fbpx
ಕನ್ನಡ

ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಕನ್ನಡದ ಡಿಂಡಿಮ ಮೊಳಗಿಸುತ್ತಿರುವ ಅಧಿಕಾರಿಗಳು

ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಕನ್ನಡದ ಡಿಂಡಿಮ ಮೊಳಗಿಸುತ್ತಿರುವ ಅಧಿಕಾರಿಗಳು

 

ಕರ್ನಾಟಕ ರಾಜ್ಯೋತ್ಸವದ ಹಿನ್ನಲೆಯಲ್ಲಿ ಪೂರ್ವಭಾವಿ ತಯಾರಿಗಾಗಿ ಸಭೆ ನಡೆಸಿದ ಬಳ್ಳಾರಿ ಜಿಲ್ಲಾಧಿಕಾರಿಗಳು ನವೆಂಬರ್ ಒಂದನೇ ತಾರೀಕಿನಿಂದ ಸತತ ಒಂದು ವಾರಗಳ ಕಾಲ
ಜಿಲ್ಲೆಯ ಎಲ್ಲ ಚಿತ್ರ ಮಂದಿರಗಳಲ್ಲಿ ಕನ್ನಡ ಸಿನಿಮಾಗಳನ್ನು ಪ್ರದರ್ಶನ ಮಾಡಬೇಕು , ಈ ಆದೇಶ ಪಾಲನೆ ಆಗದೆ ಉಳಿದ ಪಕ್ಷದಲ್ಲಿ ಥಿಯೇಟರ್ ಗಳ ಲೈಸನ್ಸ್ ನವೀಕರಿಸುವುದಿಲ್ಲ ಆದ್ದರಿಂದ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಎಚ್ಚರಿಕೆ ನೀಡಿದರು .

 

ಅಷ್ಟೇ ಅಲ್ಲದೆ ಖಾಸಗಿ ಶಾಲಾ ಕಾಲೇಜುಗಳಲ್ಲೂ ನವೆಂಬರ್ ಒಂದನೇ ತಾರೀಕಿನಂದು ಕರ್ನಾಟಕ ರಾಜ್ಯೋತ್ಸವ ಖಡ್ಡಾಯ , ಇಲ್ಲವಾದಲ್ಲಿ ಶಾಲಾ-ಕಾಲೇಜುಗಳ ಪರವಾನಿಗೆ ರದ್ದುಗೊಳಿಸುವುದರ ಬಗ್ಗೆ ಯೋಚನೆ ಮಾಡಬೇಕಾದೀತು

ಮುಂದಿನ ವರ್ಷ ೨೦೧೮ ರಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಸರ್ಕಾರದ ಅನುಮತಿ ಪಡೆದು ಹಂಪಿಯಲ್ಲಿ ಆಚರಿಸುವ ಆಲೋಚನೆ ಇದೆ ಎಂದು ತಿಳಿಸಿದ್ದಾರೆ.

ಮತ್ತೊಬ್ಬ ಹೆಮ್ಮೆಯ ಕನ್ನಡಿಗ 2017 ಜೂನ್ ನಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಸಭೆಯಲ್ಲಿ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ನಾಡಗೀತೆ ಮೊಳಗಿತು ಚುನಾವಣಾ ಅಧಿಕಾರಿಯಾಗಿದ್ದ ಡಿಸಿ ಜಯರಾಂ ಪಾಲಿಕೆಯಲ್ಲಿ ನಾಡಗೀತೆ ನುಡಿಸಲು ಸೂಚಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.

 

ಸರ್ಕಾರದ ಯಾವುದೇ ಕಾರ್ಯಕ್ರಮ ಆರಂಭವಾದಾಗ ನಾಡಗೀತೆಯಿಂದ ಸಭೆ ಆರಂಭವಾಗಿ ರಾಷ್ಟ್ರ ಗೀತೆಯೊಂದಿಗೆ ಮುಕ್ತಾಯ ಆಗುತ್ತದೆ ಈ ಸಮಯದಲ್ಲಿ ಎಲ್ಲರೂ ಎದ್ದು ನಿಲ್ಲಬೇಕು ಎಂದು ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top