fbpx
ದೇವರು

ಜಾತಕ ದೋಷ , ಕುಟುಂಬದಲ್ಲಿ ಆರ್ಥಿಕ ಸಮಸ್ಯೆ ಕಳೆದು ಒಳ್ಳೆ ದಿನಗಳು ಬರ್ಬೇಕಂದ್ರೆ ತೆಂಗಿನ ಕಾಯಿ ಬಳಸಿ ಹೀಗೆ ಮಾಡಿ

ಒಂದು ತೆಂಗಿನಕಾಯಿ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

 

ಸಾತ್ವಿಕ ಆಚರಣೆಗೆ ,ಸಾತ್ವಿಕ ಪೂಜೆ, ಧಾರ್ಮಿಕ ಕಾರ್ಯಗಳು ಸೇರಿದಂತೆ ಎಲ್ಲಾ ಮಂಗಳ ಕಾರ್ಯಗಳು ಮತ್ತು ಶುಭ ಕಾರ್ಯಗಳಲ್ಲಿ ತೆಂಗಿನ ಕಾಯಿಯೂ ಪ್ರಮುಖ ಪಾತ್ರ ವಹಿಸುತ್ತದೆ.

 

 

ತೆಂಗಿನಕಾಯಿ ಪೂಜೆಗೆ ಮಾತ್ರ ಶ್ರೇಷ್ಠವಲ್ಲ ಬದಲಾಗಿ ನಕಾರಾತ್ಮಕ ಶಕ್ತಿಯನ್ನು ಹೊರದೋಡಿಸುವ ಶಕ್ತಿಯನ್ನು ಸಹ ಹೊಂದಿದೆ .ವಿವಿಧ ವಿಧಾನಗಳ ಮೂಲಕ ನಮ್ಮ ಜೀವನದ ಅನೇಕ ಸಮಸ್ಯೆಗಳನ್ನು ಒಂದು ತೆಂಗಿನ ಕಾಯಿಯಿಂದ ಬಗೆಹರಿಸಿಕೊಳ್ಳಬಹುದಾಗಿದೆ.

ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ಅದರ ಮೇಲೆ ಕುಂಕುಮದಿಂದ ಸ್ವಸ್ತಿಕ್ ಚಿಹ್ನೆಯನ್ನು ಬರೆದು ಹನುಮಂತ ದೇವರ ದೇವಸ್ಥಾನದಲ್ಲಿ ಅರ್ಪಿಸಿದ ನಂತರ ತಕ್ಷಣವೇ ಶುಭ ಫಲ ಪ್ರಾಪ್ತಿಯಾಗಲಿದೆ.

 

ಜಾತಕ ದೋಷ

ಒಂದು ವೇಳೆ ನಮ್ಮ ಜಾತಕದಲ್ಲಿ ಶನಿ ದೋಷ, ರಾಹು, ಕೇತು, ದೋಷವಿದ್ದರೆ ಸರ್ಪದೋಷ ದಂತಹ ಮಾರಕ ದೋಷಗಳಿದ್ದರೆ…. ಒಂದು ಒಣಗಿದ ತೆಂಗಿನ ಕಾಯಿಯನ್ನು ತೆಗೆದುಕೊಳ್ಳಬೇಕು.

 

 

ಅದನ್ನು ಬಾಯಿಯ ಆಕಾರದಲ್ಲಿ ಕತ್ತರಿಸಿ ಅದರೊಳಗೆ ಐದು ವಿಧದ ಒಣಗಿದ ಹಣ್ಣುಗಳು ಹಾಗೂ ಐದು ಸಕ್ಕರೆ ಅಚ್ಚನ್ನು ಹಾಕಿ ನಂತರ ಆ ತೆಂಗಿನಕಾಯಿಯ ಬಾಯಿಯನ್ನು ಮುಚ್ಚಬೇಕು.

ಅಶ್ವತ್ಥ ಮರದ ಕೆಳಗೆ ಅಂದರೆ ಅರಳಿ ಮರದ ಕೆಳಗೆ ಮಣ್ಣನ್ನು ಅಗೆದು ಅಲ್ಲಿ ಈ ತೆಂಗಿನ ಕಾಯಿಯನ್ನು ಮುಚ್ಚಿ ಬರಬೇಕು. ಹೀಗೆ ಮಾಡಿ ಬರುವಾಗ ಅದನ್ನು ಯಾವುದೇ ಕಾರಣಕ್ಕೂ ತಿರುಗಿ ಹಿಂದೆ ನೋಡಬಾರದು .

ಕುಟುಂಬದಲ್ಲಿ ಆರ್ಥಿಕ ಸಮಸ್ಯೆ ಕಾಡುತ್ತಾ ಇದ್ದಲ್ಲಿ…….

 

 

ಶುಕ್ರವಾರ ಲಕ್ಷ್ಮೀ ದೇವಿಯ ದೇವಸ್ಥಾನಕ್ಕೆ ಹೋಗಿ ಜುಟ್ಟು ಇರುವ ತೆಂಗಿನ ಕಾಯಿಯನ್ನು ಗುಲಾಬಿ ಹೂವು   ಮತ್ತು ಕಮಲದ ಹೂವಿನ ಮಾಲೆಯನ್ನು ಅರ್ಪಿಸಿ. ನಂತರ ಬಿಳಿ ಬಟ್ಟೆಯನ್ನು ಅದರ ಜೊತೆಗೆ ಮೊಸರನ್ನು ಸಮರ್ಪಿಸಬೇಕು. ನಂತರ ದೇವಿಗೆ ಪೂಜೆ ಮಾಡಿ ಕರ್ಪೂರದ ಆರತಿಯನ್ನು ಭಕ್ತಿ ಶ್ರದ್ಧೆಯಿಂದ ಬೆಳಗಬೇಕು .

ಹೀಗೆ ಒಂದು ತೆಂಗಿನ ಕಾಯಿ ನಮ್ಮ ಜೀವನದಲ್ಲಿ ನಾವು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿ ಉಪಯೋಗಿಸಿಕೊಳ್ಳಬಹುದು ಅವು ಸುಲಭವಾಗಿ ಪರಿಹಾರವಾಗುವವು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top