fbpx
ದೇವರು

 ಏಕಾದಶಿಯ ದಿನ ಈ ಹನ್ನೊಂದು ಕೆಲಸ ಮಾಡಿದರೆ ಮನೆಗೆ ದರಿದ್ರ

ಈ ದಿನ  ಏಕಾದಶಿ ಮರೆತು ಕೂಡ ಈ ಹನ್ನೊಂದು ಕೆಲಸಗಳನ್ನು ಮಾಡಬೇಡಿ.

 

ಇಂದು ಬಂದಿರುವ ಪ್ರಬೋಧಿನಿ ಏಕಾದಶಿಯು ಕಾರ್ತಿಕ ಮಾಸದ   ಮಂಗಳವಾರದ ದಿನ ಬಂದಿರುವುದರಿಂದ ಈ ವರ್ಷದ ಬಹಳ ದೊಡ್ಡ ಏಕಾದಶಿಯಾಗಿದೆ .ಇದನ್ನು ತುಳಸಿ ಏಕಾದಶಿ ಎಂದು ಕೂಡ ಕರೆಯಲಾಗುತ್ತದೆ .ಈ ದಿನ ಕೆಲವು ಕಾರ್ಯಗಳನ್ನು ಮಾಡಬಾರದು ಹಾಗೇನಾದರೂ ಮಾಡಿದ್ದಲ್ಲಿ  ಜೀವನದಲ್ಲಿ ಬಹಳ ನಷ್ಟವನ್ನು ,ನೋವನ್ನು ಅನುಭವಿಸಬೇಕಾಗುವುದು.

 

 

 

 ಈಗ ನಾವು ನಿಮಗೆ ಕೆಲವು ಕಾರ್ಯಗಳನ್ನು ಇಲ್ಲಿ ಹೇಳುತ್ತೇವೆ .ಅವುಗಳನ್ನು ಯಾವುದೇ ಕಾರಣಕ್ಕೂ ಏಕಾದಶಿಯ ದಿನ ಮಾಡಲೇಬಾರದು…

 

1. ಏಕಾದಶಿಯ ದಿನ ಅನ್ನವನ್ನು ಯಾಕೆ ತಿನ್ನಬಾರದು.

 

 

 

ಬಹಳ ಜನರು ಕೇಳುತ್ತಾರೆ ಏಕಾದಶಿಯ ದಿನ ಮಾತ್ರ ಯಾಕೆ ಅನ್ನವನ್ನು ತಿನ್ನಬಾರದು. ಅದು ವರ್ಜಿತ ಎಂದು ಹೇಳಲಾಗಿದೆ. ಒಂದು ಪೌರಾಣಿಕ ಕಥೆಯ ಪ್ರಕಾರ ಮಾತ್ರ ಶಕ್ತಿಯ ಕ್ರೋಧದಿಂದ ಬಚಾವಾಗಲು ಮಹರ್ಷಿ ಮೇದರು ಶರೀರದ ತ್ಯಾಗವನ್ನು ಮಾಡಿದ್ದರು ಮತ್ತು ಅವರ ಅಂಶವು ಪೃಥ್ವಿಯಲ್ಲಿ ಅಂದರೆ ಭೂಮಿಯಲ್ಲಿ ಲೀನವಾಗಿದೆ. ಅಕ್ಕಿ ಮತ್ತು ಜೋಳದ ರೂಪದಲ್ಲಿ ಋಷಿ ಮೇದರು ಭೂಮಿಯಿಂದ ಉತ್ಪನ್ನವಾದರು. ಆದ್ದರಿಂದ ಅವುಗಳನ್ನು ತಿನ್ನಬಾರದು. ಯಾವ ದಿನ ಋಷಿ ಮೇದರು ಶರೀರ  ತ್ಯಾಗವನ್ನು  ಮಾಡಿದ್ದರೋ ಆ ದಿನವೇ ಏಕಾದಶಿ ತಿಥಿಯ ದಿನ ಆಗಿತ್ತು. ಆದ್ದರಿಂದ ಏಕಾದಶಿಯ ದಿನ ಅಕ್ಕಿಯನ್ನು ಅಥವಾ ಬೇಯಿಸಿದ ಅನ್ನವನ್ನು ತಿನ್ನಬಾರದು. ಇದು ವರ್ಜಿತ ಎಂದು ಹೇಳಲಾಗಿದೆ .ಈ ದಿನ ಅಕ್ಕಿ ಮತ್ತು ಅಕ್ಕಿಯಿಂದ ಮಾಡಿದ ಪದಾರ್ಥಗಳನ್ನು ತಿನ್ನುವುದು ಮಹರ್ಷಿ ಮೇದರ ಮಾಂಸವನ್ನು ತಿಂದ ಹಾಗೆ ಆದ್ದರಿಂದ ಅನ್ನವನ್ನು ತಿನ್ನುವುದು ವರ್ಜಿತ ಎಂದು ಹೇಳಲಾಗಿದೆ. ಹಿಂದೂ ಧರ್ಮದಲ್ಲಿ ಏಕಾದಶಿಯ ದಿನ ಅನ್ನವನ್ನು ನಿಷೇಧಿಸಲಾಗಿದೆ.

 

2. ಸಾತ್ವಿಕತೆಯನ್ನು ಪಾಲಿಸಬೇಕು.

 

 

ಸಾತ್ವಿಕತೆ ಎಂದರೆ ಏಕಾದಶಿ ದಿನ ಈರುಳ್ಳಿ, ಬೆಳ್ಳುಳ್ಳಿ ,ಮೊಟ್ಟೆ, ಮಾಂಸ ಸೇವನೆ ಮಾಡಬಾರದು. ಸುಳ್ಳನ್ನು ಸಹ ಹೇಳಬಾರದು ಬೇರೆಯವರ ಮನಸ್ಸಿಗೆ ನೋವುಂಟು ಮಾಡಬಾರದು. ಭಗವಂತನ ಸ್ಮರಣೆ ಮಾಡಬೇಕು. ಅನೇಕ ಜನ್ಮಗಳ ಪಾಪವು ನಾಶವಾಗಿ ಪುಣ್ಯವೂ ಲಭಿಸುವುದು .

 

3. ಎಲೆಗಳ ಆಟ ಅಥವಾ ಇಸ್ಪೀಟ್ ಕಾರ್ಡ್ ಗಳಿಂದ ಆಟ ಆಡಬಾರದು.

 

 

ಏಕಾದಶಿಯ ದಿನ ಈ ಎಲೆಗಳ ಅಥವಾ ಇಸ್ಪೀಟ್ ಕಾರ್ಡ್ ಗಳ ಆಟ ಆಡುವುದನ್ನು ನಿಷೇಧಿಸಲಾಗಿದೆ.ಈ  ದಿನ ಮಾತ್ರವಲ್ಲ ಯಾವುದೇ ದಿನ ಕೂಡ ಇದನ್ನು ಅಡಬಾರದು.ಈ ರೀತಿಯ ಆಟವನ್ನು ಆಡುವುದರಿ೦ದ ಅವರ ಪರಿವಾರವು ನಷ್ಟವಾಗುತ್ತದೆ. ಎಲ್ಲಾ ಆದಾಯದಲ್ಲಿಯೂ ಸಹ ನಷ್ಟ ಉಂಟಾಗಿ ಅಲ್ಲಿ ಅಧರ್ಮವು ತಾಂಡವವಾಡುತ್ತಿರುತ್ತದೆ. ಅವರಲ್ಲಿ ಎಲ್ಲವೂ ನಾಶವಾಗಿ ಕೊನೆಗೆ ಸಂಪೂರ್ಣವಾಗಿ ಎಲ್ಲವನ್ನೂ ಕಳೆದುಕೊಳ್ಳುವ ಪರಿಸ್ಥಿತಿಗೆ ಅವರು ಬರುತ್ತಾರೆ .

 

4. ಸುಳ್ಳನ್ನು ಹೇಳಬಾರದು.

 

 

ಏಕಾದಶಿಯ ದಿನ ಸುಳ್ಳನ್ನು ಹೇಳಬಾರದು. ಏಕಾದಶಿಯ ದಿನ ಮಾತ್ರವಲ್ಲ ಯಾವತ್ತೂ ಎಂದಿಗೂ ಕೂಡ ಸುಳ್ಳು ಹೇಳುವುದು ಮಹಾ ಅಪರಾಧವೇ ಆಗಿದೆ .ಪಾಪ ಮಾಡಿದಂತೆಯೇ ಇದು ಕೂಡ .ಸುಳ್ಳನ್ನು ಹೇಳುವುದೇ ತಮ್ಮ ಅಭ್ಯಾಸವನ್ನ ಗಿ ಮಾಡಿಕೊಂಡಿರುತ್ತಾರೆ. ಸತ್ಯವೂ ಸ್ವಲ್ಪ ಸಮಯದವರೆಗೆ ಮನಸ್ಸಿಗೆ ನೋವುಂಟು ಮಾಡಿದರೂ ಸಹ ಸುಳ್ಳು ಜೀವನ ಪರ್ಯಂತ ನೋವನ್ನು ಉಂಟುಮಾಡುತ್ತದೆ. ಅಷ್ಟೇ ಅಲ್ಲ ಯಾವತ್ತೂ ಎಂದಿಗೂ ಸಹ ಸುಳ್ಳನ್ನು ಹೇಳಬಾರದು. ಸುಳ್ಳನ್ನು ಹೇಳುವುದರಿಂದ ನಿಮ್ಮ ಮೇಲೆ ಇಟ್ಟಿರುವ ನಂಬಿಕೆ ಮತ್ತು ಆತ್ಮವಿಶ್ವಾಸ ಎರಡನ್ನೂ ಕಳೆದುಕೊಳ್ಳುತ್ತೀರ .ಸುಳ್ಳಿನಿಂದ ಸಾಧಿಸುವುದು ಏನೂ ಇಲ್ಲ ಸತ್ಯವನ್ನು ನುಡಿಯಿರಿ.

 

5. ಕೋಪವನ್ನು ಮಾಡಿಕೊಳ್ಳಬಾರದು.

 

ಏಕಾದಶಿ ದಿನ ಕೋಪವನ್ನು ಮಾಡಿಕೊಳ್ಳಬಾರದು. ಕೋಪವು ಮಾನಸಿಕ ಹಿಂಸೆಯನ್ನು ಉಂಟು ಮಾಡುತ್ತದೆ. ನೀವು ಯಾರ ಮೇಲಾದರೂ ಕೋಪವನ್ನು ಮಾಡಿಕೊಂಡಿದ್ದರೆ ಅದು ಬಾಯಿಯಿಂದಲೇ ಒಡೆದಂತಾಗುತ್ತದೆ. ಎಂಥದ್ದೇ ಕೋಪ ಭರಿಸುವ ಕೆಲಸವಾದರೂ ವಿಷಯವಾದರೂ ಸಹ ಏಕಾದಶಿಯ ದಿನ ಅದನ್ನು ನಿರ್ಲಕ್ಷಿಸಿಬಿಡಿ. ಅವರ ಮೇಲೆ ಕೋಪವನ್ನು ತೋರಿಸಬೇಡಿ.  ಕ್ರೋಧವು ಮೂರ್ಖತೆಯಿಂದ ಶುರುವಾಗುತ್ತದೆ ಮತ್ತು ಅದು ಪಶ್ಚಾತ್ತಾಪದಿಂದ ಕೊನೆಗೊಳ್ಳುತ್ತದೆ. ನಿಮ್ಮಲ್ಲಿ ನೀವು ಸಂಯಮ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಿ .

 

6. ಸ್ತ್ರೀ ಪುರುಷ ಸಂಬಂಧ ನಿಷೇಧ.

 

ಏಕಾದಶಿಯ ದಿನ ಪುರುಷರು ಸ್ತ್ರೀಯರಿಂದ ದೂರವಿರಬೇಕು ಅಥವಾ ಸ್ತ್ರೀಯರೇ ಪುರುಷರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ದೂರವಿರಬೇಕು .ಒಂದು ವೇಳೆ ಜೊತೆಗಿದ್ದರೆ ಮನಸ್ಸಿನಲ್ಲಿ ಏಕಾಗ್ರತೆಯ ಕೊರತೆಯು ಉಂಟಾಗಿ ಧ್ಯಾನದಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ಆಗುವುದಿಲ್ಲ. ಆದ್ದರಿಂದ ದೂರ ಇರುವುದೇ ಒಳ್ಳೆಯದು .

 

7.ಕಳ್ಳತನ ಮಾಡಬಾರದು.

 

 

ಕಳ್ಳತನ ಮಾಡುವುದು ಮಹಾಪಾಪ ಎಂದೇ ಪರಿಗಣಿಸಲಾಗಿದೆ. ಅದರಲ್ಲೂ ಏಕಾದಶಿಯ ದಿನ ಕಳ್ಳತನ ಮಾಡುವುದು ಘೋರ ಪಾಪ ಕರ್ಮಗಳಿಗೆ ಗುರಿಯಾಗುತ್ತೀರಿ. ಯಾರಾದ್ದಾದರೂ ಬೇರೆಯವರ ವಸ್ತುವಾಗಲಿ ಅಥವಾ ಎಷ್ಟೇ ದೊಡ್ಡ ಮೊತ್ತದ ಹಣವಾಗಲಿ ಕಳ್ಳತನ  ಮಾಡಬೇಡಿ. ಕಳ್ಳತನ ಮಾಡಿದ ವಸ್ತು ಪರಿವಾರ ಮತ್ತು ಸಮಾಜದಲ್ಲಿ ಎಷ್ಟು ದಿನ ಬಾಳಿಕೆ ಬರುವುದು. ನೀವು ಕಳ್ಳತನ ಮಾಡಿದರೆ ತಪ್ಪನ್ನು ಜೀವನ ಪೂರ್ತಿ ನೀವು ಅನುಭವಿಸಬೇಕಾಗುತ್ತದೆ .

 

8. ಬೇರೆಯವರನ್ನು ನಿಂದಿಸಬೇಡಿ.

 

 

ಕೆಲವರು ಇದನ್ನೇ ಅಭ್ಯಾಸವನ್ನಾಗಿ ಮಾಡಿಕೊಂಡುಬಿಟ್ಟಿದ್ದಾರೆ. ನಾಲ್ಕು ಜನ ಕುಂತಿದ್ದರೆ ಅವರನ್ನು ಆಡಿಕೊಳ್ಳುತ್ತಾರೆ ಮತ್ತೊಬ್ಬರು ಇನ್ನೊಬ್ಬರನ್ನು ನೋಡಿ ನಗುತ್ತಾರೆ. ಇದು ತಪ್ಪು ಅವರು ಅಲ್ಲಿಂದ ಆ ಸ್ಥಳದಿಂದ ಎದ್ದು ಹೋದ ಮೇಲೆ ನಂತರ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ನಂತರ ಇನ್ನೊಬ್ಬರು ಎದ್ದು  ಹೋದ ಮೇಲೆ ಅವರ ಬಗ್ಗೆಯೂ ಕೆಟ್ಟದಾಗಿ ಮಾತನಾಡುತ್ತಾರೆ. ಹೀಗೆ ಮಾತನಾಡುವುದು ಒಳ್ಳೆಯದಲ್ಲ .ಈ ರೀತಿಯ ಕೆಟ್ಟ ಯೋಚನೆ ಭಾವನೆ ನಿಮ್ಮ ಮನಸ್ಸಿನಲ್ಲಿ ಬಂದರೆ  “ಓಂ ನಮೋ ಭಗವತೇ ವಾಸುದೇವಾ ನಮಃ” ಎಂಬ ಮಂತ್ರವನ್ನು ಜಪಿಸಿರಿ. ಈ ರೀತಿಯ ಕೆಟ್ಟ ಭಾವನೆ ದೂರವಾಗುತ್ತದೆ .

 

9. ಚಾಡಿ ಹೇಳುವುದು.

 

 

ದೊಡ್ಡ ಅಪವಾದ ಏಕಾದಶಿಯ ರಿನ ಚಾಡಿಯನ್ನು ಹೇಳಬಾರದು . ಏಕಾದಶಿಯ ದಿನ ಮಾತ್ರವಲ್ಲ. ಯಾವ ದಿನವಾದರೂ ಸಹ ಜೀವನದಲ್ಲಿ ಈ ಚಾಡಿ ಹೇಳುವ ಅಭ್ಯಾಸವನ್ನು ಇಟ್ಟುಕೊಳ್ಳಬಾರದು. ಯಾರ ಮೇಲಾದರೂ ಚಾಡಿ ಹೇಳಿದರೆ ನೀವು ನಿಮ್ಮ ಗೌರವವನ್ನು ಕಳೆದುಕೊಳ್ಳುತ್ತೀರ. ನಿಮ್ಮನ್ನು ಯಾರೂ ಸಹ ನಂಬುವುದಿಲ್ಲ. ನಿಮ್ಮ ಮೇಲಿರುವ ಆತ್ಮವಿಶ್ವಾಸವೂ ಸಹ ಕಡಿಮೆಯಾಗುತ್ತದೆ. ಬೇರೆಯವರ ಬಗ್ಗೆ ನೀವು ಬಂದು  ಚಾಡಿ ಹೇಳಿದರೆ ಹಾಗೆ ನೀವು ಇಲ್ಲದೇ ಇರುವಾಗ ನಿಮ್ಮ ಬಗ್ಗೆಯೂ ಸಹ ಚಾಡಿ ಹೇಳುತ್ತಾರೆ. ಆದ್ದರಿಂದ ಚಾಡಿ ಹೇಳುವವರನ್ನು ನಂಬಬೇಡಿ. ಅವರ ಮೇಲೆ ವಿಶ್ವಾಸವನ್ನು ಸಹ ಇಟ್ಟುಕೊಳ್ಳಬೇಡಿ.

 

10. ಏಕಾದಶಿಯ ದಿನ ಹಗಲು ಹೊತ್ತಿನಲ್ಲಿ ನಿದ್ರೆ ಮಾಡಬಾರದು.

 

 

ಏಕಾದಶಿಯ ದಿನ ಹಗಲು ಹೊತ್ತಿನಲ್ಲಿ ಮಾತ್ರ ಅಷ್ಟೇ ಅಲ್ಲ ರಾತ್ರಿಯ ಸಮಯದಲ್ಲಿಯೂ ಕೂಡಾ ನಿದ್ರೆಯನ್ನು ಮಾಡಬಾರದು .ರಾತ್ರಿಯ ಸಮಯದಲ್ಲಿ ವಿಷ್ಣುವಿನ ಭಕ್ತಿಯಲ್ಲಿ ತಲ್ಲೀನರಾಗಿ ರಾತ್ರಿ ಪೂರ್ತಿ ವಿಷ್ಣು ದೇವನ ಫೋಟೋ ಮುಂದೆ ಕುಳಿತು ಭಜನೆ ಮತ್ತು ಧ್ಯಾನವನ್ನು ಮಾಡಬೇಕು. ಇದರಿಂದ ವಿಷ್ಣು ದೇವನು ಆಶೀರ್ವಾದವೂ ದೊರೆಯುವುದು.

11. ಏಕಾದಶಿಯ ದಿನ ಎಲೆ ಅಡಿಕೆ ಪಾನ್ ತಿನ್ನುವುದು ವರ್ಜಿತ.

 

 

ಎಲೆ ಅಡಿಕೆ ತಿನ್ನಬಾರದು. ಯಾಕೆಂದರೆ  ಇದರಲ್ಲಿ ರಜಸ್ ಗುಣಗಳು ಇರುತ್ತವೆ. ಆದ್ದರಿಂದ ಎಲೆ ಅಡಿಕೆಯ ಸೇವನೆಯನ್ನು ನಿಷೇಧಿಸಲಾಗಿದೆ.

ಹಾಗೆ ಏಕಾದಶಿಯ ದಿನ ಈ ಕೆಲಸಗಳನ್ನು ಮಾಡಬೇಡಿ ಇವುಗಳಿಂದ ದೂರವಿರಿ. ಹಾಗೆ ಕೂದಲು ಕತ್ತರಿಸುವುದು, ದಾಡಿ ತೆಗೆಸುವುದು ಏಕಾದಶಿಯ ದಿನ ನಿಷೇಧಿಸಲಾಗಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top