fbpx
ದೇವರು

ಹುಲುಗಿನ ಮುರುಡಿಯ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಮಾಡಿದ ತಪ್ಪಿಗೆ ತಪ್ಪು ಕಾಣಿಕೆ ಹಾಕಿದರೆ ಕಷ್ಟಗಳು ಪರಿಹಾರವಾಗಿ ನೆಮ್ಮದಿಯ ಜೀವನ ನಡೆಸಬಹುದಂತೆ

ಹುಲುಗಿನ ಮುರುಡಿಯ ವೆಂಕಟರಮಣಸ್ವಾಮಿ ದೇವಾಲಯ

 

ಚಾಮರಾಜನಗರ ಜಿಲ್ಲೆಯ, ಗುಂಡ್ಲುಪೇಟೆ ತಾಲೂಕಿನಿಂದ 7 ಕಿಲೋ ಮೀಟರ್ ದೂರವಿರುವ ಬೆಟ್ಟವೇ ಹುಲುಗಿನ ಮುರಡಿ ವೆಂಕಟರಮಣಸ್ವಾಮಿ ದೇವಸ್ಥಾನ . ಇದು ಚಿಕ್ಕತಿರುಪತಿ ಎಂದೂ ಖ್ಯಾತವಾಗಿದೆ. ಸುಮಾರು 500 ವರ್ಷಗಳ ಹಿಂದೆ ಈ ದೇವಸ್ಥಾನ ನಿರ್ಮಾಣಮಾಡಲಾಗಿತ್ತು . ಶ್ರೀಮಂತರಾದ ದಾಸಕೇಶವಶೆಟ್ಟಿ ಎನ್ನುವವರು ಈಗಿರುವ ದೇವಾಲಯ ಕಟ್ಟಿಸಿದ್ದಾರೆ.

 

 

ದೇವಾಲಯ ಪ್ರವೇಶಿಸಿದ ತಕ್ಷಣ ಮೊದಲಿಗೆ ವರಹಸ್ವಾಮಿಯ ದರ್ಶನ ಪಡೆಯಬಹುದು.ದೇವಸ್ಥಾನದ ಮಧ್ಯದಲ್ಲಿ ರಂಗನಾಥ ಸ್ವಾಮಿಯ ದೊಡ್ಡ ಶಿಲ್ಪವಿದೆ.
ದೇವಸ್ಥಾನದ ಹಿಂದೆ ಕಲ್ಯಾಣಿ ಮತ್ತು ವಿಷ್ಣುಪಾದವಿದೆ.

 

ಪುರಾಣಗಳ ಪ್ರಕಾರ ಈ ದೇವಸ್ಥಾನದ ಬೆಟ್ಟದ ಮೇಲೆ ಮಾಂಡವ್ಯ ವೆಂಬ ಮಹರ್ಷಿ ವೆಂಕಟರಮಣ ಮೂರ್ತಿಯನ್ನು ಪ್ರತಿಷ್ಠಾಪಿಸಿದರು ಎಂದು ಹೇಳಲಾಗುತ್ತದೆ .. ಮಂಡೂಕ ಅಂದರೆ ಕಪ್ಪೆ, ಮಾಂಡವ್ಯ ಮಹರ್ಷಿ ಪ್ರತಿಷ್ಠಾಪಿಸಿದ ಈ ದೇವಾಲಯದ ಗರ್ಭಗುಡಿಯಲ್ಲಿ ಇಂದಿಗೂ ಋಷಿಗಳ ಸ್ವರೂಪಿಯಾಗಿ ಕಪ್ಪೆಯೊಂದು ದೇವರ ಸನ್ನಿಧಾನದಲ್ಲಿ ಇರುವುದು ವಿಶೇಷ.

ಕಾಡಿನಂತೆ ಇದ್ದ ಈ ಜಾಗದಲ್ಲಿ ಒಂದು ಕಾಲದಲ್ಲಿ ಬರಿ ಹುಲಿಗಳೇ ವಾಸವಾಗಿದ್ದವು,ಮರಡಿ ಎಂದರೆ ಕಾಡು ಅದರಿಂದ ಈ ಜಾಗಕ್ಕೆ ಹುಲಿಗಳ ಮರಡಿ ಎಂಬ ಹೆಸರು ಬಂತು ನಂತರ ಹುಲಿಗಳು ಇಲ್ಲವಾದರೂ ,ಆ ಪ್ರದೇಶದ ಹೆಸರು ಹುಲುಗಿನ ಮರುಡಿ ಎಂದೇ ಪ್ರಸಿದ್ಧಿ ಪಡೆಯಿತು.

ಪುರಾಣಗಳು ಹೇಳುವಂತೆ ಒಂದು ಸಲ ವಾಯುದೇವ ಹಾಗೂ ಆದಿಶೇಷರ ನಡುವೆ ಶಕ್ತಿ ಪ್ರದರ್ಶನದ ಪಂದ್ಯ ಉಂಟಾಗತ್ತೆ. ಆಗ ಆದಿಶೇಷ ಭೂಮಿಯ ಮೇಲೆ ಇದ್ದ ಒಂದು ಪರ್ವತವನ್ನು ಸುತ್ತಿಕೊಂಡು ಬಿಗಿಯಾಗಿ ಹಿಡಿಯುತ್ತಾನೆ. ವಾಯುದೇವ ಆದಿಶೇಷನನ್ನು ಅಲುಗಾಡಿಸಲು ಜೋರಾಗಿ ಗಾಳಿ ಬೀಸುತ್ತಾನೆ. ಆದರೂ ಆದಿಶೇಷ ಅಲ್ಲಾಡುವುದಿಲ್ಲ. ಇನ್ನೂ ಜೋರಾಗಿ ವಾಯುದೇವ ತನ್ನ ಪರಾಕ್ರಮ ತೋರಿದಾಗ ವಿಧಿ ಇಲ್ಲದೆ ಆದಿಶೇಷ ಪರ್ವತವನ್ನು ಬಿಟ್ಟು ಬಿಡುತ್ತಾನೆ .

 

 

ವಾಯುದೇವ ಇದನ್ನು ಗಮನಿಸದೆ ಇನ್ನೂ ಜೋರಾಗಿ ಗಾಳಿ ಬೀಸುತ್ತಾನೆ. ಆಗ ಪರ್ವತವೇ ಎರಡು ಭಾಗವಾಗಿ ಹಾರಿ ಹೋಗುತ್ತದೆ. ಹೀಗೆ ಹಾರಿದ ಪರ್ವತದ ಒಂದು ಭಾಗ ಉತ್ತರದಲ್ಲೂ ಮತ್ತೊಂದು ಭಾಗ ದಕ್ಷಿಣದಲ್ಲೂ ಬೀಳುತ್ತದೆ. ಹೀಗೆ ಹೋಗಿ ಉತ್ತರದಲ್ಲಿ ಬಿದ್ದ ಬೆಟ್ಟ ತಿರುಪತಿಯಾಗಿದ್ದು, ದಕ್ಷಿಣದಲ್ಲಿ ಬಂದು ಬಿದ್ದ ಈ ಬೆಟ್ಟ ಹುಲಗಿನ ಮುರುಡಿ ಅಥವಾ ಚಿಕ್ಕ ತಿರುಪತಿ . ಹೀಗಾಗಿ ತಿರುಪತಿಗೆ ಹೋಗಲಾಗದವರು ಇಲ್ಲಿಗೆ ಬಂದು ಪೂಜೆ ಮಾಡಿ ತಿರುಪತಿ ದರ್ಶನ ಪಡಿಯುತ್ತಾರೆ .

 

 

ಅಲ್ಲಿನ ಆಚರಕರು ಹೇಳುವಂತೆ 800 ವರ್ಷಗಳ ಹಿಂದೆ ತಮಿಳುನಾಡಿನಿಂದ ಯಾತ್ರೆಗೆ ಬಂದ ಅಣ್ಣ ತಮ್ಮ ಈ ಬೆಟ್ಟದಲ್ಲಿದ್ದ ವೆಂಕಟೇಶ್ವರನ ಪೂಜೆ ಮಾಡಿ, ಅಲ್ಲೇ ಮಲಗಿದ್ದಾಗ ನೀವಿಬ್ಬರೂ ಇಲ್ಲೇ ಇದ್ದು ನನ್ನ ಸೇವೆ ಮಾಡಿಕೊಂಡಿರಿ ಎಂದು ಕನಸು ಬೀಳುತ್ತದೆ . ಆದರೆ ಜಾಸ್ತಿ ಹುಲಿಗಳು ಇದ್ದ ಕಾಡಿನಲ್ಲಿ ಇರುವುದು ಹೇಗೆ ಎಂದು ಭಯದಿಂದ ಅವರು ಬೆಟ್ಟ ಇಳಿದು ಹೋಗುವಾಗ ಅವರಿಬ್ಬರ ಕಣ್ಣಿನ ದೃಷ್ಟಿ ಹೋಗಿ ಕುರುಡರಾಗುತ್ತಾರೆ. ತಾವು ಮಾಡಿದ್ದ ತಪ್ಪನ್ನು ತಿಳಿದು ತಪ್ಪು ಕಾಣಿಕೆ ಹಾಕಿದಾಗ ಅವರಿಗೆ ಮತ್ತೆ ಕಣ್ಣಿನ ದೃಷ್ಟಿ ಬಂತಂತೆ.
ಇಲ್ಲಿ ಪ್ರತಿವರ್ಷ ಸಂಕ್ರಾಂತಿಯಲ್ಲಿ ಬ್ರಹ್ಮರಥೋತ್ಸವ ನಡೆಯುತ್ತದೆ. ಮೊದಲ ಶ್ರಾವಣ ಶನಿವಾರ ಚಿಕ್ಕ ರಥೋತ್ಸವ ದಸರಾ ನಡೆಯುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top