fbpx
ದೇವರು

ಈ ನರಸಿಂಹ ಸ್ವಾಮಿಯ ದೇವಸ್ಥಾನದಲ್ಲಿ ಸುಲಿಯದ ತೆಂಗಿನ ಕಾಯಿಯನ್ನು ಕಟ್ಟಿ ದೇವರಲ್ಲಿ ಹರಕೆ ಕಟ್ಟಿಕೊಂಡರೇ ಭಕ್ತರ ಆಸೆಗಳು ನೆರವೇರಿ ಕಷ್ಟಗಳು ಕಳೆಯುತ್ತವೆಯಂತೆ

ಈ ನರಸಿಂಹ ಸ್ವಾಮಿಯ ದೇವಸ್ಥಾನದಲ್ಲಿ ಸುಲಿಯದ ತೆಂಗಿನ ಕಾಯಿಯನ್ನು ಕಟ್ಟಿ ದೇವರಲ್ಲಿ ಹರಕೆ ಕಟ್ಟಿಕೊಂಡರೇ ಭಕ್ತರ ಆಸೆಗಳು ನೆರವೇರಿ ಕಷ್ಟಗಳು ಕಳೆಯುತ್ತವೆಯಂತೆ

 

ನದಿ ನರಸಿಂಹಸ್ವಾಮಿ ದೇವಸ್ಥಾನ :

 

ಬೆಂಗಳೂರಿನಿಂದ ಮೈಸೂರಿಗೆ ಹೋಗುವ ಚನ್ನಪಟ್ಟಣದ ದಾರಿಯಲ್ಲಿ ದೊಡ್ಡ ಮಳೂರಿನ ಬಳಿ ಇರುವ ದೇವಸ್ಥಾನವೇ ಈ ನದಿ ನರಸಿಂಹಸ್ವಾಮಿ ದೇವಸ್ಥಾನ.
ಈ ನರಸಿಂಹಸ್ವಾಮಿ ದೇವಸ್ಥಾನವನ್ನು ಕಣ್ವ ಮಹರ್ಷಿ ಪ್ರತಿಷ್ಠಾಪಿಸಿದರು ,ಈ ದೇವಸ್ಥಾನ ನದಿಯ ಪಕ್ಕ ಇರುವುದರಿಂದ ಈ ದೇವಸ್ಥಾನಕ್ಕೆ ನದಿ ನರಸಿಂಹಸ್ವಾಮಿ ಎಂದು ಕರೆಯುತ್ತಾರೆ.

ಈ ದೇವಸ್ಥಾನ ಊರಿನ ಹೊರಗಡೆ ಇದೆ.

 

 

ಆ ಊರಿನ ಜನರು ಹೇಳುವಂತೆ ಮುಂಚೆ ಈ ದೇವಾಲಯದ ಹತ್ತಿರವೇ ಊರು ಇತ್ತಂತೆ .ಆದರೆ ಒಂದು ಪ್ರವಾಹ ಬಂದು ಇಡೀ ಊರೇ ಮುಳುಗಿ ಹೋಗಿ ಬರಿ ಮರಳು ಉಳಿತಂತೆ ಅದರಿಂದ ಈ ಊರಿಗೆ ಮರಳೂರು ಎಂದು ಹೆಸರು ಬಂತು ನಂತರ ಈ ಊರನ್ನು ದೊಡ್ಡ ಮರಳೂರು ಮತ್ತು ಚಿಕ್ಕ ಮರಳೂರು ಎಂದು ವಿಭಜನೆ ಮಾಡಲಾಯಿತ್ತು .

ಒಂದು ಸಲ ಕಣ್ವ ಮಹರ್ಷಿಯರ ಕನಸಿನಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿ ಬಂದು ಕಾವೇರಿ ನದಿಯ ದಡದಲ್ಲಿ ತನ್ನನ್ನು ಪ್ರತಿಷ್ಠಾಪಿಸಿ ಪೂಜಿಸುವಂತೆ ಸೂಚನೆ ನೀಡುತ್ತಾರೆ ಅದರಿಂದ ಲಕ್ಷ್ಮಿ ನರಸಿಂಹ ಸ್ವಾಮಿ ಅಲ್ಲಿಯೇ ಇದ್ದು ಭಕ್ತರನ್ನು ಕಾಪಾಡುತಿದ್ದಾರೆ ಎಂಬ ಪ್ರತೀತಿ ಇದೆ.

 

 

ಇತಿಹಾಸದ ಪ್ರಕಾರ ನಾಲ್ವಡಿ ಕೃಷ್ಣರಾಜ ಒಡೆಯರು ಈ ದೇವಸ್ಥಾನಕ್ಕೆ 12 ಎಕರೆ ಭೂಮಿಯನ್ನು ಇನಾಂ ಆಗಿ ನೀಡಿದ್ದಾರೆ .

ಸ್ವಾತಿ ನಕ್ಷತ್ರ ದಲ್ಲಿ ನಡೆಯುವ ಪೂಜೆ ಇಲ್ಲಿ ವಿಶೇಷ .ದೇವಸ್ಥಾನದ ಗರ್ಭಗುಡಿಯಲ್ಲಿ ಲಕ್ಷ್ಮೀನರಸಿಂಹಸ್ವಾಮಿ ಮೂರ್ತಿ ನೋಡಬಹುದು.ಗರ್ಭಗುಡಿಯ ಪಕ್ಕದಲ್ಲಿ ಒಂದು ಸುಂದರ ಗಣಪತಿ ಮೂರ್ತಿ ಇದೆ.

 

 

ಆ ದೇವಸ್ಥಾನದ ಒಂದು ಜಾಗದಲ್ಲಿ ಕಬ್ಬಿಣದ ಸರಳುಗಳಿವೆ ಆ ಸರಳುಗಳಿಗೆ ಸುಲಿಯದ ತೆಂಗಿನ ಕಾಯಿ ಗಳನ್ನೂ ಕಟ್ಟಿ ದೇವರಲ್ಲಿ ಹರಕೆ ಕಟ್ಟಿಕೊಂಡು 48 ಪ್ರದಕ್ಷಣೆ ಹಾಕಿದರೆ ಭಕ್ತರ ಮನಸ್ಸಿನಲ್ಲಿ ಇರುವ ಎಲ್ಲ ಕೋರಿಕೆಗಳು ನೆರವೇರುತ್ತದೆ ಎಂದು ಪ್ರತೀತಿ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top