fbpx
ಮನೋರಂಜನೆ

ಬಿಗ್ ಬಾಸ್ ಮನೆಯಲ್ಲಿ ಗಾಯಕ ಚಂದನ್ ಶೆಟ್ಟಿಗೆ ಲವ್ ಸಿಗ್ನಲ್ ಬರ್ತಿದೆಯಂತೆ !

ಬಿಗ್ ಬಾಸ್ ಮನೆಯಲ್ಲಿ ಗಾಯಕ ಚಂದನ್ ಶೆಟ್ಟಿಗೆ ಲವ್ ಸಿಗ್ನಲ್ ಬರ್ತಿದೆಯಂತೆ !

 

 

ಕಳೆದ ಎರಡು ವಾರಗಳಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸುತ್ತಿರುವ ಗಾಯಕ ಚಂದನ್ ಶೆಟ್ಟಿ ಸಾಮಾನ್ಯರು ಹಾಗು ಸೆಲೆಬ್ರಿಟಿ ಗಳ ಯಾವುದೇ ಗುಂಪಿಗೆ ಸೇರದೆ ಇಬ್ಬರ ಜೊತೆಯಲ್ಲಿ ಚೆನ್ನಾಗಿ ಇದ್ದಾರೆ , ಈ ವಾರದ ಕಿಚ್ಚನ ಜೊತೆ ಮಾತು ಕಥೆ ಕಾರ್ಯಕ್ರಮದಲ್ಲಿ ಸದಾ ಹುಡುಗೀರ ಜೊತೆ ಇದ್ದುಕೊಂಡು ಸೇವೆ ಮಾಡಿಸಿಕೊಳ್ಳುತ್ತಿರುವ ಜಗನ್‌ ಅವರ ಕಾಲು ಎಳೆದ ಸುದೀಪ್ ‘ನಿಮ್ಮನ್ನು ನೋಡಿದ ಮೇಲೆ ಮೊದಲ ಬಾರಿಗೆ ನನಗೆ ಬಿಗ್ ಬಾಸ್ ಮನೆಯ ಸ್ಪರ್ಧಿಯಾಗಬೇಕು’ ಅನ್ನಿಸುತ್ತದೆ ಎಂದು ಕಾಲೆಳೆದರು ,ಅಷ್ಟೇ ಅಲ್ಲದೆ ಜೆಕೆ ಯವರಿಗೆ ಲವ್‌ ಸಿಗ್ನಲ್‌ಗಳು ಬರುತ್ತಿವೆ ಎಂಬ ಎಚ್ಚರಿಕೆ ಕೊಟ್ಟರು .

 

 

ನೆನ್ನೆ ರಾತ್ರಿ 12.30 ಕ್ಕೆ ಚಂದನ್‌, ಜಗನ್‌ ಹಾಗೂ ಆಶಿತಾ ಲೈಟ್ ಆಫ್ ಆದ ಮೇಲೆ ಮಾತಾಡುತ್ತಾ ಕುಳಿತಿದ್ದರು ಆಗ ಚಂದನ್‌ ‘ನನಗೆ ಲವ್ ಆಗುತ್ತೆ ಅನ್ನಿಸುತ್ತಿದೆ’ ಎಂದು ಹೇಳಿಕೊಂಡರು , ಇದಕ್ಕೆ ಪ್ರತಿಕ್ರಿಯಿಸಿದ ಆಶಿತಾ ನಿವೇದಿತಾ ಗೌಡ ಹೆಸರನ್ನು ತೆಗೆದರು ಇದಕ್ಕೆ ಇಲ್ಲ ಎಂದು ಹೇಳಿದ ಚಂದನ್ ನಾಚಿ ನೀರಾದರು .

ಅಂತೂ ಇಂತೂ ಬಿಗ್ ಬಾಸ್ ಮನೆಯಲ್ಲಿ ಇನ್ನೊಂದು ಲವ್ ಸ್ಟೋರಿ ಹುಟ್ಟಿಕೊಳ್ಳುವ ಎಲ್ಲ ಸೂಚನೆಗಳು ಸಿಕ್ಕಿವೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top