ತಿಂಡಿ ತೀರ್ಥ

ಕರ್ನಾಟಕದ ಅತಿ ಜನಪ್ರಿಯ ಬೆಳಗ್ಗಿನ ತಿಂಡಿ ಮೈಸೂರು ಮಸಾಲೆ ದೋಸೆ ಮಾಡುವ ವಿಧಾನ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಮೈಸೂರು ಮಸಾಲೆ ದೋಸೆ ಬೇಕಾಗುವ ಪದಾರ್ಥಗಳು:

*ಇಡ್ಲಿ ಅಕ್ಕಿ – 2 ಬಟ್ಟಲು

*ಮೆಂತ್ಯ- 2 ಚಮಚ

*ಉದ್ದಿನ ಬೇಳೆ – ಅರ್ಧ ಬಟ್ಟಲು

*ಕಡಲೆ ಬೇಳೆ – ಕಾಲು ಬಟ್ಟಲು

*ತೊಗರಿಬೇಳೆ -ಕಾಲು ಬಟ್ಟಲು

*ಅವಲಕ್ಕಿ – ಕಾಲು ಬಟ್ಟಲು

*ಅರಿಶಿಣದ ಪುಡಿ – ಕಾಲು ಚಮಚ

*ರವೆ – 1 ಬಟ್ಟಲು

*ಸಕ್ಕರೆ – ಅರ್ಧ ಚಮಚ

*ಉಪ್ಪು – ರುಚಿಗೆ ತಕ್ಕಷ್ಟು

*ಎಣ್ಣೆ – ಅಗತ್ಯಕ್ಕನುಗುಣವಾಗಿ

ಮೈಸೂರು ಮಸಾಲೆ ದೋಸೆ ಮಾಡುವ ವಿಧಾನ ವಿಧಾನ:

*ಪಾತ್ರೆಯೊಂದನ್ನು ತೆಗೆದುಕೊಂಡು ಅಕ್ಕಿ, ಉದ್ದಿನ ಬೇಳೆ, ಕಡಲೆ ಬೇಳೆ, ತೊಗರಿ ಬೇಳೆ ಹಾಗೂ ಮೆಂತ್ಯವನ್ನು ಹಾಕಿ ಕನಿಷ್ಠ 4 ಗಂಟೆಗಳ ಕಾಲ ನೆನೆಸಬೇಕು.

*ಅವಲಕ್ಕಿಯನ್ನು ಪ್ರತ್ಯೇಕವಾಗಿ 1 ಗಂಟೆಗಳ ಕಾಲ ನೆನೆಹಾಕಬೇಕು.

*ನಂತರ ಮಿಕ್ಸಿ ಜಾರ್ ತೆಗೆದುಕೊಂಡು ನೆನೆ ಹಾಕಿದ್ದ ಅಕ್ಕಿ, ಉದ್ದಿನ ಬೇಳೆಯನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಅವಲಕ್ಕಿಯನ್ನು ರುಬ್ಬಿಕೊಂಡು, ಪಾತ್ರೆಯೊಂದಕ್ಕೆ ಹಾಕಿ ಉಪ್ಪು ಹಾಕಿ 12 ಗಂಟೆಗಳ ಕಾಲ ನೆನೆಯಲು ಬಿಡಬೇಕು.

*ನಂತರ ಇದಕ್ಕೆ ಸಕ್ಕರೆ, ರವೆ, ಅರಿಶಿಣದ ಪುಡಿ, ಚಿಟಿಕೆ ಅಡುಗೆ ಸೋಡಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.

*ನಂತರ ಒಲೆಯ ಮೇಲೆ ಪ್ಯಾನ್ ಇಟ್ಟು ಚೆನ್ನಾಗಿ ಕಾದ ನಂತರ ಹಿಟ್ಟನ್ನು ಹಾಕಿ ದೋಸೆಯಾಕಾರದಲ್ಲಿ ಹಾಕಿ ಕೆಂಪಗೆ ಸುಡಬೇಕು. ನಂತರ ಕೆಂಪು ಚಟ್ನಿಯನ್ನು ಒಂದು ಭಾಗದಲ್ಲಿ ಹಚ್ಚಿ ತೆಗೆಯಬೇಕು. ಆಲೂಗಡ್ಡೆ ಪಲ್ಯ ಹಾಗೂ ಕಾಯಿ ಚಟ್ನಿಯೊಂದಿಗೆ ದೋಸೆಯನ್ನು ತಿಂದರೆ ರುಚಿ ಮತ್ತಷ್ಟು ಹೆಚ್ಚುತ್ತದೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top