fbpx
ಭವಿಷ್ಯ

ವರ್ಷ 2018 ರಲ್ಲಿ ಈ ಐದು ರಾಶಿಯವರಿಗೆ ಅದೃಷ್ಟ ಒಲಿದು, ಯಶಸ್ಸನ್ನು ಕಾಣುತ್ತಾರೆ ಎಂದು ರಾಶಿ ಫಲಗಳು ಹೇಳುತ್ತವೆ

ವರ್ಷ 2018 ರಲ್ಲಿ ಈ ಐದು ರಾಶಿಯವರಿಗೆ ಅದೃಷ್ಟ ಒಲಿದು, ಯಶಸ್ಸನ್ನು ಕಾಣುತ್ತಾರೆ ಎಂದು ರಾಶಿ ಫಲಗಳು ಹೇಳುತ್ತವೆ

 

 

ಪ್ರಪಂಚ ನಿಂತಿರುವುದು ನಂಬಿಕೆಯ ಮೇಲೆ ಹಾಗೆ ಭಾರತೀಯರ ನಂಬಿಕೆಗೆ ಪಾತ್ರವಾಗಿರುವ ಶಾಸ್ತ್ರವೇ ಜ್ಯೋತಿಷ್ಯ ಶಾಸ್ತ್ರ. ಪುರಾತನ ಕಾಲದಿಂದಲೂ ಭವಿಷ್ಯವನ್ನು  ತಿಳಿಯಲು ಈ ಶಾಸ್ತ್ರವನ್ನು ನಂಬಿಕೊಂಡು ಬಂದಿದ್ದಾರೆ. ನಮ್ಮ ಹಿರಿಯರು ಮುಂದಿನ ವರ್ಷ 2018 ರಲ್ಲಿ ಯಾವ ಯಾವ ರಾಶಿಯವರಿಗೆ ಒಳ್ಳೆಯ ಕಾಲ ಕೂಡಿ ಬರಲಿದೆ ಮತ್ತು ಅದೃಷ್ಟವೂ ಸಹ ಅವರ ಕೈ ಹಿಡಿದು ಎಲ್ಲ ರೀತಿಯಲ್ಲಿಯೂ ಒಳ್ಳೆಯದಾಗುವುದು ಎಂದು ತಿಳಿಯೋಣ ಬನ್ನಿ……

 

 ಮೇಷ ರಾಶಿ.

 

 

ನೀವು ತೆಗೆದುಕೊಳ್ಳುವ ನಿರ್ಣಯಗಳು ನಿಮಗೆ ಒಳ್ಳೆಯ ಪ್ರತಿಫಲ ನೀಡಲಿವೆ. ಮೊದಲು ಎರಡು ತಿಂಗಳಲ್ಲಿ ನಿಮ್ಮ ಆರೋಗ್ಯ ಏರುಪೇರಾಗುವ ಸಂಭವವಿರುತ್ತದೆ. ಆದರೆ ಈ ವರ್ಷ ನಿಮಗೆ ಮರೆಯಲಾಗದ ವರ್ಷವಾಗಲಿದೆ.

 

ಕಟಕ ರಾಶಿ .

ವೈವಾಹಿಕ ಜೀವನದಲ್ಲಿ ಸ್ವಲ್ಪ ಜಗಳ ಬಂದರೂ ಸಾಮಾಜಿಕವಾಗಿ ಹಣಕಾಸಿನ ವಿಷಯದಲ್ಲಿ ನೀವು ಪ್ರಬಲರಾಗಿರುತ್ತೀರಿ. ಈ ವರ್ಷ ನಿಮಗೆ ಎಲ್ಲಿಲ್ಲದ ಅವಕಾಶಗಳು ಒಲಿದು ಬರಲಿವೆ.

ಸಿಂಹ ರಾಶಿ.

 

ನೀವು ಊಹಿಸದ ಆರ್ಥಿಕ ಪ್ರಯೋಜನಗಳು ಜೊತೆ ಹೊಸ ಉತ್ತೇಜನದಿಂದ ನಿಮ್ಮ ಮನಸ್ಸು ಉಲ್ಲಾಸ ಭರಿತವಾಗಿರುತ್ತದೆ. ಕೆಲಸದಲ್ಲಿ ಹೊಸ ಉತ್ತೇಜನದಿಂದ ಪಾಲ್ಗೊಳ್ಳುತ್ತೀರಿ. ನಿಮ್ಮನ್ನು ಎಲ್ಲರೂ ಗುರುತಿಸುವಂತಹ ಸ್ಥಾನಕ್ಕೆ ನೀವು ಬೆಳೆಯುತ್ತೀರಿ.

 ತುಲಾ ರಾಶಿ.

 

 

ನಿಮ್ಮ ಆಲೋಚನೆಗಳಿಗೆ ತಕ್ಕಂತಹ ಪ್ರತಿಫಲ ಈ ವರ್ಷ ನಿಮಗೆ ಸಿಗಲಿದೆ. ಹೊಸ ಯೋಜನೆಗಳು ನಿಮ್ಮ ಮನಸ್ಸಿನಲ್ಲಿ ಮೂಡಲಿದ್ದು ಯಾವುದಾದರೂ ಒಂದು ಯೋಜನೆ ನಿಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡಿಯಲ್ಲಿದೆ .

ಕುಂಭ ರಾಶಿ.

 

ಈಗ ನೀವು ಅನುಭವಿಸುತ್ತಿರುವ ಕಷ್ಟಗಳಿಂದ ಹಂತಹಂತವಾಗಿ ಹೊರಬರುತ್ತೀರಿ. ನಿಮ್ಮ ಪರಿಶ್ರಮ ನಿಮ್ಮ  ಕೈಹಿಡಿಯಲಿದೆ. ಮಾರ್ಚ್ ತಿಂಗಳ ನಂತರ ನಿಮ್ಮ ಜೀವನದಲ್ಲಿ ಹೊಸ ಬದಲಾವಣೆಗಳು ಕಾಣಿಸುತ್ತವೆ. ನೀವು ಅನುಭವಿಸಿದ ನೋವುಗಳು ನಿಮ್ಮಿಂದ ಶಾಶ್ವತವಾಗಿ ದೂರವಾಗುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top