fbpx
ಜೀವನ ಕ್ರಮ

ಗರುಡ ಪುರಾಣದ ಪ್ರಕಾರ ಪಾಪ ಕರ್ಮ ಮಾಡಿದವರು ಸತ್ತ ಮೇಲೆ ನರಕಕ್ಕೆ ಹೋಗುವಾಗ ಈ ಭಯಾನಕ ನದಿ ದಾಟಿಕೊಂಡು ಹೋಗಬೇಕಂತೆ , ಈ ನದಿಯ ಬಗ್ಗೆ ತಿಳ್ಕೊಂಡ್ರೆ ಬೆಚ್ಚಿ ಬೀಳ್ತಿರಾ !

ಗರುಡ ಪುರಾಣದಿಂದ ನಾವು ತಿಳಿದುಕೊಳ್ಳಬೇಕಾದ ಅತಿ ಮುಖ್ಯವಾದ ವಿಷಯ ಎಂದರೆ ವೈಖರಣಿ  ನದಿಯ ಬಗ್ಗೆ…..

 

ಮನುಷ್ಯ ಮಾಡಿದ ಪಾಪ ಕರ್ಮಗಳಿoದ ತಾವು ಸತ್ತ ನಂತರ ನರಕಕ್ಕೆ ಹೋಗುತ್ತಾರೆ ಎಂದು ಗರುಡ ಪುರಾಣದಲ್ಲಿ ಉಲ್ಲೇಖವಾಗಿದೆ. ಆದರೆ ನರಕಕ್ಕೆ ಹೋಗಬೇಕಾದರೆ ಈ ನದಿಯನ್ನು ದಾಟಿಕೊಂಡೇ ಹೋಗಬೇಕು. ಈ ನದಿ ಅತಿ ಭಯಂಕರವಾದದ್ದು ಈ ವೈಖರಣಿ ನದಿ ದಾಟುವಾಗ ಆಗುವ ನೋವು ಅಷ್ಟಿಷ್ಟಲ್ಲ. ಈ ನದಿ ಒಂದು ಯೋಜನೆಗಳು ಅಂದರೆ ಸುಮಾರು ಎಂಟು ಕಿಲೋಮೀಟರ್ ನಷ್ಟು ವಿಸ್ತಾರವಾಗಿದ್ದು. ಈ ವಿಸ್ತಾರವಾದ ನದಿಯಲ್ಲಿ ಅಗ್ನಿಯೂ ಸಹ ಇದೆ.

 

 

ಇಲ್ಲಿ ತಾವು ಮಾಡಿರುವ ಪಾಪ ಕರ್ಮಗಳನ್ನು ನೆನೆಸಿಕೊಂಡು ಆತ್ಮಗಳು ಆಕ್ರಂದನವನ್ನು ಮಾಡುತ್ತಿರುತ್ತವೆ. ಅಷ್ಟೆ ಅಲ್ಲ ಮರಣದ ನಂತರದ ಕ್ರಿಯೆಗಳು ಯಮಲೋಕದ ವರ್ಣನೆ,   ನರಕಲೋಕ ,  ಬಲವನಮರಣೆ ಇನ್ನೂ ಅನೇಕ ಹೆಸರಿನ ಮರಣಗಳು . ವಿವಿಧ ಶಿಕ್ಷೆಗಳು , ಯಮಲೋಕದ ಬಾಧೆಗಳು ಹೀಗೆ ಕೆಲವೊಂದು ವಿಷಯಗಳ ಬಗ್ಗೆ ಗರುಡ ಪುರಾಣದಲ್ಲಿ ವಿವರಿಸಲಾಗಿದೆ.

ಈ ಒಂದು ನದಿಯಲ್ಲಿ ನೀರಿನ ಬದಲಾಗಿ ರಕ್ತ, ಕೀವು, ಮೂಳೆಗಳು, ಮೃದುವಾಗಿರುವ ಮಾಂಸ ಖಂಡಗಳು, ಇರುತ್ತವಂತೆ. ಈ ನದಿಯಲ್ಲಿ ಅತಿ ಭಯಂಕರವಾದ ಮೊಸಳೆಗಳು, ಮಾಂಸ ತಿನ್ನುವ ಕ್ರಿಮಿ ಕೀಟಗಳು ,ಪಕ್ಷಿಗಳು ಇರುವುದರಿಂದ ಪಾಪತ್ಮಗಳಿಗೆ ಈ ನದಿ ದಾಟುವುದೇ  ಅಸಾಧ್ಯ ಎಂದು ಹೇಳಬಹುದಾಗಿದೆ. ಅಷ್ಟೇ ಅಲ್ಲದೆ ಸೃಷ್ಟಿಯಲ್ಲಿರುವ ಎಲ್ಲ ಮಾಂಸಾಹಾರಿಗಳು ಸಹ ಈ ನದಿಯಲ್ಲೇ ಇರುತ್ತವಂತೆ.

 

ಅಷ್ಟೇ ಅಲ್ಲ ಯಮಲೋಕಕ್ಕೆ ಹೋಗಬೇಕಾದರೆ ಸೌಮ್ಯಾ, ಶೌರಿ, ನಾಗೇಂದ್ರ ಭವನ, ಗಂಧರ್ವ, ಶೈಲಗನು, ಕ್ರೌಂಚ , ಕ್ರೂರ , ವಿವತ್ರ ಭವನ ,ಭಾಹ್ವಪದ, ದುಃಖದ, ನಾನಾಕ್ರoದ, ಸುತ್ತಪವ, ರೌದ್ರ, ವಯೂವರ್ಷಿಣಿ ,ಶೀತಾಕ್ಯಾ, ಬಹುಮಂದಿ   ಎಂಬ ಹದಿನಾರು ನರಕಗಳನ್ನು ದಾಟಿಕೊಂಡು ನಂತರ ಯಮಪುರಿಗೆ ಹೋಗಬೇಕಾಗುತ್ತದೆ .

ಅವಿನಾಶಿಮಾಸಿಕನ  ಅಂದರೆ ಮನುಷ್ಯ ಸತ್ತ ಬಳಿಕ 171 ದಿನಗಳ ಕಾಲ ಪುಣ್ಯಗಳನ್ನು ಪೂಜಿಸದೆ ಬಳಿಕ ಜೀವನು ಯಮನ ಸಹೋದರ ವಿಚಿತ್ರರಾಜನ ಪರಿಪಾಲನೆ ಮಾಡುವ ವಿಚಿತ್ರಭವನ ಎಂಬ ಪಟ್ಟಣವನ್ನು ಸೇರುತ್ತಾನಂತೆ. ಅಲ್ಲಿಂದಲೇ ವೈಖರಣಿ ನದಿ ದಾಟಬೇಕು .

 

ಗೋದಾನ .

 

ಗೋ ದಾನ ಮಾಡಿದವರು ಈ ವೈಖರಣೀ ನದಿಯನ್ನು ದಾಟುತ್ತಾರೆ. ಗೋ ದಾನ ಮಾಡದೇ ಇರುವವರಿಗೆ ಈ ನದಿಯ ನೀರು ಕುದಿಯುವ ನದಿಯ ಹಾಗೆ ಕಾಣಿಸುತ್ತದೆ. ಪಾಪಾತ್ಮಗಳು ಇದರಲ್ಲಿ ಇಳಿದು ಹೋಗಬೇಕು. ಪಾಪಾತ್ಮಗಳ  ಹೊಟ್ಟೆಗೆ ಮುಳ್ಳು ಚುಚ್ಚಿದ ಮೀನುಗಳನ್ನು ಮೇಲಕ್ಕೆ ಎತ್ತಿದಂತೆ ಆಕಾಶ ಮಾರ್ಗದಲ್ಲಿ  ನಡೆಸುತ್ತಾ ಯಮ ಕಿಂಕರರು ಈ ನದಿಯನ್ನು ದಾಟಿಸುತ್ತಾರ೦ತೆ.

ನೈತಾದಿ ನಗರದಲ್ಲಿ ಜೀವಿಯ ಪಾಪ ಕರ್ಮಗಳನ್ನು ಲೆಕ್ಕ ಹಾಕಿ ಜೀವಿಯ ಸಂಪ್ರದಾಯಬದ್ಧವಾದ ಶ್ರಾದ್ಧದ ದಿನ ಪುಣ್ಯಗಳನ್ನು ಸಹ ಲೆಕ್ಕಕ್ಕೆ ತೆಗೆದುಕೊಂಡು ಬಳಿಕ ಬಹು ವಿಧಿಯನ್ನು ಜೀವಿಯೂ ಸೇರುತ್ತಾನೆ. ಹಸ್ತ ಪ್ರಮಾಣ  ಮಾಡದ ಪಿಂಡ ರೂಪ ಶರೀರಗಳನ್ನು ಅದರೊಳಗೆ ಹಾಕಿ ಅಂಗುಷ್ಟ ಪ್ರಮಾಣದ ವಾಯು ರೂಪ ಶರೀರವನ್ನು ಅಂದರೆ ಆತನ ಶರೀರವನ್ನು ಬಿಟ್ಟು ಕರ್ಮಾನುಭವಕ್ಕಾಗಿ  ಜೀವನು ಯಮಕಿಂಕರರೊಂದಿಗೆ ಯಮ ಪುರಿಯನ್ನು ಸೇರುತ್ತಾನೆ .

 

 

ಪ್ರಾರಂಭಿಕವಾಗಿ ಅನುಭವಿಸುವುದಕ್ಕಾಗಿಯೇ ಯಾತನಾ ಶರೀರದ ಜೀವನು ಪಾಪಾತ್ಮರೊಂದಿಗೆ  ಯಮ ಪುರಿಯನ್ನು ಸೇರುತ್ತಾನೆ . ಶ್ರದ್ಧಾ ಕಾರ್ಯವನ್ನು ಪರಿವಾರದವರು ಸರಿಯಾಗಿ ನೆರವೇರಿಸದೆ ಹೋದರೆ ಮುಂದಿನ ಪ್ರಯಾಣವು ಸಹ ಕಷ್ಟಕರವಾಗಿರುತ್ತದೆ .ದೊಡ್ಡ ದೊಡ್ಡ ತಪ್ಪು ಮಾಡಿದವರು ಅಷ್ಟೇ ಅಲ್ಲದೆ ಚಿಕ್ಕ ಚಿಕ್ಕ ತಪ್ಪು ಮಾಡಿದವರು ಸಹ ವೈಖರಣೀ ನದಿಯನ್ನು ದಾಟಿಯೇ ಹೋಗಬೇಕಾಗುತ್ತದೆ.

 

ಇದರ ಬಗ್ಗೆ ಒಂದು ಸಣ್ಣ ಕಥೆಯು ಸಹ ಇದೆ.

 

ಧರ್ಮದೇವತೆಯ ಎದುರೇ ಧರ್ಮರಾಜನು ಸ್ವರ್ಗಕ್ಕೆ ಹೋಗುವಾಗ ದಾರಿಯಲ್ಲಿ ವೈಖರಣಿ ನದಿ ಎದುರಾಯಿತಂತೆ . ಅಲ್ಲಿ ದುರ್ಗಂಧ ,ರಕ್ತ, ಮಾಂಸ, ಮೂಳೆಗಳು, ಮಾಂಸಖಂಡಗಳು, ಭಯಂಕರವಾದ ಕ್ರಿಮಿ, ಕೀಟಗಳು, ಮುತ್ತಿಕೊಳ್ಳುವ ನೊಣಗಳು, ಪ್ರೇತಾತ್ಮಗಳು ಗುಂಪುಗಳು, ಇದ್ದವಂತೆ. ಈ ದುರ್ಗಂಧವನ್ನು ತಡೆಯಲಾಗದೆ ಇವೆಲ್ಲವನ್ನೂ ನೋಡಲಾಗದೆ ಧರ್ಮರಾಜನು ಕಂಗಾಲಾಗಿ ಹೋದನಂತೆ.

 

 

ದುರ್ಯೋಧನರು  ಸ್ವರ್ಗಲೋಕದಲ್ಲಿ ಇರುವಾಗ ಇನ್ನುೂ ನನ್ನ  ಸಹೋದರರು ಮತ್ತು ನನ್ನ ಹೆಂಡತಿ ಯಾಕೆ ಈ ಲೋಕದಲ್ಲಿ ಇರಬೇಕು ಎಂದು ಇಂದ್ರ ದೇವನನ್ನು ಧರ್ಮರಾಜನು ಕೇಳಿದಾಗ ……

ಕುರುಕ್ಷೇತ್ರದಲ್ಲಿ ಧರ್ಮರಾಜನು ಆಡಿದ ಒಂದು ಸಣ್ಣ ಸುಳ್ಳಿನ ಫಲವೇ ಇದು ಎಂದು ಇಂದ್ರ ದೇವನು ಹೇಳುತ್ತಾನೆ. ಅಶ್ವತ್ಥಾಮ ಅಂತಃ ಎಂದು ಜೋರಾಗಿ ಕೂಗದೆ  ಮೆಲ್ಲಗೆ ಹೇಳಿ ಗುರು ದ್ರೋಣರಿಗೆ ಮೋಸ ಮಾಡಿದ್ದಕ್ಕೆ ಸ್ವಲ್ಪ ಕಾಲ ಇಲ್ಲಿ ಇರಬೇಕಾದ ಅನುಭವ ಪಡಬೇಕಾಗಿದೆ ಎಂದು ಹೇಳುತ್ತಾನೆ .

ಇನ್ನುೂ ಕೆಲವರು ಶ್ರೀಕೃಷ್ಣನಿಗೆ ಹೇಳುವಾಗ ಧರ್ಮರಾಜನು ಕೆಲವು ಕ್ಷಣಗಳ ಕಾಲ ಯೋಚನೆ ಮಾಡಿ ಹೀಗೆ ವಂಚಿಸುವುದು ತಪ್ಪು ಅಲ್ಲವೇ ಎಂದು ಧರ್ಮರಾಜನು ಎದುರುತ್ತರ ಕೊಡುತ್ತಾನೆ. ದೇವರಿಗೆ ಎದುರುತ್ತರ ಕೊಟ್ಟ ತಪ್ಪಿಗಾಗಿ ಈ ನರಕವಾಸ ಅನುಭವಿಸಬೇಕಾಗಿ ಬಂದಿದ್ದು ಎಂದೂ ಸಹ ಹೇಳುತ್ತಾರೆ .

 

 

ಒಂದು ಸಣ್ಣ ಸುಳ್ಳು ಹೇಳಿದ್ದಕ್ಕಾಗಿ ಇಂತಹ ಶಿಕ್ಷೆ ಅನುಭವಿಸಬೇಕಾಗಿ ಬಂದಿರಬೇಕಾದರೆ ಇನ್ನುೂ ನಾವು ಸಾಮಾನ್ಯ ಮನುಷ್ಯರು ಈ ಕಲಿಯುಗದಲ್ಲಿ ನಾವು ಮಾಡೋ ಪಾಪ ಕರ್ಮಗಳಿಗೆ ಏನೇನು ಶಿಕ್ಷೆಗಳು ಇದೆಯೋ ಎಂದು ಹೇಳುವಾಗ ಮತ್ತು ಕೇಳುವಾಗ ಭಯ ಆಗುವುದು ಸಹಜವೇ.

ಅದಕ್ಕೆ ಗರುಡ ಪುರಾಣವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ಎಂದು ಸಹ ಹೇಳುತ್ತಾರೆ. ಆದರೂ ಸಹ ಇದನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು. ಆದರೆ ಬೇರೆಯವರಿಗೆ ಗರುಡ ಪುರಾಣವನ್ನು ಕೊಡುವಾಗ ಹಂಸ ಪ್ರತಿಯೊಂದಿಗೆ ಕೊಡಬೇಕು ಎಂದು ಸಹ ಪಂಡಿತರು ಹೇಳುತ್ತಾರೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top