fbpx
ಸಮಾಚಾರ

ಸಿಎಂ ಮನವಿಯ ನಂತರ ಹತ್ತು ಲಕ್ಷ ರೂಪಾಯಿ ಪರಿಹಾರ ಪಡೆದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ.

ಸಿಎಂ ಮನವಿಯ ನಂತರ ಹತ್ತು ಲಕ್ಷ ರೂಪಾಯಿ ಪರಿಹಾರ ಪಡೆದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ.

 

 

ಕೆಲವು ದಿನಗಳ ಹಿಂದೆ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ರವರ ಜೀವನ ನಿರ್ವಹಣೆಗಾಗಿ ಮತ್ತು ಅವರಿಗೆ ಅಭದ್ರತೆ ಕಾಡದಿರಲಿ ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು 10 ಲಕ್ಷ ರೂ. ಹಣವನ್ನ ತಮ್ಮ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೀಡಲು ನಿರ್ಧಾರ ಮಾಡಲಾಗಿತ್ತು. ಆದರೆ ಸರ್ಕಾರಿಂದ ವೈದ್ಯಕೀಯ ಪರಿಹಾರ ಪಡೆಯವುದು ಬೇಡ ಎಂದು ತಿಮ್ಮಕ್ಕ ಪರಿಹಾರವನ್ನು ಪಡೆಯಲು ಒಪ್ಪಿಕೊಂಡಿರಲಿಲ್ಲ.

 

 

“ನನ್ನ ಚಿಕಿತ್ಸೆಗಾಗಿ ಆಸ್ಪತ್ರೆ ಖರ್ಚು ವೆಚ್ಚಗಳನ್ನು ಭರಿಸುವಂತೆ ಸರ್ಕಾರಕ್ಕೆ ಕೇಳಿರಲಿಲ್ಲ ಮತ್ತು ಸರ್ಕಾರ ಕೂಡ ಚಿಕಿತ್ಸಾ ವೆಚ್ಚ ಭರಿಸಿಲ್ಲ. ನನ್ನ ಮಗ, ಸಂಬಂಧಿಕರು, ಸ್ನೇಹಿತರು ಸಾಲ ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಸರ್ಕಾರದಿಂದ ತಿಂಗಳಿಗೆ 500 ರೂಪಾಯಿ ದುಡ್ಡು ಬರುತ್ತದೆ ಅದನ್ನು ಬಿಟ್ಟರೆ ಸರ್ಕಾರದ ಕಡೆಯಿಂದ ಈವರೆಗೂ ಒಂದು ರೂಪಾಯಿಯನ್ನೂ ಪರಿಹಾರವಾಗಿ ಪಡೆದಿಲ್ಲ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವೈದ್ಯಕೀಯ ಪರಿಹಾರವಾಗಿ 10 ಲಕ್ಷ ರೂ. ನೀಡಲು ತೀರ್ಮಾನಿಸಿರುವುದಾಗಿ ಚೆಕ್ ತೆಗೆದುಕೊಳ್ಳಿ ಎಂದು ನಮಗೆ ಪತ್ರ ಬಂದಿತ್ತು ಆದರೆ ಸರ್ಕಾರಿಂದ ವೈದ್ಯಕೀಯ ಪರಿಹಾರ ಪಡೆಯವುದು ಬೇಡ ಪಡೆದಿಲ್ಲ” ಎಂದು ತಿಮ್ಮಕ್ಕ ಹೇಳಿದ್ದರು.

 

 

ಕೆಲ ದಿನಗಳ ಹಿಂದಷ್ಟೇ ಉಸಿರಾಟ ಸಮಸ್ಯೆಯಿಂದಾಗಿ ಸಾಲುಮರದ ತಿಮ್ಮಕ್ಕ ಅವರು ಆಸ್ಪತ್ರೆಗೆ ದಾಖಲಾಗಿದ್ದರು ಆಗಲೂ ಪರಿಹಾರವನ್ನು ಸ್ವೀಕಾರ ಮಾಡಲು ತಿಮ್ಮಕ್ಕ ನಿರ್ಧರಿಸಿದ್ದರಿಂದ ನಂತರ ಸ್ವತಃ ಸಿಎಂ ಸಿದ್ದರಾಮಯ್ಯನವರೇ ತಿಮ್ಮಕ್ಕನವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಈ ವೇಳೆ ಆರೋಗ್ಯದ ದೃಷ್ಟಿಯಿಂದ ಸಾಲುಮರದ ತಿಮ್ಮಕ್ಕ ಅವರ ಮನವೊಲಿಸಿ ಚೆಕ್ ಮೂಲಕ ರೂ.10 ಲಕ್ಷವನ್ನು ನೀಡಿದ್ದಾರೆಂದು ಮೂಲಗಳು ತಿಳಿಸಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top