fbpx
ಮನೋರಂಜನೆ

ಬಿಗ್’ಬಾಸ್ ಮನೆಯಿಂದ ಈ ವಾರ ಹೊರಹೋಗಲು ಬರೋಬ್ಬರಿ ಏಳು ಜನ ನಾಮಿನೇಟ್..!

ಬಿಗ್’ಬಾಸ್ ಮನೆಯಿಂದ ಈ ವಾರ ಹೊರಹೋಗಲು ಬರೋಬ್ಬರಿ ಏಳು ಜನ ನಾಮಿನೇಟ್..!

 

 

ಕನ್ನಡ ಅತಿದೊಡ್ಡ ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಕನ್ನಡದ 5ನೇ ಸೀಸನ್’ಗೆ ಎಂಟ್ರಿ ಕೊಟ್ಟಿದ್ದ ಒಟ್ಟು 17 ಮಂದಿ ಪೈಕಿ 11 ಮಂದಿ ಸೆಲೆಬ್ರೆಟಿಗಳು ಹಾಗೂ 6 ಜನಸಾಮಾನ್ಯರು ಸ್ಪರ್ಧಿಗಳಾಗಿ ಮನೆಗೆ ಪ್ರವೇಶ ಪಡೆದಿದ್ದರು. ಆ ಪೈಕಿಈಗಾಗಲೇ ಅಧಿಕೃತವಾಗಿ ಮನೆಯ ಮೊದಲೆರಡು ವಾರದ ಎಲಿಮಿನೇಷನ್ ಕೂಡ ಆಗಿದ್ದು ಸುಮಾ ರಾಜಕುಮಾರ್ ಮತ್ತು ಮೇಘ ಎಲಿಮಿನೇಷನ್ ಆಗಿದ್ದಾರೆ..

 

 

ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಸ್ಪರ್ಧಿಯನ್ನು ನಾಮಿನೇಷನ್ ಮಾಡುವುದಕ್ಕೆ ನಡೆದ ನಾಮಿನೇಷನ್ ಪ್ರಕ್ರಿಯೆಯಲ್ಲಿ ನಾಲ್ಕು ಜನ ಸದಸ್ಯರು ಆಯ್ಕೆಯಾಗಿದ್ದು..ರಿಯಾಝ್, ದಯಾಳ್, ಜಯಶ್ರೀನಿವಾಸನ್, ನಿವೇದಿತಾ ಗೌಡ ನಾಮಿನೇಷನ್ ಪ್ರಕ್ರಿಯೆಯಲ್ಲಿ ಎಲಿಮಿನೇಷನ್ ನಾಮಿನೇಟ್ ಆಗಿದ್ದಾರೆ. ಇನ್ನು ‘ಕಳಪೆ ಬೋರ್ಡ್ ಹಾಕುವ ವಿಚಾರದಲ್ಲಿ ಕಳೆದ ವಾರದ ಕ್ಯಾಪ್ಟನ್ ಆಗಿದ್ದ ಶ್ರುತಿಪ್ರಕಾಶ್ ಹಾಗೂ ದಿವಾಕರ್ ನೇರವಾಗಿ ನಾಮಿನೇಟ್ ಆಗಿದ್ದಾರೆ..

 

 

 

ಇನ್ನು ಈ ವಾರ ಮನೆಯ ಕ್ಯಾಪಟನ್ ಆಗಿರುವ ಸಮೀರ್ ಆಚಾರ್ಯ ಅನುಪಮಾ ಗೌಡರವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ.. ಒಟ್ಟಾರೆಯಾಗಿ ಬಿಗ್’ಬಾಸ್ ಮನೆಯಿಂದ ಈ ವಾರ ಹೊರಹೋಗಲು ಬರೋಬ್ಬರಿ ಏಳು ಜನ ನಾಮಿನೇಟ್ ಆಗಿದ್ದು ಈ ಪೈಕಿ ಯಾರು ಮನೆಯಿಂದ ಹೋಗಬೇಕು ಯಾರು ಸೇಫ್ ಎಂಬುದನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top