fbpx
ಕನ್ನಡ

ಇಲ್ಲಿ ಕನ್ನಡದಲ್ಲೇ ಮಂತ್ರ, ಕನ್ನಡದಲ್ಲೇ ಪೂಜೆ!!!

‘ಕನ್ನಡ ಪೂಜೆ’ ಹಿರೇಮಗಳೂರಿನ ಕೋದಂಡರಾಮ ದೇವಸ್ಥಾನದಲ್ಲಿ ನಡೆಯುತ್ತಿರುವುದು ಈಗ ವಿಶ್ವ ಪ್ರಸಿದ್ಧ. ರಾಜ್ಯದ ಸುಮಾರು 400 ದೇವಸ್ಥಾನಗಳ ಜೊತೆಗೆ, ಕನ್ನಡ ಪೂಜೆ ಪರಿಕಲ್ಪನೆ ಆಸ್ಟ್ರೇಲಿಯಾ, ಸಿಂಗಪುರ ಮತ್ತು ಅಮೆರಿಕ ಮುಂತಾದ ದೇಶಗಳಲ್ಲಿ ಪಸರಿಸಿದೆ , ಇಷ್ಟೇ ಅಲ್ಲದೆ ದೇವಾಲಯದ ಸುತ್ತಲೂ ಗೋಡೆಗಳ ಮೇಲೆ ಕನ್ನಡ ದೇವನಾಮ , ಭಕ್ತಿ ಸ್ತೋತ್ರಗಳನ್ನೂ ಕಾಣಬಹುದು .

kodandarama-temple

ಹಿರೇಮಗಳೂರು ಹಿರಿಯ ಮಗಳ ಪಟ್ಟಣ ಎಂದರ್ಥ . ಈ ಪಟ್ಟಣ ಚಿಕ್ಕಮಗಳೂರಿನಿಂದ 4 ಕಿ.ಮೀ ದೂರದಲ್ಲಿದೆ. ಹಿರೇಮಗಳೂರು 9 ಮತ್ತು 11 ನೇ ಶತಮಾನದಲ್ಲಿ ಅಭಿವೃದ್ಧಿ ಹೊಂದಿದ ಪಟ್ಟಣವಾಗಿದೆ.

sri-kodandarama-temple_1418972962

ದೇವಾಲಯದ ಗರ್ಭಗುಡಿಯಲ್ಲಿ ನಿಂತು ದೇವರಿಗೆ ಕನ್ನಡ ಚೆನ್ನುಡಿಯ ಮಂತ್ರಗಳು ಎಂತವರನ್ನು ಬೆರಗುಗೊಳಿಸುತ್ತದೆ ಮತ್ತು ಭಕ್ತರ ಹೃದಯಗಳಲ್ಲಿ ಕನ್ನಡದ ನಿನಾದ ಮೊಳಗುತ್ತದೆ ಇದರ ಹಿಂದೆ ಇರುವ ಮಹಾನುಭಾವನ ಹೆಸರು ಹಿರೇಮಗಳೂರು ಕಣ್ಣನ್.

kannan

ಹೌದು ಹರಟೆ ಕನ್ನಡ ಕಾರ್ಯಕ್ರಮದ ಸೂತ್ರಧಾರಿ ಕನ್ನಡ ಪುಷ್ಪ ಮಾಲಿಕೆಯನ್ನು ದೇವರಿಕೆ ಪ್ರತಿ ನಿತ್ಯ ಅರ್ಪಿಸುವುದು ಇವರೇ ,

“ತಮಿಳು ನನ್ನ ಮಾತೃ ಭಾಷೆ. ಆದರೆ ಕನ್ನಡ ನನ್ನ ಹೃದಯಕ್ಕೆ ಹತ್ತಿರವಾಗಿರುವ ಭಾಷೆಯಾಗಿದೆ. ನಾನು ಬಹಳಷ್ಟು ಆಸಕ್ತಿಪಟ್ಟು ಕನ್ನಡ ಸಾಹಿತ್ಯ ಓದಿದ್ದೇನೆ. ಕನ್ನಡ ಭಾಷೆಗೆ ಅದ್ಭುತ ಸಾಮರ್ಥ್ಯವಿದೆ. ವೈದಿಕ ಮಂತ್ರಗಳನ್ನು ಪರಿಣಾಮಕಾರಿಯಾಗಿ ತಮಿಳು ಭಾಷೆಗೆ ಭಾಷಾಂತರಿಸಲಾಗಿದೆ. ಜನರ ಮಾತೃಭಾಷೆಯಲ್ಲಿ ಮಂತ್ರಗಳನ್ನು ತಿಳಿಸಿದರೆ ಪರಿಣಾಮಕಾರಿ” ಎಂಬುದು ಇವರ ಅಭಿಪ್ರಾಯ .

hiremagalur

1970 ರಿಂದ ಹಿರೇಮಗಳೂರ ಕೋದಂಡರಾಮ ದೇವಸ್ಥಾನದಲ್ಲಿ ಪೂಜೆ ಮಾಡಲಾಗುತ್ತಿದೆ, ಸವ್ಯಸಾಚಿ ಸ್ವಾಮೀಜಿಗಳು ಕನ್ನಡದಲ್ಲಿ ಪೂಜೆ ಪ್ರಾರಂಭಿಸಿದರು 1980 ನಂತರ ಇದು ಜನಪ್ರಿಯವಾಯಿತು ಎಂದು ತಿಳಿಸಿದರು.

ವಚನಗಳನ್ನು ಹೆಚ್ಚಾಗಿ ಓದಿ ಅದು ಜನ ಜೀವನ ಕ್ರಮವನ್ನು ಸುಲಲಿತವಾಗಿ ತಿಳಿಯಲು ಪರಿಣಾಮಕಾರಿ ಎನ್ನುತ್ತಾರೆ . ಕನ್ನಡದಲ್ಲಿ ಪೂಜೆ, ಮದುವೆ ಮತ್ತು ವ್ರತಗಳು ನಡೆಸುತ್ತಾರೆ .
ದೇವರಿಗೆ ಎಲ್ಲಾ ಭಾಷೆಗಳು ಅರ್ಥವಾಗುತ್ತದೆ ಎಂಬುದು ಇವರ ವಾದ .

ಜನರು ಸ್ತೋತ್ರಗಳನ್ನು ಅರ್ಥ ಮಾಡಿಕೊಂಡಾಗ ಭಕ್ತಿ ಹೆಚ್ಚಾಗುತ್ತದೆ ,ಎಷ್ಟು ಜನರು ಪುರುಷಸೂಕ್ತ ಅರಿತುಕೊಂಡಿದ್ದಾರೆ ಬದಲಿಗೆ ಕನ್ನಡದಲ್ಲಿ ಡಿ.ವಿ ಗುಂಡಪ್ಪನವರು ಅಥವಾ ಕುವೆಂಪು ಬರೆದ ಪುರುಷಸೂಕ್ತದ ಅಧ್ಯಯನ ಮಾಡಿ ಅದು ಸಂಪೂರ್ಣವಾಗಿ ಅರ್ಥವಾಗಿ ಬೇರೆ ಆನಂದ ಪಡೆಯುತ್ತಾರೆ.

ದೀಪಾವಳಿ ಸಮಯದಲ್ಲಿ ಅಮೆರಿಕನ್ ಅಧ್ಯಕ್ಷ ಬರಾಕ್ ಒಬಾಮ ಭೇಟಿಯ ಸಂದರ್ಭದಲ್ಲಿ ವೇದಿಕ ಮಂತ್ರಗಳನ್ನು ಪಠಿಸಿದವರು ಯಾರು ದಿಗಾದಕೋಟೆ ನಾರಾಯಣಾಚಾರ್ ಇವರು ಕೂಡ ಕನ್ನಡದ ಅರ್ಚಕರು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top