ದೇವರು

ಶುಭ ಕಾರ್ಯಕ್ಕೆ ಹೋಗುವಾಗ ಬೆಕ್ಕು ಕಂಡ್ರೆ ಬಯ್ಕೊಳೋರೆ ಜಾಸ್ತಿ, ಆದರೆ ಇಲ್ಲೊಂದು ಗ್ರಾಮ ಇದೆ ಈ ಗ್ರಮದವರಿಗೆ ಬೆಕ್ಕೆ ದೇವರು ಬೇಕ್ಕಿಗೆನೆ ಮೊದಲ ಪೂಜೆ.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಯಾವುದಾದರು ಒಂದು ಶುಭ ಕಾರ್ಯಕ್ಕೆ ಹೋಗುವಾಗ ಬೆಕ್ಕು ಕಂಡ್ರೆ ಬಯ್ಕೊಳೋರೆ ಜಾಸ್ತಿ.  ಬೇಕ್ಕು ದಾರಿಗೆ ಅಡ್ಡ ಬಂದ್ರೆ ಮುಗಿದೆ ಹೋಯ್ತು ತಾವು ಹೊರಟಿದ್ದ ಪ್ರಯಾಣವನ್ನ ಅರ್ಧಕ್ಕೆ ನಿಲ್ಲಿಸಿ ಬಿಡುತ್ತಾರೆ.ಆದರೆ ಇಲ್ಲೊಂದು ಗ್ರಾಮ ಇದೆ ಈ ಗ್ರಾಮದವರಿಗೆ ಬೆಕ್ಕೆ ದೇವರು ಬೇಕ್ಕಿಗೆನೆ ಮೊದಲ ಪೂಜೆ.

ಬೆಕ್ಕು ಅಪಶಕುನ ಎನ್ನುವವರು ನೋಡಲೇ ಬೇಕಾದ ಸ್ಟೋರಿ

ಬೆಕ್ಕಳಲೆ ಗ್ರಾಮದಲ್ಲಿ ಬೆಕ್ಕೇ ಗ್ರಾಮದೇವತೆ

ಇದು ಮಂಡ್ಯ ಜಿಲ್ಲೆ ಮದ್ದುರು ತಾಲ್ಲೂಕಿನ ಬೆಕ್ಕಳಲೆ ಗ್ರಾಮ ಹಿಂದೆ ಮಾರ್ಜಾಲಪುರ ಅಂತಾನೂ ಕರೆಯುತ್ತಿದ್ದರು. ಈ ಗ್ರಾಮಕ್ಕೆ ಬೆಕ್ಕೆ ದೇವರು. ಗ್ರಮಸ್ತರು ಶುಭ ಕಾರ್ಯಕ್ಕೆ ಹೋಗುವ ಮುನ್ನ ಅಥವಾ ಕೆಲಸ ಆರಂಭಿಸುವಮುನ್ನ ಬೆಕ್ಕಿನ ದರ್ಶನ ಪಡೆಯೋದು ಗ್ರಾಮದ ಅಲಿಖಿತ ನಿಯಮವಾಗಿದೆ.

ಹಬ್ಬ ಹರಿದಿನಗಳಲ್ಲಿ ಬೆಕ್ಕಿಗೆ ಮೊದಲ ಸ್ಥಾನ

ಗ್ರಾಮದಲ್ಲಿ ಮೂರು ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ, ಮಂಗಳವಾರ ತಮ್ಮೂರಿನ ಈ ಮೂರು ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತದೆ, ವರ್ಷಕ್ಕೊಮ್ಮೆ ಜಾತ್ರೆಕೂಡ ನಡೆಯುತ್ತದೆ.

ಬೆಕ್ಕಿನ ಎಂಜಲೇ ಈ ಗ್ರಾಮಸ್ಥರಿಗೆ ಪ್ರಸಾದ

ಪ್ರತಿ ಮನೆಯಲ್ಲೂ ಹಾಲು ಕರೆದು ಮೊದಲು ನೀಡೋದೆ ಬೆಕ್ಕಿಗೆ

ಅಷ್ಟೇ ಅಲ್ಲ  ಅಲ್ಲದೆ ಹಬ್ಬ ಹರಿದಿನಗಳಲ್ಲಿ ಬೆಕ್ಕಿಗೆ ಎಡೆ ಕೊಟ್ಟು ಬೆಕ್ಕು ಬಿಟ್ಟ ಎಂಜಲನ್ನೆ ಪ್ರಸಾಧವಾಗಿ ಸ್ವೀಕರಿಸುತ್ತಾರೆ, ಪ್ರಿ ಮನೆಯಲ್ಲೂ ಹಾಲು ಕರೆದು ಮೊದಲು ನೀಡೋದೆ  ಬೆಕ್ಕಿಗೆ. ಮತ್ತು ಅಲ್ಲಿನ ಗ್ರಾಮಸ್ಥರಿಗೆ ಬೆಕ್ಕು ಯಾವತ್ತು ಶುಭ ಶಕುನ ಅದು ಅಡ್ಡ ಬರೊದಾಗಿರಲಿ ಎದುರು ಬರೊದಾಗಿರಲಿ ಹಾಗೆ ಬಂದರೆ ಅವರ ಕೆಲಸಗಳು ಅಗೋದು ಅಂತ ಮನೋಭಾವನೆ ಅಲ್ಲಿನ ಜನಗಳದ್ದಾಗಿದೆ.

ಬೆಕ್ಕಿನ ದರ್ಶನವಿಲ್ಲದೇ ಕೆಲಸ ನಡೆಯಲ್ಲ

ಈ ಗ್ರಾಮದಲ್ಲಿ ಬೆಕ್ಕು ಸತ್ತರೆ ಮನುಷ್ಯನಂತೆ ಶವ ಸಂಸ್ಕಾರ ಮಾಡುತ್ತಾರೆ, ಹಾಗೇನೆ ಯಾರುಬೆಕ್ಕು ಒಡಿಯೊಲ್ಲ ಅಪ್ಪಿ ತಪ್ಪಿ ಹೊಡೆದವರು ಉದ್ದಾರ ಅಗಿಲ್ಲ ಎನ್ನುವುದನ್ನ ಸಾಕ್ಷಿಸಮೇತ ಬಿಚ್ಚಿಡುತ್ತಾರೆ ಗ್ರಾಮಸ್ಥರು, ಮದುವೆ ಮುಂಜಿ ಅಂತಹ ಕಾರ್ಯಗಳು ಬೆಕ್ಕಿನ ದರ್ಶನವಿಲ್ಲದೆ ನಡೆಯೋದಿಲ್ಲ ಒಟ್ಟಿನಲ್ಲಿ ಅನಿಷ್ಟಪ್ರಾಣಿ ಎಂದು ದೂರವಿಡುವಾಗ ಈ ಗ್ರಾಮಸ್ಥರು ದೇವಾತಸ್ವರುಯಾಗಿ ನೋಡುತ್ತಿರುವುದು ನಿಜಕ್ಕು ಅಚ್ಚರಿಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top