fbpx
ದೇವರು

ನಾಳೆ ಅಕ್ಟೋಬರ್ 31 ನೇ ತಾರೀಖಿನಂದು ದೇವ ಪ್ರಬೋಧಿನಿ ಏಕಾದಶಿ ಆ ದಿನ ಈ ಕೆಲಸಗಳನ್ನು ಮಾಡಿ ನಿಮ್ಮ ಮನೆಯ ಸುಖ, ಶಾಂತಿ ,ನೆಮ್ಮದಿಗೆ ಒಳ್ಳೆಯದು

ನಾಳೆ ಅಕ್ಟೋಬರ್ 31 ನೇ ತಾರೀಖಿನಂದು  ದೇವ ಪ್ರಬೋಧಿನಿ ಏಕಾದಶಿ ಇದನ್ನು ವಿಷ್ಣು ದೇವನನ್ನು  ನಿದ್ದೆಯಿಂದ ಎಚ್ಚರಿಸುವ ಏಕಾದಶಿ ಎಂದೂ ಸಹ ಕರೆಯುತ್ತಾರೆ .

 

ನಾಳೆ ಅಕ್ಟೋಬರ್ 31 ನೇ ತಾರೀಖಿನಂದು  ಕಾರ್ತಿಕ ಮಾಸದ ಶುಕ್ಲ ಪಕ್ಷ ಏಕಾದಶಿ. ಈ ದಿನ ಏಕಾದಶಿಯ ವ್ರತವನ್ನು ಪಾಲಿಸಿದರೆ ದುಃಖವೂ ದೂರವಾಗಿ ಜೀವನದಲ್ಲಿ ಸಫಲತೆಯನ್ನು ಕಾಣುವಿರಿ.

 

 

ನಾಳೆ ಅಂದರೆ ಮಂಗಳವಾರ, ಕಾರ್ತಿಕ ಮಾಸದ, ಶುಕ್ಲ ಪಕ್ಷ ಏಕಾದಶಿ ನಾವೆಲ್ಲರೂ ಇದನ್ನು ದೇವ ಪ್ರಬೋಧಿನಿ ಏಕಾದಶಿಯಂದು ಸಹ ಆಚರಿಸುತ್ತೇವೆ. ವಿಷ್ಣು ಭಗವಂತನು ಈ ದಿನ ನಿದ್ದೆಯಿಂದ ಎದ್ದೇಳುತ್ತಾನೆ ಆದ್ದರಿಂದ ಇದನ್ನು ದೇವರು ಎದ್ದೇಳುವ ಏಕಾದಶಿ ಎಂದು ಸಹ ಕರೆಯಲಾಗುತ್ತದೆ.

ಈ ದಿನ ತುಳಸಿಯ ವಿವಾಹವನ್ನು ಕೂಡ ಮಾಡಲಾಗುತ್ತದೆ .ದೀಪಾವಳಿ ಹಬ್ಬವು ಕಳೆದು ಹನ್ನೊಂದನೇ  ದಿನ  ಈ ಪ್ರಬೋಧಿನಿ ಏಕಾದಶಿ ಬರುವುದು. ಈ ಏಕಾದಶಿಯ ದಿನ ಎಲ್ಲಾ ದೇವತಾ ಕಾರ್ಯಗಳು ಮತ್ತು ಧಾರ್ಮಿಕ ಕಾರ್ಯಗಳು ಸಹ ಪ್ರಾರಂಭವಾಗುತ್ತವೆ. ಇದಕ್ಕೆ ಕಾರ್ತಿಕ ಮಾಸದ ಏಕಾದಶಿಯು ಉತ್ತಮವೆಂದು ಸಹ ಹೇಳಲಾಗಿದೆ .

ಈ ದಿನ ಏಕಾದಶಿಯ ವ್ರತವನ್ನು ಆಚರಿಸಿ ನಂತರ   ತುಳಸಿಯ ವಿವಾಹವನ್ನು ಕೂಡ ಮಾಡಲಾಗುತ್ತದೆ. ಈ ಏಕಾದಶಿಯ ದಿನ ಪಾಲಿಸಬೇಕಾದ ನಿಯಮಗಳು ಹೀಗಿವೆ…

 

ಮೊದಲು ಸ್ನಾನ ಮಾಡಿ ಶುಚಿರ್ಭೂತರಾಗಿ ನಿತ್ಯಕರ್ಮಗಳನ್ನು ಮುಗಿಸಿಕೊಂಡು ಭಗವಂತನಾದ ವಿಷ್ಣುವಿಗೆ ಪೂಜೆ ಮಾಡಬೇಕು. ಹೇಗೆ ಮಾಡಬೇಕು ?

 

ಮೊದಲು ಒಂದು ಚಿಕ್ಕ ವಿಷ್ಣುವಿನ ಮೂರ್ತಿ ಅಥವಾ ಮಣ್ಣಿನ ಮೂರ್ತಿಯನ್ನು ಸಹ ಮಾಡಿಕೊಂಡು ಅಥವಾ ಒಂದು ಸಾಲಿಗ್ರಾಮವನ್ನು ಸ್ಥಾಪಿಸಬೇಕು ತುಳಸಿಯ  ಗಿಡದ ಮುಂದೆ ಸ್ಥಾಪಿಸಬೇಕು ವಿಷ್ಣುವನ್ನು ಎದ್ದೇಳು ಭಗವಂತ ಎದ್ದೇಳು ಎಂದು ಹೀಗೆ ಹೇಳಿದ್ದ ವಿಷ್ಣುವನ್ನು ಎದ್ದೇಳಬೇಕು

ನಂತರ ಪಂಚೋಪಚಾರ  ಮತ್ತು ಸೋಡಾ ಶೋಡಶೋಪಚಾರ ವನ್ನು ಮಾಡಬೇಕು ಮತ್ತು ನಿಮ್ಮ ಜೀವನದಲ್ಲಿ ಯಾವುದೇ ಧಾರ್ಮಿಕ ಕಾರ್ಯಗಳು ಮದುವೆ ವಿವಾಹ ಅಥವಾ ಶುಭ ಕಾರ್ಯಗಳನ್ನು ಪ್ರಾರಂಭಿಸಲು ಇದು ಉತ್ತಮ ದಿನವೆಂದು ಸಹ ಹೇಳಲಾಗಿದೆ.

 

 

ನೀವು ವ್ರತ ಆಚರಣೆಯನ್ನು ಮಾಡಿ ಯಾವುದಾದರೂ ಬಡ ವ್ಯಕ್ತಿಗೆ ಸೇವಿಸಲು ಆಹಾರವನ್ನು ನೀಡಿ.

ನೀವು ಉಪವಾಸ ವ್ರತ ಮಾಡದೇ ಇದ್ದರೂ ಪರವಾಗಿಲ್ಲ ಆದರೆ ಅನ್ನ ಆಹಾರವನ್ನು ಮಾತ್ರ ನಾಳೆ ಒಂದು ದಿನ ಸೇವಿಸಬೇಡಿ. ಇದು ದೇವ ಪ್ರಬೋಧಿನಿ ಏಕಾದಶಿ ಅತ್ಯದ್ಭುತವಾದ ಮತ್ತು ಅತ್ಯಂತ ಮಹತ್ವಪೂರ್ಣವಾದ ಏಕಾದಶಿ ಯಾಗಿದೆ .ಇದು ಕಾರ್ತಿಕ ಮಾಸದಲ್ಲಿ ಬರುವ ವಿಶೇಷ ಏಕಾದಶಿಯಾಗಿದೆ ಆದ್ದರಿಂದ ತಪ್ಪದೇ ನಿಯಮಗಳನ್ನು ಪಾಲಿಸಿ .

ವಿಷ್ಣುವಿನ ಪೂಜೆ ಮಾಡಿದ ನಂತರ ಸಂಜೆಯ ಸಮಯದಲ್ಲಿ ತುಳಸಿಯ ವಿವಾಹವನ್ನು ಅವಶ್ಯವಾಗಿ ಮಾಡಬೇಕು. ತುಳಸಿಯನ್ನು ಅಲಂಕರಿಸಿ ಹೊಸ ಸೀರೆಯನ್ನು ಉಡಿಸಿ ರಂಗವಲ್ಲಿ ಹಾಕಿ ಧೂಪ ದೀಪ ಆರತಿ ನೈವೇದ್ಯಗಳನ್ನು ಮಾಡಬೇಕು. ವಿಷ್ಣುವಿನ ಮೂರ್ತಿ ಅಥವಾ ಮಣ್ಣಿನ ಮೂರ್ತಿ ಇಲ್ಲವೇ ಸಾಲಿಗ್ರಾಮ ವಿಗ್ರಹವನ್ನು ಸಹ ತುಳಸಿಯ ಪಕ್ಕದಲ್ಲಿ ಸ್ಥಾಪಿಸಿ ಅಲಂಕರಿಸಬೇಕು.

ನಂತರ ವಿವಾಹವನ್ನು ಮಾಡಿಸಬೇಕು. ವಿವಾಹ ವಿಧಾನವನ್ನು ನಾವು ಹೇಗೆ ಮಾಡುತ್ತೇವೋ ಅದೇ ರೀತಿಯಲ್ಲಿ ತುಳಸಿಗೆ ಮತ್ತು ವಿಷ್ಣು ದೇವನಿಗೂ ವಿವಾಹವನ್ನು ತಾಳಿ ಕಟ್ಟುವ ಮೂಲಕ ಮಾಡಿಸಬೇಕು .

 

 

ಸ್ಕಂದ ಪುರಾಣದ ಪ್ರಕಾರ ತುಳಸಿಯ ಸಸ್ಯವು ಯಾರ ಮನೆಯಲ್ಲಿ ಇರುವುದು ಅಥವಾ ಯಾರು ಪ್ರತಿದಿನ ತುಳಸಿ ದೇವಿಗೆ ಪೂಜೆಯನ್ನು ಸಲ್ಲಿಸುತ್ತಾರೋ. ಆ ಮನೆಯಲ್ಲಿ ಯಮದೂತರು ಪ್ರವೇಶ ಮಾಡುವುದಿಲ್ಲ .ತುಳಸಿಯ ಉಪಸ್ಥಿತಿಯಿಂದಲೇ ಮಾತ್ರದಿಂದಲೇ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ಕೆಟ್ಟ ಸ್ಪಂದನಗಳು ಮತ್ತು ದುಷ್ಟ ಶಕ್ತಿಗಳಿಂದ ತುಳಸಿಯು ನಮ್ಮನ್ನು ರಕ್ಷಿಸುತ್ತದೆ.

ಆದ್ದರಿಂದಲೇ ಭಾರತದ ಪ್ರತಿಯೊಂದು ಮನೆಯಲ್ಲೂ ಸಹ ತುಳಸಿ ಗಿಡವನ್ನು ನಾವು ಕಾಣಬಹುದಾಗಿದೆ ಇದು ಅತ್ಯಂತ ಪವಿತ್ರವೆಂದು ಸಹ ಹೇಳಲಾಗಿದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top