fbpx
ಕಿರುತೆರೆ

ಟಿ.ಆರ್.ಪಿ ಇಲ್ಲದೆ ಕುಸಿದು ಬಿದ್ದಿದ್ದ ಕಲರ್ಸ್ ಸೂಪರ್ ಚಾನೆಲ್’ನ ಟಿ.ಆರ್.ಪಿ ಯರ್ರಾಬಿರ್ರಿ ಏರಿಕೆ: ಎಲ್ಲಾ ಬಿಗ್’ಬಾಸ್ ಮಹಿಮೆ ಸ್ವಾಮಿ.

ಟಿ.ಆರ್.ಪಿ ಇಲ್ಲದೆ ಕುಸಿದು ಬಿದ್ದಿದ್ದ ಕಲರ್ಸ್ ಸೂಪರ್ ಚಾನೆಲ್’ನ ಟಿ.ಆರ್.ಪಿ ಯರ್ರಾಬಿರ್ರಿ ಏರಿಕೆ: ಎಲ್ಲಾ ಬಿಗ್’ಬಾಸ್ ಮಹಿಮೆ ಸ್ವಾಮಿ.

 

 

ಎರಡು ವಾರಗಳ ಹಿಂದೆಯಷ್ಟೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾರಥ್ಯದ ಮತ್ತು ಕನ್ನಡ ಅತಿದೊಡ್ಡ ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಕನ್ನಡದ 5ನೇ ಸೀಸನ್ ನಲ್ಲಿ 11 ಮಂದಿ ಸೆಲೆಬ್ರೆಟಿಗಳು ಹಾಗೂ 6 ಜನಸಾಮಾನ್ಯರು ಸ್ಪರ್ಧಿಗಳು ಸೇರಿ ಒಟ್ಟು 17 ಮಂದಿ ಸ್ಪರ್ಧಿಗಳು ಮನೆಯೊಳಕ್ಕೆ ಎಂಟ್ರಿ ಪಡೆದಿದ್ದರು..ಕಳೆದೆರಡು ಬಾರಿ ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗಿದ್ದ ಕಾರ್ಯಕ್ರಮ ಈ ಭಾರಿ ಕಲರ್ಸ್ ಸೂಪರ್ ಚಾನೆಲ್’ನಲ್ಲಿ ಪ್ರಸಾರವಾಗುತ್ತಿದೆ.

 

 

ಕಲರ್ಸ್ ಕನ್ನಡ ಚಾನೆಲ್ ನ ಅಂಗಸಂಸ್ಥೆಯಾಗಿರುವ ಸೂಪರ್ ಚಾನೆಲ್ ಪ್ರಾರಂಭವಾದಾಗಿನಿಂದಲೂ ತನ್ನ ಟಿ.ಆರ್.ಪಿಯನ್ನು ಹೆಚ್ಚಿಸಿಕೊಳ್ಳಲು ತಿಣುಕಾಡುತ್ತಿತ್ತು..ಚಾನೆಲ್ ನಲ್ಲಿ ಅನೇಕ ರೀತಿ ಹೊಸ ಕಾರ್ಯಕ್ರಮಗಳು ಬಂದರೂ ಅದ್ಯಾಕೋ ಚಾನೆಲ್ ನ ಟಿ.ಆರ್.ಪಿ ಮಾತ್ರ ಏಳುತ್ತಿರಲಿಲ್ಲ. ಆದರೆ ಇದೀಗ ಕಲರ್ಸ್ ಸೂಪರ್ ಚಾನೆಲ್ ನ ಟಿ.ಆರ್,ಪಿ ದಿಢೀರನೆ ಏರಿಕೆ ಕಂಡಿದೆ..ಇದಕ್ಕೆಲ್ಲ ಕಾರಣ ಬಿಗ್ ಬಾಸ್ ಕಾರ್ಯಕ್ರಮ.

 

 

ಕಲರ್ಸ್ ಕನ್ನಡ ಚಾನೆಲ್ ಗೆ ಹೋಲಿಕೆ ಮಾಡಿದರೆ ಅದರ ಅಂಗ ಭಾಗವಾದ ಕಲರ್ಸ್ ಸೂಪರ್ ಚಾನೆಲ್ ಅಷ್ಟೇನು ಜನಪ್ರಿಯವಾಗಿಲ್ಲ ಹಾಗಾಗಿ ಕಲರ್ಸ್ ಸೂಪರ್ ಚಾನೆಲ್ ನ ಟಿ.ಆರ್.ಪಿಯನ್ನು ಹೆಚ್ಚಿಸುವ ಸಲುವಾಗಿ ದೊಡ್ಡ ವೀಕ್ಷಕರ ಬಳಗವನ್ನು ಹೊಂದಿರುವ ಬಿಗ್ಗ್ ಬಾಸ್ ಕಾರ್ಯಕ್ರಮವನ್ನು ಕಲರ್ಸ್ ಸೂಪರ್ ಚಾನೆಲ್ ನಲ್ಲಿ ಪ್ರಸಾರ ಮಾಡುವುದರಿಂದ ಕಲರ್ಸ್ ಸೂಪರ್ ಚಾನೆಲ್ ಕೂಡ ತನ್ನ ಟಿಆರ್’ಪಿಯಲ್ಲಿ ಹೆಚ್ಚಳ ಕಂಡು ಜನಪ್ರಿಯವಾಗಬಹುದು ಎಂಬ ಕಾರಣಕ್ಕೆ ಬಿಗ್ ಬಾಸ್ ಕಾರ್ಯಕ್ರಮ ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗುತ್ತಿದೆ.

 

 

ಈಗ ಕಲರ್ಸ್ ಸೂಪರ್ ಕಾರ್ಯಕ್ರಮದ ಭಾರಿ ಮಟ್ಟದಲ್ಲಿ ಟಿ.ಆರ್,ಪಿ ಹೆಚ್ಚಳ ಕಂಡಿದ್ದು ಸದ್ಯ ಕನ್ನಡ ಮನೋರಂಜನಾ ಚಾನೆಲ್ ಗಳ ಟಿ.ಆರ್,ಪಿ ಪಟ್ಟಿಯಲ್ಲಿ 180922 ಇಂಪ್ರೆಷನ್’ಗಳೊಂದಿಗೆ ಐದನೇ ಸ್ಥಾನದಲ್ಲಿದೆ..ಬಿಗ್ ಬಾಸ್ ಕಾರ್ಯಕ್ರಮದಿಂದಾಗಿ ಕಲರ್ಸ್ ಸೂಪರ್ ಚಾನೆಲ್ ನ ಟಿ.ಆರ್.ಪಿ ಆರು ಪಟ್ಟು ಹೇಚ್ಚಾಗಿದೆ ಮುಂದಿನ ದಿನಗಳಲ್ಲಿ ಇದು ಇನ್ನು ಹೆಚ್ಚಲಾವಾಗುವ ಲಕ್ಷಣಗಳಿವೆ ಎಂದು ಹೇಳಲಾಗುತ್ತಿದೆ.

 

 

ಈಗಲೂ ಎಷ್ಟೋ ಕೇಬಲ್ ನೆಟ್ ವರ್ಕ್ ಮತ್ತು ಡಿಶ್ ಗಳಲ್ಲಿ ಇನ್ನು ಕಲರ್ಸ್ ಸೂಪರ್ ಚಾನೆಲ್ ಬರುತ್ತಿಲ್ಲ ಹಾಗಾಗಿ ಮುಂದಿನ ದಿನಗಳಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ತಿಳಿದುಬಂದಿದೆ. ಬಿಗ್ ಬಾಸ್ ಕಾರ್ಯಕ್ರಮವನ್ನು ಟಿವಿಯಲ್ಲಿ ನೋಡುವವರಿಗಿಂತ ವೋಟ್ ಆಪ್ ನಲ್ಲಿ ನೋಡುವವರ ಸಂಖ್ಯೆಯೇ ಜಾಸ್ತಿ ಇದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top