fbpx
ದೇವರು

ಬ್ರಹ್ಮದೇವನ ಶಾಪವೇ ಸ್ತ್ರೀಯರಿಗೆ ಋತುಸ್ರಾವ ಆಗುವುದಕ್ಕೆ ಕಾರಣವಂತೆ ಅದರ ಹಿಂದಿರುವ ಪುರಾಣ ಕಥೆಯನ್ನು ಕೇಳೋಣ ಬನ್ನಿ.

ಬ್ರಹ್ಮದೇವನ ಶಾಪವೇ ಸ್ತ್ರೀಯರಿಗೆ ಋತುಸ್ರಾವ ಆಗುವುದಕ್ಕೆ ಕಾರಣವಂತೆ ಆ ಪುರಾಣ  ಕಥೆಯನ್ನು ಕೇಳೋಣ ಬನ್ನಿ. ಅದರ ಹಿಂದಿರುವ  ವಿಷಯ ಏನೆಂದು ತಿಳಿಯೋಣ ಬನ್ನಿ

 

ಇಂದು ಮಹಿಳೆಯರು ಪುರುಷರು ಭುಜಕ್ಕೆ ಸಮಾನವಾಗಿ ನಡೆಯುತ್ತಾರೆ. ಆದರೆ ಮಹಿಳೆಯರು ಪುರುಷರ ರೀತಿಯಲ್ಲಿಯೇ ನಿಜವಾಗಿಯೂ ಇದ್ದಾರೆ ಎಂದು ಅಂದುಕೊಳ್ಳುವುದು ತಪ್ಪು. ನಮ್ಮ ಭಾರತ ದೇಶದ ಸಂಸ್ಕೃತಿ ಮತ್ತು ನಮ್ಮ ದೇಶದ ಅನೇಕ ವಿವಿಧ ರೀತಿಯ ಸಂಪ್ರದಾಯಗಳು ಮತ್ತು  ಆಲೋಚನೆಗಳು ಇವೆ. ಅವು ಮಹಿಳೆಯರನ್ನು ಹಿಡಿತದಲ್ಲಿ ಇಟ್ಟುಕೊಂಡಿವೆ .

 

 

ಆದರೆ ಜೈವಿಕವಾಗಿ ಮಹಿಳೆಯರು ಕೆಲವು ಸಮಸ್ಯೆಗಳನ್ನು ಎದುರಿಸುತ್ತಾರೆ ಋತುಸ್ರಾವದ ರೀತಿಯಲ್ಲಿ ಅದು ಪುರುಷರಿಗಿಂತ ಮಹಿಳೆಯರನ್ನು ಕೀಳಾಗಿ ಕಾಣುವಂತೆ ಮಾಡುತ್ತದೆ ಮತ್ತು ಕೆಲವು ಭಾಗಗಳಲ್ಲಿ ಇದು  ಮಹಿಳೆಯರಿಗೆ ಕಿರಿಕಿರಿಯನ್ನು ಸಹ ಉಂಟು ಮಾಡುತ್ತದೆ.  ಈ ವಿಷಯವನ್ನು ಸಾಮಾಜಿಕವಾಗಿ ಚರ್ಚೆಯನ್ನು ಸಹ ಮಾಡುವುದಿಲ್ಲ. ಆದರೂ ಸಹ ಜನಗಳು ಹೇಗೆ ಅವುಗಳ ಬಗ್ಗೆ ಆಲೋಚಿಸುತ್ತಾರೆ. ಇದುವರೆಗೂ ಸಹ ಋತುಸ್ರಾವದ ಬಗ್ಗೆ ಇರುವ ಅವರ ಮಾನಸಿಕ ಭಾವನೆ ಮೊದಲಿನಿಂದಲೂ ಹಾಗೇ ಇದೆ. ಅದು ಇಂದಿಗೂ ಸಹ ಬದಲಾಗಿಲ್ಲ ಮತ್ತು ಅದರಲ್ಲಿ ಯಾವ ಬದಲಾವಣೆಯೂ ಇಲ್ಲ .

ಪುರಾಣಗಳ ಪ್ರಕಾರ ಈ ಋತು ಸ್ರಾವದ ಹಿಂದೆ ಬ್ರಹ್ಮದೇವನ ಶಾಪವೇ ಈ ಸ್ತ್ರೀಯರಿಗೆ ಋತು ಸ್ರಾವ ಆಗುವುದಕ್ಕೆ ಕಾರಣ ಎಂದು ಹೇಳಲಾಗಿದೆ.ಆ ಕಥೆ ಮತ್ತು ವಿಷಯ ಏನೆಂದು ತಿಳಿಯೋಣ 

 

1.ಒಂದಾನೊಂದು ಕಾಲದಲ್ಲಿ ಗುರು ಬೃಹಸ್ಪತಿಯು ಇಂದ್ರ ದೇವನ ಮೇಲೆ ಕೋಪಗೊಳ್ಳುತ್ತಾರೆ. ಈ ಸಂದರ್ಭದಲ್ಲಿ ಆಸುರರು ಅವಕಾಶವನ್ನು ಉಪಯೋಗಿಸಿಕೊಳ್ಳಲು ಕಾಯುತ್ತಿರುತ್ತಾರೆ. ಅಸುರರು ದೇವಲೋಕವನ್ನು ಆಕ್ರಮಣ ಮಾಡುತ್ತಾರೆ. ಇಂದ್ರ ದೇವನು ಹೆದರಿ ಮತ್ತು  ಕೋಪಗೊಂಡು  ಅವನು ಅವನ ಸಾಮ್ರಾಜ್ಯದಿಂದ ಓಡಿಹೋಗುತ್ತಾನೆ.

2.ಇದಕ್ಕೆ ಪರಿಹಾರ ಹುಡುಕಲು ಇಂದ್ರ ದೇವನು ಸೃಷ್ಟಿಕರ್ತನಾದ ಬ್ರಹ್ಮದೇವನ ಬಳಿ ಹೋಗುತ್ತಾನೆ.ಆಗ ಬ್ರಹ್ಮದೇವನು ಹೇಳುತ್ತಾನೆ ನೀನು ಋಷಿಗಳ ಸೇವೆ ಮಾಡಬೇಕು ಆಗಲೇ ನಿನಗೆ ನಿನ್ನ ಸಾಮ್ರಾಜ್ಯ ಮರಳಿ ದೊರೆಯುತ್ತದೆ.

 

 

3.ಸೃಷ್ಟಿಕರ್ತನಾದ ಬ್ರಹ್ಮ ದೇವನು ಇಂದ್ರ ದೇವನಿಗೆ ಈ ರೀತಿಯಾಗಿ ಹೇಳಿದನು. ಅದು ಅವನಿಗೆ  ಅವನ ಸಾಮ್ರಾಜ್ಯವು ಮರಳಿ ಸಿಗಬೇಕೆಂದರೆ ಅವನು ಋಷಿಯ ಸೇವೆ ಮಾಡಬೇಕು. ಅವರನ್ನು ತೃಪ್ತಿಪಡಿಸಬೇಕು. ಆಗಲೇ ಅವನಿಗೆ ಸಾಮ್ರಾಜ್ಯವೂ ಮರಳಿ ಸಿಗುವುದು. ಆದ್ದರಿಂದ ಇಂದ್ರನು ಋಷಿಗಳ ಸೇವೆ ಮಾಡಲು ಪ್ರಾರಂಭಿಸಿದನು. ಆದರೆ ಇಂದ್ರ ದೇವನಿಗೆ ಋಷಿಗಳ ತಾಯಿ ಒಬ್ಬ ಅಸುರಿ ಎಂದು ತಿಳಿದಿರಲಿಲ್ಲ .ಆದ್ದರಿಂದ ಋಷಿಗಳು ಆಸುರರಿಗೆ ಸಮೀಪದಲ್ಲೇ ಇದ್ದರು .ಋುಷಿಗಳು ಹೋಮ  ಮತ್ತು ಹವನದ ವಸ್ತುಗಳನ್ನು ಅಸುರರಿಗೆ ಕೊಡುತ್ತಿದ್ದುದನ್ನು ಇಂದ್ರ ದೇವನು ಅರಿತನು. ಈ ಕಾರಣಕ್ಕಾಗಿ ಇಂದ್ರ ದೇವನು ಋಷಿಮುನಿಗಳನ್ನು ಕೊಂದನು.

4.ಗುರುಗಳನ್ನು ಮತ್ತು ಋಷಿಮುನಿಗಳನ್ನು ಕೊಲ್ಲುವುದು ಮಹಾಪಾಪವಾಗಿತ್ತು. ಆದ್ದರಿಂದ ಇಂದ್ರ ದೇವನು  ಬ್ರಾಹ್ಮಣರನ್ನು ಕೊಂದಿದ್ದಕ್ಕೆ  ಇಂದ್ರನು ತಪ್ಪು ಮಾಡಿದ್ದ ಎಂದು ಅವನ ಮೇಲೆ ಆರೋಪಿಸಲಾಗಿತ್ತು. ಈ ತಪ್ಪಿನಿಂದ ತಪ್ಪಿಸಿಕೊಳ್ಳಲು ಇಂದ್ರದೇವ ಒಂದು ವರ್ಷದವರೆಗೆ ಒಂದು ಹೂವಿನಲ್ಲಿ ಹುಳುವಾಗಿ ಅಡಗಿಕೊಂಡು ವಿಷ್ಣು ದೇವನನ್ನು ಪ್ರಾರ್ಥಿಸುತ್ತಿದ್ದನು.

 

 

5.ಭಗವಂತನಾದ ಶ್ರೀ ವಿಷ್ಣು ದೇವನು ಕೊನೆಗೂ ಇಂದ್ರನನ್ನು ರಕ್ಷಿಸಿದ. ವಿಷ್ಣು ದೇವನು ಇಂದ್ರನ ಪ್ರಾರ್ಥನೆಯನ್ನು ಕೇಳಿ ಆರೋಪ ಮುಕ್ತಗೊಳಿಸುವುದಕ್ಕೆ ಒಂದು ಸಲಹೆಯನ್ನು ನೀಡಿದನು.ಇಂದ್ರ ದೇವನ ಮೇಲಿರುವ ಈ ತಪ್ಪನ್ನು ಬೇರೆ ಬೇರೆ ನಾಲ್ಕು ಭಾಗಗಳನ್ನಾಗಿ ವಿಂಗಡಿಸಿ ಆ ತಪ್ಪಿನ ಭಾಗವನ್ನು  ಅಂದರೆ ಶಿಕ್ಷೆಯ ಪ್ರಮಾಣವಾಗಿ ಪಾಲನ್ನು ಮರಗಳಿಗೆ, ಭೂಮಿಗೆ, ನೀರಿಗೆ ಮತ್ತು  ಸ್ತ್ರೀಯರಿಗೆ ಕೊಡಲೆಂದು ಬ್ರಹ್ಮದೇವನಿಗೆ ಹೇಳಿದನು. ಅದರ ಜೊತೆಗೆ ಒಂದು ಆಶೀರ್ವಾದವನ್ನು ಸಹ ನೀಡಲು ಸಹ ಹೇಳಿದನು. ಈ ರೀತಿಯ ಸಲಹೆ ಕೊಟ್ಟಿದ್ದು ಭಗವಂತನಾದ ಶ್ರೀವಿಷ್ಣು.

6. ಮರಗಳಿಗೂ ಶಾಪ ದೊರೆಯಿತು.

ಮೊದಲನೇ ಕಾಲು ಭಾಗದಷ್ಟು ಶಾಪವನ್ನು ಮರಗಳಿಗೆ ನೀಡಲಾಗಿದೆ. ಇದರ ಬದಲಾಗಿ ಮರಗಳಿಗೆ ಆಶೀರ್ವಾದವೂ ಸಹ ದೊರೆಯಿತು. ಅದೇನೆಂದರೆ ಮರಗಳು ಯಾವಾಗ ಬೇಕೋ ಆವಾಗ ಮರಳಿ ಮತ್ತೆ ಪುನರ್ಜೀವ ಪಡೆಯಬಹುದೆಂದು.

 

 

7.ಎರಡನೆಯ ಕಾಲು ಭಾಗದ ಶಿಕ್ಷೆಯನ್ನು ನೀರಿಗೆ ಕೊಡಲಾಗಿದೆ.

ಎರಡನೆಯ ಕಾಲುಭಾಗ  ಶಿಕ್ಷೆಯನ್ನು ನೀರಿಗೆ ಶಾಪ ನೀಡಿದಾಗ .ಇದರ ಬದಲಾಗಿ ಆಶೀರ್ವಾದವಾಗಿ ಈ ಇಡೀ ವಿಶ್ವದಲ್ಲಿಯೇ ಶುದ್ಧಿ ಮಾಡುವ ಗುಣ ಇರುವುದು ನೀರಿಗೆ. ಆದ್ದರಿಂದಲೇ ಹಿಂದೂ ಧರ್ಮದಲ್ಲಿ ಮತ್ತು ಹಿಂದೂ ಸಂಪ್ರದಾಯದಲ್ಲಿ ನೀರನ್ನು ಪರಿಶುದ್ಧ ಎಂದು ಪರಿಗಣಿಸಲಾಗಿದ್ದು. ಯಾವುದೇ ಶುಭ ಕಾರ್ಯ ಮತ್ತು ಮಂಗಳ ಕಾರ್ಯಗಳನ್ನು ಆರಂಭಿಸುವ ಮುನ್ನ ಎಲ್ಲವನ್ನೂ ನೀರಿನಿಂದ ಶುದ್ಧಿ ಮಾಡಲಾಗುತ್ತದೆ .

8.ಭೂಮಿಗೂ ಸಹ ಶಾಪ ನೀಡಲಾಯಿತು.

ಶಾಪದ ಮೂರನೇ ಭಾಗವನ್ನು ಭೂಮಿಗೂ ಸಹ ನೀಡಲಾಯಿತು. ಇದರ ಬದಲಾಗಿ ಭೂಮಿಯಲ್ಲಿ ಇರುವ  ಮಣ್ಣಿಗೆ ಗುಣಪಡಿಸುವ ಶಕ್ತಿ ದೊರೆಯಿತು.

 

9.ಶಾಪದ ಉಳಿದ ಕಾಲು ಭಾಗ ಅಂದರೆ ನಾಲ್ಕನೇ ಭಾಗದಲ್ಲಿ ಮಹಿಳೆಯರಿಗೆ ಋತುಸ್ರಾವ ದೊರೆಯಿತು.

ಸ್ತ್ರೀಯರಿಗೆ ಕೂಡ ಈ ಶಾಪ ದೊರೆಯಿತು. ನಾಲ್ಕನೇ ಭಾಗದ ಶಾಪವು ಸ್ತ್ರೀಯರಿಗೆ ಋತುಸ್ರಾವ ಆಗಲೆಂದು ಶಾಪವೂ ದೊರೆಯಿತು. ಇದರ ಬದಲಾಗಿ ಒಂದು ವರವನ್ನು ಸಹ ಕರುಣಿಸಲಾಯಿತು ಅದೇನೆಂದರೆ ಮಕ್ಕಳನ್ನು ಹಡೆಯುವುದು ಮತ್ತು ಆ ವರದಿಂದ ತಾಯಿಯೂ ತನ್ನ ತಾಯ್ತನದ ಸುಖವನ್ನು ಖುಷಿಯಾಗಿ ಆ ಸಮಯವನ್ನು ಕಳೆದು, ಕೆಲಸದಲ್ಲಿಯೂ ಸಹ ಪುರುಷರಿಗಿಂತ ಹೆಚ್ಚಾಗಿಯೇ, ಚೆನ್ನಾಗಿ ಕೆಲಸ ಮಾಡುವುದು.

ಇದು ಪುರಾತನ ಕಾಲದ ಜನರು ಈ ರೀತಿಯಾಗಿ ಋತುಸ್ರಾವದ ಹಿಂದಿರುವ ಕಾರಣವನ್ನು   ಹೇಳಿದ್ದಾರೆ. ಹಾಗೆ ಪುರಾಣಗಳಲ್ಲೂ ಸಹ ಇದೇ ರೀತಿ ಉಲ್ಲೇಖವಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top