fbpx
ಸಮಾಚಾರ

ಕಾಂಗ್ರೆಸ್ ಪಕ್ಷದ ಮುಖ್ಯ ಆಧಾರ ಕಂಬಗಳಲ್ಲಿ ಒಬ್ಬರಾಗಿ ಕೆ.ಪಿ.ಸಿ.ಸಿ ಪ್ರೆಸಿಡೆಂಟ್ ಆಗಿ ಸತತ 7 ವರ್ಷ ಪೂರೈಸಿದ ಡಾ. ಪರಮೇಶ್ವರ್ ರವರ ಬಗ್ಗೆ ತಿಳ್ಕೊಳ್ಳಿ

ಪರಮೇಶ್ವರ್  ನಾಯಕತ್ವದಲ್ಲಿ ಚುನಾವಣೆ ನಡೆದರೆ ಕಾಂಗ್ರೆಸ್ ಗೆಲ್ಲುವ ಕುದುರೆಯಾಗುವುದು ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ ,

29 ವರ್ಷಗಳ ಅವಧಿಯಲ್ಲಿ ರೇಷ್ಮೆ ಕೃಷಿ, ಉನ್ನತ ಶಿಕ್ಷಣ ಮತ್ತು ಇತ್ತೀಚೆಗೆ ಗೃಹ ಸಚಿವರಾಗಿ ಮತ್ತು ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಪಕ್ಷದ (ಕೆಪಿಸಿಸಿ) ಅಧ್ಯಕ್ಷರಾಗಿ ಸತತ 7 ವರ್ಷ ಸೇವೆ ಸಲ್ಲಿಸಿದ್ದಾರೆ.

 

 

ಡಾ. ಜಿ. ಪರಮೇಶ್ವರ್ ಆಸ್ಟ್ರೇಲಿಯಾ ವಿಶ್ವವಿದ್ಯಾನಿಲಯದಲ್ಲಿ ಪ್ಲ್ಯಾಂಟ್ ಫಿಸಿಯಾಲಜಿಯಲ್ಲಿ ಪಿ.ಎಚ್.ಡಿ ಮಾಡಿದ್ದಾರೆ , ತಮಗಿರುವ ವಿದ್ಯಾಭ್ಯಾಸ ಹಾಗು ಅನುಭವಗಳ ಮೂಲಕ ಜನರ ಜೀವನವನ್ನು ಸುಧಾರಿಸುವ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ , ಕಳೆದ ನಾಲ್ಕು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಅಡಿಯಲ್ಲಿ “ಮನೆ ಮನೆಗೆ ಕಾಂಗ್ರೆಸ್ ” ಎಂಬ ಶೀರ್ಷಿಕೆಯಡಿ ಜನ ಮನ ತಲುಪುವ ಪ್ರಯತ್ನವನ್ನು ಮಾಡುತ್ತಾ ಬಂದಿದ್ದಾರೆ .

 

ಹಿಂದುಳಿದವರ ಪರ ವಿಶೇಷ ಕಾಳಜಿ :

 

ತುಮಕೂರುನಿಂದ 5 ಕಿ.ಮೀ ದೂರದಲ್ಲಿರುವ ಹಳ್ಳಿಯಲ್ಲಿ ಹುಟ್ಟಿದ ಪರಮೇಶ್ವರ್ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ್ದರು , ಆ ದಿನಗಳಲ್ಲಿ ದೇವಾಲಯದ ಆವರಣದಲ್ಲಿ ಶಾಲೆಗಳು ನಡೆಯುತ್ತಿದ್ದವು ಅದಕ್ಕೆ ‘ಚಾವಡಿ’ ಎಂದು ಕರೆಯಲಾಗುತ್ತಿತ್ತು , ಇತರ ಸಮುದಾಯಗಳ ಮಕ್ಕಳು ಒಳಗೆ ಕುಳಿತು ಅಧ್ಯಯನ ನಡೆಸಿದರೆ ದಲಿತ ಮಕ್ಕಳನ್ನು ಹೊರಗೆ ಕುಳಿಸಿ ಪಾಠ ಹೇಳಿಕೊಡಲಾಗಿತ್ತು ,  ಪರಮೇಶ್ವರ್ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಹೊರಗೆ ಕುಳಿತು ಬಹಳ ಚಿಕ್ಕ ವಯಸ್ಸಿನಲ್ಲೆ ದಲಿತರ ಮೇಲಿನ ದೌರ್ಜನ್ಯ  ,ತಾರತಮ್ಯವನ್ನು ಕಂಡಿದ್ದರು

ಹಳ್ಳಿಯಲ್ಲಿ ಪ್ರಾಥಮಿಕ ಶಾಲೆ ಮಾತ್ರ ಇದ್ದ ಕಾರಣ ಪರಮೇಶ್ವರ್  ಹಾಗು ಅವರ ಅಕ್ಕ 2 ಕಿ.ಮೀ ದೂರ ನಡೆದು ಇನ್ನೊಂದು ಹಳ್ಳಿಯಲ್ಲಿರುವ ಶಾಲೆಗೆ ಹೋಗುತ್ತಿದ್ದರು.

ನಂತರ ಪರಮೇಶ್ವರ್ ಅವರ ತಂದೆ ಸ್ವಂತ ಖರ್ಚಿನಲ್ಲಿ ಸಿದ್ದಾರ್ಥ  ಗ್ರಾಮೀಣ ಪ್ರೌಢ ಶಾಲೆ ಸ್ಥಾಪಿಸಿ ಹಳ್ಳಿ ಮಕ್ಕಳಿಗೆ  ಉಚಿತವಾಗಿ ಪಾಠ ಹೇಳಿಕೊಡಲು ಪ್ರಾರಂಭಿಸಿದರು.

 

 

ತಂದೆಯ ಆದರ್ಶಗಳೇ ಸ್ಪೂರ್ತಿ :

 

ಪರಮೇಶ್ವರ್ ಅವರ ತಂದೆ ಸ್ವಲ್ಪ ಕಾಲ ರಾಜಕೀಯದಲ್ಲಿದ್ದರು ನಂತರ ಸಂಪೂರ್ಣವಾಗಿ  ಶೈಕ್ಷಣಿಕ ಸಂಸ್ಥೆಗಳಿಗೆ ಭಾರಿ ಕೊಡುಗೆ ನೀಡುತ್ತಾ ಹೋದರು , ಗಾಂಧಿವಾದ, ಅಂಬೇಡ್ಕರರ ತತ್ವ ಸಿದ್ಧಾಂತಗಳಲ್ಲಿ ಭಾರಿ ನಂಬಿಕೆ ಇಟ್ಟಿದ್ದರು , ‘ಭೂದಾನ’ ಚಳವಳಿಯ ಹರಿಕಾರ ಆಚಾರ್ಯ ವಿನೋಬಾ ಭಾವೆ ಅವರ ದೇಶದಾದ್ಯಂತ ಚಳವಳಿಯ ಸಂಚಲನೆ ಸೃಷ್ಟಿಸಿ ಪ್ರಯಾಣಿಸುತ್ತಿದ್ದಾಗ ಗ್ರಾಮಸ್ಥರು ಮತ್ತು ಅವರ ಅನುಯಾಯಿಗಳು ಪಾಲ್ಗೊಂಡ ಸಭೆಗಳಲ್ಲಿ ಪರಮೇಶ್ವರ್ ಅವರ ತಂದೆಯು ಇದ್ದರು ಅವರನ್ನು ಕುರಿತು ವಿನೋಬಾ ಭಾವೆ  ‘ದಲಿತರ ಈ ಅಭಿಯಾನವನ್ನು ಮುನ್ನಡೆಸಲು ಗಾಂಧೀಜಿಯವರು ಈಗ ಬದುಕಿಲ್ಲ ನೀವು ಈ ಹೋರಾಟವನ್ನು ನಿಮ್ಮ ಪರಿಮಿತಿಯಲ್ಲಿ ಮುನ್ನಡೆಸುವಿರಾ ? ದಲಿತರ ಉದ್ಧಾರಕ್ಕೆ ಏನು ಮಾಡುವಿರಿ? ಎಂದರಂತೆ,  ಇದೆ ವಿಷಯವಾಗಿ ತಮ್ಮ ಆಲೋಚನೆಯನ್ನು ದಲಿತರ ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ ಮುಡಿಪಾಗಿಟ್ಟರು ಪರಮೇಶ್ವರ್ ಅವರ ತಂದೆ ,ಹೀಗೆ ತಂದೆಯಿಂದ ಮಗನಿಗೆ ಆದರ್ಶಗಳು ಬಳುವಳಿಯಾಗಿ ಬಂದವು.

 

ಸಾಮಾನ್ಯ ಹಳ್ಳಿಯ ಹುಡುಗನಿಗೆ ಆಸ್ಟ್ರೇಲಿಯಾ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ :

ಈಗಿನ ರಾಜಕಾರಣಿಗಳಿಗೆ ಹೋಲಿಸಿದರೆ ಅತಿ ಹೆಚ್ಚು ವಿದ್ಯಾಭ್ಯಾಸ ಮಾಡಿದವರು ಡಾಕ್ಟರ್ ಪರಮೇಶ್ವರ್ ,ಓದಿನಲ್ಲಿ ಮುಂದಿದ್ದ ಪರಮೇಶ್ವರ್ ನ್ಯಾಷನಲ್  ಓವರ್ಸೀಸ್  ಸ್ಕಾಲರ್ಷಿಪ್ ನಡಿಯಲ್ಲಿ ಆಸ್ಟ್ರೇಲಿಯಾಗೆ ಹೋಗಿ ಡಾಕ್ಟರೇಟ್ ಪಡೆದುಕೊಂಡರು ಹಲವಾರು ಸಂಶೋಧನಾ ಪತ್ರಿಕೆಗಳನ್ನು  ವಿದ್ಯಾರ್ಥಿಗಳ ಸಮಾವೇಶಗಳಿಗಾಗಿ , ಅನೇಕ ಅಂತರಾಷ್ಟ್ರೀಯ ಸಮಾವೇಶಗಳಿಗಾಗಿ ಬರೆದಿದ್ದರು , ಪ್ರಾಧ್ಯಾಪಕ ಪ್ರಬಂಧವನ್ನು ಮಂಡಿಸಿದ್ದರು ,  ಡಾಕ್ಟರೇಟ್ ಪದವಿ ಪಡೆದ ನಂತರ ವಿಶ್ವದ ನಾಲ್ಕು ಮಹಾ ವಿಶ್ವವಿದ್ಯಾಲಯಗಳಾದ

ಅಲ್ಬೆರ್ಟಾ, ಕೆನಡಾ ಮೆಲ್ಬರ್ನ್ (ಆಸ್ಟ್ರೇಲಿಯಾ), ಯುಸಿಎಲ್ಎ, ಕ್ಯಾಲಿಫೋರ್ನಿಯಾ ಮತ್ತು ಫ್ರಾನ್ಸ್ ಗಳಲ್ಲಿ ಪೋಸ್ಟ್ ಡಾಕ್ಟರಲ್ ಫೆಲೋಷಿಪ್ ಪಡೆದರು , ಇದು ಒಬ್ಬ ಸಾಮಾನ್ಯ ಹಳ್ಳಿಯ ಹುಡುಗನಾಗಿ ಸಾಧಿಸಿದ ಹೆಮ್ಮೆಯ ವಿಷಯ !

 

ತಾಯ್ನಾಡು ಸ್ವರ್ಗ :

 

ಇಷ್ಟು ಓದಿದರೂ ಸಹ ನಾಲ್ಕೂವರೆ ವರ್ಷದ ನಂತರ ರಜೆಗೆಂದು ಭಾರತಕ್ಕೆ ಬಂದು ಮರಳಿ ವಿದೇಶಕ್ಕೆ ಹೋಗದೆ ತಂದೆಯ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಶುರು ಹಚ್ಚಿಕೊಂಡರು , ಅದು ಕೇವಲ ೨೦ ಸಾವಿರ ಸಂಬಳಕ್ಕೆ !

 

ಒಲಿಂಪಿಕ್ಸ್ ಗಾಗಿ ನಡೆಸಿದ ಕಸರತ್ತು !

 

ಹೌದು ಡಾಕ್ಟರ್ ಪರಮೇಶ್ವರ್ ರವರು ಅಂತರ ವಿಶ್ವವಿದ್ಯಾನಿಲಯ ಅಥ್ಲೆಟಿಕ್ ಚಾಂಪಿಯನ್ಶಿಪ್ನಲ್ಲಿ ದಾಖಲೆ (10.9 ಸೆಕೆಂಡ್) ನಿರ್ಮಿಸಿದ್ದಾರೆ , ವಿಶ್ವ ಅಂತರ ವಿಶ್ವವಿದ್ಯಾನಿಲಯ ಅಥ್ಲೆಟಿಕ್ ಚಾಂಪಿಯನ್ಶಿಪ್ನಲ್ಲಿ ಪಾಲ್ಕೊಂಡಿದ್ದರು ಈ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು ಇದು ಒಲಿಂಪಿಕ್ಸ್ ಸ್ಪರ್ಧೆಯ ತರಬೇತಿ ಪಡೆಯುವಂತೆ ಮಾಡಿತು ಆದರೆ ಪರಮೇಶ್ವರ್ ನ್ಯಾಷನಲ್  ಓವರ್ಸೀಸ್  ಸ್ಕಾಲರ್ಷಿಪ್ ನಡಿಯಲ್ಲಿ ಆಸ್ಟ್ರೇಲಿಯಾಗೆ ಹೋಗಬೇಕಾದ್ದರಿಂದ ಓದಿಗೆ ಒತ್ತುಕೊಟ್ಟು ಈ ಪ್ರಯತ್ನವನ್ನು ಕೈಬಿಡಬೇಕಾಯಿತು.

 

ರಾಜಕೀಯ ಆಕಸ್ಮಿಕ :

 

ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರು ನಮ್ಮ ಟ್ರಸ್ಟ್ ಸ್ಥಾಪಿಸಿದ್ದ ಆಸ್ಪತ್ರೆ ಉದ್ಘಾಟಿಸಲು ಬಂದಿದ್ದರು , ಡಾಕ್ಟರ್ ಪರಮೇಶ್ವರ್ ರವರನ್ನು ಪ್ರಭಾವಿತರಾದ ರಾಜೀವ್ ಕಾಂಗ್ರೆಸ್ ಸೇರಲು ಆಹ್ವಾನ ನೀಡಿದರು ಹೀಗೆ ರಾಜಕೀಯಕ್ಕೆ ಸೇರಿದ್ದು ಆಕಸ್ಮಿಕ

1993 ರಲ್ಲಿ, ಕ್ಯಾಬಿನೆಟ್ನಲ್ಲಿ ಕೆಲವು ಬದಲಾವಣೆಗಳ ನಂತರ ಅಂತಿಮವಾಗಿ ಶ್ರೀ ಎಂ ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾದರು ಹಾಗು ಡಾಕ್ಟರ್ ಪರಮೇಶ್ವರ್ ರೇಷ್ಮೆ ಕೃಷಿ ಸಚಿವರಾದರು, ಅದೇ ಮೊದಲ ಬಾರಿಗೆ ಕೇವಲ ಎಂಎಲ್ಎ ಆಗಿದ್ದವರೊಬ್ಬರು ಸಚಿವರಾಗಿದ್ದು ಅಪರೂಪದ ವಿದ್ಯಮಾನವಿದು !

 

 

ರಾಜ್ಯಕ್ಕೆ ಕೊಡುಗೆಗಳು :

 

1999 ರಲ್ಲಿ ನಾನು ರಾಜ್ಯದಲ್ಲಿ ಅತ್ಯಧಿಕ ಅಂತರದಿಂದ ಗೆದ್ದು  ಶ್ರೀ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಆಯ್ಕೆಯಾಗಿದ್ದರು

“ಐಟಿ” ಉದ್ಯೋಗದಲ್ಲಿ ಭಾರಿ ಕ್ರಾಂತಿ ಉಂಟಾಗಿತ್ತು ಆ ಸಮಯದಲ್ಲಿ ಶ್ರೀ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದು, ಡಾ. ಪರಮೇಶ್ವರ ಉನ್ನತ ಶಿಕ್ಷಣಕ್ಕಾಗಿ ಸಚಿವರಾಗಿದ್ದರು.ನಾಸ್ಕಾಂ ಮೆಕಿನ್ಸೆ 35 ಲಕ್ಷ ಸಾಫ್ಟ್ವೇರ್ ಎಂಜಿನಿಯರ್ಗಳನ್ನು ರಚಿಸುವಂತೆ ಭಾರತ ಸರಕಾರಕ್ಕೆ ವರದಿಯನ್ನು ಸಲ್ಲಿಸಿತು ಬಲವಾದ ನೀತಿಗಳನ್ನು ರಚಿಸುವ ಮೂಲಕ ಮತ್ತು ಹೆಚ್ಚಿನ ಎಂಜಿನಿಯರಿಂಗ್ ಕಾಲೇಜುಗಳನ್ನು ತೆರೆಯುವ ಮೂಲಕ ಕರ್ನಾಟಕವು ಈ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡಿತು, ಇದರ ಪರಿಣಾಮವಾಗಿ ಹಲವಾರು ಬಹುರಾಷ್ಟ್ರೀಯ ಕಂಪನಿಗಳು ಬೆಂಗಳೂರಿಗೆ ಬರುವುದನ್ನು ಪ್ರಾರಂಭಿಸಿತು ಈ ಯೋಜನೆಯ ಬಹುಪಾಲು ರೂವಾರಿ ಡಾಕ್ಟರ್ ಪರಮೇಶ್ವರ್ ಎಂದರೆ ತಪ್ಪಾಗಲಾರದು.

 

ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡಾಗ, ಡಾ. ಪರಮೇಶ್ವರ  ಸ್ಥಳೀಯ ಗಸ್ತು ಮತ್ತು ಹೆದ್ದಾರಿ ಗಸ್ತು ತಿರುಗುವಿಕೆಗಾಗಿ ಆಧುನಿಕ ಶಸ್ತ್ರಾಸ್ತ್ರ ಸೇರಿದಂತೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ಮೂಲಕ ಪೊಲೀಸ್ ಇಲಾಖೆಯನ್ನು ಬಲಪಡಿಸುವ ಸಲುವಾಗಿ ಕೆಲಸ ಮಾಡಿದರು. ಪೊಲೀಸ್ ಇಲಾಖೆಯಲ್ಲಿ ಕ್ರಮಬದ್ಧವಾದ ವ್ಯವಸ್ಥೆಯನ್ನು ಜಾರಿಗೆ ತಂದರು.

 

ಡಾ. ಪರಮೇಶ್ವರ  ‘ರೂಪಾಂತರಾ’ ಎಂಬ ಅಪರಾಧಿಗಳ  ಪುನರ್ವಸತಿ ಮತ್ತು ಕುಟುಂಬದೊಂದಿಗೆ  ಸಮನ್ವಯ ಸಾಧಿಸುವ ವಿನೂತನ ಯೋಜನೆಗೆ ಚಾಲನೆ ನೀಡಿದರು ,ಸೆರೆಮನೆಯ ವಾಸ ಮುಗಿಸಿ ಮತ್ತೆ ತಮ್ಮ ಜೀವನ ರೂಪಿಸಿಕೊಳ್ಳಲು ಗಾರ್ಮೆಂಟ್ಸ್ , ಕೃಷಿ, ಬೇಕರಿ, ಪೀಠೋಪಕರಣ ಉದ್ಯಮ ಮತ್ತು ಇತರ ಸಣ್ಣ-ಪ್ರಮಾಣದ ಕೈಗಾರಿಕೆಗಳಾದ ಸೋಪ್ ಅಥವಾ ಮೇಣದಬತ್ತಿ ತಯಾರಿಕೆಯಂತ ಉದ್ಯಮಗಳ ತರಬೇತಿ ನೀಡಲಾಯಿತು ಜೈಲು ತೊರೆದಾಗ ಈ ಕೌಶಲ್ಯಗಳನ್ನು ಬಳಸಿ ಮರಳಿ ಜೀವನ ಕಟ್ಟಿಕೊಳ್ಳಬಹುದು ಎಂಬ ಉದ್ದೇಶ ಇದಾಗಿತ್ತು , ಇದಕ್ಕಾಗಿಯೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪೂರ್ಣ ತಂತ್ರಾಂಶ ಪ್ರಯೋಗಾಲಯವನ್ನು ಸ್ಥಾಪಿಸಲಾಯಿತು.

 

ವಿಧಾನಸಭೆಗೆ 1989, 1999, ಮತ್ತು 2004 ರಲ್ಲಿ  ಮಧುಗಿರಿಯನ್ನು ಪ್ರತಿನಿಧಿಸಿ  2008 ರಲ್ಲಿ ಕೊರಟಗೆರೆಯನ್ನು ಪ್ರತಿನಿಧಿಸಿ ನಾಲ್ಕು ಬಾರಿ ಚುನಾಯಿತರಾಗಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾಗಿ 7 ವರ್ಷ ಪೂರೈಸಿ ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಕೆಪಿಸಿಸಿ ಅಧ್ಯಕ್ಷರೊಬ್ಬರು 7 ವರ್ಷಗಳು ಪೂರ್ಣಗೊಳಿಸಿದ್ದು ಇದೆ ಮೊದಲು ,  ಎರಡು ಬಾರಿ ಪಕ್ಷ ಚುನಾವಣೆ ಎದುರಿಸಿದೆ .

 

ಈ ಎಲ್ಲ ಸಾಧನೆಗಳನ್ನು ಗಮನಿಸುತ್ತಿರುವ ಕಾಂಗ್ರೆಸ್ ಪಕ್ಷದ ಬಹುಪಾಲು ಮಂದಿ ಹಾಗು ಜನರು ಡಾ. ಪರಮೇಶ್ವರ ಸಿ.ಎಂ ಆಗಲು ಸೂಕ್ತ ಎಂದು ಭಾವಿಸುತ್ತಿದ್ದಾರೆ ..

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top