fbpx
ರಾಜಕೀಯ

ಉಪೇಂದ್ರರವರ ಹೊಸ ಪಕ್ಷದ ಹೆಸರು “ಕೆಪಿಜೆಪಿ” ಎಂದು ಘೋಷಣೆ.. ಪಕ್ಷದ ಚಿಹ್ನೆ ಯಾವುದು ಗೊತ್ತಾ..?

ಉಪೇಂದ್ರರವರ ಹೊಸ ಪಕ್ಷದ ಹೆಸರು “ಕೆಪಿಜೆಪಿ” ಎಂದು ಘೋಷಣೆ.. ಪಕ್ಷದ ಚಿಹ್ನೆ ಯಾವುದು ಗೊತ್ತಾ..?

 

 

ಕೆಲವು ದಿನಗಳಹಿಂದೆ ಸುದ್ದಿಗೋಷ್ಟಿ ಮಾಡಿ ಮಾತನಾಡಿದ ಉಪೇಂದ್ರ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಜನ ಸಾಮಾನ್ಯರಲ್ಲ, ಜನರು ಅಸಾಮಾನ್ಯರು. ಜಾತಿ ಹಾಗೂ ಹಣಬಲದಿಂದ ರಾಜಕೀಯ ಮಾಡಬಾರದು. ಇದನ್ನು ಹೊರತುಪಡಿಸಿ ಒಂದು ಪ್ರಯೋಗಕ್ಕೆ ಕೈ ಹಾಕಲು ಹೊರಟಿದ್ದೇನೆ ಎಂದು ಹೇಳಿ ಪ್ರಕಾಕೀಯ ಎಂಬ ಪರಿಕಲ್ಪನೆಯಲ್ಲಿ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು.. ಮುಂದೆ ಓದಿ

 

 

ಕಳೆದ ಎರಡು ತಿಂಗಳಿನಲ್ಲಿ ವಿವಿಧ ಕ್ಷೇತ್ರಗಳ ಸಾಧಕರು, ಹಿರಿಯಗಣ್ಯರೊಂದಿಗೆ ಚರ್ಚೆ ನಡಿಸಿರುವ ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ರಾಜಕೀಯ ರೂಪುರೇಷೆ ಸಿದ್ಧಪಡಿಸಿಕೊಂಡಿದ್ದ ಉಪೇಂದ್ರ ಇಂದು ಶಿವಾನಂದ ಸರ್ಕಲ್ ಬಳಿ ಇರುವ ಗಾಂಧಿಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಪಕ್ಷದ ಹೆಸರನ್ನು ಘೋಷಿಸಿದ್ದು ಪಕ್ಷಕ್ಕೆ ‘ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ’ (KPJP) ಎಂಬ ಹೆಸರನ್ನು ಇಟ್ಟಿದ್ದಾರೆ.

 

 

ಪಕ್ಷದ ಚಿಹ್ನೆ ಯಾವುದು?

‘ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ’ ಪಕ್ಷದ ಚಿಹ್ನೆಯು ಕಾರ್ಮಿಕರು ಮತ್ತು ಕೆಳವರ್ಗದವರನ್ನು ಬಿಂಬಿಸುವಂತಿರಬೇಕು ಎಂಬ ಉದ್ದೇಶದಿಂದ ತಮ್ಮ ನೂತನ ಪಕ್ಷಕ್ಕಾಗಿ ಉಪೇಂದ್ರ 3 ಚಿಹ್ನೆಗಳನ್ನು ಸಿದ್ಧಪಡಿಸಿಕೊಂಡಿದ್ದಾರಂತೆ.. ಆಟೋರಿಕ್ಷಾ, ಚಪ್ಪಲಿಗಳನ್ನೂ ಸೇರಿದಂತೆ ಆ 3 ಚಿಹ್ನೆಗಳನ್ನು ಚುನಾವಣಾ ಆಯೋಗಕ್ಕೆ ಕಳುಹಿಸಿದ್ದಾರಂತೆ. ಆದರೆ ಈ ಮೂರು ಚಿಹ್ನೆಗಳ ಪೈಕಿ ಆಟೋರಿಕ್ಷಾ ಚಿಹ್ನೆ ಬಗ್ಗೆ ಉಪೇಂದ್ರರಿಗೆ ಮೊದಲ ಆದ್ಯತೆ ಇದೆ ಎಂದು ಉಪ್ಪಿ ಹೇಳಿದ್ದಾರೆ.

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top