fbpx
ರಾಜಕೀಯ

ಅನುಪಮಾ ಶೆಣೈ ಅವರ ಹೊಸ ಪಕ್ಷ ‘ಭಾರತೀಯ ಜನಶಕ್ತಿ ಕಾಂಗ್ರೆಸ್’: ಪಕ್ಷದ ಚಿಹ್ನೆ ಯಾವುದು ಗೊತ್ತಾ?

ಅನುಪಮಾ ಶೆಣೈ ಅವರ ಹೊಸ ಪಕ್ಷ ‘ಭಾರತೀಯ ಜನಶಕ್ತಿ ಕಾಂಗ್ರೆಸ್’: ಪಕ್ಷದ ಚಿಹ್ನೆ ಯಾವುದು ಗೊತ್ತಾ?

 

 

ಸ್ಯಾಂಡಲ್ ವುಡ್ ನಟ ಉಪೇಂದ್ರ ಅವರು ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ ಎಂಬ ಹೊಸ ಪಕ್ಷ ಘೋಷಿಸಿದ ಬೆನ್ನಲ್ಲೇ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಅವರು ಬಳ್ಳಾರಿ ಜಿಲ್ಲೆಯ ಕೂಡ್ಲಗಿಯಲ್ಲಿ ಬುಧವಾರ ತಮ್ಮ ಹೊಸ ರಾಜಕೀಯ ಪಕ್ಷದ ಹೆಸರನ್ನು ಘೋಷಿಸಿದ್ದಾರೆ.ಚುನಾವಣಾ ಆಯೋಗದಿಂದ ಪಕ್ಷಕ್ಕೆ ಇನ್ನೂ ಮಾನ್ಯತೆ ಸಿಗಬೇಕಿದೆ.

 

 

ಜನರಿಗಾಗಿಯೇ ಈ ಪಕ್ಷ ಸ್ಥಾಪಿಸಿದ್ದೇನೆ ಎಂದ ಅನುಪಮಾ ಬ್ಯಾನರ್​ ಅನಾವರಣಗೊಳಿಸಿ ಪಕ್ಷಕ್ಕೆ ಚಾಲನೆ ನೀಡಿದರು. ಅನುಪಮಾ ಶಣೈ ಅವರ `ಭಾರತೀಯ ಜನಶಕ್ತಿ ಕಾಂಗ್ರೆಸ್’ ಪಕ್ಷ 2018ರ ಮುಂದಿನ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದು ಸುಮಾರು ೮೦ಕ್ಕೂ ಹೆಚ್ಚು ವಿಧಾನ ಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಲಿದೆ.

 

 

ಭಾರತೀಯ ನಕ್ಷೆ, ತ್ರಿವರ್ಣ ಧ್ವಜದ ಬಣ್ಣ ಬಳಸಿರುವ ಚಿತ್ರವು ‘ಭಾರತೀಯ ಜನಶಕ್ತಿ ಕಾಂಗ್ರೆಸ್’ ಪಕ್ಷದ ಚಿಹ್ನೆಯಾಗಿದ್ದು ಪಕ್ಷದ ಚಿಹ್ನೆ ಮತ್ತು ಹೆಸರು ಚುನಾವಣಾ ಆಯೋಗದಿಂದ ಇನ್ನೂ ಅಧಿಕೃತಗೊಂಡಿಲ್ಲ. “ಪ್ರಜಾಪ್ರಭುತ್ವದ ರಕ್ಷಣೆ ಮಾಡುವ ಉದ್ದೇಶದಿಂದ ‘ಭಾರತೀಯ ಜನಶಕ್ತಿ ಕಾಂಗ್ರೆಸ್’ ಎಂಬ ಹೊಸ ಪಕ್ಷ ಸ್ಥಾಪನೆ ಮಾಡಿದ್ದೇವೆ. ನಾನು ಚುನಾವಣೆಗೆ ಸ್ಪರ್ಧಿಸಲು ಆಸೆ ಹೊಂದಿದ್ದೇನೆ, ಆದರೆ, ಯಾವ ಕ್ಷೇತ್ರದಿಂದ ಸ್ಪರ್ದಿಸಬೇಕು ಎಂದು ಇನ್ನೂ ಅಂತಿಮವಾಗಿಲ್ಲ” ಎಂದು ಅನುಪಮಾ ಶೆಣೈ ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top