಸೆ ನಾಣ್ಯ ಕೊಟ್ಟು  ಸಂಕಲ್ಪಕ್ಕೆ ಸಹಕರಿಸುವ ಸಂಪ್ರದಾಯ ಈವಾಗಲೂ ಮುಂದುವರಿಯುತ್ತಿದೆ .

ಕ್ರಿ.ಶ. 1450-1498  ರಲ್ಲಿ ಈ ದೇವಸ್ಥಾನವನ್ನು  ವಿಜಯ ನಗರದ ಅರಸರು ಕಟ್ಟಿದರು ,ಮುಖ್ಯ ದ್ವಾರದಲ್ಲಿ 4  ಕಲ್ಲಿನ  ಕಂಬಗಳಿದ್ದು ,ಮೂಲ ಗರ್ಭ ಗುಡಿಯಲ್ಲಿ ಒಂದು ಚಿಕ್ಕ ಆಂಜನೇಯ ಮೂರ್ತಿ ಇದೆ .ಈ ಆಂಜನೇಯ ಮೂರ್ತಿ ಬೆಳೆಯುತ್ತಿದೆ ಎಂದು ಅಲ್ಲಿನ ಅರ್ಚಕರು ಹೇಳುತ್ತಾರೆ ಹಾಗೂ ಆ ದೇವಸ್ಥಾನದಲ್ಲಿ ನಡೆದಂತ ಅಚ್ಚರಿ ಪವಾಡಗಳಬಗ್ಗೆ ಹೇಳುತ್ತಾರೆ ,ಆ ಪವಾಡ ಏನೆಂದರೆ  2004 ಮತ್ತು 2011ರಲ್ಲಿ ಸಂಭವಿಸಿದ ಚಂದ್ರ ಗ್ರಹಣದಂದು ಬಾಗಿಲು ಮುಚ್ಚಿದ ದೇವಾಲಯದ ಒಳಗಿಂದ ಶಂಖ, ಜಾಗಟೆ, ನಗಾರಿ ಬಾರಿಸಿದ ಶಬ್ದ ಮೊಳಗಿತ್ತಂತೆ.

 

ಇಷ್ಟು ಪವಾಡ ಮತ್ತು ಪ್ರತೀತಿಯನ್ನು ಹೊಂದಿರುವ ಹೊಳೆ ಆಂಜನೇಯನ ಭಕ್ತರ ಸಂಖ್ಯೆ ಹೆಚ್ಚುತ್ತಿದೆ ಅದರ ಜೊತೆ ಈ ದೇವರ ಮಹಿಮೆಯಿಂದ ಭಕ್ತರ ಕಷ್ಟ ಕಾರ್ಪಣ್ಯ ಗಳು ದೂರ ವಾಗಿ ಅವರು ಸುಖ ಜೀವನವನ್ನು  ನಡೆಸುವಂತಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top