fbpx
ದೇವರು

ದೇವ ಪ್ರಬೋಧಿನಿ ಏಕಾದಶಿ ಮತ್ತು ತುಳಸಿ ವಿವಾಹವು ಆಚರಣೆಗೆ ಬಂದ ವ್ರತ ಕಥೆಗಳು.

ದೇವ ಪ್ರಬೋಧಿನಿ ಏಕಾದಶಿ ಮತ್ತು ತುಳಸಿ ವಿವಾಹವು ಆಚರಣೆಗೆ ಬಂದ ವ್ರತ ಕಥೆಗಳು.

 

ದೇವ ಪ್ರಬೋಧಿನಿ ಏಕಾದಶಿ ಕಥೆ .

 

 

ಶಂಖಾಸುರ  ಎಂಬ ರಾಕ್ಷಸನೊಬ್ಬನು ಸಂಪೂರ್ಣವಾಗಿ ವಿಶ್ವವನ್ನೇ ತನ್ನ ಹೆಸರಿನಿಂದಲೇ ಭಯ ಹುಟ್ಟಿಸುತ್ತಾನೆ. ದೇವತೆಗಳು ಸಹ ಇವನಿಂದ ಹೆದರಿ ಭಯಗೊಂಡು ಎಲ್ಲರೂ ಸೇರಿ ವಿಷ್ಣುವಿನ ಬಳಿ ತೆರಳುತ್ತಾರೆ. ವಿಷ್ಣುವಿನ ಬಳಿ ಹೋಗಿ ಪ್ರಾರ್ಥನೆಯನ್ನೂ ಮಾಡುತ್ತಾರೆ. ಶಂಖಾಸುರ ರಾಕ್ಷಸನನ್ನು ಸಂಹರಿಸಲು ವಿಷ್ಣು ದೇವನನ್ನು ಬೇಡಿಕೊಳ್ಳುತ್ತಾರೆ.

ಆಗ ವಿಷ್ಣು ದೇವನು  ಶಂಖಾಸುರನ ಜೊತೆ  ಯುದ್ಧವನ್ನು ಮಾಡಲು ಯುದ್ಧವನ್ನು ಮಾಡಲು  ಹೊರಡುತ್ತಾನೆ .ಅನೇಕ ವರ್ಷಗಳವರೆಗೂ ವಿಷ್ಣು ಮತ್ತು  ಶಂಖಾಸುರನ ನಡುವೆ ಯುದ್ಧ ನಡೆಯುತ್ತದೆ.   ಕೊನೆಗೆ ಶಂಖಾಸುರನು ಹತನಾಗುತ್ತಾನೆ.

ಇದರಿಂದ ಭಗವಂತನಾದ ವಿಷ್ಣುವು ಸುಸ್ತಾಗಿ ಹೋಗಿದ್ದನು. ಆದ್ದರಿಂದ ಕ್ಷೀರ ಸಾಗರದೊಳಗೆ ಮಲಗಿ ನಿದ್ರಿಸಲು ಆ ದಿನದಿಂದ ಪ್ರಾರಂಭಿಸಿ ಸತತ ನಾಲ್ಕು ತಿಂಗಳವರೆಗೆ ನಿದ್ರೆಯನ್ನು ಮಾಡಿ ನಂತರ ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯ ದಿನ ನಿದ್ರೆಯಿಂದ ವಿಷ್ಣುವು ಎಚ್ಚರಗೊಳ್ಳುತ್ತಾನೆ.

ಆಗ ದೇವತೆಗಳು ಮೊದಲು ವಿಷ್ಣುವಿಗೆ ಪೂಜೆಯನ್ನು ಮಾಡುತ್ತಾರೆ. ಇದರಿಂದಲೇ ದೇವ ಪ್ರಬೋಧಿನಿ ಏಕಾದಶಿ ಅಥವಾ  ವಿಷ್ಣುವನ್ನು ನಿದ್ದೆಯಿಂದ ಎಚ್ಚರಗೊಳಿಸುವ ಏಕಾದಶಿ ಎಂದು ಸಹ ಕರೆಯಲಾಗುವ ಏಕಾದಶಿಯು ಆಚರಣೆಗೆ ಬಂತು.

 

 

ಅಂದಿನಿಂದ ಇಂದಿನವರೆಗೂ ಈ ಏಕಾದಶಿಯನ್ನು ಕಾರ್ತಿಕ ಮಾಸದಲ್ಲಿ ವಿಶೇಷವಾಗಿ ಭಕ್ತಿ ,ಶ್ರದ್ಧೆಯಿಂದ ತುಳಸಿ ವಿವಾಹದ ಸಮೇತವಾಗಿ ಆಚರಿಸಲಾಗುತ್ತದೆ  .

ಕಳೆದ ನಾಲ್ಕು ತಿಂಗಳಿನಿಂದ ನಿಲ್ಲಿಸಿದ್ದ ಮಂಗಳ ಕಾರ್ಯಗಳು ಶುಭ ಕಾರ್ಯಗಳು ಮಾಡದೇ ಇರುವವರು ಈಗ ಈ ಏಕಾದಶಿ ಆಚರಣೆಯ ನಂತರ ನೀವು ಎಲ್ಲಾ ಶುಭ ಮಂಗಳ ಕಾರ್ಯಗಳನ್ನು ಸಹ ಪ್ರಾರಂಭಿಸಲು ಇದು ಉತ್ತಮ ಸಮಯವಾಗಿದೆ ಹಾಗೂ ವಿಷ್ಣು ದೇವರ ಆಶೀರ್ವಾದವೂ ಸಹ ನಿಮಗೆ ದೊರೆಯುವುದು .

ನಿಮಗೆ ಅನೇಕ ದಿನಗಳಿಂದ ವಿವಾಹ ಆಗುತ್ತಿಲ್ಲವೆಂದರೆ… ನೀವು ಈ ಏಕಾದಶಿಯ ದಿನ ಕೆಲವು ಉಪಾಯಗಳನ್ನು ಸಹ ಪಾಲಿಸಿ.

ಅದಕ್ಕಿಂತ ಮೊದಲು ನೀವು ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಶುಚಿರ್ಭೂತರಾಗಿ ವಿಷ್ಣು ದೇವನಿಗೆ ಪೂಜೆಗೆ  ತುಳಸಿಯನ್ನು  ಅವಶ್ಯವಾಗಿ ಅರ್ಪಿಸಬೇಕು.

ಯಾರೂ ವ್ರತವನ್ನು ಮಾಡುತ್ತಾರೋ ಅವರು ತುಳಸಿಯನ್ನು ಯಾವುದೇ ಕಾರಣಕ್ಕೂ ಕೀಳಬಾರದು ಅದರ ಬದಲಾಗಿ ಬೇರೆಯವರ ಕೈಯಿಂದ ಕೀಳಿಸಬಹುದು.

 

 ವಿಷ್ಣು ಸಹಸ್ರನಾಮವನ್ನು ಈ ದಿನ ಜಪಿಸಬೇಕು.

 

 

ಪೂಜೆಯ ನಂತರ ಬ್ರಾಹ್ಮಣರಿಗೆ ಮತ್ತು ಬಡವರಿಗೆ ಅವಶ್ಯವಾಗಿ ಅನ್ನ ಆಹಾರವನ್ನು ಭೋಜನವನ್ನು ಮಾಡಿಸಬೇಕು. ಇದರಿಂದ ಭಗವಂತನಾದ ವಿಷ್ಣು ದೇವನ ಆಶೀರ್ವಾದವೂ ದೊರೆತು ಎಲ್ಲ ಪಾಪ ಕರ್ಮಗಳಿಂದ ಮುಕ್ತಿ ದೊರೆಯುವುದು .

ಕಾಶಿಯಲ್ಲಿ ಈ ದೇವ ಪ್ರಬೋಧಿನಿ ಏಕಾದಶಿಯ ದಿನ ದೇವಲೋಕವೇ ಧರೆಗೆ ಬಂದ ಇಳಿಯುವುದು ಎಂದು ಹೇಳುತ್ತಾರೆ. ಈ ದಿನ ದೇವ ದೀಪಾವಳಿಯ ದಿನ ಎಂದು ಸಹ ಆಚರಿಸಲಾಗುತ್ತದೆ.

ಸಂಜೆಯ ಸಮಯದಲ್ಲಿ ತುಳಸಿಯ ವಿವಾಹವನ್ನು ಅವಶ್ಯವಾಗಿ ಆಚರಿಸಬೇಕು. ನಮ್ಮ ಭಾರತ ದೇಶದಲ್ಲಿ ತುಳಸಿಯನ್ನು ಅತ್ಯಂತ ಪವಿತ್ರವಾದ ಸಸ್ಯ ಎಂದು ಪರಿಗಣಿಸಲಾಗಿದೆ. ದೇವನು ಎದ್ದೇಳುವ ಈ ಏಕಾದಶಿಯ ದಿನವೇ ತುಳಸಿಯ ವಿವಾಹವನ್ನು ಸಹ ಮಾಡಲಾಗುತ್ತದೆ.

 

 ತುಳಸಿಯ ವಿವಾಹದ ಹಿಂದೆ ಕೂಡ ಒಂದು ಕಥೆಯಿದೆ.

 

 

ಜಲಂಧರನೆಂಬ ಹೆಸರಿನ ಒಬ್ಬ ರಾಕ್ಷಸನಿದ್ದ ಅವನು ನಾಲ್ಕು ದಿಕ್ಕಿನಲ್ಲಿಯೂ ಸಹ ಭಯ ಹುಟ್ಟಿಸಿದ್ದನು. ಅವನು ಅತ್ಯಂತ ಶಕ್ತಿಶಾಲಿ ಮತ್ತು ಪರಾಕ್ರಮಿಯಾಗಿದ್ದ ಇದಕ್ಕೆ ಕಾರಣ ಅವನ ಪತ್ರಿ ಅವನ ಪತ್ನಿ ವೃಂದಳು  ಪತಿವ್ರತೆಯನ್ನು ಧರ್ಮವನ್ನು ಪಾಲಿಸುತ್ತಿದ್ದಳು.

ಇದರ ಕಾರಣದಿಂದಲೇ ಅವನು ಎಲ್ಲೇ ಹೋದರೂ ಯಾವ ಯುದ್ಧದಲ್ಲಾದರೂ ಜಯಿಸುತ್ತಿದ್ದನು. ಜಲಂಧರ ನಿಂದ ಸಮಸ್ಯೆಯುಂಟಾಗಿ ಒಂದು ಬಾರಿ ದೇವತೆಗಳು ವಿಷ್ಣುವಿನ ಬಳಿ ಹೋಗಿ  ಸಹಾಯ ಮಾಡಲೆಂದು ಪ್ರಾರ್ಥನೆ ಮಾಡಿದರು. ಅವರ ಪ್ರಾರ್ಥನೆಯನ್ನು ಕೇಳಿ  ಭಗವಂತನಾದ ವಿಷ್ಣು ವೃಂದಾಳ ಪತಿವ್ರತಾ ಧರ್ಮದಲ್ಲಿ ತೊಂದರೆಯನ್ನು ಉಂಟು ಮಾಡಲು ಪ್ರಯತ್ನಿಸಿದರು ಮತ್ತು ಇದರಲ್ಲಿ ಸಫಲಗೊಂಡನು.

ಪತಿವ್ರತಾ ಧರ್ಮವು ಕೊನೆಗೊಳ್ಳುತ್ತಿದ್ದಂತೆ ಜಲಂಧರನು ದೇವತೆಗಳ ಕೈಯಿಂದಲೇ ಹತನಾದನು.  ಈ ವಿಷಯ ತಿಳಿದ ಕೂಡಲೇ ಕೋಪೋದ್ರಿಕ್ತರಾಗಿ ಭಗವಂತನಾದ ವಿಷ್ಣುವಿಗೆ ಶಾಪವನ್ನು ಸಹ ನೀಡಿದಳು. ನೀನು ಹೀಗೆ ನಿನ್ನ ಛಲದಿಂದ ನನ್ನ ಪತಿಯನ್ನು ಹೇಗೆ ದೂರ ಮಾಡಿದೆಯೋ ಅದೇ ರೀತಿಯಲ್ಲಿ ನೀನು ಸಹ ನಿನ್ನ ಪತ್ನಿಯಿಂದ ದೂರವಾಗಿ ನೀನು ಸಹ ವಿರಹ ವೇದನೆಯನ್ನು ಸಹಿಸಿಕೊಳ್ಳಬೇಕು.  ಇಷ್ಟನ್ನು ಹೇಳಿ ವೃಂದ ಪತಿಯ ಜೊತೆಯಲ್ಲಿಯೇ ಅಗ್ನಿಯ ಚಿತೆಗೆ ಹಾರಿ ಪ್ರಾಣ ಬಿಡುತ್ತಾಳೆ. ಅವಳು ಪ್ರಾಣ ಬಿಟ್ಟ ಸ್ಥಳದಲ್ಲಿ ಕೆಲವು ದಿನಗಳ ನಂತರ ತುಳಸಿ  ಸಸ್ಯವು ಬೆಳೆಯುವುದು .

 

ಇನ್ನೊಂದು ಪ್ರಸಂಗದ ಅನುಸಾರ ಭಗವಂತನಾದ ವಿಷ್ಣುವು ಈ ರೀತಿ ಶಾಪ ಕೊಟ್ಟನು .

 

 

ಇನ್ನೊಂದು ಪ್ರಸಂಗದ ಪ್ರಕಾರ ಭಗವಂತನಾದ ವಿಷ್ಣುವು ಈ ರೀತಿ ಶಾಪ ಕೊಟ್ಟನು. ನೀನು ನನ್ನ ಸತ್ವವನ್ನು ಭಂಗಗೊಳಿಸಿದ್ದು ಆದ್ದರಿಂದ ವೃಂದ ಇದು ಸತಿತ್ವದ ಫಲವೇ ಆಗಿದೆ. ನೀನು ತುಳಸಿಯ ಸಸ್ಯವಾಗಿ ನನ್ನ ಜೊತೆ ಇರುವೆ ವಿಷ್ಣು ದೇವನು ಹೇಳಿದನು ಯಾವ ಮನುಷ್ಯ ಜೀವಿಯೂ ನಿನ್ನ ಜೊತೆ ನನ್ನ ವಿವಾಹವನ್ನು ಮಾಡಿಸುತ್ತಾರೋ. ಅವರಿಗೆ ಪರಂಧಾಮ ಪ್ರಾಪ್ತಿಯಾಗುತ್ತದೆ.

ಆದ್ದರಿಂದ ತುಳಸಿಯ ಜೊತೆ ಸಾಲಿಗ್ರಾಮ ಅಥವಾ ವಿಷ್ಣುವಿನ ಮೂರ್ತಿ ಇಲ್ಲವೇ ಮಣ್ಣಿನ ಮೂರ್ತಿಯ ಜೊತೆಗೆ ವಿವಾಹ ಮಾಡಿಸಬೇಕು. ಈ ವಿವಾಹವು  ಲಕ್ಷ್ಮೀದೇವಿ ಮತ್ತು ಭಗವಂತನಾದ ವಿಷ್ಣುವಿನ ವಿವಾಹದ ಪ್ರತೀಕವಾಗಿದೆ. ಆದ್ದರಿಂದ ತುಳಸಿ ದಳದ ವಿನಃ ಸಾಲಿಗ್ರಾಮ ಅಥವಾ ವಿಷ್ಣು ದೇವನ ಪೂಜೆಯು ಪೂರ್ಣವಾಗುವುದಿಲ್ಲ ಎಂದು ಪುರಾಣಗಳು ಹೇಳುತ್ತವೆ .

ತುಳಸಿ ದೇವಿಗೂ ಮತ್ತು ವಿಷ್ಣು ದೇವನಿಗೂ ಹಳದಿ ಬಣ್ಣದ ವಸ್ತ್ರಗಳನ್ನು ಉಡಿಸಬೇಕು. ತುಳಸಿಯನ್ನು ಅಲಂಕರಿಸಿ ನಾಲ್ಕೂ ಕಡೆಗಳಿಂದಲೂ ಮಂಟಪವನ್ನು ಮಾಡಬೇಕು. ವಿವಾಹ ವಿಧಿಯನ್ನು ಮಾಡಿಸಿ ತಾಳಿಯನ್ನು ಕಟ್ಟಿಸಿ ವಿವಾಹವನ್ನು ಸಂಪೂರ್ಣಗೊಳಿಸಬೇಕು.

ನಂತರ ತುಳಸಿ ದೇವಿಗೆ ಮತ್ತು ವಿಷ್ಣು ದೇವರಿಗೆ ಧೂಪ, ದೀಪ ,ಆರತಿ, ನೈವೇದ್ಯಗಳನ್ನು ಸಮರ್ಪಿಸಬೇಕು .

ನಂತರ ನೂರಾ ಎಂಟು ಸುತ್ತು ಪ್ರದಕ್ಷಿಣೆಯನ್ನು ಹಾಕಬೇಕು ಹೀಗೆ ನೂರಾ ಎಂಟು ಸುತ್ತು ಪ್ರದಕ್ಷಿಣೆ ಹಾಕುವಾಗ “ಓಂ ತುಳಸಿ ದೇವಿಯೇ ನಮಃ” ಎಂಬ ಮಂತ್ರವನ್ನು ಉಚ್ಚರಿಸಬೇಕು ನಂತರ ತುಳಸಿ ಚಾಲೀಸವನ್ನು ಪಠಿಸಬೇಕು.ಒಂದು ವೇಳೆ ನಿಮಗೆ ನೂರಾ ಎಂಟು ಸುತ್ತು ಪ್ರದಕ್ಷಿಣೆ ಹಾಕಲು ಆಗುವುದಿಲ್ಲ ಎಂದಾದರೆ ಎಂಟು ಬಾರಿ ಪ್ರದಕ್ಷಿಣೆಯನ್ನು ಮಾಡಿದರೆ ಸಾಕು.

ಪರಿವಾರ ಸಮೇತರಾಗಿ ತುಳಸಿ ದೇವಿಯ ವಿವಾಹವನ್ನು ತುಳಸಿ ದೇವಿ ಮತ್ತು ವಿಷ್ಣು ದೇವನ ವಿವಾಹವನ್ನು ನೆರವೇರಿಸಬೇಕು . ನಂತರ ಎಲ್ಲರೂ ಸೇರಿ ಭೋಜನ ಪ್ರಸಾದವನ್ನು ಸ್ವೀಕರಿಸಬೇಕು.

ನಂತರ ದ್ವಾದಶಿಯ ದಿನ ಕೂಡ ಮತ್ತೆ ತುಳಸಿ ದೇವಿಗೆ ಪೂಜೆ ಸಲ್ಲಿಸಿ. ನೀವು ಪೂಜೆ ಮಾಡುವಾಗ ನೆಲಕ್ಕೆ ಬಿದ್ದ ತುಳಸಿಯ ಎಲೆಯನ್ನು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ. ಇದನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದೂ ಸಹ ಹೇಳಲಾಗುತ್ತದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top