fbpx
ಸಮಾಚಾರ

ಸಾಯೋ ಸ್ಥಿತಿಯಲ್ಲಿದ್ದ ಸಿಹಿ ಕಹಿ ಚಂದ್ರು ಉಳಿಸಿದ್ದು ಕರುಣಾಮಯಿ ವಿಷ್ಣುವರ್ಧನ್ ಅಂತೇ..ಬಿಗ್’ಬಾಸ್ ಮನೆಯಲ್ಲಿ ಸಾಹಸಸಿಂಹನನ್ನ ನೆನಸಿಕೊಂಡ ಚಂದ್ರು.

ಸಾಯೋ ಸ್ಥಿತಿಯಲ್ಲಿದ್ದ ಸಿಹಿ ಕಹಿ ಚಂದ್ರು ಉಳಿಸಿದ್ದು ಕರುಣಾಮಯಿ ವಿಷ್ಣುವರ್ಧನ್ ಅಂತೇ..ಬಿಗ್’ಬಾಸ್ ಮನೆಯಲ್ಲಿ ಸಾಹಸಸಿಂಹನನ್ನ ನೆನಸಿಕೊಂಡ ಚಂದ್ರು.

 

 

ಕನ್ನಡ ಚಿತ್ರರಂಗದ ಹಿರಿಯ ನಟ ಸಾಹಸಸಿಂಹ ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಒಳ್ಳೆಯ ಮಾನವೀಯತೆಯನ್ನು ಹೊಂದಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ತಮ್ಮ ಸರಳ ವ್ಯಕ್ತಿತ್ವ , ಸಜ್ಜನಿಕೆ, ವಿಶಾಲ ಹೃದಯದ ಮನೋಭಾವದಿಂದ ಭಾರತೀಯ ಚಿತ್ರರಂಗದಲ್ಲಿ ವಿಷ್ಣು ಹೆಸರು ಅಜರಾಮರವಾಗಿ ಉಳಿದಿದೆ.. ಇದೆ ವಿಷ್ಣುದಾದನ ಹೃದಯ ಶ್ರೀಮಂತಿಕೆ ಮತ್ತೊಂದು ಸಾಕ್ಷಿ ಬಿಗ್’ಬಾಸ್ ಸೀಸನ್-5ನಲ್ಲಿ ಸಿಕ್ಕಿದೆ..ಮುಂದೆ ಓದಿ.

 

 

ಬಿಗ್ ಬಾಸ್ ಮನೆಯಲ್ಲಿ ಮಾತನಾಡುತ್ತಿರುವಾಗ ಜೆಕೆ ಮತ್ತು ಸಿಹಿ ಕಹಿ ಚಂದ್ರು ರವರು ವಿಷ್ಣುದಾದಾ ಬಗ್ಗೆ ಮಾತನಾಡಿದ್ದಾರೆ.. ಮಾರಣಾಂತಿಕ ಕಾಯಿಲೆ ಬಂದು ಸಾಯೋ ಸ್ಥಿತಿಯಲ್ಲಿದ್ದ ಸಿಹಿ ಕಹಿ ಚಂದ್ರುರವರನ್ನು ಡಾ.ವಿಷ್ಣು ಉಳಿಸಿದ್ದು ಇದನ್ನ ಸ್ವತಃ ಚಂದ್ರು ರವರು ಜೆಕೆ ಬಳಿ ಹೇಳಿಕೊಂಡಿದ್ದಾರೆ..ಚಂದ್ರುರವರಿಗೆ ಮೊದಲ ಮಗು ಹುಟ್ಟಿದಾಗ ವಿಷ್ಣು ಜೊತೆ ರವಿವರ್ಮ ಸಿನಿಮಾಗೆ ಕೆಲಸ ಮಾಡಬೇಕಿತ್ತು. ಆದರೆ ಅಷ್ಟೊತ್ತಿಗೆ ಅವರಿಗೆ ಮಾರಣಾಂತಿಕ ಕಾಯಿಲೆಯೊಂದು ಬಂದಿದ್ದಂತೆ. ಈ ಕಾಯಿಲೆ ಜಗತ್ತಿನಲ್ಲಿ ಕೇವಲ ಬೆರಳೆಣಿಕೆಯಷ್ಟು ಜನಕ್ಕೆ ಮಾತ್ರ ಬಂದಿದೆ ನೀವು ಉಳಿಯೋದು ಡೌಟ್ ಅಂತ ಡಾಕ್ಟರ್ ಹೇಳಿದ್ರು. ಒಂದು ವೇಳೆ ಉಳಿಯಬೇಕಂದ್ರೆ ಅಮೇರಿಕಾದ ಔಷಧಿಗಳ ಅವಶ್ಯಕತೆ ಇದೆ ಹಾಗೂ ಆ ಔಷಧಿಗಳಿಗೆ ಲಕ್ಷಾಂತರ ರೂಪಾಯಿಗಳು ಖರ್ಚಾಗುತ್ತದೆ ಎಂದು ಹೇಳಿದ್ದರು.

 

 

ಆ ಸಮಯ್ಯದಲ್ಲಿ ಒಂದು ಸಿನಿಮಾದಲ್ಲಿ ಎರಡರಿಂದ ಮೂರು ಸಾವಿರ ದುಡಿಯುತ್ತಿದ್ದ ಚಂದ್ರುರವರಿಗೆ ಲಕ್ಷಗಳನ್ನು ಹೊಂದಿಸುವುದು ಅಸಾಧ್ಯವಾಗಿತ್ತು. ಆಗ ಸಿಹಿ ಕಹಿ ಚಂದ್ರು ಪಾಲಿಗೆ ದೇವರಾಗಿತ್ತು ನಮ್ಮ ಸಾಹಸಸಿಂಹ..ರವಿವರ್ಮ ಚಿತ್ರದ ಶೂಟಿಂಗ್’ಗೆ ಚಂದ್ರು ಅನಾರೋಗ್ಯದಿಂದ ಬಂದಿರುವ ವಿಚಾರ ವಿಷ್ಣು ಕಿವಿಗೆ ಬಿದ್ದ ತಕ್ಷಣ ತಮಗೆ ತಿಳಿದಿರುವ ಡಾಕ್ಟರ್’ನ ಭೇಟಿ ಮಾಡುವುದಾಗಿ ತಮ್ಮ ಕಾರ್ ಮೂಲಕವೇ ಕಳುಹಿಸಿದ್ದರು…ನಂತರ ಡಾಕ್ಟರ್ ಚಂದ್ರುರಿಗೆ ಚಿಕಿತ್ಸೆ ನೀಡಿದ್ದರು. ಆದರೆ ಆ ಡಾಕ್ಟರ್ ಚಿಕಿತ್ಸೆಯ ಹಣವನ್ನು ಕೊಟ್ಟಿದ್ದುಯಾರು ಎಂದು ಚಂದ್ರು ಅವರಿಗೆ ಹೇಳಿರಲಿಲ್ಲ.

 

 

ತಮ್ಮ ಆಸ್ಪತ್ರೆಯ ಖರ್ಚುಗಳನ್ನು ಭರಿಸಿದ್ದು ವಿಷ್ಣು ಎಂದು ನಿರ್ಮಾಪಕರಿಂದ ಮೂರು ದಿನಗಳ ನಂತರ ತಿಳಿದುಕೊಂಡ ಚಂದ್ರು ವಿಷುವರ್ಧನ್ ಅವರಿಗೆ ಕೃತಜ್ಞತೆ ಸಲ್ಲಿಸಿದರು..ಅಷ್ಟಷ್ಟೇ ಅಲ್ಲದೆ ಚಂದ್ರು ಗುಣಮುಖನಾದ್ರೆ ತಿಮ್ಮಪ್ಪನ ಸನ್ನಿಧಾನಕ್ಕೆ ಬಂದು ಪೂಜೆ ಮಾಡುಸ್ತೀನಿ ಎಂದು ವಿಷ್ಣು ಹರಕೆ ಕಟ್ಟಿಕೊಂಡಿದ್ದರಂತೆ. ಅದರಂತೆ ಚಂದ್ರು ಗುಣಮುಖರಾದ ನಂತ್ರ ಪತ್ನಿ ಭಾರತೀಯೊಂದಿಗೆ ತಿರುಪತಿಗೆ ಹೋಗಿ ತಿಮ್ಮಪ್ಪನ ಹರಕೆ ಸಲ್ಲಿಸಿದ್ದರಂತೆ..ಇತ್ತೀಚಿನ ದಿನಗಳಲ್ಲಿ ಯರ್ರಾ ಬಿರ್ರಿ ಪ್ರಚಾರದ ಮೂಲಕ ಕೆಲಸಗಳನ್ನು ಮಾಡೋ ನಟರುಗಳು ಮಾಡಿರೋ ಸಹಾಯನ ಯಾರಿಗೂ ಹೇಳದೆ ತಮ್ಮಲ್ಲೇ ಗುಟ್ಟು ಕಾಪಾಡುವ ವಿಷ್ಣುರವರ ಹೃದಯ ಶ್ರೀಮಂತಿಕೆಯ ಗುಣವನ್ನು ಕಲಿತುಕೊಳ್ಳಲೇಬೇಕು..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top