fbpx
ಭವಿಷ್ಯ

ನಿಮಗೆ ಬೀಳುವ ಕನಸುಗಳಲ್ಲಿ ಬರುವ ಆಯಾ ಪ್ರಾಣಿ ಏನನ್ನು ಸೂಚಿಸುತ್ತೆ. ಅನ್ನೋದನ್ನ ತಿಳಿಯೋಣ ಬನ್ನಿ

ಕನಸಿನಲ್ಲಿ ಈ ಪ್ರಾಣಿಗಳನ್ನು ಕಂಡರೆ ನಿಮಗೆ ಏನಾಗುತ್ತೆ ಗೊತ್ತಾ.

 

ಕನಸುಗಳು ಎಲ್ಲರಿಗೂ ಬೀಳೋದು ಸಹಜ. ಇದು ಪ್ರತಿಯೊಬ್ಬರಿಗೂ ಜರುಗುವ ಸಂಗತಿ.ಪ್ರತಿಯೊಬ್ಬ ಮನುಷ್ಯ ರಾತ್ರಿ ಕನಸಿನಲ್ಲಿ 9 ನಿಮಿಷಗಳಿಂದ ಎರಡು ಗಂಟೆಗಳವರೆಗೆ ಪ್ರತಿ ರಾತ್ರಿ ಕನಸಿನಲ್ಲಿ ಜೀವಿಸುತ್ತಾ ಇರುತ್ತಾನಂತೆ.ಈ ಕನಸಿನಲ್ಲಿ ನಾವು ಸ್ನೇಹಿತರು,ಪ್ರೀತಿ ಪ್ರೇಮ ಮಾಡುವವರು,ಪ್ರಾಣಿಗಳು ಬರಬಹುದು.ವಿದೇಶದಲ್ಲಿ ಸಂದರ್ಶನಗಳು ಜರುಗಬಹುದು.ದೇವರ ಶ್ರೀ ಕ್ಷೇತ್ರ ದರ್ಶನ ಹೇಗೆ ಇತ್ಯಾದಿ ಇತ್ಯಾದಿ ಅನೇಕ ಕನಸುಗಳು ಬೀಳೋದು ಸಹಜ.

ನಿಮಗೆ ಬೀಳುವ ಕನಸುಗಳನ್ನು ಆಧರಿಸಿ ಅದರ ಅರ್ಥ ಏನು ಅನ್ನೋದನ್ನ ಹೇಳಬಹುದು.ಆಯಾ ಕನಸುಗಳಿಗೆ ಅದರದ್ದೇ ಆದ ಅರ್ಥ ಇರತ್ತೆ.ಕನಸುಗಳಲ್ಲಿ ಬರುವ ಆಯಾ ಪ್ರಾಣಿ ಏನನ್ನು ಸೂಚಿಸುತ್ತೆ. ಅನ್ನೋದನ್ನ ತಿಳಿಯೋಣ ಬನ್ನಿ…

 

1.ಜಿಂಕೆ:- ಜಿಂಕೆಯನ್ನು ಕನಸಿನಲ್ಲಿ ಕಂಡರೆ ಒಂದು ಉನ್ನತ ಮಟ್ಟದ ಕೆಲಸವನ್ನು ಪ್ರಯಾಸವಾದರೂ ಸಾಧಿಸಿ ತೀರುತ್ತೀರ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತೆ .
ಜಿಂಕೆ ಕನಸಿನಲ್ಲಿ ಸತ್ತು ಹೋದ ಹಾಗೆ ಕಂಡರೆ ಪ್ರೇಮ,ಪ್ರೀತಿಯಲ್ಲಿ ವೈಫಲ್ಯಗಳನ್ನು ಕಾಣುತ್ತಾರೆ.

2.ಬೆಕ್ಕು:- ಬೆಕ್ಕನ್ನು ಕನಸಿನಲ್ಲಿ ಕಂಡರೆ ದೂರಾದೃಷ್ಟ ಅಂತ ಹೇಳಲಾಗತ್ತೆ.ಬೆಕ್ಕನ್ನು ಸಾಕಿ ಪ್ರೀತಿಸುವವರು ಮಾತ್ರ ಸೃಜನಾತ್ಮಕ ಶಕ್ತಿಯ ಸಂಕೇತ ಎಂದು ಭಾವಿಸುತ್ತಾರೆ.
ಬಿಳಿ ಬೆಕ್ಕನ್ನು ಕನಸಿನಲ್ಲಿ ಕಂಡರೆ ಕಷ್ಟಗಳು ಬರುತ್ತವೆ.

ಕರಿ ಬೆಕ್ಕನ್ನು ಕನಸಿನಲ್ಲಿ ನೋಡಿದರೆ ನಿಮ್ಮ ಶಕ್ತಿ ಮತ್ತು ಮಾನಸಿಕ ಸಾಮರ್ಥ್ಯವನ್ನು ತೋರಿಸಲು ಭಯ ಪಡುತ್ತೀರಿ.
ಬೆಕ್ಕು ನಿಮ್ಮನ್ನು ಕಚ್ಚುವಂತೆ ಕನಸು ಬಿದ್ದರೆ ನೀವು ಬೇರೆಯವರ ಬಳಿ ಕೈ ಚಾಚಿ ಬೇರೆಯವರಿಂದ ಹಣ ಮತ್ತು ಎಲ್ಲವನ್ನು ಪಡೆದುಕೊಳ್ಳುತ್ತೀರ ಮತ್ತು ಕೊಡುವವರು ಸಹ ಬೇಸರ ಮಾಡಿಕೊಳ್ಳುತ್ತಾರೆ.ನಿಮ್ಮ ಯೋಜನೆಯ ಪ್ರಕಾರ ಏನು ಕೆಲಸ ಆಗ್ತಿಲ್ಲ ಅಂತ ಭಯ ನಿರಾಸೆಗೆ ಒಳಗಾಗ್ತೀರ.
ಬೆಕ್ಕನ್ನು ಓಡಿಸುವಂತೆ ಕನಸು ಕಂಡರೆ ನಿಮ್ಮನ್ನು ಭಾದಿಸುತ್ತಿರುವ ಅಡ್ಡಿ ಆತಂಕಗಳನ್ನು ಎದುರಿಸಿ ನೀವು ಮುಂದೆ ನುಗ್ಗಲು ಪ್ರಯತ್ನವನ್ನು ಮಾಡುತ್ತೀರ.

3.ಆಕಳು:- ಕನಸಿನಲ್ಲಿ ಆಕಳು ಕಂಡು ಬಂದರೆ ,ವಿಧೇಯತೆ,ನಿಷ್ಕ್ರಿಯ ಸ್ವಭಾವವನ್ನು ಹೊಂದಿರುತ್ತೀರ.
ಸೊರಗಿದ್ದ,ಬಡಕಲು ಆಕಳನ್ನು ಕನಸಿನಲ್ಲಿ ಕಂಡರೆ ನಿಮ್ಮ ತಾಯಿ ನಿಮ್ಮ ಆಸೆಗಳಿಗೆ ಸರಿಯಾಗಿ ಸ್ಪಂಧಿಸುತ್ತಿಲ್ಲ ಎಂದರ್ಥ.ನಿಜ ಜೀವನದಲ್ಲಿಯೂ ಸಹ ಆಕೆಯ ಪ್ರೇಮಕ್ಕೆ ನೀವು ಹಾತೊರೆಯುತ್ತೀರ ಎಂದರ್ಥ.

4.ಎತ್ತು:- ಎತ್ತನ್ನು ಕನಸಿನಲ್ಲಿ ಕಂಡರೆ ವಿಪರೀತವಾದ ಸಂಪತ್ತು ಬರುತ್ತದೆ ಎಂಬುದನ್ನು ಸೂಚಿಸುತ್ತದೆ.

5.ಕೋಣ:-ಕೋಣ ಕನಸಿನಲ್ಲಿ ಬಂದರೆ ನಿಮ್ಮ ಕೋರಿಕೆಗಳು ನಿಮ್ಮ ಹಿಡಿತದಲ್ಲಿ ಇರೋದಿಲ್ಲ ಅನ್ನುವುದನ್ನ ಸೂಚಿಸುತ್ತದೆ.

 

6.ಒಂಟೆ:- ಒಂಟೆ ಕನಸಿನಲ್ಲಿ ಬಂದರೆ ನಿಮ್ಮ ಭುಜಗಳ ಮೇಲೆ ಸಾಕಷ್ಟು ಸಮಸ್ಯೆಗಳ ಭಾರವನ್ನು ಹೊತ್ತಿರುತ್ತೀರಿ ಅಂತ ಅರ್ಥ.ನಿಮ್ಮ ಮನಸ್ಸಿನಲ್ಲಿರುವ ಆತಂಕ,ಉದ್ವೇಗಗಳು ಸರಿಯಾಗಿ ವ್ಯಕ್ತ ಪಡಿಸದೇ ಅವುಗಳನ್ನು ಹಿಡಿದಿಟ್ಟುಕೊಂಡು ಜೋತಾಡುವಿರಿ. ಇನ್ನೊಂದು ವಿಧದಲ್ಲಿ ನೀವು ಎಷ್ಟು ಭಾರವನ್ನು ಹೊರಬಲ್ಲಿರಿ ಎಂಬುದನ್ನು ಸೂಚಿಸುತ್ತದೆ.

7.ಗೂಬೆ:- ಗೂಬೆಯನ್ನು ಕನಸಿನಲ್ಲಿ ಕಂಡರೆ ಒಂದು ರೀತಿಯಲ್ಲಿ ಅದು ಅಪಶಕುನ.

ಬಿಳಿ ಗೂಬೆ ಕಂಡು ಬಂದರೆ ಪರಿವಾರದಲ್ಲಿ ಯಾರಾದರೂ ಒಬ್ಬರ ಮರಣ ವಾರ್ತೆಯನ್ನು ಕೇಳುವ ಸೂಚನೆ.
ಕಪ್ಪು ಬಣ್ಣದ ಗೂಬೆಯನ್ನು ಕನಸಿನಲ್ಲಿ ಕಂಡರೆ ಅದು ವೈಯಕ್ತಿಕ ವಿಪ್ಪತ್ತುಗಳಿಗೆ ಸೂಚನೆಯಂತೆ.
ಪಿಶಾಚಿಯಂತೆ ಇರುವ ಗೂಬೆಯನ್ನು ಕನಸಿನಲ್ಲಿ ಕಂಡರೆ ಆತ್ಮವಿಶ್ವಾಸ, ನಿಮ್ಮ ಸ್ವಂತಿಕೆಯನ್ನು ಕಳೆದುಕೊಂಡು ಕೆಟ್ಟ ಚಟ ಮತ್ತು ಕೆಟ್ಟ ಅಭ್ಯಾಸಗಳನ್ನು ಬಿಡದಿದ್ದರೆ.ಜೀವನದಲ್ಲಿ ಆರ್ಥಿಕ ನಷ್ಟವನ್ನು ಅನುಭವಿಸುತ್ತೀರ ಮತ್ತು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ.

8.ಮೊಸಳೆ:- ಮೊಸಳೆಯನ್ನು ಕನಸಿನಲ್ಲಿ ಕಂಡರೆ ಯಾರೂ ಊಹಿಸದ ಒಂದು ಪ್ರಮಾಧವು ನಿಮಗೆ ಕಾದಿದೆ ಎಂದು ಅರ್ಥ.ನಿಮಗೆ ತೀರ ಹತ್ತಿರವಾಗಿ ಇರುವವರೇ ನಿಮಗೆ ತಪ್ಪು ದಾರಿ ಮತ್ತು ತಪ್ಪು ನಿರ್ಣಯಗಳನ್ನು ಮಾರ್ಗದರ್ಶನ ನೀಡುತ್ತಾರೆ ಅಥವಾ ನೀಡಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ.
ಮೊಸಳೆ ನಿಮ್ಮನ್ನು ಭೇಟೆಯಾಡಿ ಕಚ್ಚಿದರೆ ಇದರ ಅರ್ಥ ಪ್ರೇಮ ವೈಫಲ್ಯ ಮತ್ತು ವ್ಯವಹಾರದಲ್ಲಿ ಆರ್ಥಿಕವಾಗಿ ಪರಾಜಯ ಮತ್ತು ನಷ್ಟವನ್ನು ಸೂಚಿಸುತ್ತದೆ.

9.ಪಶುಗಳು:- ಪಶುಗಳನ್ನು ಕನಸಿನಲ್ಲಿ ಕಂಡರೆ ಸದ್ಯ ಇರುವ ಸಂಬಂಧಗಳಲ್ಲಿ ಅತಿ ಜಾಗೃತೆಯಿಂದ ಇರಬೇಕು.
ಪಶುಗಳ ಹಿಂಡನ್ನು ಕಂಡರೆ ವ್ಯಕ್ತಿತ್ವದ ಹಿತಕ್ಕೆ ಅದು ದಕ್ಕೆ ತರುವ ಸೂಚನೆಯಾಗಿದೆ.

10.ನಾಯಿ:- ಕನಸಿನಲ್ಲಿ ನಾಯಿಯನ್ನು ಕಂಡರೆ ಹಠದಿಂದ ಪ್ರತಿ ಸ್ಪರ್ದಿಯನ್ನು ಹೋರಾಡಿ ಪ್ರತಿ ಸ್ಪರ್ಧಿಯನ್ನು ಜಯಿಸುವಿರಿ.
ನಾಯಿ ಸಿಟ್ಟಿನಿಂದ ಅರಚುತ್ತಾ ಇದ್ದರೆ ನಿಮ್ಮಲ್ಲಿ ಅಂತರ್ಗತವಾಗಿರುವ ಸಂರ್ಷಣೆಗಳಿಗೆ ಸೂಚನೆಯಂತೆ.
ನಾಯಿ ಸತ್ತಂತೆ ಕನಸು ಕಂಡರೆ ಒಳ್ಳೆಯ ಸ್ನೇಹಿತನ ಮರಣ ವಾರ್ತೆಯನ್ನು ಸೂಚಿಸುತ್ತದೆ.

 

ನಾಯಿ ನಿಮ್ಮ ಕಾಲಿಗೆ ಕಚ್ಚಿದಂತೆ ಕನಸು ಕಂಡರೆ ಜೀವನದಲ್ಲಿ ಸಮತೋಲನವನ್ನು ಮಾಡಿಕೊಳ್ಳುವ ಸಾಮರ್ಥ್ಯವನ್ನು ಸೂಚಿಸುತ್ತದೆ.
ನಾಯಿಗೆ ಹೊಡೆದಂತೆ ಕನಸು ಬಿದ್ದರೆ ಸಂಗಾತಿಯು ಬಯಕೆಯನ್ನು ಹೊಂದಿರುವ ಸೂಚನೆ.
ನಾಯಿಗೆ ಪೆಟ್ಟಾದ್ದಾಗ ಕಟ್ಟು ಕಟ್ಟುತ್ತಿರುವ ಕನಸು ಬಂದರೆ ನಿಮ್ಮ ಲೋಪ ದುರಾಭ್ಯಾಸಗಳನ್ನು ಮುಚ್ಚುತ್ತಿರು ಪ್ರಯತ್ನ ಮಾಡುತ್ತಿರುವ ಸೂಚನೆ ಎಂದರ್ಥ.

11.ಕುರಿ:- ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸದೆ ತೂಕ ಮಾಡದೆ ಇದು ಅವಿವೇಕ ತನದ ಸಂಕೇತವಾಗಿದೆ.

12.ಮೇಕೆ:- ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ವ್ಯಾಪಾರಕ್ಕೆ ನಷ್ಟ ಉಂಟುಮಾಡಲು ಸಂಚು ಹಾಕುತ್ತಿರುತ್ತಾರೆ.

13.ಕುದುರೆ:- ಬಲವಾದ ಭೌತಿಕ ಶಕ್ತಿಗೆ ಸೂಚನೆ.
ಕಪ್ಪು ಕುದುರೆ ಕಂಡರೆ ಹಿಂಸೆ ಹಾಗೂ ಕ್ಷುದ್ರ ಶಕ್ತಿಗಳ ಆಗಮನದ ಸೂಚನೆ.
ಬಿಳಿಯ ಕುದುರೆ ಕಂಡರೆ ಶುಭ್ರತೆ,ಶ್ರೇಯಸ್ಸು,ಅದೃಷ್ಟದ ಆಗಮನದ ಸೂಚನೆ.

14.ಆನೆ:- ಆನೆಯನ್ನು ಕನಸಿನಲ್ಲಿ ಕಂಡರೆ ನೀವು ಜೀವನದಲ್ಲಿ ಇನ್ನಷ್ಟು ತಾಳ್ಮೆ ಮತ್ತು ತಿಳುವಳಿಕೆ ಹೊಂದಬೇಕು ಎನ್ನುವ ಸಂಕೇತ.ಆನೆ ಶಕ್ತಿ , ಬಲಕ್ಕೂ ,ಬುದ್ಧಿಗೂ ಚಿಹ್ನೆಯಾಗಿದ್ದು.ಇದು ನಿಮ್ಮಲ್ಲಿರುವ ಅಂತರ್ಮುಖ ವ್ಯಕ್ತಿತ್ವವದ ಸೂಚನೆಯಾಗಿರಬಹುದು.
ಆನೆಯ ಮೇಲೆ ಸವಾರಿ ಮಾಡಿದಂತೆ ಕನಸು ಕಂಡರೆ ನೀವು ಒಂದು ಸಮಯದಲ್ಲಿ ಭಯ ಪಟ್ಟರೂ ಶಕ್ತಿಗಳು ನಿಮ್ಮಲ್ಲಿ ಅಂತರ್ಗತವಾಗಿರುವ ಸೂಚನೆಯಾಗಿದೆ ಎಂದರ್ಥ.

15.ಸಿಂಹ:- ಬಲಕ್ಕೆ,ಶಕ್ತಿಗೆ,ಗಾಂಭೀರ್ಯತೆಗೆ ಅಷ್ಟೇ ಅಲ್ಲದೆ ಆತುರತೆಯ ಸಂಕೇತವಾಗಿದ್ದು.ನೀವು ಇತರರ ಜೊತೆಗೆ ಚೆನ್ನಾಗಿರಬೇಕು.ಸಂಬಂಧ ಚೆನ್ನಾಗಿರಬೇಕು ಅಂದರೆ ಇವನ್ನೆಲ್ಲಾ ನಿಯಂತ್ರಿಸುವ ಅವಶ್ಯಕತೆ ಇದೆ.

ಸಿಂಹ ದಾಳಿ ಮಾಡಿದಂತೆ ಕನಸು ಕಂಡರೆ ಅಡ್ಡಿ, ಆತಂಕಗಳು ಬಂದರೂ ಅದನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿದ್ದೀರ.

16.ಹುಲಿ:- ಹುಲಿಯನ್ನು ಕನಸಿನಲ್ಲಿ ಕಂಡರೆ ಶಕ್ತಿ ,ಗಾಂಭೀರ್ಯತೆ, ನಾಯಕತ್ವದ ಲಕ್ಷಣದ ಸಂಕೇತವಾಗಿದೆ.
ಹುಲಿ ಬೋನಿನಲ್ಲಿ ಇರುವಂತೆ ಕನಸು ಕಂಡರೆ ಮನಿಸ್ಸಿನಲ್ಲಿ ಅವಿತಿಟ್ಟು ಕೊಂಡಿರುವ ಭಾವೋದ್ವೇಗದ ಸಂಕೇತವಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top