fbpx
ಉಪಯುಕ್ತ ಮಾಹಿತಿ

ಮಾಗಡಿಯ ಐತಿಹಾಸಿಕ ಶ್ರೀಸೋಮೇಶ್ವರ ದೇವಾಲಯದ ಅಚ್ಚರಿಯ ಮಹಿಮೆಗಳನ್ನ ತಿಳ್ಕೊಂಡ್ರೆ ನೀವು ಹೋಗಬೇಕು ಅಂತೀರಾ..

ಮಾಗಡಿಯ ಐತಿಹಾಸಿಕ ಶ್ರೀಸೋಮೇಶ್ವರ ದೇವಾಲಯದ ಅಚ್ಚರಿಯ ಮಹಿಮೆಗಳನ್ನ ತಿಳ್ಕೊಂಡ್ರೆ ನೀವು ಹೋಗಬೇಕು ಅಂತೀರಾ..

 

 

ಮಾಗಡಿ ಬಸ್ ನಿಲ್ದಾಣದಿಂದ 2 ಕಿ.ಮೀ ದೂರದಲ್ಲಿ ಮತ್ತು ಬೆಂಗಳೂರು ಸಿಟಿ ಜಂಕ್ಷನ್ ನಿಂದ 47.5 ಕಿ.ಮೀ ದೂರದಲ್ಲಿ, ಇರುವ ಶ್ರೀ ಸೋಮೇಶ್ವರ ದೇವಸ್ಥಾನವು ಮಾಗಡಿ ಪಟ್ಟಣದಲ್ಲಿರುವ ಅತ್ಯಂತ ಹಳೆಯ ಮತ್ತು ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಮುಂದೆ ಓದಿ

 

 

ಈ ದೇವಾಲಯವು 16 ನೇ ಶತಮಾನದ ಅರಂಭದಲ್ಲಿ ನಿರ್ಮಾಣವಾಗಿದ್ದು. ಈ ದೇವಸ್ಥಾನವನ್ನು 1512 ರಲ್ಲಿ ಶ್ರೀ ನಾಡಪ್ರಭು ಕೆಂಪೇಗೌಡ ಅವರು ನಿರ್ಮಿಸಿದರು. ಈ ದೇವಾಲಯವು ವಿಶಾಲ ಪ್ರದೇಶವನ್ನು ಹೊಂದಿದೆ ಮತ್ತು ವಿಶಾಲ ಒಳಗಿನ ಅಂಗಳದಲ್ಲಿ ಎತ್ತರದ ಮಂಟಪಗಳನ್ನು ಹೊಂದಿದೆ.. ಆದರೆ ದೇವಸ್ಥಾನ ಉಸ್ತುವಾರಿಯ ನಿರ್ಲಕ್ಷ್ಯ ಮತ್ತು ನಿರ್ವಹಣೆಯಯಿಂದಾಗಿ ಈ ಮಂಟಪಗಳು ಈಗ ಅವಶೇಷಗಳಾಗಿವೆ.

 

 

ಶ್ರೀ ಸೋಮೇಶ್ವರ ದೇವಸ್ಥಾನವನ್ನು ಶಿವನಿಗೆ ಸಮರ್ಪಿಸಲಾಗಿದ್ದು. ದೇವಸ್ಥಾನದ ಸ್ತಂಭಗಳಳ್ಳಿ ಮಾನವರ, ಹಕ್ಕಿಗಳ, ಪ್ರಾಣಿಗಳ ಸುಂದರವಾದ ಶಿಲ್ಪಕಲೆಗಳು ಇವೆ. ಈ ದೇವಸ್ಥಾನ ಹೊಯ್ಸಳಶೈಲಿಯ ವಾಸ್ತುಶೈಲಿಯಲ್ಲಿ ನಿರ್ಮಿತವಾಗಿದೆ ಮತ್ತು ಸ್ತಂಭಗಳ ಮೇಲೆ ಸಿಂಹಗಳು, ಸೈನಿಕರು ಮತ್ತು ನೃತ್ಯಗಾರ್ತಿಯರ ವಿಶಿಷ್ಟ ಸಂಕೇತಗಳಿವೆ. ಮುಖ್ಯ ದೇವಸ್ಥಾನದ ಎಡಭಾಗದಲ್ಲಿ ಪಾರ್ವತಿಗೆ ಸಮರ್ಪಿತವಾದ ಸಣ್ಣ ದೇವಸ್ಥಾನವಿದೆ, ಇದು ಒಳಾಂಗಣದ ನಾಲ್ಕು ಗೋಡೆಗಳು ಮತ್ತು ಮುಂದೆ ಕೆಲವು ದೂರದಲ್ಲಿ ದೊಡ್ಡ ಕೊಳದಲ್ಲಿ ಸಣ್ಣ ಗೋಪುರಗಳನ್ನು ಹೊಂದಿದೆ. ಸೋಮೇಶ್ವರ ದೇವರ ಗರ್ಭಗುಡಿಯ ಸ್ವಲ್ಪ ದೂರದಲ್ಲಿ ನಂದಿಯ ಮಂಟಪವಿದೆ.

 

 

ಪ್ರತಿ ವರ್ಷ ರಥಸಪ್ತಮಿ ದಿನದಂದು ಸೋಮೇಶ್ವರನಿಗೆ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ.ಈ ಜಾತ್ರಾ ಮಹೋತ್ಸವದಲ್ಲಿ ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ಸೋಮೇಶ್ವರ ಸ್ವಾಮಿಯ ತೇರನ್ನು ಎಳೆದು ಕೋರಿಕೆಗಳನ್ನ ಈಡೇರಿಸುವಂತೆ ದೇವರಲ್ಲಿ ಬೇಡಿಕೊಳ್ಳುತ್ತಾರೆ.. ಈ ದೇವಸ್ಥಾನಕ್ಕೆ ಬಂದು ಹರಕೆ ಕಟ್ಟಿಕೊಂಡು ಪೂಜೆ ಮಾಡಿಸಿದರೆ ಎಂಥದ್ದೇ ಕಷ್ಟ ಆದರೂ ಪರಿಹಾರವಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ..

 

 

ದೇವಸ್ಥಾನದ ಪೂಜಾ ಸಮಯ:ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 9 ಗಂಟೆಯಿಂದ ಮದ್ಯಾಹ್ನ 12 ಗಂಟೆವರೆಗೆ ಮತ್ತು ಸಂಜೆ 6 ಗಂಟೆಯಿಂದ ರಾತ್ರಿ 8 ಗಂಟೆವರೆಗೆ,, ಶನಿವಾರ, ಭಾನುವಾರ ಮತ್ತು ಉತ್ಸವದ ದಿನಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಪೂಜೆ ಇರುತ್ತದೆ. ಈ ದೇವಸ್ಥಾನಕ್ಕೆ ಬೆಂಗಳೂರಿನಿಂದ ತಾವರೆಕೆರೆ-ತಿಪ್ಪಗೊಂಡನಹಳ್ಳಿ ಮಾರ್ಗವಾಗಿ ಮತ್ತು ನೆಲಮಂಗಲ-ಗುಡೇಮಾರನಹಳ್ಳಿ ಮಾರ್ಗವಾಗಿ ಬರಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top