fbpx
ಭವಿಷ್ಯ

ವಾರ ಭವಿಷ್ಯ ಅಕ್ಟೋಬರ್ 29 ರಿಂದ ನವೆಂಬರ್ 4 ರವರೆಗೆ.

ವಾರ ಭವಿಷ್ಯ ಅಕ್ಟೋಬರ್ 29 ರಿಂದ ನವೆಂಬರ್ 4 ರವರೆಗೆ.

 

ಮೇಷ (Mesha)

ಕಾರ್ಯಕ್ಷೇತ್ರದಲ್ಲಿ ನಾನಾ ಗೊಂದಲಗಳು, ಸಮಸ್ಯೆಗಳು ಮೂಡಿಬರುತ್ತವೆ . ಅವುಗಳನ್ನು ಸಮಾಧಾನದಿಂದ ನಿಭಾಯಿಸಿರಿ. ಬಾಲ್ಯ ಸ್ನೇಹಿತರ ಭೇಟಿ ಮನಸ್ಸಿಗೆ ಹಿತ ನೀಡುವುದು. ಬೇರೆಯವರ ಸಹಾಯವನ್ನೇ ಕಾಯುತ್ತಾ ಕುಳಿತು ಇನ್ನೂ ಹೆಚ್ಚಿನ ಜವಾಬ್ದಾರಿಯನ್ನು ಹೆಚ್ಚಿಸಿಕೊಳ್ಳುವ ಹುಚ್ಚು ಸಾಹಸಕ್ಕೆ ಕೈ ಹಾಕಬೇಡಿ. ಈ ರೀತಿ ಮಾಡುವುದರಿಂದ ನಿಮಗೆ ಅವಮಾನ ಆಗುವುದರ ಜತೆಗೆ ಧನ ಹಾನಿಯಾಗುವ ಸಂಭವ ಕೂಡ ಹೆಚ್ಚಿದೆ. ವ್ಯವಹಾರ, ವ್ಯಾಪಾರಗಳಲ್ಲಿ ಜೊತೆಗೂಡಿ ವ್ಯವಹಾರ ಮಾಡಬೇಡಿ. ಇದರಿಂದ ನಷ್ಟ ಉಂಟಾಗಲಿದೆ. ಮೇಷ ರಾಶಿಯ ಮಕ್ಕಳಿಗೆ ವಿದ್ಯಾಭ್ಯಾಸ ತೃಪ್ತಿ ನೀಡಲಿದೆ.ಪ್ರತಿನಿತ್ಯ ಆಂಜನೇಯ ಸ್ವಾಮಿಯ ದರ್ಶನ ಮಾಡಿ. ಜೊತೆಗೆ ಶನೈಶ್ಚರ ದೇವರ ಸ್ತೋತ್ರವನ್ನು ಪಠಿಸಿರಿ.

 

 

ವೃಷಭ (Vrushabha)

ನಿಮ್ಮ ಮೇಲೆ ಈ ವಾರ ವಿಶೇಷವಾಗಿ ದೇವರ ಅನುಗ್ರಹವಿಲ್ಲದ ಕಾರಣ ಹೆಚ್ಚು ಪರಿಶ್ರಮ ಪಡಬೇಕಾಗುವುದು. ಇಲ್ಲಿ ನಿಮ್ಮ ಜಾಣ್ಮೆ ಪರಿಶ್ರಮ ಮತ್ತು ಸಮಯ ಪ್ರಜ್ಞೆ ಎಲ್ಲವೂ ಇದಕ್ಕೆ ಕಾರಣವಾಗುವುದು. ಬಂಧು ಬಾಂಧವರೊಡನೆ ಭಿನ್ನಾಭಿಪ್ರಾಯಗಳು ದೂರವಾಗುತ್ತವೆ ಮತ್ತು ಬಾಂಧವ್ಯ ,ಸ್ನೇಹ ಹೆಚ್ಚುತ್ತದೆ. ಮಕ್ಕಳ ಸಮಸ್ಯೆಗಳಿಗೂ ಸಹ ಪರಿಹಾರ ಸಿಗಲಿದೆ. ನೆರೆಹೊರೆಯವರು ಮತ್ತು ಅಕ್ಕಪಕ್ಕದ ಜನರು ಆಡುವ ಮಾತುಗಳನ್ನು ಕೇಳಿ ಅವರಿಗೆ ನಿಮ್ಮ ಅಭಿಪ್ರಾಯವೇನು ಎಂಬುದನ್ನು ತಿಳಿಸಿರಿ .ಹಿರಿಯರ ಸಲಹೆಯನ್ನು ತೆಗೆದುಕೊಂಡರೆ ಉಪಯೋಗವಾಗುವುದು. ನಿಮ್ಮ ಮನೆ ದೇವರನ್ನು ಪ್ರಾರ್ಥಿಸಿರಿ .

 

ಮಿಥುನ (Mithuna)

ಅರ್ಥವಿಲ್ಲದೆ ಇರುವ ಅಥವಾ ವ್ಯರ್ಥವಾದ ತಿರುಗಾಟದಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳು ಬೀರುವ ಸಾಧ್ಯತೆ ಹೆಚ್ಚಿದ್ದು. ಅನೇಕ ಜವಾಬ್ದಾರಿಗಳನ್ನು ಮಕ್ಕಳಿಗೆ ವಹಿಸುವುದರಿಂದ ದೈಹಿಕ ಹಾಗೂ ಬೌದ್ಧಿಕ ಶ್ರಮ ಕಡಿಮೆಯಾಗುತ್ತದೆ. ಮನೆಯಲ್ಲಿರುವ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಆಹಾರ ಸಂಬಂಧಿತ ವಿಷಯಗಳಲ್ಲಿ ಹೆಚ್ಚು ಗಮನ ಕೊಡದೆ ಇದ್ದಲ್ಲಿ ಹೊಟ್ಟೆಗೆ ಸಂಬಂಧಪಟ್ಟ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಆಗಾಗ ವೈದ್ಯಕೀಯ ತಪಾಸಣೆ ಮಾಡಿಸುವುದು ಸೂಕ್ತ ನೌಕರಿಯಲ್ಲಿ ಸದ್ಯಕ್ಕೆ ಬದಲಾವಣೆಯನ್ನು ಮಾಡಿಕೊಳ್ಳಬೇಡಿ.

 

ಕರ್ಕ (Karka)

ಹಿರಿಯರು ಮತ್ತು ಸ್ನೇಹಿತರು ಹೇಳಿದ ಮಾತುಗಳನ್ನು ಆಲಿಸಿದೆ ನೀವು ಅವರ ಮಾತಿಗೆ ಹೆಚ್ಚು ಗಮನವನ್ನು ಸಹ ಹರಿಸದೆ ಕೆಲವು ವಿಷಯಗಳಲ್ಲಿ ಕಾಲ ಕಳೆದ ನಂತರ ನಿಮ್ಮ ಅರಿವಿಗೆ ಬರುವುದು ಸಹಜ. ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎಂಬ ಗಾದೆ ಮಾತಿನಂತೆ ಆಗುವುದು.ನೀವು ಬೇರೆಯವರ ಮೇಲೆ ಮಾಡುವ ಕ್ಷುಲ್ಲಕ ಅಪವಾದದಿಂದ ಅಪಖ್ಯಾತಿ ಪಡೆಯುವಿರಿ. ದೂರ ಪ್ರಯಾಣ ಒಳ್ಳೆಯದಲ್ಲ. ಪ್ರೇಮಿಗಳ ಭಾವೋದ್ವೇಗಕ್ಕೆ ಒಳಗಾಗುವುದರಿಂದ ತೊಂದರೆ ಅನುಭವಿಸಬೇಕಾಗುವುದು.  ಗುರುಗಳು ಇಲ್ಲದೇ ಇರುವ ಶಿಷ್ಯರು ಅಡ್ಡದಾರಿ ಹಿಡಿಯುವ ಹಾಗೆ ನೀವೂ ಸಹ ಅಡ್ಡದಾರಿ ಹಿಡಿಯುವಿರಿ. ಆದ್ದರಿಂದ ಈ ವಾರ ಸ್ವಲ್ಪ ಎಚ್ಚರದಿಂದ ಇದ್ದು ಆಲೋಚನೆಯಿಂದ ಮುನ್ನುಗ್ಗುವುದು ಒಳ್ಳೆಯದು. ಜೊತೆಗೆ ಗುರುಗಳ ಆಶೀರ್ವಾದವನ್ನು ಸಹ ಪಡೆಯಿರಿ .

 

ಸಿಂಹ (Simha)

ಜೀವನದಲ್ಲಿ ಏನಾದರೂ ಒಂದನ್ನು ಸಾಧಿಸುವ ಛಲ ನಿಮ್ಮಲ್ಲಿದೆ. ಆದರೆ ಈ ನಿಮ್ಮ ಆಸೆಯನ್ನು ಪೂರೈಸಿಕೊಳ್ಳಲು ಇದೇ ಒಳ್ಳೆಯ ಸಮಯ ಆಗಿದೆ. ನಿಮ್ಮಲ್ಲಿ ಧೈರ್ಯ ಸಹ ಹೆಚ್ಚಿದ್ದು ಆತ್ಮವಿಶ್ವಾಸದಿಂದ ಮುನ್ನುಗ್ಗಿ ನಿಮ್ಮ ಕೆಲಸವನ್ನು ಪೂರೈಸಿಕೊಳ್ಳಿ. ನೀವು ಮಾತನಾಡುವ ಮಾತಿನಿಂದಲೇ ನಿಮ್ಮ ಈ ವಾರ ನಿಂತಿದೆ. ಎಲ್ಲರನ್ನೂ ಮಾತಿನಿಂದ ಮೋಡಿ ಮಾಡುವ ಕಲೆ ನಿಮ್ಮಲ್ಲಿದೆ. ಇತಿಮಿತಿ ಇಲ್ಲದ  ಆಹಾರ ಸೇವನೆಯಿಂದ ನಿಮ್ಮ ಆರೋಗ್ಯಕ್ಕೆ ಈ ವಾರ ತೊಂದರೆ ಉಂಟಾಗಬಹುದು. ಆದ್ದರಿಂದ ಎಚ್ಚರವಾಗಿರಿ.

 

ಕನ್ಯಾರಾಶಿ (Kanya)

ನಿಮ್ಮ ಪ್ರತಿಭೆ ಮತ್ತು ಶ್ರಮ ಮೊದಲಾದವುಗಳಿಂದ ಯಶಸ್ಸಿನ ಮೆಟ್ಟಿಲನ್ನು ಏರುತ್ತಿರುವ ನಿಮಗೆ ಬೇರೆಯವರಿಂದ ಕ್ಷುಲ್ಲಕ ಮಾತುಗಳನ್ನು ಕೇಳ ಬೇಕಾಗುವ ಸಾಧ್ಯತೆಯಿದೆ. ಬುದ್ಧಿವಂತರಾದ ನೀವು ಅದಕ್ಕೆ ಪ್ರಾಮುಖ್ಯತೆ ನೀಡದೆ ನಿಮ್ಮ ಪಾಡಿಗೆ ನೀವಿರುವುದು ಉತ್ತಮ. ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗ ಅವಕಾಶಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವುದಕ್ಕೆ ಇದು ಸರಿಯಾದ ಸಮಯವಾಗಿದೆ. ಆದರೆ ಪೂರ್ವ ಸಿದ್ಧತೆಯೂ ಸಹ ಅವಶ್ಯಕವಾಗಿ ಬೇಕು. ಹಿರಿಯರ ಅನುಭವದ ಮಾತು ಮತ್ತು ಸಲಹೆಗಳು ನಿಮಗೆ ಉಪಯೋಗಕ್ಕೆ ಬರುವುದು .

 

ತುಲಾ (Tula)

 

ಅನೇಕ ಯೋಜನೆಗಳನ್ನು  ಹಿಂದೆ ಮುಂದೆ ವಿಚಾರಿಸದೆ, ತಡ ಮಾಡದೆ ,ಹಣಕಾಸಿನ ವ್ಯವಸ್ಥೆಯೂ ಇಲ್ಲದೆ ಹಮ್ಮಿಕೊಂಡ ಯೋಜನೆಗಳು ಯಶಸ್ಸನ್ನು ನೀಡುವುದಿಲ್ಲ. ನಿಮಗೆ ಭರವಸೆ ನೀಡಿದ ವ್ಯಕ್ತಿಗಳಿಂದಲೇ ನಿಮಗೆ ಒಳ್ಳೆಯ ಮತ್ತು ಉತ್ತಮ ಪ್ರತಿಕ್ರಿಯೆ ಸಿಗುವುದಿಲ್ಲ. ಇದರ ಪರಿಣಾಮದಿಂದ ಬೇರೆಯವರಿಂದ ಸಾಲ ಪಡೆಯಬೇಕಾಗಬಹುದು ಮತ್ತು ತೊಂದರೆಗಳನ್ನು ಸಹ ಅನುಭವಿಸಬೇಕಾಗುವುದು.  ಆದ್ದರಿಂದ ಸುಮ್ಮನೆ ಇರುವುದು ಒಳ್ಳೆಯದು . ನಿಮ್ಮ ತಾಯಿಯ ಕಡೆಯಿಂದ ನಿಮಗೆ ಸಹಾಯ ದೊರೆತರೂ ನೀವು ಅದನ್ನು ಒಪ್ಪಿಕೊಳ್ಳುವ ಸಾಧ್ಯತೆಯಿಲ್ಲ .

 

ವೃಶ್ಚಿಕ (Vrushchika)

ನೀವು ಈಗ ಮಾಡಬೇಕು ಎಂದು ಅಂದುಕೊಂಡಿರುವ ಕೆಲಸಗಳಿಗೆ ಮತ್ತು ರೂಪಿಸಿಕೊಂಡಿರುವ ಹೊಸ ಯೋಜನೆಗಳಿಗೆ ಬೇರೆ ಆರ್ಥಿಕವಾಗಿ ಸಹಾಯ ಹಸ್ತ ದೊರೆಯುವುದು. ಈ ವಿಷಯದಲ್ಲಿ ನೀವು ಮಧ್ಯವರ್ತಿಗಳಿಂದ ಎಚ್ಚರವಾಗಿರಿ ದೊರೆಯುವ ಸಹಾಯವನ್ನು ಸದುಪಯೋಗವಾಗುವಂತೆ ನೋಡಿಕೊಳ್ಳಿ. ನಿಮಗೆ ಸ್ನೇಹಿತರ ಸಹಾಯ ದೊರೆಯಬೇಕಾದರೆ ಅದು ನಿಮ್ಮ ನಡವಳಿಕೆ ಮತ್ತು ನೀವು ಮಾತನಾಡುವ ರೀತಿಯನ್ನು ಅವಲಂಬಿಸಿರುತ್ತದೆ. ನೀವು ಈ ವಾರ ಇಷ್ಟದೇವರನ್ನು ಪ್ರಾರ್ಥಿಸಿರಿ. ನೀವು ಎಷ್ಟೇ ಶ್ರಮ ಜೀವಿಗಳಾದರೂ  ಈ ವಾರ ಯಶಸ್ಸು ಕಡಿಮೆ.

 

ಧನು ರಾಶಿ (Dhanu)

 ನಿಮಗೆ ನಿಮ್ಮ ರಾಶಿಯಲ್ಲಿರುವ ಶನಿಯು ಅನೇಕ ತೊಂದರೆಗಳನ್ನು ನೀಡುವನು .ಉದ್ಯೋಗದಲ್ಲಿ ಬದಲಾವಣೆ ಕಂಡುಬರುತ್ತದೆ ಹಿರಿಯರ ಆರೋಗ್ಯದಲ್ಲಿ ತೀವ್ರ ವ್ಯತ್ಯಾಸವು ಉಂಟಾಗುವ ಸಾಧ್ಯತೆ ಹೆಚ್ಚಿದೆ . ನೀವು ಉಳಿತಾಯ ಮಾಡುವ ಹಣ ಸಹ ಖರ್ಚಾಗಿ ಹೋಗುವುದು. ಆದಾಯ ಹೆಚ್ಚಾಗಿದ್ದರೂ ನೀವು ಕೂಡಿಟ್ಟ ಹಣ ಸಾಕಾಗುವುದಿಲ್ಲ. ಸರ್ಕಾರಿ ಮತ್ತು ಉನ್ನತ ದರ್ಜೆಯ ಕೆಲಸದಲ್ಲಿ ಇರುವವರಿಗೆ ಮೇಲಧಿಕಾರಿಗಳಿಂದ ಉಪಟಳ ಮತ್ತು ಮನಸ್ಸಿಗೆ ನೋವುಂಟಾಗುವ ಮಾತುಗಳನ್ನು ನೀವು ಕೇಳುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ನಿಮ್ಮ ಕೆಲಸ ಕಾರ್ಯದಲ್ಲಿ ಹೆಚ್ಚು ಗಮನ ಕೊಡಿ. ಶನೈಶ್ಚರ ದೇವನ ಮಂತ್ರವನ್ನು ಜಪಿಸಿ ಎಳ್ಳೆಣ್ಣೆಯನ್ನು ದೇವಾಲಯಕ್ಕೆ ದಾನ ಮಾಡಿ.

 

ಮಕರ (Makara)

ಮನೆಯಲ್ಲಿ ಪೂಜೆ, ಹೋಮ, ಹವನ ಮತ್ತು ಮೊದಲಾದ ಶಾಂತಿ ಕಾರ್ಯದಲ್ಲಿ ನೀವು ಮುಂದಾಳತ್ವವನ್ನು ವಹಿಸುವಿರಿ. ಇದಕ್ಕೆ ಸಂಬಂಧಪಟ್ಟ ಸಿದ್ಧತೆಗಳು ಭರದಿಂದ ಸಾಗಲಿದೆ. ನಿಮ್ಮ ಸಂಪಾದನೆಯಲ್ಲಿ ಸ್ವಲ್ಪ ಭಾಗದ ಹಣವನ್ನು ಧಾರ್ಮಿಕ ಸಂಸ್ಥೆಗಳಿಗೆ ದಾನವಾಗಿ ನೀಡಿದರೆ ಒಳ್ಳೆಯದಾಗುವುದು. ನೀವು ಹಿಂದೆ ಯಾರಿಗೋ ಸಾಲವಾಗಿ ಹಣ ಕೊಟ್ಟಿದ್ದು ಈ ವಾರ ಮರಳಿ ನಿಮಗೆ ಕೈಸೇರಲಿದೆ. ಹೊಸ ವ್ಯಾಪಾರಗಳನ್ನು ಪ್ರಾರಂಭ ಮಾಡಲು ಈ ವಾರ ಸರಿಯಾದ ಸಮಯವಾಗಿದೆ. ಇದಕ್ಕೆ ಬೇಕಾಗುವ ಆರ್ಥಿಕ ನೆರವು ಸಹ ದೊರೆಯುತ್ತದೆ. ನಿಮ್ಮ ಮನಸ್ಸಿನಲ್ಲಿರುವ ಸಂಶಯ ಎಂಬ ಭೂತವನ್ನು ಹೊರಗಟ್ಟಿದರೆ ಹೆಚ್ಚಿನ ಯಶಸ್ಸನ್ನು ಕಾಣುವಿರಿ. ಜೀವನದಲ್ಲಿ ನೆಮ್ಮದಿಯಿಂದ ಇರುವಿರಿ.

 

ಕುಂಭರಾಶಿ (Kumbha)

ಮನೆಯ ವಾತಾವರಣದಲ್ಲಿ ನಡೆಯುತ್ತಿರುವ ವಿಷಯಗಳು ನಿಮ್ಮನ್ನು ಸಂತೋಷ ಗೊಳಿಸುತ್ತದೆ. ಇದರಿಂದ ನೀವು ಉತ್ಸಾಹದಿಂದ ಇರುತ್ತೀರಿ. ನೀವು ಅನಾರೋಗ್ಯದಿಂದ ಬಳಲುತ್ತಿರುವುದರ ಕಾರಣ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡುವುದು ಒಳ್ಳೆಯದು. ವಾರಾಂತ್ಯದಲ್ಲಿ ಸಂಬಂಧಗಳು ಮತ್ತಷ್ಟು ಸ್ನೇಹ ಮಯವಾಗಿ ಪರಿವರ್ತನೆಯಾಗುತ್ತದೆ. ಅನಗತ್ಯ ಖರ್ಚಿಗೆ ಕಡಿವಾಣ ಹಾಕಿ ಹಿರಿಯರ ಆಶೀರ್ವಾದವನ್ನು ಪಡೆದು  ಸ್ನೇಹಿತರಿಂದ ಸಹಾಯ ಕೂಡ ದೊರೆಯುವ ಸಂಭವ ಹೆಚ್ಚಿದೆ .

 

ಮೀನರಾಶಿ (Meena)

ಅಕ್ಕಪಕ್ಕದ ಜನರೊಂದಿಗೆ ಹೊಂದಿಕೊಂಡು ಹೋಗುವುದು ಒಳ್ಳೆಯದು. ಸ್ನೇಹಿತರು ನಿಮ್ಮ ಸಹಾಯ ಕೇಳಿಕೊಂಡು ಬರಲಿದ್ದಾರೆ. ಅವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಅವಿವಾಹಿತರಿಗೆ ತಮ್ಮ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಗೊಂದಲ ಉಂಟಾಗಲಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿ ಅನವಶ್ಯಕವಾಗಿ ಸಾಲಕ್ಕೆ ದಾರಿ ಮಾಡಿಕೊಳ್ಳಬೇಡಿ. ಸಂಪಾದಿಸಿದ ಹಣ ಬೇರೆಯವರ ಪಾಲಾಗದೆ ಇರುವಂತೆ ನೋಡಿಕೊಳ್ಳಿ. ನೀವು ಕಷ್ಟಪಟ್ಟು ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಹೂಡಿಕೆ ಮಾಡುವುದು ಈ ವಾರ ಬೇಡ .ಕುಲದೇವರ ದರ್ಶನ ಭಾಗ್ಯ ದೊರೆಯುವುದು .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top