fbpx
ದೇವರು

ಶ್ರೀಕೃಷ್ಣನು ಹಸ್ತಿನಾವತಿಗೆ ಕೌರವರ  ಬಳಿ ಸಂಧಾನಕ್ಕೆ ಬಂದರೆ ದುರ್ಯೋಧನನ ದೂತರು ಶ್ರೀ ಕೃಷ್ಣನನ್ನೇ ಬಂಧಿಸಲು ಹೋದರು .

ಶ್ರೀಕೃಷ್ಣನು ಹಸ್ತಿನಾವತಿಗೆ ಕೌರವರ  ಬಳಿ ಸಂಧಾನಕ್ಕೆ ಬಂದರೆ ದುರ್ಯೋಧನನ ದೂತರು ಶ್ರೀ ಕೃಷ್ಣನನ್ನೇ ಬಂಧಿಸಲು ಹೋದರು .

 

 

ಶ್ರೀಕೃಷ್ಣನು ಹಸ್ತಿನಾವತಿಗೆ ಬರುವ ವಿಷಯವನ್ನು ತಿಳಿದ ದುರ್ಯೋಧನನ್ನು ಅವನನ್ನು ಸಹ ತುಂಬಿದ ಸಭೆಯಲಿ ಅವಮಾನಿಸಬೇಕೆಂದು ಬಯಸಿದನು.ಶ್ರೀಕೃಷ್ಣನು ಹಸ್ತಿನಾವತಿಗೆ ಬರುತ್ತಾನೆ ಎಂದು ತಿಳಿದ ಜನರು ವಿವಿಧ ರೀತಿಯಿಂದ ಮನೆಗಳನ್ನು ಸಿಂಗರಿಸಿ ರಂಗವಲ್ಲಿ ಹಾಕಿ ಅಂದ ಗೊಳಿಸಿದರು . ಸ್ವಾಗತ ಮಂಟಪಗಳನ್ನು ರಚಿಸಿದರು. ಕೃಷ್ಣನ ಬರುವಿಕೆಗಾಗಿ ಕಾದು ನಿಂತರು.

ಶ್ರೀಕೃಷ್ಣನ ಸ್ವಾಗತಕ್ಕಾಗಿ ಧೃತರಾಷ್ಟ್ರನೂ ಸಹ ಭಾರಿ ಪ್ರಮಾಣದಲ್ಲಿ ಸಂಭ್ರಮದಿಂದ ವ್ಯವಸ್ಥೆ ಮಾಡಿಸಿದನು. ಆನೆ ,ಕುದುರೆ ,  ರತ್ನಾಬರಣಗಳನ್ನು ಕೊಡಲು ಬಯಸಿದನು ಅದನ್ನೆಲ್ಲಾ ಕಂಡ ವಿದುರನು ಅಣ್ಣಾ ಇದನ್ನೆಲ್ಲಾ ಕೊಡುವುದಕ್ಕಿಂತಲೂ ಕೃಷ್ಣನನ್ನು ಸಂತಸ ಪಡಿಸಬೇಕು ಎಂದರೆ ಅವನು  ಕೇಳುವುದನ್ನು ಕೊಡು ಎಂದನು.ಪಾಂಡವರಿಗೆ ರಾಜ್ಯ ಕೊಡಿಸಿದರೆ ಅದರಿಂದಲೇ ಕೃಷ್ಣನು ತೃಪ್ತನಾಗುವನು ಎಂದು ವಿದುರನು ಸ್ಪಷ್ಟವಾಗಿ ಹೇಳಿದರೂ ದೃತರಾಷ್ಟ್ರನು ಆ ಬಗ್ಗೆ ಚಿಂತಿಸದೇ ಬೇರೆ ತಯಾರಿಯನ್ನೇ  ನಡೆಸಿದನು.

 

 

ಶ್ರೀಕೃಷ್ಣನು ಹಸ್ತಿನಾವತಿಗೆ ಬಂದಾಗ ಭೀಷ್ಮ ದ್ರೋಣ ಮುಂತಾದವರು ಭರ್ಜರಿ ಸ್ವಾಗತವನ್ನು ನೀಡಿದರು. ರಾಜಮಾರ್ಗದಲ್ಲಿ ಜನರು ಭಾರೀ ಪ್ರಮಾಣದಲ್ಲಿ ಸೇರಿದ್ದರೂ ಎಲ್ಲರಿಗೂ ಶುಭ ಹಾರೈಸುತ್ತಾ ಕೃಷ್ಣನು ಅವರು ಅರ್ಪಿಸಿದ ಹೂಮಾಲೆಗಳನ್ನು ಸ್ವೀಕರಿಸಿದರು ವಿದುರನ ಮನೆಗೆ ಪ್ರವೇಶಿಸಿದ ಕೃಷ್ಣನು ಕೌರವರನ್ನು ಭೇಟಿಯಾಗಲು ಸಮಯವೂ ಯಾವಾಗ ಎಂದು ಕೇಳಿ ಬರಲು  ಕಳಿಸಿದನು.

ದುರ್ಯೋಧನನು ವೈಭವದ ಅರಮನೆಯ ಸಭಾಂಗಣದಲ್ಲಿಯೇ ಕುಳಿತಿದ್ದನು. ಧೃತರಾಷ್ಟ್ರನು ನಮನ ಸಲ್ಲಿಸಿ ಭೂರಿ ಭೋಜನದ ವ್ಯವಸ್ಥೆ ಆಗಿರುವುದನ್ನು ತಿಳಿಸಿ ಸ್ವೀಕರಿಸಬೇಕೆಂದು ಕೇಳಿಕೊಂಡನು.ಆದರೆ ಕೃಷ್ಣನು ಊಟವನ್ನು  ಮಾಡಬೇಕಾದರೆ ಭಾರಿ ಹಸಿವಿರಬೇಕು ಅಥವಾ ಆತಿಥ್ಯ ಮಾಡುವವರಲ್ಲಿ ಪ್ರೀತಿ ವಿಶ್ವಾಸಗಳ ಆದರೂ ಇರಬೇಕು .ಇಂದು ನನಗೆ ಜೀವ ಹೋಗುವ ಸ್ಥಿತಿ ಬಂದಿಲ್ಲ ಅಂತಹ ಹಸಿವೆ ಆಗಿಲ್ಲ ನಿಮ್ಮಲ್ಲಿ ಪ್ರೀತಿ ವಿಶ್ವಾಸವೂ ಇಲ್ಲ ಹೀಗಾಗಿ ನಿಮ್ಮ ಆತಿಥ್ಯವನ್ನು ಸ್ವೀಕರಿಸಲಾರೆ ಎಂದು ವಿದುರನ ಮನೆಗೆ ಹೋದನು .

ವಿದುರನ ಭಕ್ತಿ ಭಾವ.

ವಿಧುರನು ತನ್ನ ಮನೆಗೆ ಬಂದ ಶ್ರೀಕೃಷ್ಣ ಪರಮಾತ್ಮನನ್ನು ಕಂಡು ಪ್ರೀತಿಯಿಂದ ಆನಂದದಿಂದ ಕುಣಿದಾಡಿದನು.ಕೈ ಹಿಡಿದು ಕರೆದೊಯ್ದು ಪಾದ ತೊಳೆದು ಪರಿ ಪರಿಯಿಂದ ಸತ್ಕರಿಸಿದನು. ವಿದುರನು ಮನೆಯಲ್ಲಿ ಇದ್ದ ಕುಂತಿಗೆ ಕೃಷ್ಣನು ವಂದಿಸಿದನು ವಿದುರನು ಕೊಟ್ಟ ಹಾಲನ್ನು ಕುಡಿದು ಸ್ವಲ್ಪ ನೆಲದಲ್ಲಿ ಹಾಕಿದಾಗ ಅಲ್ಲಿಹಾಲಿನ ಹೊಳೆಯೇ ಹರಿದಿತ್ತು .

ದುರ್ಯೋಧನನ್ನು ತನ್ನ ಅರಮನೆಗೆ ಬರದೆ ಕೃಷ್ಣನು ವಿದುರನ ಮನೆಗೆ ಹೋಗಿದ್ದರಿಂದ ನಾಳೆ ಸಮಯ ನೀಡಿದ್ದೇನೆ ಎಂದು ತಿಳಿಸಿದನು. ಹೀಗಾಗಿ ಮರುದಿನ ಮುಂಜಾನೆಯೇ ಕಾರ್ಯಗಳನ್ನು ಮುಗಿಸಿಕೊಂಡು ಸರಿಯಾದ ಸಮಯದಲ್ಲಿ ಧೃತರಾಷ್ಟ್ರನಿಗೆ ಯುಧಿಷ್ಠಿರನ ಸಂದೇಶವನ್ನು ತಿಳಿಸಲು ಹೊರಟನು. ಅಂದು ದುರ್ಯೋಧನನ್ನು ಸಭೆ ಯಲ್ಲಿರುವವರು ಕೃಷ್ಣನಿಗೆ ನಮಿಸಬಾರದು. ಕುಳಿತಲ್ಲಿಂದ ಯಾರೂ ಹೇಳಬಾರದು. ಎಂದು ಆಜ್ಞೆ ಮಾಡಿದನು.

 

 

ಯೋಧರು, ವಾದ್ಯಗಳು, ಸಂಗೀತ, ನೃತ್ಯ, ಅಲಂಕರಿಸಿದ ಆನೆ, ಕುದುರೆ, ರಥ ಎಲ್ಲವೂ ಮುಂಭಾಗದಲ್ಲಿ ಸ್ವಾಗತಿಸಿದವು. ಹಾರಗಳನ್ನು ಅನೇಕರು ಅರ್ಪಿಸಿದರು. ಕೌರವನ ಎತ್ತರವಾದ ಆಸನದಲ್ಲಿ ಕುಳಿತಿದ್ದರು. ಅದನ್ನು ನೋಡಿದ ಕೃಷ್ಣನು ಭೂಮಿಯನ್ನು ಕಾಲ ಬೆರಳಿನಿಂದ ಒತ್ತಿದಾಗ ಕೌರವರು ಸಿಂಹಾಸನದಿಂದ ಕೃಷ್ಣನ ಕಾಲ ಬಳಿಗೆ ಬಂದು ಬಿದ್ದರು. ಸಂಭ್ರಮದಿಂದ ಅವನನ್ನು ಎಬ್ಬಿಸಿ ನನ್ನ ಪಾದಗಳ ಮೇಲೆಯೇ ಬಿದ್ದ ಕಾರಣ ಕಾಲು ನೋವಾಯಿತು ಇರಲಿ ಎಂದು  ಕಳಿಸಿದನು.

ಆ ರಾಜಸಭೆಯಲ್ಲಿ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿದರು.ಆ ಸಭೆಯಲ್ಲಿ ಅನೇಕ ಮಾಂಡಲೀಕರು, ಋುಷಿಗಳು ಸಹ ಬಂದು ಸೇರಿದ್ದರೂ ಅವರಿಗೆಲ್ಲರಿಗೂ ವಂದನೆ ಸಲ್ಲಿಸಿ ಕೃಷ್ಣನು ತನಗಾಗಿರುವ ಆಸನದಲ್ಲಿ ಕುಳಿತನು.

ಸ್ವಲ್ಪ ಸಮಯದ ನಂತರ ಪಾಂಡವರ ಸಂದೇಶವನ್ನು ದೃತರಾಷ್ಟ್ರನಿಗೆ ಈ ರೀತಿ ತಿಳಿಸಿದ. ಮಹಾರಾಜ ಧೃತರಾಷ್ಟ್ರ ಕೌರವರ ಪಾಂಡವರ ಪರವಾಗಿ ಈಗಾಗಲೇ ಸೇನೆ ಸಿದ್ಧವಾಗಿದೆ. ಯುದ್ಧದಲ್ಲಿ ಯಾರಿಗೆ ಜಯವಾಗಲಿ ಆದರೆ ಪರಿಣಾಮವು ಅತ್ಯಂತ ಭೀಕರ ವಾಗಿರುವುದು ಅಸಂಖ್ಯ ವೀರರು ಸಾವಿಗೀಡಾಗುವರ ಆದ್ದರಿಂದ ಕೌರವ ಪಾಂಡವರಲ್ಲಿ ಯುದ್ಧವನ್ನು ತಪ್ಪಿಸುವ ಸಲುವಾಗಿ ಶಾಂತಿ ಸ್ಥಾಪಿಸುವ ಉದ್ದೇಶದಿಂದ ನಾನು ಸಂಧಾನಕ್ಕಾಗಿ ಬಂದಿದ್ದೇನೆ.

ಮಹಾರಾಜ ನಿನ್ನ ಮಕ್ಕಳು ಕೆಟ್ಟ ಕಾರ್ಯವನ್ನೇ ಮಾಡಿದ್ದಾರೆ. ಅವರ ಕಾರ್ಯವೂ ಸರಿಯಿಲ್ಲ. ನೀನೇ ಬುದ್ಧಿ ಹೇಳಬೇಕಾಗಿತ್ತು .ರಾಜನಾದ ನಿನ್ನ ಕರ್ತವ್ಯವೂ ಅವ್ಯವಹಾರಗಳನ್ನು ತಡೆಯುವುದು.ಆದರೂ ನೀನು ಸುಮ್ಮನಿದ್ದೆ. ಅನೇಕ ರೀತಿಯಿಂದ ಪಾಂಡವರಿಗೆ ಅನ್ಯಾಯವಾಗಿದೆ. ಆದರೂ ನೀನು ಸುಮ್ಮನೆ ಇದ್ದೀಯ ? ನಿನ್ನ ಮಗನು ತಪ್ಪು ಮಾಡಿದರೂ, ಅದಕ್ಕೆ ನೀನು  ಹೊಣೆಗಾರನಾಗುವೆ.

ಪಾಂಡವರು ಶಾಂತಿಪ್ರಿಯರು ,ಪರಾಕ್ರಮಿಗಳು ಆದರೂ  ಅನ್ಯಾಯವನ್ನು ಸಹಿಸಿಕೊಂಡು ವನವಾಸ, ಅಜ್ಞಾತವಾಸದ ಎಲ್ಲವನ್ನೂ ಮುಗಿಸಿದ್ದಾರೆ.ಇಂದ್ರ ಪ್ರಸ್ತವನ್ನು  ಸ್ವೀಕರಿಸಿ ಹೊಸದಾಗಿ ರಾಜ್ಯವನ್ನು ಕಟ್ಟಿ. ಯುಧಿಷ್ಠಿರ  ರಾಜಸೂಯ ಯಾಗವನ್ನೂ ಮಾಡಿದನು. ಚಕ್ರವರ್ತಿಯೂ ಅದನು. ಅಂತಹವರಿಗೆ ನೀನು ತೊಂದರೆ ಕೊಡುವುದು ಸರಿಯಲ್ಲ .ಆದ್ದರಿಂದ ಅವರಿಗೆ ಅವರ ರಾಜ್ಯವನ್ನು ಕೊಡುವಂತೆ ನಿನ್ನ ಮಗನನ್ನು ಒಪ್ಪಿಸು ಎಂದು ಹೇಳಿದನು ಶ್ರೀಕೃಷ್ಣ .

ಅನಂತರ ದುರ್ಯೋಧನನನ್ನು ಕುರಿತು ನೀನು ಪರಾಕ್ರಮಿ ಶಕ್ತಿಯುಳ್ಳವನು. ಒಳ್ಳೆಯ ಕಾರ್ಯಗಳನ್ನು ಮಾಡಿದವನು. ಆದರೆ ಕೆಲವು ಕುಲಕ್ಕೆ ಅವಮಾನವಾಗುವಂತಹ ಕಾರ್ಯ ಮಾಡಿದೆ .ಹಿರಿಯರಿಗೆ ವಿರುದ್ಧವಾಗಿ ನಡೆದರೆ ಆಪತ್ತಿಗೆ ಕಾರಣ ಕಾರಣನಾಗುವುದು. ಹಿರಿಯರ ಉಪದೇಶವೂ ಸರಿ ಕಾಣದಿರಬಹುದು ಆದರೆ ಅದು ಹಿತಕಾರಿ   ಆಗಿರುವಂಥದ್ದು .

 

 

ಪಾಂಡವರಲ್ಲಿ ಭೀಮ ಪಾರ್ಥ ಪರಾಕ್ರಮಿಗಳು ಆಗಿದ್ದಾರೆ. ಅರ್ಜುನನು ಪಾಶುಪತಾಸ್ತ್ರದಿಂದ ನಿನ್ನ ಸೈನ್ಯವನ್ನೇ ನಾಶಪಡಿಸುವ ಸಾಮರ್ಥ್ಯ ಹೊಂದಿದ್ದಾನೆ.ಯುದ್ಧವಾದರೆ ನಿನಗೆ ಸೋಲು ನಿಶ್ಚಿತ ನೀನು ನಿನ್ನ ಸಹೋದರರಿಗೆ ವೀರ ಮರಣವೇ ಗತಿ ಆಗುವುದು.ಆದುದರಿಂದ ಈಗಲೂ ಸಮಯವಿದೆ ನೀನು ಪಾಂಡವರಿಗೆ ಅರ್ಧ ರಾಜ್ಯವನ್ನು ಕೊಡದಿದ್ದರೆ ಅವಿಸ್ತಲ, ವೃಕ್ಷಸ್ಥಳ ವಾರಣಾವತ ಮತ್ತು ಬೇಕಾದ ಒಂದು ಗ್ರಾಮವನ್ನು  ಕೊಡು. ಈ ಐದು ಗ್ರಾಮಗಳನ್ನು ಸ್ವೀಕರಿಸಿ ಪಾಂಡವರು ಶಾಂತಿಯಿಂದ ಇರುತ್ತಾರೆ . ಈಗಲಾದರೂ ಸಂಧಾನಕ್ಕೆ   ಮನಸ್ಸು ಮಾಡು ಎಂದನು.

ದುರ್ಯೋಧನನು ಕೋಪದಿಂದ ಶ್ರೀಕೃಷ್ಣನನ್ನು ಸಾಕು ಸಾಕು ನಿಲ್ಲಿಸು ಪಾಂಡವರು ಎಷ್ಟೇ ಪರಾಕ್ರಮಿಗಳಾದರೂ ರಾಜ್ಯವನ್ನು ಯುದ್ಧದ ಮೂಲಕವೇ ಪಡೆದುಕೊಳ್ಳಲಿ.ನಾನು ಒಂದು ಸೂಜಿಯ ಮೊನೆಯಷ್ಟು ಸಹ ರಾಜ್ಯವನ್ನು ಕೊಡುವುದಿಲ್ಲ ಎಂದು ತಮ್ಮಂದಿರೊಂದಿಗೆ ಸಭೆಯಿಂದ ಹೊರನಡೆದನು.

ಶ್ರೀಕೃಷ್ಣನು ಸಭಾ ಸದಸ್ಯರನ್ನು ಉದ್ದೇಶಿಸಿ ಈ ರೀತಿ ಹೇಳಿದನು ನೋಡಿರಿ ಈ ರೀತಿಯ ಜನರಿಗೆ ಬುದ್ಧಿವಾದವನ್ನು ಹೇಳಿದರೆ ಪ್ರಯೋಜನವಿಲ್ಲ .ಕೌರವರ ತಪ್ಪಿನಲ್ಲಿ ಇನ್ನೂ ಹಲವಾರು ಸೇರಿದ್ದಾರೆ. ಭೀಷ್ಮರು ದ್ರೋಣರು ಕೌರವರ ತಪ್ಪನ್ನು ಖಂಡಿಸದೆ ಸರಿದಾರಿಗೆ ತರದೇ  ಬಿಟ್ಟಿರುವುದರಿಂದ ಅವರು ಅಪರಾಧಿಗಳೇ ಆಗಿದ್ದಾರೆ.

ಹಿಂದೆ ಭೋಜ ದೇಶದ ರಾಜನಾದ ಉಗ್ರ ಸೇನಾನಿಗೆ ಕಂಸನಿಂದ ಮಗನು ಹುಟ್ಟಿ  ಪ್ರಜಾ ಪೀಡಕನಾದನು. ಅವನ ಸಂಹಾರವಾಗಿ ಉಗ್ರ ಸೇನೆ ಮತ್ತೆ ರಾಜನಾದನು ಹಿಂದೆಯೇ ದೈತ್ಯರು ಯುದ್ಧ ಮಾಡಿದಾಗ ಲೋಕದಲ್ಲೆಲ್ಲಾ ಪ್ರಜಾಪ್ರತಿ ಬ್ರಹ್ಮನು ಈ ಯುದ್ಧ ಮುಂದೆ ಮುಂದುವರಿದರೆ ಲೋಕವೇ ನಾಶ ವಾಗುವುದೆಂದು ತಿಳಿದು ಅವರನ್ನು ವರುಣಪಾಶದಿಂದ ಬಂಧಿಸಿ ಸಮುದ್ರದಲ್ಲಿ ಇಟ್ಟು ಅದರಿಂದಾಗಿ ಈ ಜಗತ್ತು ಉಳಿಯಿತು. ಗುರುಕುಲವನ್ನು ಉಳಿಸಿಕೊಳ್ಳಲು ದುರ್ಯೋಧನನನ್ನು ತ್ಯಜಿಸಿರಿ ಎಂದನು.

ಧೃತರಾಷ್ಟ್ರನು ದುರ್ಯೋಧನನನ್ನು ಮತ್ತೆ ಸಭೆಗೆ ಕರೆಸಿದರು ಅಲ್ಲದೇ ಕೃಷ್ಣನ ಕೋರಿಕೆಯನ್ನು ಮನ್ನಿಸಬೇಕೆಂದು ಕೇಳಿದನು. ಆದರೆ ದುರ್ಯೋಧನನು ತನ್ನ ಸತ್ಕಾರವನ್ನು ಸ್ವೀಕರಿಸಲಿಲ್ಲ ಎಂದು ನೊಂದಿದ್ದನು. ಹಸ್ತಿನಾವತಿಯಲ್ಲಿ ಕೃಷ್ಣನಿಗೆ ಭಾರೀ ಸ್ವಾಗತವನ್ನು ಕಂಡು ಅಸೂಯೆ ಪಟ್ಟಿದ್ದರಿಂದ ಶ್ರೀ ಕೃಷ್ಣನನ್ನೇ ಬಂಧಿಸಿದರೆ ಪಾಂಡವರ ಶಕ್ತಿ ಕಡಿಮೆ ಆಗುವುದು ಎಂದು ಬಯಸಿದನು.

 

ದುಷ್ಟ ಕೂಟದೊಂದಿಗೆ ಸೈನಿಕರಿಗೆ ಕೃಷ್ಣನನ್ನು ಬಂಧಿಸಲು ದುರ್ಯೋಧನನು ಆಜ್ಞೆ ಮಾಡಿದಾಗ, ಭೀಷ್ಮ ದ್ರೋಣ ಕೃಪ ಮುಂತಾದವರು ಗಾಬರಿಯಾದರೂ ದೂತರಾಗಿ ಬಂದವರ ಮೇಲೆ ಈ ರೀತಿ ಪ್ರತೀಕಾರ ಮಾಡುವುದು ಸರಿಯಲ್ಲವೆಂದು ರಾಜ ಧರ್ಮಕ್ಕೆ ವಿರುದ್ಧವೆಂದು ತಿಳಿದು ದುರ್ಯೋಧನನಿಗೆ ಶ್ರೀಕೃಷ್ಣನ ಬಗ್ಗೆ ತಿಳಿಸಿದರು .ಭೀಷ್ಮರು ಕೃಷ್ಣನ ವಿಷ್ಣುವಿನ ಅವತಾರ ಕಂಸ, ಶಿಶುಪಾಲ ಮುಂತಾದ ಅನೇಕರನ್ನು ಶಿಕ್ಷಿಸಿದ್ದಾರೆ ಪೂತನಿ, ತರುಣವರ್ತ, ಚಸಲಾರಾ ,ಮುಷ್ಟಿಕ, ನರಕಾಸುರ, ಜರಾಸಂಧ ಮುಂತಾದವರ ಸಾವಿಗೆ ಕಾರಣನಾಗಿದ್ದಾನೆ ಶ್ರೀಕೃಷ್ಣ .

ನೀನು ಸಹ ಅವನ ವಿರುದ್ಧವಾಗಿ ನಡೆದು ದುಸ್ಸಾಹಸ ಮಾಡಿ ಕುರುವಂಶದ ವಿನಾಶಕ್ಕೆ ಕಾರಣ ನಾಗ ಬೇಡ ಎಂದು ಎಚ್ಚರಿಸಿದರು.ಖಾಂಡವ ದಹನದ ನಂತರದಲ್ಲಿ ಶ್ರೀಕೃಷ್ಣನಿಗೆ ಸಿಕ್ಕಿದ ಸುದರ್ಶನ ಚಕ್ರವು ಅಸಾಧಾರಣವಾದುದು .ತುಂಬಿದ ಸಭೆಯಲ್ಲಿಯೇ ಶಿಶುಪಾಲನ ತಲೆ ಕತ್ತರಿಸಿಲ್ಲವೇ ? ಎಲ್ಲ ತಿಳಿದೂ ಸಹ ಈ ರೀತಿ ಕೆಟ್ಟ ಕಾರ್ಯ ಮಾಡಬೇಡ ಎಂದು ಎಲ್ಲರೂ ಬುದ್ಧಿ ಹೇಳಿದರು .

ವಿದುರನು ಸಹ ಹಿತವಚನವನ್ನು ಹೇಳಿದಾಗ “ ತೊತ್ತಿನ ಮಗ ನೀನು ಏನೊ ವಿದುರಾ” ಉಪದೇಶಿಸಬೇಡ ಎಂದು ಹಂಗಿಸಿದ. ದುರ್ಯೋಧನ ಆ ಕ್ಷಣದಲ್ಲಿ ತನ್ನ ಬಳಿ ಇದ್ದ ಬಿಲ್ಲನ್ನು ರೋಷದಿಂದ ಮುರಿದು ಹಾಕಿದನು. ಹೀಗೆ ಎಲ್ಲರೂ ಬುದ್ಧಿ ಹೇಳಿದರು . ಸೈನಿಕರಿಗೆ ಕೃಷ್ಣನನ್ನು ಕಟ್ಟಿ ಹಾಕಲು ಆದೇಶ ನೀಡಿದಾಗ ದುರ್ಯೋಧನನು ಎಲ್ಲರೂ ನಿನ್ನ ಮಹಿಮೆಯನ್ನು ನೋಡಿದ್ದಾರೆ, ಈಗ ನನ್ನ ಮಹಿಮೆಯನ್ನು ನೋಡು ಎಂದು ದುರ್ಯೋಧನನು ಆರ್ಭಟಿಸಿದ ದೂತರು ಕೃಷ್ಣನನ್ನು ಬಂಧಿಸಲು ಮುಂದೆ ಬಂದರು.

ಹೀಗೆ  ಶ್ರೀಕೃಷ್ಣನು ಸಂಧಾನಕ್ಕೆಂದು ಬಂದರೆ ದುರ್ಯೋಧನನು ಕೃಷ್ಣನನ್ನೇ ಬಂಧಿಸಲು ಮುಂದಾದನು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top