fbpx
ಆರೋಗ್ಯ

ನೆಮ್ಮದಿಯಾಗಿ ನಿದ್ದೆ ಮಾಡೋಕೆ ಈ ತಿಗಣೆ ಕಾಟ ಅಂತಾ ಬೇಸತ್ತಿರೋರು ಹೀಗೆ ಮಾಡಿ ತಿಗಣೆ ಓಡಿಸಿ ಆರಾಮಾಗಿ ಮಲಗಿ

ನೆಮ್ಮದಿಯಾಗಿ ನಿದ್ದೆ ಮಾಡೋಕೆ ಈ ತಿಗಣೆ ಕಾಟ ಅಂತಾ ಬೇಸತ್ತಿರೋರು ಹೀಗೆ ಮಾಡಿ ತಿಗಣೆ ಓಡಿಸಿ ಆರಾಮಾಗಿ ಮಲಗಿ

 

ದಿನವಿಡೀ ಕಷ್ಟ ಪಟ್ಟು ದುಡಿದು ರಾತ್ರಿ ಇನ್ನೇನು ನಿದ್ದೆ ಮಾಡ್ಬೇಕು ಅನ್ನೋ ಅಷ್ಟರಲ್ಲಿ ಏನೋ ಕಚ್ಚಿದ ಹಾಗೆ ಅನ್ನಿಸುತ್ತೆ ಎದ್ದು ನೋಡಿದ್ರೆ ಮೈ ಮೇಲೆ ಚುರು ಚುರು ಅಂತ ಉರಿ ಶುರುವಾಗಿರುತ್ತೆ ಹಾಗಾದ್ರೆ ನಿಮ್ಮ ಮನೆಯ ಬೆಡ್ ಮೇಲೆ ತಿಗಣೆ ಇದೆ ಅಂತ ಅರ್ಥ !

 

ಇದೊಂದು ಪ್ಯಾರಾಸೈಟ್ ಅಂದರೆ ಪರಾವಲಂಬಿ ಮನೆಯ ಡೋರ್ ಮ್ಯಾಟ್ , ತಲೆ ದಿಂಬು , ಹಾಸಿಗೆ , ರಗ್ಗು ಇಲ್ಲಿ ಇದರ ವಾಸ , ಹಾಸಿಗೆಯ ಮಲಗೋ ವ್ಯಕ್ತಿಯ ರಕ್ತ ಹೀರೋದು ಇದರ ಕೆಲಸ ಒಂದು ಸಾರಿ ಅಂಟಿಕೊಂಡ್ರೆ ಸಾಯೋದ್ರ ಒಳಗೆ 400 ಮೊಟ್ಟೆಗಳು ಇಡಬಹುದು .

 

ನಿದ್ದೆ ಮಾಡ್ಬೇಕು ಅನ್ನೋ ಅಷ್ಟರಲ್ಲಿ ಏನೋ ಕಚ್ಚಿದ ಹಾಗೆ ಅನ್ನಿಸುತ್ತೆ ಎದ್ದು ನೋಡಿದ್ರೆ ಮೈ ಮೇಲೆ ಚುರು ಚುರು ಅಂತ ಉರಿ ಅನುಭವ ಆಗೋದು .
ಬಟ್ಟೆ ಮೇಲೆ ಕಂದು ಬಣ್ಣದ ಕಲೆ ಕಾಣಿಸೋದು .
ತುರಿಕೆ , ಸಣ್ಣ ಸಣ್ಣ ಗುಳ್ಳೆಗಳು ಕಾಣಿಸಿಕೊಳ್ಳೋದು.
ಮೈಯಲ್ಲ ದುರ್ವಾಸನೆ ಬರೋದು.

ತಿಗಣೆ ಕಾಟ ಹೇಗೆ ಶುರುವಾಗುತ್ತೆ ?

ಮಲಗುವ ಹಾಸಿಗೆ ಸ್ವಚ್ಛವಾಗಿ ಇರದೇ ಇದ್ದರೆ , ನೀರು ಇನ್ನಿತರ ಪದಾರ್ಥಗಳು ಚೆಲ್ಲಿರುತ್ತದೆ .
ಬಹಳ ದಿನಗಳವರೆಗೂ ಹಾಸಿಗೆಯನ್ನು ಬಿಸಿಲಿಗೆ ಹಾಕದೆ ಹಾಗೆ ಬಿಟ್ಟು ಬಿಟ್ಟರೆ ತಿಗಣೆಯ ಉಪಟಳ ಇನ್ನು ಹೆಚ್ಚಾಗುತ್ತೆ .

 

 

ರಕ್ತ ಪಿಪಾಸು ತಿಗಣೆ ಕಾಟಕ್ಕೆ ಮನೆ ಮದ್ದುಗಳು

 

ತಲೆ ಕೂದಲು ಒಣಗಿಸುವ ಡ್ರೈಯರ್ ಬಳಸಿ ಅಥವಾ ಬಟ್ಟೆಗಳನ್ನು ಡ್ರೈಯರ್ ನಲ್ಲಿ ಹಾಕಿ ಇದರಿಂದ ಸಹ ಶಾಖ ಹೆಚ್ಚಾಗಿ ತಿಗಣೆ ಬೇಗ ಸಾಯುತ್ತದೆ.

 

 

ಬೆಡ್ ಕವರ್ , ಬೆಡ್ ಶೀಟ್ , ಟೇಕ್ ದಿಂಬಿನ ಕವರ್ ಇವುಗಳನ್ನು ಬಿಸಿ ನೀರಿಗೆ ಹಾಕಿ ಚೆನ್ನಾಗಿ ಸ್ವಚ್ಛ ಗೊಳಿಸಿ .

 

 

ಆಲ್ಕೋಹಾಲ್‌ ಅನ್ನು ಹತ್ತಿಯಲ್ಲಿ ಅದ್ದಿ ಹಾಸಿಗೆ ಮೇಲೆ ಹರಡಿ ಇದರ ಘಾಟು ವಾಸನೆಗೆ ತಿಗಣೆ ಸಾಯುತ್ತದೆ.

 

 

ನೀಲಗಿರಿ ಎಣ್ಣೆಯಲ್ಲಿ ಕ್ರಿಮಿನಾಶಕ ಅಂಶಗಳು ಹೆಚ್ಚಾಗಿದ್ದು ಸ್ಪ್ರೇ ಒಂದಕ್ಕೆ ಈ ಎಣ್ಣೆಯನ್ನು ಹಾಕಿ ತಿಗಣೆ ಇರುವ ಜಾಗಕ್ಕೆ ಸ್ಪ್ರೇ ಮಾಡಿ .

 

 

ಬೇವಿನ ಎಲೆಗಳು ಉತ್ತಮ ಕ್ರಿಮಿ ನಾಶಕವಾಗಿದ್ದು ಹಾಸಿಗೆ ತುಂಬೆಲ್ಲ ಬೇವಿನ ಎಲೆಗಳನ್ನು ಹಾಕಿಡಿ.

 

 

ಚಕ್ಕೆ ಪುಡಿಯನ್ನು ಎಣ್ಣೆಯ ಜೊತೆ ಬೆರೆಸಿ ಸ್ಪ್ರೇ ಒಂದಕ್ಕೆ ಈ ಎಣ್ಣೆಯನ್ನು ಹಾಕಿ ತಿಗಣೆ ಇರುವ ಜಾಗಕ್ಕೆ ಸ್ಪ್ರೇ ಮಾಡಿ .

 

 

ವ್ಯಾಕ್ಯೂಮ್ ಕ್ಲೀನರ್ ಬಳಸಿ ಬೆಡ್ ಕವರ್ , ಬೆಡ್ ಶೀಟ್ , ಟೇಕ್ ದಿಂಬಿನ ಕವರ್ ಇವುಗಳನ್ನು ಆಗಾಗ ಸ್ವಚ್ಛ ಮಾಡುತ್ತಾ ಇರಿ .

 

 

ಪುದಿನ ಎಲೆಗಳು ಉತ್ತಮ ಕ್ರಿಮಿ ನಾಶಕವಾಗಿದ್ದು ಹಾಸಿಗೆ ತುಂಬೆಲ್ಲ ಪುದಿನ ಎಲೆಗಳನ್ನು ಹಾಕಿಡಿ.

 

 

ಈರುಳ್ಳಿ ರಸವನ್ನು ಸ್ಪ್ರೇ ಒಂದಕ್ಕೆ ಈ ಎಣ್ಣೆಯನ್ನು ಹಾಕಿ ತಿಗಣೆ ಇರುವ ಜಾಗಕ್ಕೆ ಸ್ಪ್ರೇ ಮಾಡಿ .

 

 

ಕರ್ಪೂರ ಹಾಗು ಬೇವಿನ ಎಣ್ಣೆಯನ್ನು ಮಿಶ್ರಣ ಮಾಡಿ ಸ್ಪ್ರೇ ಒಂದಕ್ಕೆ ಈ ಎಣ್ಣೆಯನ್ನು ಹಾಕಿ ತಿಗಣೆ ಇರುವ ಜಾಗಕ್ಕೆ ಸ್ಪ್ರೇ ಮಾಡಿ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
Sachin naik says:

Thank you

To Top