fbpx
ಜೀವನ ಕ್ರಮ

ಗರುಡ ಪುರಾಣದ ಪ್ರಕಾರ ಸ್ತ್ರೀಯರು ಈ ನಾಲ್ಕು ತಪ್ಪುಗಳನ್ನು ಮಾಡಿದ್ರೆ ಘೋರ ಶಿಕ್ಷೆ ಅನುಭವಿಸುತ್ತಾರಂತೆ

ಗರುಡ ಪುರಾಣದ ಪ್ರಕಾರ ಸ್ತ್ರೀಯರು ಈ ನಾಲ್ಕು ತಪ್ಪುಗಳನ್ನು ಮಾಡಬಾರದು ಎಂದು ಹೇಳಲಾಗಿದೆ.

 

 

ಮನುಷ್ಯ ಮನುಷ್ಯನಾಗಿ ಬದುಕಬೇಕು ಅಂದರೆ ಗರುಡ  ಪುರಾಣವನ್ನು ಓದಬೇಕು ಅದರಲ್ಲಿರುವ ವಿಷಯವನ್ನು ತಿಳಿದುಕೊಳ್ಳಬೇಕು ಎಂದು ಆಧ್ಯಾತ್ಮಿಕ ಚಿಂತಕರು ಈ ರೀತಿ ತಿಳಿಸಿಕೊಡುತ್ತಾರೆ. ಇನ್ನೊಂದು ವಿಷಯ ಏನೆಂದರೆ ಕೆಲವು ವಿಷಯಗಳನ್ನು ಗರುಡ ಪುರಾಣದ ಪ್ರಕಾರ ಸ್ತ್ರೀಯರು ಮಾಡಬಾರದು ಎಂದು ಕೆಲವು ತಪ್ಪುಗಳ ಬಗ್ಗೆಯೂ ಸಹ ಉಲ್ಲೇಖವಾಗಿದೆ

1. ಯಾವುದೇ ಸ್ತ್ರೀ ಕೂಡ ಗಂಡನನ್ನು ಬಿಟ್ಟು ದೂರ ಇರಬಾರದು

 

 

ಗಂಡನಿಂದ ದೂರ ಇದ್ದರೆ ಅವರು ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಕುಗ್ಗಿ ಹೋಗುತ್ತಾರೆ. ಗಂಡನ ಜೊತೆಯಲ್ಲೇ ಇದ್ದರೆ ಸ್ತ್ರೀಯರಿಗೆ ಬದ್ಧತೆ ಸಿಗುತ್ತದೆ, ಗೌರವವೂ ಸಿಗುತ್ತದೆ, ಮತ್ತು ಸಮಾಜದಲ್ಲಿ ಒಳ್ಳೆಯ ಗೌರವ, ಹೆಸರು ಸಹ ಸಿಗುತ್ತದೆ. ಗಂಡನಿಂದ ದೂರವಾಗಿ ಜೀವನ ನಡೆಸಿದರೆ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ .

 

2. ಕೆಟ್ಟವರ ಜೊತೆ ಸಹವಾಸ ಬೇಡ.

 

 

ಸ್ತ್ರೀಯರು ಯಾವುದೇ ಕಾರಣಕ್ಕೂ  ಕೆಟ್ಟವರ ಸಹವಾಸವನ್ನು ಮಾಡಬಾರದು. ಹಾಗೆಂದು ಗಂಡಸರು ಕೆಟ್ಟ ಕೆಲಸವನ್ನು ಮಾಡಿದರೆ ಸರಿ ಎಂದು ಹೇಳುತ್ತಿಲ್ಲ. ಈ ವಿಷಯ ಹೆಚ್ಚು ಸ್ತ್ರೀಯರಿಗೆ ಸಂಬಂಧಪಟ್ಟ ವಿಷಯವಾಗಿದೆ. ಕೆಟ್ಟವರು ಒಳ್ಳೆಯವರು ಜೊತೆಗೂ ಯಾವಾಗಲೂ ಕೆಟ್ಟದಾಗಿಯೇ ವರ್ತಿಸುತ್ತಾರೆ.  ಯಾವುದೋ ಒಂದು ದಿನ ನಿಮ್ಮ ಜೊತೆಗೂ ಕೂಡ ಕೆಟ್ಟದಾಗಿ ವರ್ತಿಸಬಹುದು ಎಂದು ಗರುಡ ಪುರಾಣ ಸ್ತ್ರೀಯರಿಗೆ ಎಚ್ಚರಿಸುತ್ತದೆ. ಆದ್ದರಿಂದ ಕೆಟ್ಟವರ ಸಹವಾಸ ಎಂದಿಗೂ ಮಾಡಬಾರದು.

 

3. ಹಿರಿಯರಿಗೆ ಯಾವಾಗಲೂ ಗೌರವ ನೀಡಬೇಕು.

 

 

ಹಿರಿಯರಿಗೆ ಯಾವಾಗಲೂ ಗೌರವ ನೀಡಬೇಕು .ಮಾತಿನಲ್ಲಿ ಆಗಲಿ ಅಥವಾ ಯಾವುದೇ ಬೇರೆ ರೀತಿಯ ಮೂಲಗಳಿಂದಾಗಲಿ ಹಿರಿಯರ ಮನಸ್ಸಿಗೆ ನೋವುಂಟು ಮಾಡಬಾರದು. ಅವರಿಗೆ ತೊಂದರೆಯನ್ನು ಸಹ ಉಂಟು ಮಾಡಬಾರದು. ಹಿರಿಯರನ್ನು ಕೀಳಾಗಿ ಕಾಣಬಾರದು . ಒಂದು ವೇಳೆ ಇಂತಹ ತಪ್ಪುಗಳನ್ನು ನೀವು ಮಾಡಿದರೆ ಮುಂದೆಯೇ ಒಂದು ದಿನ ಸಮಯದಲ್ಲಿ ತುಂಬಾ ಸಮಸ್ಯೆಗಳನ್ನು ಸಹ ಎದುರಿಸಬೇಕಾಗುತ್ತದೆ .

 

4. ಸ್ತ್ರೀಯರು ಯಾವಾಗಲೂ ಬೇರೆಯವರ ಮನೆಯಲ್ಲಿ ನೆಲೆಸಬಾರದು.

 

 

ಸ್ತ್ರೀಯರಿಗೆ ಎಷ್ಟೇ ಕಷ್ಟ ಬಂದರೂ ತಮ್ಮ ಮನೆಯಲ್ಲಿಯೇ ಇರಬೇಕು. ಏನಾದರೂ ಬೇರೆ ಬೇರೆಯವರ ಮನೆಯಲ್ಲಿ ಇದ್ದರೆ ಮರ್ಯಾದೆ ಇರುವುದಿಲ್ಲ. ಅಸಭ್ಯತೆ, ನಿರ್ಲಕ್ಷ್ಯತೆ ಈ ರೀತಿಯ  ತೊಂದರೆಗಳು ತಪ್ಪಿದ್ದಲ್ಲ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಇನ್ನು ಗರುಡ ಪುರಾಣ ಮನುಷ್ಯನನ್ನು ಸಮತೋಲನದಲ್ಲಿ ಕಾಪಾಡುತ್ತದೆ .

 

ಗರುಡ ಪುರಾಣವು ತಮ್ಮ ಹಿರಿಯರು ಬರೆದಿರುವ ಒಂದು ಮಹತ್ವವಾದ ಗ್ರಂಥ. ಇದನ್ನು ಓದುವುದರಿಂದ ಮನುಷ್ಯ ತನ್ನ ಜೀವನವನ್ನು ಒಳ್ಳೆಯ ರೀತಿಯಲ್ಲಿ ಬದಲಾಯಿಸಲು ಸಾಧ್ಯವಾಗುತ್ತದೆ . ಪಂಡಿತರು ಹೇಳುವ ಪ್ರಕಾರ ಗರುಡ  ಪುರಾಣವನ್ನು ಮನೆಯಲ್ಲಿ ಇಟ್ಟುಕೊಂಡರೆ ಇದರಿಂದ  ಯಾವುದೇ ರೀತಿಯ ತೊಂದರೆಗಳು   ಆಗುವುದಿಲ್ಲ ಎಂದು ಹೇಳುತ್ತಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top