fbpx
ದೇವರು

ಮನುಷ್ಯನು ಸತ್ತ ಮೇಲೆ ಯಮಲೋಕಕ್ಕೆ ತಲುಪುವುದೇ 47 ದಿನದ ಪ್ರವಾಸ ಆ ಭಯಾನಕ ಪ್ರಯಾಣದ ಬಗ್ಗೆ ತಿಳ್ಕೊಂಡ್ರೆ ಬೆಚ್ಚಿಬೀಳ್ತಿರಾ

ಮನುಷ್ಯನು ಸತ್ತ ಮೇಲೆ ಯಮಲೋಕದೊಳಗೆ ಹೋಗುವ ದಾರಿ ಸಾವು ಮತ್ತು  ನೋವುಗಳಿಂದ ಕೂಡಿದೆ.

 

 

ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯೂ ಸಹ ಒಂದಲ್ಲ ಒಂದು ದಿನ ಸಾಯಲೇಬೇಕು. ಹುಟ್ಟು ನಿಶ್ಚಿತ ಹಾಗೆಯೇ ಸಾವು ಖಚಿತ.ಇದರಿಂದ ಯಾರೂ ಕೂಡ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಇದು ಸಾವು ಮಾತ್ರವೇ ?  ಅಥವಾ ಅದಕ್ಕಿಂತಲೂ ಏನಾದರೂ ಜಾಸ್ತಿ ನೋವು ಆಗುತ್ತದೆಯೇ ?  ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ .

ನಾವು ಸತ್ತ ನಂತರ ನಮ್ಮ ದೇಹಗಳೊಂದಿಗೆ ನಾವು ಶವವನ್ನು ಹೊಂದಿರುತ್ತೇವೆ. ನಾವು ಸತ್ತ ನಂತರ ನಮ್ಮ ಆತ್ಮವು ಶರೀರವನ್ನು ಬಿಟ್ಟು  ಬೇರೆಯಾಗುತ್ತದೆ. ಆಗ ಆ ದೇಹವನ್ನು ನಾವು ಶವ ಎಂದು ಕರೆಯುತ್ತೇವೆ. ಅಂತಹ ಶವವನ್ನು ನಾವು ಭೂಮಿಯ ಹೊಳಗೆ ಮಣ್ಣಿನಲ್ಲಿ ಹೂತು ಹಾಕಲಾಗುತ್ತದೆ. ಅಥವಾ ಬೆಂಕಿಯಲ್ಲಿ ಸುಟ್ಟು ಹಾಕಲಾಗುತ್ತದೆ. ಅದು ಸುಟ್ಟು  ಬೂದಿಯಾಗುತ್ತದೆ. ಇದರಲ್ಲಿ ಅತಿ ದೊಡ್ಡ ಪ್ರಶ್ನೆ ಎಂದರೆ ಸತ್ತ ನಂತರ ದೇಹವು ಸಂಪೂರ್ಣವಾಗಿ ಸುಟ್ಟು ಹೋಗುವುದು ಅಥವಾ ನಾಶವಾಗುವುದು. ಆದರೆ ಸತ್ತ ನಂತರ ನಿಜವಾಗಿಯೂ ಜೀವನ ಇದೆಯೇ ?

ಆದರ ಬಗ್ಗೆ  ಹೀಗೆ ಹೇಳಲಾಗುತ್ತದೆ. ಒಳ್ಳೆಯ ಮನುಷ್ಯರು ಸತ್ತ ನಂತರ ಸ್ವರ್ಗವನ್ನು ಪಡೆಯುತ್ತಾರೆ.  ಸ್ವರ್ಗವೇ ಪರಿಪೂರ್ಣತೆಯ ಸ್ಥಳ ಆದ್ದರಿಂದ ಎಲ್ಲರೂ  ಒಳ್ಳೆಯವರಾಗಿರಲು ಸಾಧ್ಯವೇ ?

 

 

ಪುರಾಣ ಹಿಂದೂ ಗ್ರಂಥಗಳ ಪ್ರಕಾರ ಈ ಭೂಮಿಯ ಮೇಲೆ ಹುಟ್ಟಿದವರು ಜೀವನದಲ್ಲಿ ಯಾರು ಒಳ್ಳೆಯ ಕೆಲಸ ಮಾಡುತ್ತಾರೋ ಅವರು ನೇರವಾಗಿ ಸೀದಾ ಸ್ವರ್ಗಕ್ಕೇ ಹೋಗುತ್ತಾರೆ. ಯಾರು ಪಾಪ ಕರ್ಮಗಳನ್ನು ಮಾಡುತ್ತಾರೋ ಅವರು ನರಕಕ್ಕೆ ಹೋಗುತ್ತಾರೆ  ಎಂದು ಹೇಳಲಾಗುತ್ತದೆ. ಯಮರಾಜನು ಸಾವಿನ ದೇವರು ಅವನು ಎಲ್ಲರ ಹಣೆ ಬರಹವನ್ನು ನಿರ್ಧರಿಸುತ್ತಾನೆ ಮತ್ತು ಸತ್ತ ಮೇಲೆ ಕೊನೆಗೆ ಸೇರುವುದು ಸ್ವರ್ಗ ಅಥವಾ ನರಕವೇ ಆಗಿರುವುದು.

ಆದ್ದರಿಂದ ಹೇಗೆ ಯಮಲೋಕಕ್ಕೆ ಆತ್ಮವೂ ತಲುಪುವುದು. ಈ ಕಥೆ ಈ ರೀತಿಯಾಗಿದೆ.

 ಸತ್ತ ನಂತರ ಯಮಲೋಕಕ್ಕೆ ತಲುಪುವುದೇ 47 ದಿನದ ಪ್ರವಾಸ.

ಇದನ್ನು  ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಹೀಗೆ ಪ್ರತಿಯೊಬ್ಬ ಮನುಷ್ಯನು ಸತ್ತ ನಂತರ ಕೊನೆಯ ತೀರ್ಪು ಸ್ವರ್ಗ ಅಥವಾ ನರಕ.

ಯಮಲೋಕಕ್ಕೆ ಪ್ರವಾಸ 47 ದಿನಗಳು.

1. ಮನುಷ್ಯನು ಸಾಯುವುದಕ್ಕಿಂತ ಮುಂಚೆ ಅವನಿಗೆ ಮಾತನಾಡಲು ಸಾಧ್ಯವಾಗುವುದಿಲ್ಲ. ಆದರೆ ಆ ಮನುಷ್ಯನು ಅವರ ಸಂಪೂರ್ಣ ಜೀವನವನ್ನು ತಿಳಿಯಬಹುದು.

 ಗರುಡ ಪುರಾಣದ ಪ್ರಕಾರ ಯಾವ ವ್ಯಕ್ತಿಯೂ ಸಾವಿಗೆ ಸಮೀಪವಾಗಿದ್ದಾನೋ ಅವನಿಗೆ ಮಾತನಾಡಲು ಸಾಧ್ಯವಾಗುವುದಿಲ್ಲ. ಅವನು ಮಾತನಾಡಬೇಕೆಂದರೆ ಸಹ ಮಾತನಾಡಲು ಆಗುವುದೇ ಇಲ್ಲ. ಮನುಷ್ಯನ ಜೀವನದ ಕೊನೆಯ ಗಳಿಗೆಯಲ್ಲಿ  ದಿವ್ಯ ದೃಷ್ಟಿಯೂ ಜಾಗೃತಗೊಳ್ಳುವುದು. ಆಗ ಅವನು ಸಂಪೂರ್ಣ ವಿಶ್ವವನ್ನು ಅರ್ಥ ಮಾಡಿಕೊಳ್ಳುತ್ತಾನೆ .ಮನುಷ್ಯನ ಎಲ್ಲಾ ಪಂಚೇಂದ್ರಿಯಗಳು ನಾಶವಾಗಿ  ಸಾವಿನ ಸ್ಥಿತಿಯಲ್ಲಿ ಅವನ ದೇಹವು ಕಠಿಣವಾಗುವುದು .

 

 

2.ಈ ಸಮಯದಲ್ಲಿ ಯಮರಾಜನು ಕಳಿಸಿರುವ ಯಮದೂತರನ್ನು ಸಹ ಅವನು ನೋಡಬಹುದು .

ಸಾವಿನ ಕೊನೆಯ ಗಳಿಗೆಯಲ್ಲಿ ಬಾಯಿಯಿಂದ ಎಂಜಲು ಹೊರಗೆ ಸ್ರವಿಸಲು ಪ್ರಾರಂಭವಾಗುವುದು. ಸಾಯುವ ಪ್ರತಿಯೊಬ್ಬ ಮನುಷ್ಯನೂ ಸಹ ಯಮ ದೂತರನ್ನು ಕಾಣಬಹುದು. ಅವರು ನೋಡಲು ಭಯಾನಕವಾಗಿರುತ್ತಾರೆ. ಮುಖ ತುಂಬಾ ವಿಚಾರವಾಗಿರುತ್ತದೆ . ಅವರನ್ನು ಗರುಡ ಪುರಾಣದಲ್ಲಿ ಕಾಗೆಯ ಬಣ್ಣದ ರೀತಿಯಲ್ಲಿ ಕಪ್ಪು ಬಣ್ಣವನ್ನು ಹೊಂದಿರುತ್ತಾರೆ ಎಂದು ವರ್ಣಿಸಲಾಗಿದೆ. ಅವರ ಉಗುರುಗಳು ಅವರಿಗೆ ಅವರ ಅಸ್ತ್ರಗಳಾಗಿ ಇರುತ್ತವೆ. ಅವರು ನೋಡುವ ದೃಷ್ಟಿಯೂ ಸಹ ಭಯಂಕರವಾಗಿರುತ್ತದೆ. ಈ ಭಯದಿಂದ ಸಾಯುವ ವ್ಯಕ್ತಿಯ ಮೂತ್ರವನ್ನು ಮತ್ತು ಮಲವನ್ನು ಹೊರಹಾಕುತ್ತಾನೆ. ಕೊನೆಗೆ ಸಾವಿಗೆ ಶರಣಾಗಿ ಸಾವನ್ನಪ್ಪುತ್ತಾನೆ.

3.ಯಮದೂತರು ಸತ್ತ ವ್ಯಕ್ತಿಯ ಆತ್ಮವನ್ನು ತಕ್ಷಣವೇ  ಅಲ್ಲಿಂದ ಯಮ ಪಾಶದಿಂದ ಹಿಡಿದುಕೊಂಡು ತೆಗೆದುಕೊಂಡು ಹೋಗುತ್ತಾರೆ.

 

 

4.ಅವರು ಹೋಗುವ ದಾರಿಯಲ್ಲಿ ಆತ್ಮವೂ ಸುಸ್ತಾಗಿ ಅದಕ್ಕೆ ವಿಶ್ರಾಂತಿ ತೆಗೆದುಕೊಳ್ಳುವುದಕ್ಕೂ ಸಹ ಅವಕಾಶವನ್ನೂ ಕೊಡುವುದಿಲ್ಲ .

ಯಮದೂತರು ನಿಜವಾಗಿಯೂ ಆತ್ಮಗಳಿಗೆ ಭಯ ಪಡಿಸುತ್ತಾರೆ ಮತ್ತು ಕಷ್ಟದ ಸಮಯವನ್ನು ಸಹ ಆತ್ಮಗಳು ಎದುರಿಸುತ್ತಿರುತ್ತವೆ .ಆತ್ಮಕ್ಕೆ ಯಮರಾಜನ ಆದೇಶದ ಮೇರೆಗೆ ನರಕ ಅಥವಾ ಸ್ವರ್ಗ ಪ್ರಾಪ್ತಿಯಾಗುತ್ತದೆ .

5. ಯಮಲೋಕದ ಬಗ್ಗೆ ಭಯಂಕರ ಕಥೆಗಳನ್ನು ಕೇಳಿ ಆತ್ಮವು ಜೋರಾಗಿ ಅಳುವುದಕ್ಕೇ ಪ್ರಾರಂಭ ಮಾಡುತ್ತದೆ. ಆದರೆ ಯಮದೂತರು ಈ ಸಮಯದಲ್ಲಿ ಆತ್ಮಕ್ಕೆ ಯಾವುದೇ ಕರುಣೆಯನ್ನು ಸಹ ತೋರಿಸುವುದಿಲ್ಲ .

ಈ ಭೂಮಿಯ ಮೇಲೆ ಜೀವಂತವಾಗಿ ಇರುವ ಸಮಯದಲ್ಲಿ ಆತ್ಮವು ಭೂಮಿಯ ಮೇಲೆ ದೇಹದೊಳಗೆ ಇದ್ದಾಗ ಯಾವ ಯಾವ ರೀತಿಯ ತಪ್ಪುಗಳನ್ನು ಪಾಪಕರ್ಮಗಳನ್ನು ಮಾಡಿದ್ದಾರೆಂದು ನೆನಪಿಸಿಕೊಳ್ಳುತ್ತಾರೆ. ಗರುಡ ಪುರಾಣದ ಪ್ರಕಾರ ಬಾಯಿಂದ ಒಂದು ತಪ್ಪನ್ನು ಮಾತನಾಡಿದರೂ ಸಹ ಅದು ಪಾಪ ಮಾಡಿದಂತೆಯೇ ಎಂದು ಯಮರಾಜನು ಹೇಳುತ್ತಾನೆ. ಈ ಪ್ರಕಾರ ಜನರು ಸುಳ್ಳನ್ನ ಆಡಿದರೂ ಸಹ ಅದು ತಪ್ಪೇ ಮಹಾ ಅಪರಾಧವೇ. ತಾವು ಮಾಡಿದ ತಪ್ಪನ್ನು ಕ್ಷಮಿಸಲು ಜನರು ಯಾರು ದೇವರಿಗೆ ಪೂಜೆ ಮತ್ತು ಪ್ರಾರ್ಥನೆಯನ್ನು  ಸಲ್ಲಿಸುವುದಿಲ್ಲವೋ ಅಂತಹವರಿಗೂ ಸಹ ಮೋಕ್ಷವೂ ದೊರೆಯುವುದಿಲ್ಲ. ಹಾಗೆ ಸ್ವರ್ಗವೂ ಸಹ ಪ್ರಾಪ್ತಿಯಾಗುವುದಿಲ್ಲ. ಕೊಲೆ, ಸುಲಿಗೆ, ದರೋಡೆ ಹಾಗೂ ಇನ್ನು ಇತ್ಯಾದಿ ತಪ್ಪುಗಳನ್ನು ಕೂಡ ಮಾಡುವವರಿಗೂ ಸಹ ಎಂದಿಗೂ ಕೂಡ ಕ್ಷಮಿಸಲು ಸಾಧ್ಯವಿಲ್ಲ. ಅವು ಏನೇ ಆಗಿದ್ದರೂ ಸಹ ಕ್ಷಮಿಸುವುದಿಲ್ಲ.

 

 

6.ಯಮದೂತರು ತಕ್ಷಣ  ಆತ್ಮಗಳನ್ನು ಕರೆದುಕೊಂಡು ಹೋಗುತ್ತಿರುವ ದಾರಿಯಲ್ಲಿ ಚಾಟಿಯಿಂದ ಹೊಡೆಯುತ್ತಾರೆ.

ಆತ್ಮಕ್ಕೆ ಹಸಿವಾಗಿ ಹೊಟ್ಟೆ ಹಸಿದುಕೊಂಡು ಉಪವಾಸ ವಿರಬೇಕಾಗುತ್ತದೆ. ಹಾಗೆ ಬೆಂಕಿಯಂತೆ ಸುಡುತ್ತಿರುವ ಮಣ್ಣಿನ ಮೇಲೆ ನಡೆದಾಡಲು ಸಹ ಆಗುವುದಿಲ್ಲ. ಈ ಸಮಯದಲ್ಲಿಯೇ ಯಮದೂತರು ಆತ್ಮಕ್ಕೆ ಚಾಟಿಯಿಂದ ಒಡೆಯಲು ಪ್ರಾರಂಭಿಸುತ್ತಾರೆ. ಆತ್ಮವು ಅನೇಕ ಬಾರಿ ಕೆಳಗೆ ಬೀಳುತ್ತದೆ. ಮೂರ್ಛೆ ಹೋಗುತ್ತದೆ. ಮತ್ತೆ ಪುನಃ ಎದ್ದು ನಡೆಯಲು ಪ್ರಯತ್ನ ಮಾಡುತ್ತಾರೆ .

 

 

7.ಯಮಲೋಕದಲ್ಲಿ ಯಮರಾಜನು ಆತ್ಮವನ್ನು ಪುನಃ ಸತ್ತ ಸ್ಥಳಕ್ಕೆ ಸ್ವಲ್ಪ ಸಮಯದವರೆಗೆ ಮರಳಿ ವಾಪಸ್ ಕಳುಹಿಸುತ್ತಾನೆ .

ಯಮರಾಜನು ಆತ್ಮದ ಹಣೆಬರಹವನ್ನು ನಿರ್ಧರಿಸಿದ ನಂತರ ಮತ್ತೆ ಅದು ಎಲ್ಲಿ ಇರಬೇಕೆಂದು ಕೊನೆಗೆ ನಿರ್ಧರಿಸಿ ನಂತರ ಆತ್ಮವನ್ನು ಸತ್ತ ಸ್ಥಳಕ್ಕೆ ದೇಹವಿರುವ ಸ್ಥಳಕ್ಕೆ ಕಳುಹಿಸುತ್ತಾನೆ. ಆತ್ಮವನ್ನು ಏಕೆ ಪುನಃ ಕಳುಹಿಸುತ್ತಾರೆ ಎಂದರೆ ಅವರ ಪರಿವಾರದವರು ಸಂಬಂಧಿಕರು  ಆತ್ಮಕ್ಕೆ ಶಾಂತಿ ಸಿಗಲೆಂದು ಪೂಜೆ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ ಅವುಗಳನ್ನು ಸ್ವೀಕರಿಸಲು ಯಮರಾಜನು ಭೂಮಿಯ ಮೇಲೆ ಆತ್ಮಗಳನ್ನು ಕಳಿಸುತ್ತಾನೆ .ಅವರ ಪರಿವಾರದವರು ಸರಿಯಾಗಿ ಸಂಪ್ರದಾಯ ಬದ್ಧವಾಗಿ ಎಲ್ಲ ಆಚರಣೆಗಳನ್ನು ಮಾಡಿ ಶ್ರದ್ಧಾ ಕಾರ್ಯವನ್ನು ಪಿಂಡ ಪ್ರದಾನ ಮಾಡಿದರೆ ಆಗ ಆತ್ಮವು ಯಮಲೋಕಕ್ಕೆ ತಿರುಗಿ ಮರಳಿ ಬರುವುದು.ಆದರೆ ತಮ್ಮ ಪರಿವಾರದವರು ಸರಿಯಾದ ಮಾರ್ಗದಲ್ಲಿ ಶ್ರದ್ಧಾ ಕಾರ್ಯಗಳನ್ನು ಮಾಡದೇ ಹೋದಲ್ಲಿ ಆತ್ಮವು ಅಲ್ಲೇ ತಿರುಗಾಡುತ್ತಾ, ಅಲೆದಾಡುತ್ತಾ, ಶಾಂತವಾದ ಸ್ಥಳಗಳಾದ ನದಿ ,ಕಾಡುಗಳಲ್ಲಿ  ತಿರುಗಾಡುತ್ತಾ ಇರುತ್ತದೆ .

 

 

ಗರುಡ ಪುರಾಣದ ಪ್ರಕಾರ ಮನುಷ್ಯನು ಸತ್ತ ನಂತರ ಅವರ ಪರಿವಾರದವರು ಪಿಂಡ ಪ್ರದಾನ ಮತ್ತು ಶ್ರದ್ಧಾ ಕಾರ್ಯವನ್ನು ಹತ್ತು ಅಥವಾ ಹನ್ನೊಂದು ದಿನಗಳ ಒಳಗಾಗಿ ದಾನಮಾಡಬೇಕು ಹಾಗೆ ಮಾಡಿದರೆ ಮಾತ್ರ ಆತ್ಮಕ್ಕೆ ಶಾಂತಿ ಸಿಗುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top