fbpx
ದೇವರು

ಇಂದು ಪ್ರಬೋಧಿನಿ ಏಕಾದಶಿ ಕಾರ್ತಿಕ ಮಾಸದ ಬಹಳ ದೊಡ್ಡ ಏಕಾದಶಿ ಈ ದಿನ ಈ ಐದು ಕೆಲಸಗಳನ್ನು ಮಾಡಿ ಕಷ್ಟಗಳು ಕಳೆದು ಒಳ್ಳೆ ದಿನ ಬರುತ್ತೆ

ಇಂದು ಪ್ರಬೋಧಿನಿ ಏಕಾದಶಿ ಕಾರ್ತಿಕ ಮಾಸದ ಬಹಳ ದೊಡ್ಡ ಏಕಾದಶಿ ಯಾಗಿದೆ. ಈ ದಿನ ಅವಶ್ಯವಾಗಿ ಈ ಐದು ಕೆಲಸಗಳನ್ನು ಮಾಡಿ .

 

ನಾಲ್ಕು ತಿಂಗಳ ನಂತರ ಶ್ರೀ ಮಹಾವಿಷ್ಣು ನಿದ್ರೆಯಿಂದ ಎಚ್ಚೆತ್ತುಕೊಳ್ಳುತ್ತಾನೆ. ಈ  ದಿನವನ್ನೇ ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿ. ಪ್ರಬೋಧಿನಿ ಏಕಾದಶಿ ಮತ್ತು ತುಳಸಿ ಏಕಾದಶಿಯಂದು ಸಹ ಕರೆಯುತ್ತಾರೆ . ಈ ಕಾರ್ತಿಕ ಮಾಸದ ಏಕಾದಶಿಯು ಮಂಗಳವಾರ ಬಂದಿರುವುದರಿಂದ ಇದು  ಈ ವರ್ಷದ ಬಹಳ ದೊಡ್ಡ ಏಕಾದಶಿಯಂದು ಪರಿಗಣಿಸಲಾಗಿದೆ.

 

ಈ ಐದು ಉಪಾಯಗಳನ್ನು ನಿಮ್ಮ ಮನೆಯಲ್ಲಿ ನಿಮ್ಮ ಜೀವನದಲ್ಲಿ ಒಳಿತನ್ನು ಮತ್ತು ಅದೃಷ್ಟವನ್ನು ಪಡೆಯಲು ಪಾಲಿಸಿರಿ.

 

ಶ್ರೀರಾಮನ ಪರಮಭಕ್ತ ಹನುಮಂತ ದೇವನ ಮುಂದೆ ಒಂದು ತೆಂಗಿನ ಕಾಯಿಯನ್ನು ಹಿಡಿದುಕೊಂಡು. ನಿಮ್ಮ ಸುತ್ತ ಏಳು ಸುತ್ತು ದೇಹಕ್ಕೆ ಸುತ್ತಿಸಿ ನಂತರ ಹನುಮಂತನ ಮುಂದೆ ಆ ತೆಂಗಿನಕಾಯಿಯನ್ನು ಒಡೆಯಿರಿ. ನಂತರ ಭಕ್ತಿಯಿಂದ ಕೈಮುಗಿದು ಎಲ್ಲ ಕಷ್ಟಗಳಿಂದ ಮುಕ್ತಗೊಳಿಸುವಂತೆ ಬೇಡಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಜೀವನದಲ್ಲಿರುವ ಸಮಸ್ಯೆಗಳು ದೂರವಾಗಿ ನಿಮಗೆ ಧನ ಸಂಪತ್ತು ಬಂದು ದೊರೆಯುವುದು.

 

 

ಈ ದಿನ ಏಕದಶಿಯ ಸಂಜೆ  ಶುಚಿರ್ಭೂತರಾಗಿ ತುಳಸಿಯ ಮುಂದೆ ಒಂದು ದೀಪವನ್ನು ಬೆಳಗಿಸಿ.ದೂಪ,ದೀಪಗಳಿ೦ದ ಪೂಜಿಸಿ. ಹೀಗೆ ಮಾಡುವುದರಿಂದ ನಿಮ್ಮ ಭಾಗ್ಯದ ಬಾಗಿಲು ತೆರೆಯುವುದು.

 

 

ಶ್ರೀ ಮಹಾಲಕ್ಷ್ಮಿ ದೇವಿ ಮತ್ತು ಭಗವಂತನಾದ ಶ್ರೀವಿಷ್ಣು ದೇವನಿಗೆ ಈ ದಿನ ರಾತ್ರಿ ಪೂಜೆ ಮಾಡಿ. ಮಹಾಲಕ್ಷ್ಮಿ ದೇವಿಯ ಪೂಜೆಯಲ್ಲಿ ಬಾಳೆಹಣ್ಣು, ಹಲ್ವಾ  ಮತ್ತು ಹಾಲಿನಿಂದ ಮಾಡಿದ ನೀರನ್ನು ಅವಶ್ಯವಾಗಿ  ಸಮರ್ಪಿಸಿ. ಹೀಗೆ ಮಾಡುವುದರಿಂದ ಶ್ರೀಹರಿ ವಿಷ್ಣು ಅತ್ಯಂತ ಪ್ರಸನ್ನನಾಗುತ್ತಾನೆ .ನಿಮ್ಮ ಮನೆಗೆ ಬಂದು ಆಶೀರ್ವದಿಸುತ್ತಾನೆ. ಎಲ್ಲಿ ಭಗವಂತನಾದ ಶ್ರೀಹರಿ ವಿಷ್ಣುವು ಬರುವನು ಅಲ್ಲಿಗೆ ಶ್ರೀ ಮಹಾಲಕ್ಷ್ಮೀ ದೇವಿಯ ಅವಶ್ಯವಾಗಿ ಬರುವಳು.

 

 

ಈ ದಿನ ಸಂಜೆ ಶಿವಲಿಂಗದ ಬಳಿ ಹೋಗಿ ಒಂದು ದೀಪವನ್ನು ಬೆಳಗಿಸಿ ಮತ್ತು ಅಕ್ಕಿಯನ್ನು ಅಥವಾ ಬೇಯಿಸಿದ ಅನ್ನವನ್ನು ನೈವೇದ್ಯವಾಗಿ ಸಮರ್ಪಿಸಿ . ಹೀಗೆ ಮಾಡುವುದರಿಂದ ಎಲ್ಲ ಪ್ರಕಾರದ ಸುಖ, ಶಾಂತಿ ,ನೆಮ್ಮದಿ ನಿಮ್ಮ ಜೀವನದಲ್ಲಿ ದೊರೆಯುತ್ತದೆ .

 

 

ಯಾವುದಾದರೂ ಒಂದು ಬಡ ವ್ಯಕ್ತಿಯನ್ನು ಮನೆಗೆ ಕರೆದು ಊಟ ಹಾಕಿ ಹೀಗೆ ಮಾಡುವುದರಿಂದ ಭಗವಂತನಾದ ವಿಷ್ಣು ಅತ್ಯಂತ ಪ್ರಸನ್ನನಾಗುತ್ತಾನೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top